Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಗರ್ಭಾವಸ್ಥೆಯಲ್ಲಿ ಸೆಕ್ಸ್ ಹಾಗೂ ಪರಾಕಾಷ್ಠೆ ಕ್ರಿಯೆಯ ಸುಖ ಪಡೆಯಬಹುದಾ?
ಮಹಿಳೆ ಗರ್ಭವತಿಯಾಗುವುದು ಹೊಸ ಜೀವಕ್ಕೆ ಜನ್ಮ ನೀಡುವುದು ಪ್ರಕೃತಿಯ ಸಹಜ ಕ್ರಿಯೆಗಳಲ್ಲೊಂದಾಗಿದೆ. ಹಾಗೆಯೇ ಸೆಕ್ಸ್ ಹಾಗೂ ಅದರಿಂದ ಸಿಗುವ ಅಪೂರ್ವ ಸುಖಾನುಭೂತಿ ಪಡೆಯುವುದು ಸಹ ಮಾನವನ ಮೂಲಭೂತ ಆಸೆಗಳಲ್ಲೊಂದಾಗಿದೆ.

ಆದರೂ ಮಹಿಳೆಯೊಬ್ಬಳು ಗರ್ಭ ಧರಿಸಿದ ನಂತರ ಸಂಗಾತಿಯೊಂದಿಗೆ ಮಿಲನ ಕ್ರಿಯೆ ನಡೆಸಿ ಲೈಂಗಿಕ ಪರಾಕಾಷ್ಠೆಯ ಸುಖ ಪಡೆಯುವುದು ಸರಿ ಅಥವಾ ತಪ್ಪಾ ಎಂಬ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಗರ್ಭಿಣಿ ಮಹಿಳೆಯೋರ್ವಳು ಮಿಲನ ಕ್ರಿಯೆಯಲ್ಲಿ ಪಾಲ್ಗೊಂಡಾಗ ಆಕೆಗೆ ಯಾವ ರೀತಿ ಸುಖ ಸಿಗಬಹುದು? ಹೀಗೆ ಮಾಡುವುದು ಸರಿ ಅಥವಾ ತಪ್ಪಾ ಎಂಬ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ನೀಡಲಾಗಿದೆ.

ಗರ್ಭಾವಸ್ಥೆಯಲ್ಲಿನ ಸೆಕ್ಸ್ ಪರಾಕಾಷ್ಠೆ ಹೇಗಿರುತ್ತದೆ?
ಗರ್ಭಿಣಿ ಮಹಿಳೆಯರು ಸೆಕ್ಸ್‌ನಲ್ಲಿ ತೊಡಗುವುದು ಸರಿಯಲ್ಲ, ಈ ಅವಧಿಯಲ್ಲಿ ಲೈಂಗಿಕ ಸುಖ ಅನುಭವಿಸುವುದು ತಪ್ಪು ಎಂಬುದು ಕೆಲವರ ಭಾವನೆಯಾಗಿದೆ. ಮಹಿಳೆ ಗರ್ಭಿಣಿಯಾಗಿರುವಾಗ ಅವಳು ಹೇಗೆ ಲೈಂಗಿಕ ಪರಾಕಾಷ್ಠೆ ತಲುಪಬಲ್ಲಳು ಎಂಬ ಗೊಂದಲ ಅನೇಕರಲ್ಲಿದೆ. ಆದರೆ ಇದು ಸಂಪೂರ್ಣ ತಪ್ಪು ತಿಳುವಳಿಕೆಯಾಗಿದೆ. ವಾಸ್ತವದಲ್ಲಿ ಗರ್ಭಿಣಿ ಮಹಿಳೆಯು ಮಿಲನ ಕ್ರಿಯೆಯಲ್ಲಿ ತೊಡಗುವುದರಿಂದ ಇತರ ಮಹಿಳೆಯರಿಗಿಂತಲೂ ಹೆಚ್ಚು ಸೆಕ್ಸ್ ಸುಖ ಅನುಭವಿಸಬಹುದು ಎಂಬುದು ನಿಜ ಸಂಗತಿಯಾಗಿದೆ.

ಲೈಂಗಿಕ ಪರಾಕಾಷ್ಠೆ ಅನುಭವಿಸಲು ಸಾಧ್ಯ
ಹೌದು. ಮಹಿಳೆ ಗರ್ಭಿಣಿಯಾಗಿರುವಾಗ ಅವಳು ಹೆಚ್ಚಿನ ಲೈಂಗಿಕ ಪರಾಕಾಷ್ಠೆ ಅನುಭವಿಸಲು ಸಾಧ್ಯ. ಆದರೆ ಗರ್ಭಾವಸ್ಥೆಯಲ್ಲಿ ಸೆಕ್ಸ್‌ನಲ್ಲಿ ತೊಡಗುವ ಮುಂಚೆ ಕೆಲ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕಾದ್ದು ಅಗತ್ಯವಾಗಿದೆ. ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ಹಿತದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಯಾವುದೇ ಸಮಸ್ಯೆಗಳಿಲ್ಲದಿದ್ದರೆ ಗರ್ಭಾವಸ್ಥೆಯಲ್ಲಿ ಸೆಕ್ಸ್ (ಮಹಿಳೆಯರಲ್ಲಿ ಸ್ಖಲನ ಸುಖವೂ ಸೇರಿದಂತೆ) ನಡೆಸಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಗರ್ಭಾವಸ್ಥೆಯ ಸ್ಖಲನದ ಬಗೆಗಿನ ಪ್ರಮುಖ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ಸೆಕ್ಸ್ ಸುಖ ಸುರಕ್ಷಿತವೆ?
ವೈದ್ಯರ ಪ್ರಕಾರ ಆರೋಗ್ಯವಂತ ಗರ್ಭಿಣಿಯರು ಮಿಲನ ಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಆದರೆ ಇದು ಹೆರಿಗೆ ಕ್ರಿಯೆ ಆರಂಭವಾಗುವ ಮುನ್ನ ಮಾತ್ರ ಅನ್ವಯಿಸುತ್ತದೆ. ಒಮ್ಮೆ ನೀರು ಹೊರಹೋಗಲಾರಂಭಿಸಿದರೆ ಅಥವಾ ಹೆರಿಗೆ ಕ್ರಿಯೆ ಆರಂಭವಾದರೆ ಸೆಕ್ಸ್‌ನಲ್ಲಿ ತೊಡಗುವಂತಿಲ್ಲ. ಅಧಿಕ ರಕ್ತಸ್ರಾವದ ಲಕ್ಷಣಗಳು, ಅವಧಿಪೂರ್ವ ಹೆರಿಗೆ ಸಾಧ್ಯತೆ ಅಥವಾ ಇನ್ನಾವುದೇ ಸಮಸ್ಯೆ ಇದ್ದಲ್ಲಿ ಸೆಕ್ಸ್ ನಡೆಸುವುದು ಅಥವಾ ಸ್ಖಲಿಸುವುದು ಸೂಕ್ತವಲ್ಲ ಎಂಬುದು ವೈದ್ಯರ ಸಲಹೆಯಾಗಿದೆ.

ಆರೋಗ್ಯದ ಮೇಲಾಗುವ ಪರಿಣಾಮವೇನು?
ಗರ್ಭಾವಸ್ಥೆಯಲ್ಲಿರುವ ಮಹಿಳೆ ಲೈಂಗಿಕವಾಗಿ ಸ್ಖಲಿಸಿದಾಗ ಅದು ಗರ್ಭಕೋಶದ ಸಂಕೋಚನೆಗೆ ಕಾರಣವಾಗುತ್ತದೆ. ಸೆಕ್ಸ್‌ನಿಂದಾಗಿ ದೇಹದಲ್ಲಿ ಆಕ್ಸಿಟೋಸಿನ್ ಪ್ರಮಾಣ ಹೆಚ್ಚಾಗುವ ಕಾರಣದಿಂದ ಗರ್ಭಾಶಯ ಸಂಕೋಚನೆಯಾಗುತ್ತದೆ. ಆದರೆ ಹಾಗಂತ ಇದು ಅವಧಿ ಪೂರ್ವ ಹೆರಿಗೆಗೆ ಕಾರಣವಾಗುವುದಿಲ್ಲ. ಸ್ಖಲನ ಸಂದರ್ಭದಲ್ಲಿ ಗರ್ಭಾಶಯದ ಸಂಕೋಚನವು ಸಹಜ ಕ್ರಿಯೆಯಾಗಿದ್ದು ಇದರಿಂದ ಹೆರಿಗೆ ಪ್ರಕ್ರಿಯೆ ಆರಂಭವಾಗಲಾರದು. ಸ್ಖಲನದ ಪರಾಕಾಷ್ಠೆಯ ಸಂದರ್ಭದಲ್ಲಿ ಆಕ್ಸಿಟೋಸಿನ್ ಪ್ರಮಾಣ ಒಮ್ಮೆಲೆ ಹೆಚ್ಚಾದರೂ ಮುಂದಿನ ಒಂದೆರಡು ನಿಮಿಷಗಳಲ್ಲಿಯೇ ಇದು ಸಹಜ ಪ್ರಮಾಣಕ್ಕೆ ಬರುತ್ತದೆ. ಹೀಗಾಗಿ ಇದು ಬಹಳ ಹೊತ್ತಿನವರೆಗೆ ದೇಹದಲ್ಲಿ ಪರಿಚಲನೆಯಾಗಲಾರದು.

ಭ್ರೂಣದ ಮೇಲೆ ಪರಿಣಾಮವೇನು?
ಗರ್ಭಕೋಶದಲ್ಲಿ ಮಗು ಮೃದುವಾದ ಅಮ್ನಿಯಾಟಿಕ್ ಚೀಲದಲ್ಲಿರುತ್ತದೆ. ಇದು ಮಗುವಿಗೆ ಯಾವುದೇ ಅಪಾಯವಾಗದಂತೆ ರಕ್ಷಿಸುವ ವ್ಯವಸ್ಥೆಯಾಗಿದೆ. ಹೀಗಾಗಿ ಸೆಕ್ಸ್ ಸಂದರ್ಭದ ಕ್ರಿಯೆಗಳಿಂದ ಮಗುವಿಗೆ ಯಾವುದೇ ಅಪಾಯವಾಗಲಾರದು.

ಗರ್ಭಾವಸ್ಥೆಯಲ್ಲಿ ಸ್ಖಲನ ಪರಾಕಾಷ್ಠೆ ಹೆಚ್ಚೇಕೆ?
ಗರ್ಭಿಣಿಯಾಗಿರುವಾಗ ಮಹಿಳೆ ಸಾಮಾನ್ಯಕ್ಕಿಂತ ಹೆಚ್ಚು ಸೆಕ್ಸ್ ಸುಖದ ಉತ್ತುಂಗ ತಲುಪಬಹುದು. ಇದಕ್ಕೆ ಕಾರಣವೂ ಇದೆ. ಗರ್ಭಾವಸ್ಥೆಯಲ್ಲಿ ಜನನಾಂಗಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಇದರಿಂದ ದೇಹದಲ್ಲಿ ಉತ್ತೇಜನದ ಸೂಕ್ಷ್ಮತೆ ಹೆಚ್ಚಾಗಿ ಸ್ಖಲನದ ತೀವ್ರತೆ ಹಾಗೂ ಪರಾಕಾಷ್ಠೆಯ ಸುಖ ಹೆಚ್ಚಿರುತ್ತದೆ.

ವೈದ್ಯರ ಸಲಹೆ ಅಗತ್ಯವೆ?
ಪ್ರತಿಯೊಬ್ಬರ ದೇಹ ರಚನೆ ವಿಭಿನ್ನವಾಗಿರುವುದರಿಂದ ಆರೋಗ್ಯವೂ ಭಿನ್ನವಾಗಿರುತ್ತದೆ. ಗರ್ಭಿಣಿಯಾಗಿರುವಾಗ ಸೆಕ್ಸ್ ನಡೆಸುವ ಬಗ್ಗೆ ನಿಮಗೆ ಸಂದೇಹಗಳಿದ್ದಲ್ಲಿ ಅಥವಾ ಈ ಮುಂಚೆ ಗರ್ಭಿಣಿಯಾದಾಗ ಸೆಕ್ಸ್‌ನಿಂದ ಹೆರಿಗೆಯಲ್ಲಿ ತೊಂದರೆ ಆಗಿದ್ದಲ್ಲಿ, ಗರ್ಭಾವಸ್ಥೆಯ ಸೆಕ್ಸ್ ನಡೆಸುವ ಮುನ್ನ ಅಥವಾ ಸ್ವ ರತಿಯಲ್ಲಿ ತೊಡಗುವ ಮುನ್ನ ಡಾಕ್ಟರನ್ನು ಕಾಣುವುದು ಒಳಿತು.



Click it and Unblock the Notifications











