Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಚಂದ್ರಗ್ರಹಣ: ಗರ್ಭಿಣಿಯರೇ ಈ 5 ಎಚ್ಚರಿಕೆಯ ಸಂಗತಿಗಳು ನೆನಪಿರಲಿ

ಶತಮಾನದ ಅತಿ ದೀರ್ಘ ಚಂದ್ರಗ್ರಹಣವು ಜುಲೈ 27,2018 ರಂದು ನಡೆಯಲಿದೆ. ಇದು ನಾಲ್ಕು ಗಂಟೆಗಳ ಅವಧಿಯನ್ನು ತೆಗೆದುಕೊಳ್ಳಲಿದೆ. ಜುಲೈ 27 ರಾತ್ರಿ 11: 54 ಕ್ಕೆ ಆರಂಭಗೊಂಡು ಜುಲೈ 28 ರ ಪ್ರಾತಃ ಕಾಲ 3: 55 ಕ್ಕೆ ಗ್ರಹಣ ಮುಕ್ತಾಯಗೊಳ್ಳಲಿದೆ. ಈ ಸಮಯಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು ಹಾಗೂ ಇದನ್ನು ಸೂತಕ ಕಾಲ ಎಂದು ಕರೆಯಲಾಗುತ್ತದೆ.
ಚಂದ್ರಗ್ರಹಣದ ಒಂಭತ್ತು ಗಂಟೆಗಳ ಮುನ್ನ ಸೂತಕ ಕಾಲ ಎಂದು ಉಲ್ಲೇಖಿಸಲಾಗಿದೆ ಮತ್ತು ಗ್ರಹಣವಾದ 24 ಗಂಟೆಗಳ ಕಾಲವನ್ನೂ ಈ ಕಾಲ ಎಂದು ಪರಿಗಣಿಸಲಾಗಿದೆ. ಕೆಲವೊಂದು ಕಾರ್ಯಗಳನ್ನು ನಡೆಸಲು ಇದು ಒಳ್ಳೆಯ ಸಮಯವಲ್ಲವೆಂದು ಪರಿಗಣಿಸಲಾಗಿದೆ. ಜುಲೈ 27 ರ ಚಂದ್ರಗ್ರಹಣದಂದು ಸೂತಕ ಕಾಲವು ಮಧ್ಯಾಹ್ನ 2 ಗಂಟೆಯಿಂದ ಆರಂಭಗೊಳ್ಳುತ್ತದೆ ಮತ್ತು ಮುಂದಿನ ಸೂರ್ಯೋದಯದವರೆಗೆ ಇದು ಮುಂದುವರಿಯುತ್ತದೆ. ಈ ಸಮಯದಲ್ಲಿ ಆದಷ್ಟು ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಗಮವನ್ನು ಹರಿಸಬೇಕಾಗಿದೆ.

ಗರ್ಭಾವಸ್ಥೆಯೆಂಬುದು ಒಂದು ಅನೂಹ್ಯ ಅನುಭೂತಿಯಾಗಿರುವುದರಿಂದ ಯಾವುದೇ ನಿರ್ಲಕ್ಷ್ನಯವನ್ನು ಮಾಡದೆಯೇ ಗರ್ಭಿಣಿಯರ ಮತ್ತು ಭ್ರೂಣದ ಕಾಳಜಿಯನ್ನು ಮಾಡಬೇಕಾಗುತ್ತದೆ. ಅದರಲ್ಲೂ ಗ್ರಹಣದಂತಹ ವಾತಾವರಣ ಬದಲಾವಣೆಯ ಸಮಯದಲ್ಲಿ ಕೊಂಚ ಎಚ್ಚರಿಕೆಯಿಂದ ಗರ್ಭಿಣಿಯರು ಇರಬೇಕಾಗುತ್ತದೆ. ಈ ಸಮಯಲ್ಲಿ ವಾತಾವರಣವು ಕಲುಷಿತಗೊಂಡಿರುವುದರಿಂದ ಹೆಚ್ಚಿನ ಕಾಳಜಿಯನ್ನು ಗರ್ಭಿಣಿಯರು ಮಾಡಬೇಕಾಗುತ್ತದೆ. ಅದರಲ್ಲೂ ಗರ್ಭದೊಳಗಿರುವ ಕಂದನಿಗೆ ಗ್ರಹಣದ ವೈಪರೀತ್ಯ ಕೊಂಚ ಪರಿಣಾಮ ಬೀರುವ ಸಂಭವ ಇರುತ್ತದೆ. ಇಂದಿನ ನಮ್ಮ ಲೇಖನದಲ್ಲಿ ಯಾವ ರೀತಿಯ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಾವು ತಿಳಿಸಿದ್ದು ಏನೆಲ್ಲಾ ಮಾಡಬಾರದು ಎಂಬ ಕಿವಿಮಾತನ್ನು ಹೇಳುತ್ತಿದ್ದೇವೆ.
1.ಗ್ರಹಣದ ಸಮಯದಲ್ಲಿ ಹೊರಹೋಗಬೇಡಿ
ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೊರಗೆ ಹೋಗಬಾರದು. ಗರ್ಭದೊಳಗಿರುವ ಕಂದನಿಗೆ ಗ್ರಹಣದ ಪರಿಣಾಮ ಬೀಳಬಹುದು ಎಂಬುದಾಗಿ ತಿಳಿಸಲಾಗಿದೆ. ಮಗುವಿನ ಮೇಲೆ ಕೆಂಪು ಗುಳ್ಳೆಗಳು ಬೀಳುವ ಸಂಭವಿದ್ದು ಇದು ಶಾಶ್ವತವಾಗಿ ಮಗುವಿನ ದೇಹದಲ್ಲಿ ಇರಲಿದೆ.
2.ಗ್ರಹಣ ಸಮಯದಲ್ಲಿ ಹರಿತವಾಗಿರುವ ವಸ್ತುವಿನ ಬಳಕೆಯನ್ನು ಮಾಡಬೇಡಿ
ಚಾಕು, ಸೂಜಿ, ಕತ್ತರಿಯಂತಹ ಹರಿತವಾಗಿರುವ ವಸ್ತುವಿನ ಬಳಕೆಯನ್ನು ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮಾಡಬೇಡಿ. ಇನ್ನು ಗರ್ಭಿಣಿಯರ ಪತಿಯಂದಿರೂ ಕೂಡ ಇಂತಹ ವಸ್ತುಗಳ ಬಳಕೆಯನ್ನು ಮಾಡದಿರುವುದು ಒಳ್ಳೆಯದು ಎಂದು ತಿಳಿಸಲಾಗಿದೆ. ಈ ವಸ್ತುಗಳನ್ನು ಗ್ರಹಣ ಸಮಯದಲ್ಲಿ ಬಳಸುವುದರಿಂದ ಇದು ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ನಂಬಲಾಗಿದೆ.
3.ಗ್ರಹಣ ಸಮಯದಲ್ಲಿ ಆಹಾರ ಸೇವಿಸಬಾರದು
ಗ್ರಹಣ ಸಮಯದಲ್ಲಿ ಮಾಡಿದ ಆಹಾರವನ್ನು ಗರ್ಭಿಣಿಯರು ಸೇವಿಸಬಾರದು. ಗ್ರಹಣದ ಹಾನಿಕಾರಕ ಕಿರಣಗಳು ಆಹಾರವನ್ನು ವಿಷಯುಕ್ತಗೊಳಿಸಿರುತ್ತವೆ ಎಂದು ನಂಬಲಾಗಿದೆ. ಇದರಿಂದ ಮಗುವಿನ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಲಿದೆ. ಸೂತಕ ಕಾಲದಲ್ಲಿ ಗರ್ಭಿಣಿ ಆಹಾರ ಸೇವಿಸಿದಲ್ಲಿ ಅದಕ್ಕೆ ತುಳಸಿ ಎಲೆಯನ್ನು ಸೇರಿಸಿ ಆಹಾರವನ್ನು ಸೇವಿಸಬೇಕು. ಗ್ರಹಣದ ನಂತರ ತುಳಸಿ ಎಲೆಯನ್ನು ತೆಗೆದರೆ ಆಯಿತು ಇದರಿಂದ ಆಹಾರ ವಿಷಯುಕ್ತ ಇಲ್ಲವೇ ಕಲುಷಿತಗೊಳ್ಳುವುದಿಲ್ಲ.
4.ಗ್ರಹಣದ ನಂತರ ಸ್ನಾನ ಮಾಡಿ
ಗ್ರಹಣ ಮುಗಿದ ಒಡನೆಯೇ ಗರ್ಭಿಣಿಯರು ಸ್ನಾನ ಮಾಡಬೇಕು. ಇಲ್ಲದಿದ್ದರೆ ಮಗುವಿಗೆ ಚರ್ಮ ಸಂಬಂಧಿ ರೋಗಗಳು ಬರುತ್ತದೆ.
5.ಗ್ರಹಣದ ಸಮಯದಲ್ಲಿ ಮಲಗಬೇಡಿ
ಗ್ರಹಣ ಸಮಯದಲ್ಲಿ ಗರ್ಭಿಣಿಯರು ಮಲಗಬಾರದು, ಇದರಿಂದ ಮಗುವಿಗೆ ಗಂಭೀರ ಸಮಸ್ಯೆಗಳು ಉಂಟಾಗಬಹುದು. ನಿದ್ದೆಯ ಸಮಯದಲ್ಲಿ ಬೇಗನೇ ಋಣಾತ್ಮಕ ಅಂಶಗಳು ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.



Click it and Unblock the Notifications