For Quick Alerts
ALLOW NOTIFICATIONS  
For Daily Alerts

ನೋಡಿ ಈ ಆಹಾರಗಳೆಲ್ಲಾ ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು...

By Deepu
|

ಗರ್ಭ ಧರಿಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿಯಾಗುತ್ತಿರುವವಳಿಗೆ ಆಗುವ ಸಂತಸ ಅಷ್ಟಿಷ್ಟಲ್ಲ. ತನ್ನ ಕುಡಿಯೊಂದು ತನ್ನ ಒಡಲಲ್ಲಿ ಬೆಳೆಯಲಿದೆ ಎಂಬ ಕಲ್ಪನೆಯೇ ಅತಿ ಮಧುರ. ಆದರೆ ಈ ಸಂಭ್ರಮದಲ್ಲಿ ತಾಯಿಯಾಗುವವಳು ತನ್ನ ಆರೋಗ್ಯವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಪೂರ್ಣ ನವಮಾಸಗಳಲ್ಲಿ ವಿವಿಧ ಆಹಾರಗಳನ್ನು ಸೇವಿಸಬೇಕು ಮತ್ತು ಕೆಲವು ಆಹಾರಗಳನ್ನು ಸರ್ವಥಾ ಸೇವಿಸಬಾರದು. ಏಕೆಂದರೆ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಆರೋಗ್ಯ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಅರಿವಿಲ್ಲದೇ ಒಂದು ಚಿಕ್ಕ ತಪ್ಪು ಹೆಜ್ಜೆ ಇಟ್ಟರೂ ಈ ಸಂತಸ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದ ಹಾಗೆ ಆಗಬಹುದು.

ಆರೋಗ್ಯದ ರಕ್ಷಣೆಯಲ್ಲಿ ತಾಯಿಯ ಆಹಾರದ ಆಯ್ಕೆ ತುಂಬಾ ಮುಖ್ಯ. ಅಪ್ಪಿ ತಪ್ಪಿಯೂ ಗರ್ಭಾಪಾತಕ್ಕೆ ನೆರವು ನೀಡುವ ಆಹಾರಗಳನ್ನು ತಿನ್ನಬಾರದು. ಉದಾಹರಣೆಗೆ ಪಪ್ಪಾಯಿ, ಮೊಳಕೆ ಬಂದ ಆಲೂಗಡ್ಡೆ, ಅನಾನಸು, ಪೀಚ್ ಹಣ್ಣುಗಳು, ಬಿಳಿಎಳ್ಳು, ಕರಿ ಎಳ್ಳು, ಲೋಳೆಸರ, ನುಗ್ಗೇಕಾಯಿ, ನುಗ್ಗೇ ಸೊಪ್ಪು, ಮಾಂಸಾಹಾರದಲ್ಲಿ ಯಕೃತ್ ಮೊದಲಾದವುಗಳನ್ನು ಮುಂದಿನ ಒಂದು ವರ್ಷದವರೆಗೆ ಮರೆಯುವುದೇ ಉತ್ತಮ. ಕೆಲವು ಆಹಾರಗಳನ್ನು ಹೆಚ್ಚು ಸೇವಿಸಬೇಕು, ಉದಾಹರಣೆಗೆ ಹಸಿರು ಸೊಪ್ಪುಗಳು. ಬನ್ನಿ, ಆಹಾರತಜ್ಞರು ತಾಯಿಯಾಗುವವಳಿಗೆ ಯಾವ ಆಹಾರಗಳನ್ನು ತಿನ್ನಬೇಕೆಂದು ಸಲಹೆ ಮಾಡುತ್ತಾರೆ ಎಂಬುದನ್ನು ನೋಡೋಣ....

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

ಸೀತಾಫಲ ಹಣ್ಣು

ಸೀತಾಫಲ ಹಣ್ಣು

ಪೋಷಕಾ೦ಶಗಳನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿರುವುದರಿ೦ದ ಸೀತಾಫಲವು ಗರ್ಭಿಣಿ ಸ್ತ್ರೀಯರ ಪಾಲಿಗೆ ಸ೦ಜೀವಿನಿಯ೦ತಿದೆ. ಸೀತಾಫಲವು ಖನಿಜಗಳು, ವಿಟಮಿನ್, ಪ್ರೋಟೀನ್‌ಗಳು, ನಾರಿನ೦ಶ, ಶರ್ಕರಪಿಷ್ಟಗಳು, ಹಾಗೂ ಅವಶ್ಯಕ ಕೊಬ್ಬಿನಾ೦ಶಸಗಳ ರೂಪದಲ್ಲಿ ನಾನಾ ಪೋಷಕ ತತ್ವಗಳನ್ನು ಒಳಗೊ೦ಡಿರುತ್ತದೆ. ಶರೀರಕ್ಕೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಎಲ್ಲಾ ಪೋಷಕ ತತ್ವಗಳು ಯಾವುದಾದರೂ ಒ೦ದು ಹಣ್ಣಿನಲ್ಲಿ ಅಡಕಗೊ೦ಡಿರುವುದೇ ಹೌದೆ೦ದಾದರೆ ಆ ಹಣ್ಣು ಸೀತಾಫಲವಲ್ಲದೇ ಬೇರಾವುದೂ ಅಲ್ಲ.

ಟೊಮೇಟೊ

ಟೊಮೇಟೊ

ಟೊಮೇಟೊ ಲೈಕೊಪೀನ್ ಎಂಬ ಶಕ್ತಿ ಶಾಲಿ ಕ್ಯಾನ್ಸರ್ ನಿವಾರಿಸುವ ಅಂಶವು ಟೊಮೇಟೊಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಗರ್ಭಿಣಿಯಾಗಿರುವಾಗ ಇವುಗಳನ್ನು ಸೇವಿಸಿದರೆ ಅದು ಮಗುವಿನ ಜನನದ ನಂತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ಕೆಲವು ತಿಂಗಳುಗಳವರೆಗೆ ಇವುಗಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಕಾಪಾಡುತ್ತಲೆ ಇರುತ್ತವೆ.

ಸೀಬೆ ಹಣ್ಣು

ಸೀಬೆ ಹಣ್ಣು

ಸೀಬೆ ಹಣ್ಣು ಕಬ್ಬಿಣಾ೦ಶ, ಕ್ಯಾಲ್ಸಿಯ೦, ಥೈಯಮೀನ್, ಪೊಟ್ಯಾಷಿಯ೦, ಮೆಗ್ನೀಷಿಯ೦, ಹಾಗೂ ರ೦ಜಕದ೦ತಹ ವಸ್ತುಗಳನ್ನೂ ಕೂಡಾ ಒಳಗೊ೦ಡಿದ್ದು, ಗರ್ಭಿಣಿಯರಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಲ್ಲಿ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಲ್ಲಿರಬೇಕಾದುದು ಅತೀ ಮುಖ್ಯವಾಗಿರುತ್ತದೆ. ಏಕೆ೦ದರೆ, ಗರ್ಭಿಣಿ ಸ್ತ್ರೀಯರ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಿ೦ದಿದ್ದಲ್ಲಿ, ಅದು ಅವರಿಗೆ ನಾನಾ ತೆರನಾದ ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ C ಯು ಸಮೃದ್ಧವಾಗಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅದನ್ನು ಬಲಯುತಗೊಳಿಸುತ್ತದೆ.

ಸರಿಯಾಗಿ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯಿರಿ

ಗರ್ಭಿಣಿಯಾಗಿರುವಾಗ ನೀರನ್ನು ಯಾಕೆ ಸೇವಿಸಬೇಕು ಎಂದು ನಿಮಗೆ ಖಂಡಿತವಾಗಿಯೂ ವಿವರಿಸಬೇಕಾದ ಅವಶ್ಯಕತೆ ಇಲ್ಲ. ನೀರು, ನಿಮ್ಮ ಶರೀರದಲ್ಲಿ ಸಂಗ್ರಹವಾದ ಆoತರಿಕ ವಿಷವಸ್ತುಗಳನ್ನು ನಿವಾರಿಸಲು ಸಹಕರಿಸುವುದು ಮಾತ್ರವಲ್ಲದೇ ಇದು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಮೂತ್ರನಾಳಗಳ ಸೋoಕಿನಿದಲೂ ಕೂಡ ನಿಮ್ಮನ್ನು ರಕ್ಷಿಸುತ್ತದೆ.

ಬೀಟ್ ರೂಟ್‍ಗಳು

ಬೀಟ್ ರೂಟ್‍ಗಳು

ಬೀಟ್‍ರೂಟ್‍ಗಳು ಸಹ ಗರ್ಭಿಣಿಯಾಗಿರುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಇದರ ಜೊತೆಗೆ ಇದರಲ್ಲಿ ಕಬ್ಬಿಣ ಮತ್ತು ಫೊಲಿಕ್ ಆಮ್ಲಗಳ ಪ್ರಮಾಣವು ಸಹ ಅಧಿಕವಾಗಿರುತ್ತದೆ ಮತ್ತು ವಿಟಮಿನ್ ಎ ಹಾಗು ಸಿಗಳು ಸಹ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ಗರ್ಭಿಣಿಯಾಗಿರುವಾಗ ತಿನ್ನಲೇ ಬೇಕಾದ ತರಕಾರಿಗಳಲ್ಲಿ ಒಂದಾಗಿದೆ.

ಕೇಸರಿ ಹಾಲು

ಕೇಸರಿ ಹಾಲು

ಮಗುವಿನ ಚಲನವಲನಗಳು ಗರ್ಭಿಣಿ ಮಹಿಳೆಯರು 5 ತಿಂಗಳ ನಂತರ ಮಗುವಿನ ಚಲನವಲನವನ್ನು ತಮ್ಮ ಹೊಟ್ಟೆಯಲ್ಲಿಯೇ ಅನುಭವಿಸಬಹುದು. ಕೇಸರಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸುವುದರಿಂದ ಇದರ ಪರಿಣಾಮ ಉತ್ತಮವಾಗಿರುತ್ತದೆ. ಆದರೆ ಇದು ದೇಹದ ಉಷ್ಣಾಂಶವನ್ನು ಅಧಿಕ ಮಾಡುವುದರಿಂದ, ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲು ಹೋಗಬಾರದು.

ಸಿಹಿ ಆಲೂಗಡ್ಡೆಗಳು

ಸಿಹಿ ಆಲೂಗಡ್ಡೆಗಳು

ಸಿಹಿ ಆಲುಗಡ್ಡೆಗಳು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿವೆ. ಇದರ ಪ್ರಮುಖ ಪ್ರಯೋಜನಗಳೆಂದರೆ, ಇದು ಮಗುವಿನ ಅಂಗಾಂಗಗಳ ಬೆಳವಣಿಗೆಗೆ ಮುಖ್ಯವಾಗಿ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಮತ್ತು ಪೊಟಾಶಿಯಂ ಸಮೃದ್ಧವಾಗಿರುತ್ತದೆ.

ಪ್ರೋಟೀನ್‌ಯುಕ್ತ ಆಹಾರಗಳು

ಪ್ರೋಟೀನ್‌ಯುಕ್ತ ಆಹಾರಗಳು

ಗರ್ಭಿಣಿಯಾಗಿರುವಾಗ ನೀವು ತೆಗೆದುಕೊಳ್ಳುವ ಪ್ರೋಟೀನ್ ನ ಪ್ರಮಾಣವು 10 ಗ್ರಾಂ ಗಳಷ್ಟು ಹೆಚ್ಚಾಗಬೇಕು. ನಿಮ್ಮ ಮತ್ತು ನಿಮ್ಮ ಶಿಶುವಿನ ಶರೀರಗಳ ಜೀವಕೋಶ ಮತ್ತು ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಸಹಕಾರಿಯಾಗಿದೆ. ಮೊಟ್ಟೆ ಮತ್ತು ಚಿಕನ್ ಗಳು ಪ್ರೋಟೀನ್ ನ ಅತ್ಯುತ್ತಮ ಆಗರಗಳಾಗಿವೆ. ನೀವು ಒಂದು ವೇಳೆ ಸಸ್ಯಹಾರಿಯಾಗಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಪಡೆಯಲು ಎಲ್ಲಾ ವಿಧದ ಧಾನ್ಯಗಳು, ಸೋಯಾ, ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಊಟದ ತಟ್ಟೆಯಲ್ಲಿ ಸೇರಿಸಿಕೊಳ್ಳಿರಿ.

ವಾಲ್‌ನಟ್

ವಾಲ್‌ನಟ್

ಇದರಲ್ಲಿ ಒಮೆಗಾ-3 ಮತ್ತು ಕೊಬ್ಬಿನಾಮ್ಲ ಸಮೃದ್ಧವಾಗಿರುವುದರಿಂದ ಮಹಿಳೆಯರು ನಿತ್ಯವೂ ಸೇವಿಸಿದರೆ ಉತ್ತಮ. ಇದು ಮಗುವಿನ ಮೆದುಳು ಬೆಳವಣಿಗೆಗೆ ಸಹಾಯಕವಾಗಿರುತ್ತದೆ.

ಹಾಲು

ಹಾಲು

ವಿಟಮಿನ್ ಹಾಗೂ ಪ್ರೋಟೀನ್ ಪಡೆಯಲು ಹಾಲೊಂದು ಉತ್ತಮವಾದ ಮೂಲ. ನಿತ್ಯವೂ ಇದರ ಸೇವನೆ ಮಾಡಿದರೆ ಮಗುವಿನ ತ್ವಚೆ, ಬುದ್ಧಿ, ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುವುದು.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯಲ್ಲಿ ಅತಿ ಹೆಚ್ಚಿನ ಪ್ರೋಟೀನ್ ಅಂಶ ಇರುವ ಕಾರಣ ಇದು ಮಗುವಿನ ದೇಹದಲ್ಲಿ ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವಾರದಲ್ಲಿ ಎರಡು ಅಥವಾ ಮೂರು ಹೊತ್ತಾದರೂ ಮೊಟ್ಟೆ ಇರಲಿ.

ಬೀನ್ಸ್ ಕಾಳುಗಳು

ಬೀನ್ಸ್ ಕಾಳುಗಳು

ರಾಜ್ಮಾ ಎಂದೂ ಕರೆಯಲ್ಪಡುವ ಬೀನ್ಸ್ ಕಾಳುಗಳಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನು ಇದ್ದು ಮಗುವಿನ ಬೆಳವಣಿಗೆಗೆ ಪೂರಕವಾಗಿದೆ.

 ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಬೆಣ್ಣೆಹಣ್ಣಿನ ತಿರುಳಿನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನ ಆಮ್ಲಗಳಿವೆ. ಇವು ಗರ್ಭಿಣಿ ಮತ್ತು ಮಗುವಿನ ಆರೋಗ್ಯಕ್ಕೆ ಪೂರಕವಾಗಿವೆ.

English summary

List of Healthy Foods to Eat While Pregnant

A healthy diet is an important part of a healthy lifestyle at any time, but is especially vital if you're pregnant or planning a pregnancy. Eating healthily during pregnancy will help your baby to develop and grow. You don’t need to go on a special diet, but it's important to eat a variety of different food
X
Desktop Bottom Promotion