Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಿಣಿಯರು ಮಸಾಲೆಯುಕ್ತ ಆಹಾರವನ್ನು ಸೇವಿಸುವುದು ಆರೋಗ್ಯಕರವೇ?
ನಾವು ಸೇವಿಸುವ ಆಹಾರದ ಮೂಲಕ ದೇಹದೊಡನೆ ನಮ್ಮ ಸಂಬಂಧವನ್ನು ಬೆಳೆಸಿಕೊಳ್ಳುತ್ತವೆ. ನಾವು ಹುಟ್ಟಿದ ಕ್ಷಣದಿಂದ ನಮ್ಮ ಕೊನೆಯ ಉಸಿರಿರುವವರೆಗೆ ನಮ್ಮ ದೇಹಕ್ಕೆ ಏನನ್ನಾದರೂ ಮಾಡುವುದು ನಮ್ಮ ಕರ್ತವ್ಯವಾಗಿದೆ.ಅದರಿಂದ ನಮ್ಮ ದೇಹ ನಮಗೆ ಇನ್ನು ತುಂಬಾ ಒಳ್ಳೆಯದನ್ನು ಮಾಡುತ್ತದೆ. ತಾತ್ವಿಕವಾಗಿ ಹೇಳುವುದಾದರೆ ನಾವು ತಿನ್ನುವ ಆಹಾರ ಪೌಷ್ಟಿಕವಾಗಿರಬೇಕು. ವಾಸ್ತವವಾಗಿ, ನಮ್ಮ ಆಹಾರ ಪದ್ಧತಿಯು ಕೇವಲ ಸಮತೋಲನವನ್ನು ಹೊಂದಿದ್ದರೆ ಸಾಲದು,ಅದು ನಮ್ಮದೇಹದ ವಿವಿಧ ಅವಶ್ಯಕತೆಗಳನ್ನು ಪೂರೈಸುವ ರೀತಿಯಲ್ಲಿ ಇರಬೇಕು.
ಆದರೆ ನಮ್ಮಲ್ಲಿ ಬಹಳಷ್ಟು ಜನರು ಎಲ್ಲ ತರಹದ ಆಹಾರವನ್ನು ತಿನ್ನುವ ಬಯಕೆಗಳಿಂದ ಪಥ್ಯವನ್ನು ಹಲವಾರು ಬಾರಿ ಪಾಲಿಸುವುದಿಲ್ಲ.ಹಾಗೆಯೆ ಗರ್ಭವನ್ನು ಧರಿಸುತ್ತಿರುವಂತಹ ಮಹಿಳೆಯರಲ್ಲೂ ಇದು ಸತ್ಯವಾಗಿದೆ.ಇನ್ನೂ ಹೇಳಬೇಕೆಂದರೆ ಗರ್ಭಿಣಿಯರಲ್ಲಿ ಬರುವ ಬಯಕೆಗಳನ್ನು ಬಸುರಿ ಬಯಕೆ ಎಂದೇ ಕರೆಯುತ್ತಾರೆ.ಈ ಸ್ಥಿತಿಯಲ್ಲಿ ಗರ್ಭಿಣಿಯರು ಎದುರಿಸುವ ಒಂದು ಸಂದಿಗ್ಧ ವಿಚಾರವೆಂದರೆ ತಮಗೆ ಬಯಕೆಯಾಗುವ ಎಲ್ಲ ಆಹಾರಗಳನ್ನು ತಾವು ತಿನ್ನಬಹುದೇ ಮತ್ತು ಅದರಿಂದ ಮಗುವಿನ ಆರೋಗ್ಯಕ್ಕೆ ತೊಂದರೆಯೇನಾದರೂ ಉಂಟಾಗುತ್ತದೆಯೇ ಎಂದು.
ಮಸಾಲೆಯುಕ್ತ ಆಹಾರವನ್ನು ತಿನ್ನಲು ಬಯಸುವ ಗರ್ಭಿಣಿ ಮಹಿಳೆಯರಲ್ಲಿ ಈ ವಿಚಾರ ನಿಜವಾಗಿದೆ. ಈ ಲೇಖನದಲ್ಲಿ, ನಿಮ್ಮ ಜೀವನದಲ್ಲಿ ಮಗು ಹೊಟ್ಟೆಯಲ್ಲಿರುವ ಒಂಬತ್ತು ತಿಂಗಳು ನೀವು ತಿನ್ನುವ ಮಸಾಲೆಯುಕ್ತ ಆಹಾರದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ....

ಮೊದಲ ತ್ರೈಮಾಸಿಕದಲ್ಲಿ ಮಸಾಲೆಯುಕ್ತ ಆಹಾರ
ಮೊದಲ ತ್ರೈಮಾಸಿಕ ನಿಮ್ಮ ಗರ್ಭಾವಸ್ಥೆಯ ಅತ್ಯಂತ ಪ್ರಮುಖ ಭಾಗವಾದದ್ದು.ಏಕೆಂದರೆ ಈ ಸಮಯದಲ್ಲೇ ಹಲವರಿಗೆ ಗರ್ಭಪಾತಗಳು ಸಂಭವಿಸುತ್ತವೆ ಎಂದು ಅನೇಕ ತಜ್ಞರು ನಂಬುತ್ತಾರೆ.ಆದ್ದರಿಂದ,ಈ ಸಮಯದಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು ಮತ್ತು ನಿಮ್ಮ ಕಾಳಜಿಯನ್ನು ನೀವೇ ವಹಿಸಬೇಕು.ಈ ಕೆಲವು ತಿಂಗಳುಗಳಲ್ಲಿ,ಅನೇಕ ಗರ್ಭಿಣಿಯರು ಬೆಳಗ್ಗೆ ಹೊತ್ತು ಸುಸ್ತು ಮತ್ತು ಸಂಕಟವನ್ನು ಅನುಭವಿಸುತ್ತಾರೆ (ಅದು ಸಂಪೂರ್ಣ ದಿನವೂ ಉಳಿಯಬಹುದು)ಹಾಗೂ ಈ ಸಮಯದಲ್ಲಿ ಅವರಿಗೆ ವಾಸನೆಗಳನ್ನು ಗ್ರಹಿಸುವ ಶಕ್ತಿ ತುಂಬಾ ಹೆಚ್ಚಾಗಿರುತ್ತದೆ.
ಇದು ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರನ್ನು ಮಸಾಲೆಯ ಆಹಾರದ ಸೇವನೆಯಿಂದ ದೂರ ಉಳಿಯುವಂತೆ ಮಾಡುತ್ತದೆ.ಮಸಾಲೆಯುಕ್ತ ಆಹಾರದ ಸೇವನೆಯು ಗರ್ಭಪಾತವನ್ನು ಪ್ರಚೋದಿಸದಿದ್ದರೂ ಸಹ, ಇದು ದೇಹದಿಂದ ನೀರಿನ ಅಂಶವನ್ನು ಕಡಿಮೆಗೊಳಿಸುವ ಅತಿಸಾರಕ್ಕೆ ಕಾರಣವಾಗಬಹುದು. ಬೆಳಗಿನ ಹೊತ್ತು ನೀವು ಅನುಭವಿಸುವ ಸುಸ್ತು ಸಂಕಟಗಳ ಜೊತೆಗೆ ನಿಮ್ಮ ದೇಹದಿಂದ ನೀರಿನ ಅಂಶ ಕಡಿಮೆ ಆದರೆ ಅದು ಇನ್ನೂ ದೊಡ್ಡ ತೊಂದರೆಯಾಗಬಹುದು.
ಆದ್ದರಿಂದ, ಆರಂಭಿಕ ಕೆಲವು ತಿಂಗಳುಗಳಲ್ಲಿ ಮಸಾಲೆಯುಕ್ತ ಆಹಾರವನ್ನು ತ್ಯಜಿಸುವುದು (ಅಥವಾ ಕನಿಷ್ಟ ಮಸಾಲೆ ಪ್ರಮಾಣವನ್ನು ಕಡಿಮೆಗೊಳಿಸುವುದು)ಜಾಣತನವೆನಿಸಿಕೊಳ್ಳುತ್ತದೆ.ಬೆಳಗಿನ ಹೊತ್ತು ಯಾವುದೇ ಸುಸ್ತು ಸಂಕಟ ಅನುಭವಿಸದ ಮಹಿಳೆಯರು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಯಾವುದೇ ತೊಂದರೆಯಿಲ್ಲ.

ಮಸಾಲೆಭರಿತ ಆಹಾರವನ್ನು ಮಗು ರುಚಿಸಬಹುದೇ?
ಜೀವವಿಜ್ಞಾನದ ಪ್ರಕಾರ ಹೇಳುವುದಾದರೆ,ಗರ್ಭಾಶಯದಲ್ಲಿರುವ ಮಗು ಆಮ್ನಿಯೋಟಿಕ್ ದ್ರವದಿಂದ ಸುತ್ತುವರೆದಿರುತ್ತದೆ.ಇದು ಅವನು ಅಥವಾ ಅವಳನ್ನು ರಕ್ಷಿಸುತ್ತದೆ.ಮಗುವಿಗೆ ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಹೆಚ್ಚಿಸಲು ಬೇಕಾದ ವಾಸನೆಯನ್ನು ಗ್ರಹಿಸುವ ಶಕ್ತಿಯೇ ಇರುವುದಿಲ್ಲ.ಅವಳು ಅಥವಾ ಅವನು ತಾಯಿಯ ರಕ್ತ ಪ್ರವಾಹದಿಂದ ಬರುವ ಅಣುಗಳಿಂದ ರುಚಿಯನ್ನು ಆಸ್ವಾದಿಸುತ್ತಾಳೆ/ನೆ.
ಈ ಕಣಗಳು ತಾಯಿಯು ಸೇವಿಸುವ ಆಹಾರದಿಂದ ಮಾರ್ಪಟ್ಟಿರುತ್ತವೆ,ಇದು ತಾಯಿ ಸೇವಿಸುವ ಆಹಾರದ 100 ಪಟ್ಟು ಕಡಿಮೆಯಾಗಿರುವ ಕಣಗಳಾಗಿ ವಿಭಜನೆಯಾಗುತ್ತದೆ.ಇಂತಹ ಸ್ಥಿತಿಯಲ್ಲಿ ಮಗು ಆಹಾರದ ರುಚಿಯನ್ನು ತಿಳಿಯುತ್ತದೆ ಎಂದು ಹೇಳುವುದು ಅಷ್ಟು ಸಮಂಜಸವಲ್ಲ.ತಿಳಿದರೂ ಕೂಡ ಅದರ ಪ್ರಮಾಣ ತುಂಬಾ ಕಡಿಮೆಯಾಗಿರುತ್ತದೆ. ಹೀಗೆ ಇಂತಹ ಸಂಗತಿಗಳ ಮಧ್ಯೆಯೂ,ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಮಗು ಆಹಾರವನ್ನು ಪ್ರತ್ಯೇಕಿಸಲು ಪ್ರಾರಂಭಿಸುತ್ತದೆ.ಪ್ರತಿಯೊಂದು ಮಗುವೂ ಕೂಡ ಇತರ ಮಕ್ಕಳಿಗೆ ಹೋಲಿಸಿದರೆ ತನ್ನದೇ ಆದ ಬೇರೆ ರೀತಿಯಲ್ಲಿ ಆಹಾರವನ್ನು ಬೇರ್ಪಡಿಸಿ ಹೇಳುವ ವಿವಿಧ ವಿಧಾನಗಳನ್ನು ಹೊಂದಿದೆ.ಹೆಚ್ಚಿನ ಮಹಿಳೆಯರು ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ತಮ್ಮ ಮಗು ಬಿಕ್ಕಳಿಸುತ್ತಿರುವ ಅನುಭವವನ್ನು ಹೊಂದಿದಂತೆ ಹೇಳುತ್ತಾರೆ.ಇನ್ನೂ ಕೆಲವರು ಮಸಾಲೆಭರಿತ ಆಹಾರವನ್ನು ಸೇವಿಸಿದಾಗ ಮಕ್ಕಳು ಹೊಟ್ಟೆಯಲ್ಲಿ ಹೆಚ್ಚಾಗಿ ಒದೆಯುತ್ತವೆ ಎಂದು ಹೇಳುತ್ತಾರೆ.

ಮಸಾಲೆಯುಕ್ತ ಆಹಾರವು ಮಗುವನ್ನು ಹಾನಿಗೊಳಿಸಬಹುದೇ?
ಗರ್ಭವಾಸ್ಥೆಯಲ್ಲಿ ಮಹಿಳೆಯರ ಜೀರ್ಣಕ್ರಿಯೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.ಇದು ಎದೆಯುರಿ ಮತ್ತು ಅಸಿಡಿಟಿಯಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.ಮಸಾಲೆಯುಕ್ತ ಆಹಾರಗಳು ಈ ಸ್ಥಿತಿಗಳನ್ನು ಪ್ರಚೋದಿಸುತ್ತವೆ.ಹೀಗಾಗಿ,ಗರ್ಭಿಣಿಯರು ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಕಷ್ಟಕರವಾಗಿರುತ್ತದೆ.ಆದರೆ ನಿಮಗೆ ಅಂತಹ ಯಾವುದೇ ಸಮಸ್ಯೆಗಳು ಇಲ್ಲದಿದ್ದರೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರ ಬಗ್ಗೆ ಯಾವ ಚಿಂತೆಯನ್ನು ಕೂಡ ಮಾಡುವ ಅವಶ್ಯಕತೆಯಿಲ್ಲ.
ಎಲ್ಲಿಯ ತನಕ ಮಸಾಲೆಯುಕ್ತ ಆಹಾರವು ನಿಮಗೆ ತೊಂದರೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಮಗುವಿಗೆ ಅದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ. ವಾಸ್ತವಿಕವಾಗಿ ಹೇಳಬೇಕೆಂದರೆ ನೀವು ಗರ್ಭಾವಸ್ಥೆಯಲ್ಲಿರುವಾಗ ಸೇವಿಸುವ ಆಹಾರವು ನಿಮ್ಮ ಮಗುವಿನ ರುಚಿ ಮೊಗ್ಗುಗಳನ್ನು ಹಲವೊಮ್ಮೆ ಆಕಾರಗೊಳಿಸುತ್ತದೆ ಮತ್ತು ಇದನ್ನು ನಾವು ಒಂದು ಧನಾತ್ಮಕ ಸೂಚನೆಯಾಗಿ ತೆಗೆದುಕೊಳ್ಳಬಹುದು,ಆದ್ದರಿಂದ ನೀವು ಗರ್ಭಿಣಿಯಾಗಿದ್ದಾಗ ಸಾಕಷ್ಟು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ,ನಂತರದ ವರ್ಷಗಳಲ್ಲಿ ಅವಳು ಅಥವಾ ಅವನು ನಿಮ್ಮ ಗೋಲ್ಗಪ್ಪ ಮತ್ತು ವಡಾ ಪಾವ್ಸ್ನಲ್ಲಿ ತನಗೂ ಪಾಲು ಬೇಕು ಎಂದು ಕೇಳಬಹುದು.

ಮಸಾಲೆಯ ಆಹಾರವನ್ನು ನಿರ್ಬಂಧಿಸಲು ಕಾರಣಗಳು
ಗರ್ಭಾವಸ್ಥೆಯಲ್ಲಿ ನೀವು ಮಸಾಲೆಯುಕ್ತ ಆಹಾರವನ್ನು ಸೇವಿಸದೇ ಇರುವುದು ನಿಮಗೇ ಆರಾಮದಾಯಕ.ಇದು ವಿಶೇಷವಾಗಿ ಕೊನೆಯ ತ್ರೈಮಾಸಿಕದಲ್ಲಿ ನಿಜವೆನಿಸುತ್ತದೆ.ಏಕೆಂದರೆ ಆ ಹೊತ್ತಿಗೆ ಮಗವಿನ ಗಾತ್ರವು ತಕ್ಕ ಮಟ್ಟಿಗೆ ಹೆಚ್ಚೇ ಆಗಿರುತ್ತದೆ ಮತ್ತು ಹೊಟ್ಟೆಯಲ್ಲಿ ಜಾಗದ ಕೊರತೆಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತದೆ. ಹೊಟ್ಟೆ ಬೆಳೆಯುತ್ತಿರುವ ಕಾರಣದಿಂದಾಗಿ ಇತರೆ ಸಾಮಾನ್ಯ ಚಟುವಟಿಕೆಗಳಿಗೆ ಅಲ್ಲಿ ಕಡಿಮೆ ಜಾಗವಿರುತ್ತದೆ ಮತ್ತು ಇದರಿಂದ ಹೊಟ್ಟೆಯಲ್ಲಿರುವ ಆಮ್ಲಗಳು ಸುಲಭವಾಗಿ ಅನ್ನನಾಳಕ್ಕೆ ಹೋಗಲು ದಾರಿಯಾಗುತ್ತದೆ. ಹೀಗಾಗಿ,ನೀವು ಸಾಮಾನ್ಯವಾದ ಸ್ಥಿತಿಯಲ್ಲಿದ್ದ ರೀತಿಗೆ ಹೋಲಿಸಿದರೆ ಗರ್ಭವಾಸ್ಥೆಯಲ್ಲಿ ಮಸಾಲೆಯುಕ್ತ ಆಹಾರದಿಂದ ಹೆಚ್ಚಿನ ಅಸ್ವಸ್ಥತೆ ಉಂಟಾಗುತ್ತದೆ.ಇಲ್ಲಿ ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ ಗರ್ಭಿಣಿಯಾಗುವುದಕ್ಕೆ ಮುಂಚೆ ನೀವು ಸೇವಿಸುತ್ತಿದ್ದ ಮಸಾಲೆಯುಕ್ತ ಆಹಾರದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣವನ್ನು ನೀವು ಗರ್ಭವಾಸ್ಥೆಯಲ್ಲಿ ತೆಗೆದುಕೊಳ್ಳುವದನ್ನು ಮಾಡಲೇಬಾರದು.

ಮಸಾಲೆಯ ಆಹಾರವನ್ನು ನಿರ್ಬಂಧಿಸಲು ಕಾರಣಗಳು
ಈಗಾಗಲೇ ಮಗು ಬೆಳೆಯುತ್ತಿರುವ ಕಾರಣದಿಂದಾಗಿ ನಿಮ್ಮ ದೇಹವು ಅಸಂಖ್ಯಾತ ಬದಲಾವಣೆಗಳನ್ನು ಹೊಂದುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.ಈ ಬದಲಾವಣೆಗಳು ಭೌತಿಕವಾದ ಬದಲಾವಣೆಗಳಿಂದ ಹಿಡಿದು ಭಾವನಾತ್ಮಕ ಮತ್ತು ಹಾರ್ಮೋನುಗಳವರೆಗೆ ಆಗುತ್ತವೆ.ಮಸಾಲೆಭರಿತ ಆಹಾರವನ್ನು ಸೇವಿಸುವುದರ ಮೂಲಕ ನಿಮಗೆ ನೀವೇ ಇನ್ನಷ್ಟು ತೊಂದರೆಗಳನ್ನು ತಂದುಕೊಳ್ಳಬೇಡಿ. ಹೀಗಾಗಿ, ಮಸಾಲೆಯುಕ್ತ ಆಹಾರದಿಂದ ನಿಮ್ಮ ಮಗುವಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗುವುದಿಲ್ಲ ಎಂದು ನಿಮಗೆ ಈಗ ತಿಳಿದಿರುವುದ ರಿಂದ,ನಿಮ್ಮಲ್ಲಿ ಅನೇಕರು ಆರಾಮವಾಗಿರ ಬಹುದು.ಹಾಗೂ ಈ ಸಮಯದಲ್ಲಿ ನೀವು ಮಸಾಲೆಯುಕ್ತ ಆಹಾರವನ್ನು ತಿಂದರೆ ಮುಂಬರುವ ವರ್ಷಗಳಲ್ಲಿ ವಾಸ್ತವಿಕವಾಗಿ ಮಸಾಲೆ ಸಾಲ್ಸಾವನ್ನು ನಿಮ್ಮ ಮಗುವಿನೊಂದಿಗೆ ಹಂಚಿಕೊಳ್ಳಲು ಈಗಲೇ ಸಿದ್ಧರಾಗಿರಿ. ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರ ಸಲುವಾಗಿ ನೀವು ಆಲೋಚಿಸ ಬೇಕಾದ ಅಂಶವೆಂದರೆ,ಇದು ನಿಮ್ಮ ದೇಹವಾಗಿದ್ದು,ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಸೂಚನೆಯನ್ನು ನೀಡುತ್ತದೆ.ಆ ಸೂಚನೆಗಳನ್ನು ಆಲಿಸುವುದನ್ನು ಕಲಿಯಿರಿ.ಹಾಗು ನಿಮ್ಮ ಶರೀರವು ನಿಮಗೆ ಯಾವ ಆಹಾರಕ್ಕೂ ತಡೆಗಟ್ಟದೇ,ನೀವು ಮಸಾಲೆಯುಕ್ತ ಆಹಾರ ಅಥವಾ ಬೇರೆ ಯಾವುದೇ ಆಹಾರವನ್ನು ತಿನ್ನುವುದಕ್ಕೆ ಅನುಮತಿಸಿದರೆ ನಾವು ನಿಮಗೆ ಉತ್ತಮವಾಗಿ ಹಸಿವಾಗಲಿ ಎಂದು ಹಾರೈಸುತ್ತೇವೆ!



Click it and Unblock the Notifications