Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಸ್ತ್ರೀಯರ ಬಿಳಿ ಮುಟ್ಟಿನ ಸಮಸ್ಯೆಗೆ ನೈಸರ್ಗಿಕ ಮನೆಮದ್ದುಗಳು
ಯೋನಿಯಲ್ಲಿ ನೋವು ಅಥವಾ ಬಿಳಿ ಮುಟ್ಟು ಕಾಣಿಸಿದ ತಕ್ಷಣ ಮಹಿಳೆಯರು ಚಿಂತೆಗೊಳಗಾಗುತ್ತಾರೆ.ಈ ತೊಂದರೆಗೊಳಗಾದಾಗ ಎಲ್ಲ ಮಹಿಳೆಯರೂ ಕೂಡ ಸಾಮಾನ್ಯವಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ.ಹಾಗು ಆದಷ್ಟು ಬೇಗ ಇದರಿಂದ ಹೊರಬರಲು ಹಲವು ರೀತಿಯ ದಾರಿಗಳನ್ನು ಹುಡುಕಲು ಶುರು ಮಾಡುತ್ತಾರೆ.ಬಿಳಿ ಸೆರಗು ಅಥವಾ ನೋವನ್ನು ದೂರಮಾಡಲು ಹಲವಾರು ದಾರಿಗಳಿವೆ.ಹೇಗೆ ಬಿಳಿ ಮುಟ್ಟಿಗೆ ಚಿಕಿತ್ಸೆಯನ್ನು ಪಡೆಯಬಹುದು ಎಂದು ನೀವು ಚಿಂತಿಸುತ್ತಿದ್ದೀರಾ?ಹಾಗಾದರೆ ಈ ಲೇಖನದಲ್ಲಿ ನಾವು ನೈಸರ್ಗಿಕವಾಗಿ ಬಿಳಿ ಮುಟ್ಟನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಬಿಳಿ ಮುಟ್ಟಿಗೆ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳುವ ಮೊದಲು ಯಾವ ಯಾವ ಕಾರಣಗಳಿಂದ ಇದು ಸಂಭವಿಸಬಹುದು ಎಂದು ತಿಳಿದುಕೊಳ್ಳೋಣ.ಸಹಜವಾಗಿ ಇದು ಅಲರ್ಜಿಯಿಂದ ಉಂಟಾಗುವಂತಹ ತೊಂದರೆ.ಇದು ಸೋಪ್,ಲೋಷನ್,ಸುಗಂಧ ದ್ರವ್ಯಗಳು ಅಥವಾ ಶಾಂಪುವಿನ ಬಳಕೆ ಇಂದ ಕೂಡ ಉಂಟಾಗುವ ಸಾಧ್ಯತೆಗಳಿವೆ.

ಕೆಲವು ಸಂದರ್ಭಗಳಲ್ಲಿ ಈಸ್ಟ್ ಸೋಂಕು ಅಥವಾ ಲೈಂಗಿಕವಾಗಿ ಹರಡುವ ಸೋಂಕುಗಳಿದ ನಿಮಗೆ ಬಿಳಿ ಮುಟ್ಟು ಉಂಟಾಗಬಹುದು.ಇನ್ನು ಕೆಲವೊಮ್ಮೆ ಯೋನಿಯಲ್ಲಿ ಘರ್ಷಣೆ ಉಂಟಾದರೂ ಕೂಡ ಇದು ಸಂಭವಿಸಬಹುದು.ಕೆಲವೊಮ್ಮೆ ಇದು ನಿಮಗೆ ನೋವುಂಟು ಮಾಡಬಹುದು ಮತ್ತೆ ಕೆಲವೊಮ್ಮೆ ನೋವು ರಹಿತವಾಗಿರಬಹುದು.
ಸದಾ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಯೋನಿಯನ್ನು ಸೋಂಕುಗಳಿಂದ ಸಂರಕ್ಷಿಸುವುದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಇದಾಗ್ಯೂ ನಿಮಗೆ ಈ ತೊಂದರೆ ಹೆಚ್ಚು ಸಮಯದವರೆಗೆ ಮುಂದುವರಿದಲ್ಲಿ ಸೂಕ್ತ ತಜ್ಞರನ್ನು ಭೇಟಿ ಮಾಡುವುದು ಉತ್ತಮ. ಕೆಳಗೆ ನಾವು ಬಿಳಿ ಮುಟ್ಟಿನ ತೊಂದರೆಗೆ ಹಲವು ನೈಸರ್ಗಿಕವಾದ ಪರಿಹಾರಗಳನ್ನು ನೀಡಿದ್ದೇವೆ.ಇವು ಖಂಡಿತವಾಗಿಯೂ ಚಮತ್ಕಾರಿ ಕೆಲಸವನ್ನು ಮಾಡುತ್ತವೆ.

ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೋಟೀನ್ ಅಂಶವಿದ್ದು ಇದು ನಿಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.ಎರಡು ಕ್ಯಾರಟ್ ತೆಗೆದುಕೊಂಡು ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ ತಿರುವಿರಿ.ಈ ಜ್ಯೂಸನ್ನು ದಿನಕ್ಕೆರಡು ಬಾರಿ ಸೇವಿಸುತ್ತಾ ಬನ್ನಿ.ಬಿಳಿ ಮುಟ್ಟಿನ ಲಕ್ಷಣಗಳು ಕಡಿಮೆಯಾಗುವರೆಗೆ ಇದನ್ನು ಸೇವಿಸುತ್ತಾ ಬನ್ನಿ.

ಆಲೋವೆರಾ
ಒಂದು ಅಲೋವೆರಾ ತುಂಡನ್ನು ತೆಗೆದುಕೊಂಡು ಅದರಲ್ಲಿ ಬರುವ ಜೆಲ್ ಅನ್ನು ನೋವಿರುವ ಜಾಗದಲ್ಲಿ ಹಚ್ಚಿ ಒಣಗಲು ಬಿಡಿ.ಇದರಿಂದ ನಿಮಗೆ ತಂಪಾದ ಅನುಭವ ಉಂಟಾಗಿ ಬಿಳಿ ಸೆರಗು ಮತ್ತು ನೋವು ಕಡಿಮೆಯಾಗುತ್ತದೆ.

ಅಡುಗೆ ಸೋಡಾ
ಅಡುಗೆ ಸೋಡಾವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ ಹಚ್ಚಿಕೊಳ್ಳಿ.ಇದನ್ನು ಒಣಗಲು ಬಿಡಿ.ಸ್ವಲ್ಪ ಹೊತ್ತಿನ ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿಕೊಂಡು ಒಣಗಿಸಿಕೊಳ್ಳಿ.ಇದು ಬಿಳಿ ಸೆರಗಿನ ಸಮಸ್ಯೆಗೆ ಬೇಗ ಪರಿಹಾರವನ್ನು ನೀಡುತ್ತದೆ.

ತಂಪಾದ ಚಿಕಿತ್ಸೆ
ಕೆಲವು ಐಸ್ ಕ್ಯೂಬ್ಗಳನ್ನು ತೆಗೆದುಕೊಂಡು ಸ್ವಚ್ಛವಾದ ಬಟ್ಟೆಯಿಂದ ಸುತ್ತಿ ತೊಂದರೆಯಿರುವ ಸ್ಥಳದಲ್ಲಿ ಇಟ್ಟುಕೊಳ್ಳಿ.ಇದೂ ಕೂಡ ತಂಪಾದ ಅನುಭವವನ್ನು ನೀಡಿ ನಿಮಗೆ ಆರಾಮವನ್ನು ಕೊಡುತ್ತದೆ ಹಾಗು ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ವಿನೇಗರ್
ಉಗುರು ಬೆಚ್ಚಗಿನ ನೀರಿರುವ ಬಾತ್ ಟಬ್ ನಲ್ಲಿ ಅರ್ಧ ಬಟ್ಟಲು ವಿನೆಗರ್ ಹಾಕಿ ಐದರಿಂದ ಏಳು ನಿಮಿಷಗಳ ಕಾಲ ಅದರಲ್ಲಿ ಇರಿ.ದಿನಕ್ಕೆರಡು ಬಾರಿ ಈ ರೀತಿ ಮಾಡಿ.ಇದು ಬಿಳಿ ಮುಟ್ಟಿನ ಸಮಸ್ಯೆಗೆ ಒಳ್ಳೆಯ ಪರಿಹಾರವನ್ನು ನೀಡುತ್ತದೆ.

ಟೀ ಬ್ಯಾಗ್
ತಣ್ಣಗಿರುವ ಒಂದು ಟೀ ಬ್ಯಾಗ್ ಅನ್ನು ತೆಗೆದುಕೊಂಡು ಸಮಸ್ಯೆ ಇರುವ ಜಾಗದಲ್ಲಿ ಇಡಿ.ಐದರಿಂದ ಏಳು ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತೆಗೆಯಿರಿ.ಇದು ಉರಿಯನ್ನು ಕಡಿಮೆ ಮಾಡಿ ನಿಮಗೆ ಬಿಳಿ ಮುಟ್ಟಿನ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ಬೆಳ್ಳುಳ್ಳಿ ಎಣ್ಣೆ
ಸ್ವಲ್ಪ ಬೆಳ್ಳುಳ್ಳಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ತೊಂದರೆಯಿರುವ ಜಾಗಕ್ಕೆ ನೇರವಾಗಿ ಹಚ್ಚಿರಿ.ಇದು ಸಮಸ್ಯೆಗೆ ಪರಿಹಾರವನ್ನು ನೀಡುವುದರ ಜೊತೆಗೆ ಉರಿಯನ್ನು ಕಡಿಮೆ ಮಾಡುತ್ತದೆ.

ಬಿಸಿ ನೀರಿನ ಸ್ನಾನ
ಪ್ರತಿ ದಿನವೂ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಯೋನಿಯ ಭಾಗ ಸ್ವಚ್ಛವಾಗಿದ್ದು ಅದು ಬಿಳಿ ಮುಟ್ಟು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಹಾಗು ನೋವು ಮತ್ತು ಉರಿಯನ್ನು ಕೂಡ ಕಡಿಮೆ ಮಾಡುತ್ತದೆ.



Click it and Unblock the Notifications
