Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಗರ್ಭಿಣಿಯರಿಗೆ ಕಾಣಿಸಿಕೊಳ್ಳುವ ಮೈಗ್ರೇನ್‌ನ್ನು ನಿಯಂತ್ರಿಸಲು ಸಲಹೆಗಳು
ಮೈಗ್ರೇನ್ ತಲೆನೋವಿನ ಸಮಸ್ಯೆ ಎನ್ನುವುದು ವ್ಯಕ್ತಿಯೊಬ್ಬನನ್ನು ಹಿಂಡಿಹಿಪ್ಪೆ ಮಾಡಿಬಿಡುವುದು. ಮೈಗ್ರೇನ್ ಇರುವುದರಿಂದ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿಕೊಳ್ಳಲು ಆಗದು. ಇದನ್ನು ಅನುಭವಿಸಿದವರಿಗೆ ಅದು ಎಷ್ಟು ಸಂಕಷ್ಟ ನೀಡುವುದು ಎಂದು ತಿಳಿದಿರುವುದು. ಆದರೆ ಗರ್ಭಿಣಿಯರಿಗೆ ಕೂಡ ಮೈಗ್ರೇನ್ ಸಮಸ್ಯೆಯು ಕಾಣಿಸಿಕೊಳ್ಳುವುದು ಇದೆ.
ಗರ್ಭಧಾರಣೆಯ ಸಮಯದಲ್ಲಿ ಹಲವಾರು ರೀತಿಯ ನೋವನ್ನು ಸಹಿಸಿರುವಂತಹ ಮಹಿಳೆಗೆ ದೊಡ್ಡ ಸಮಸ್ಯೆಯೆಂದರೆ ಅದು ಮೈಗ್ರೇನ್. ಇದು ಎಲ್ಲರಲ್ಲೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಕೆಲವು ಮಂದಿಯಲ್ಲಿ ಇದು ಕಂಡುಬರುವುದು. ಮೈಗ್ರೇನ್ ಬಂದರೆ ಇದಕ್ಕೆ ಔಷಧಿ ಕೂಡ ಇದೆ. ಆದರೆ ಗರ್ಭಧಾರಣೆ ಸಮಯದಲ್ಲಿ ಇದನ್ನು ಸೇವನೆ ಮಾಡಿದರೆ ಅದರಿಂದಾಗಿ ಕೆಲವೊಂದು ಅಡ್ಡಪರಿಣಾಮಗಳು ಆಗಬಹುದು. ಗರ್ಭಧಾರಣೆ ಸಂದರ್ಭದಲ್ಲಿ ಮೈಗ್ರೇನ್ ನ್ನು ನಿಭಾಯಿಸುವುದು ತುಂಬಾ ಕಠಿಣ ಕೆಲಸವಾಗಿರುವುದು.

ಈ ಲೇಖನದಲ್ಲಿ ನೀವು ಗರ್ಭಧಾರಣೆ ಸಮಯದಲ್ಲಿನ ಮೈಗ್ರೇನ್ ಸಮಸ್ಯೆ ಮತ್ತು ಅದಕ್ಕೆ ಕೆಲವೊಂದು ಪರಿಹಾರದ ಬಗ್ಗೆ ತಿಳಿಯಿರಿ.ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಗರ್ಭಧಾರಣೆ ಸಂದರ್ಭದಲ್ಲಿ ಇದು ಕಡಿಮೆಯಾಗಬಹುದು. ಆದರೆ ಇನ್ನು ಕೆಲವು ಮಹಿಳೆಯರಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು. ಗರ್ಭಧಾರಣೆ ವೇಳೆ ನೀವು ಮೈಗ್ರೇನ್ ಗೆ ಕಾರಣವೇನೆಂದು ತಿಳಿದುಕೊಂಡು ಅದನ್ನು ಸುಲಭವಾಗಿ ಕಡೆಗಣಿಸಲು ಪ್ರಯತ್ನಿಸಬೇಕು....

ಗರ್ಭಧಾರಣೆ ವೇಳೆ ಮೈಗ್ರೇನ್ ಬರಲು ಕಾರಣವೇನು?
ಮೈಗ್ರೇನ್ ಬರಲು ಹಲವಾರು ರೀತಿಯ ಕಾರಣಗಳು ಇವೆ ಎಂದು ಹೇಳಲಾಗುತ್ತದೆ. ಕೆಲವು ವ್ಯಕ್ತಿಗಳಿಗೆ ಹುಟ್ಟುತ್ತಲೇ ಕೆಲವು ವಸ್ತುಗಳ ಬಗ್ಗೆ ಸೂಕ್ಷ್ಮತೆಯಿರುವುದು. ಇದರಿಂದ ಮೈಗ್ರೇನ್ ಕಾಣಿಸುವುದು.
ಗರ್ಭಿಣಿಯರಲ್ಲಿ ಮೈಗ್ರೇನ್ ಕಾಣಿಸಿಕೊಳ್ಳುವಂತಹ ಕೆಲವೊಂದು ಮೂಲ ಕಾರಣಗಳು.

ಹಾರ್ಮೋನು ಅಸಮತೋಲನ
ಒಸ್ಟ್ರೋಜನ್ ಹಾರ್ಮೋನು ಮೈಗ್ರೇನ್ ಗೆ ಕಾರಣವಾಗುವುದು. ಹೆಚ್ಚಾಗಿ ಮಹಿಳೆಯರಿಗೆ ಗರ್ಭಧಾರಣೆ, ಋತುಚಕ್ರ ಮತ್ತು ಋತುಬಂಧದ ವೇಳೆ ಮೈಗ್ರೇನ್ ಕಾಣಿಸಿಕೊಳ್ಳುವುದು. ಇದರಿಂದಾಗಿಯೇ ಪುರುಷರಕ್ಕಿಂತ ಹೆಚ್ಚಾಗಿ ಮಹಿಳೆಯರಲ್ಲಿ ಮೈಗ್ರೇನ್ ಕಾಣಿಸಿಕೊಳ್ಳುವುದು. ಮತ್ತೊಂದು ಸೆರೋಟಿನ್ ಹಾರ್ಮೋನು ಕೂಡ ಮೈಗ್ರೇನ್ ಬರಲು ಕಾರಣವಾಗಿರುವುದು. ಸೆರೋಟಿನ್ ಮಟ್ಟವು ಕಡಿಮೆ ಇದ್ದರೆ ಆಗ ಮೈಗ್ರೇನ್ ಕಾಣಿಸಿಕೊಳ್ಳುವುದು. ಇದರಿಂದಾಗಿ ಭಾವನಾತ್ಮಕವಾಗಿ ಕುಸಿದಾಗ ಮತ್ತು ಒತ್ತಡದಿಂದ ಇರುವಾಗ ಮೈಗ್ರೇನ್ ಕಾಣಿಸಿಕೊಳ್ಳುವುದು.

ರಕ್ತದೊತ್ತಡದ ಅಸಮತೋಲನ
ಹೆಚ್ಚಿನ ಮಹಿಳೆಯರಲ್ಲಿ ರಕ್ತದೊತ್ತಡದಲ್ಲಿ ಕಾಣಿಸಿಕೊಳ್ಳುವಂತಹ ಅಸಮತೋಲನವು ಮೈಗ್ರೇನ್ ಗೆ ಕಾರಣವಾಗುವುದು. ರಕ್ತದೊತ್ತಡವು ಹೆಚ್ಚಾಗುವ ಕಾರಣದಿಂದಾಗಿ ಮೆದುಳಿನ ನರಗಳು ರಕ್ತ ಸಂಚಾರವನ್ನು ನಿರ್ಬಂಧಿಸುವಂತೆ ಮಾಡುವುದು. ಗರ್ಭಧಾರಣೆ ವೇಳೆ ಅಧಿಕ ರಕ್ತದೊತ್ತಡದ ಜತೆಗೆ ಮೈಗ್ರೇನ್ ಕಾಣಿಸಿಕೊಳ್ಳುವುದು ಪ್ರಿಕ್ಲಾಂಪ್ಸಿಯದ ಸೂಚನೆಯಾಗಿದೆ.

ಸ್ನಾಯುಗಳ ಸೆಳೆತ
ಸ್ನಾಯುಗಳ ಸೆಳೆತವು ಗರ್ಭಧಾರಣೆ ವೇಳೆ ಸಾಮಾನ್ಯ ವಿಚಾರವಾಗಿದೆ. ಬೆಳೆಯುತ್ತಿರುವ ಮಗುವಿಗೆ ಜಾಗ ಮಾಡಿಕೊಡುವ ಕಾರಣದಿಂದಾಗಿ ದೇಹದಲ್ಲಿ ಸ್ನಾಯುಗಳು ಹಿಗ್ಗುವುದು. ಇದರಿಂದಾಗಿ ಸ್ನಾಯುಗಳ ಮೇಲೆ ಒತ್ತಡ ಬಿದ್ದು, ಸ್ನಾಯು ಸೆಳೆತ ಉಂಟಾಗಬಹುದು. ಸ್ನಾಯು ಸೆಳೆತದ ವೇಳೆ ದೇಹವು ಸೆರೋಟಿನ್ ಸ್ರವಿಸುವುದು. ಇದರಿಂದಾಗಿ ಮೈಗ್ರೇನ್ ಕಾಣಿಸಿಕೊಳ್ಳುವುದು.

ಇತರ ಕಾರಣಗಳು
ಮೈಗ್ರೇನ್ ಬರುವಂತಹ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಆದರೆ ಕೆಲವೊಂದು ಸಾಮಾನ್ಯವಾದ ಕಾರಣಗಳೆಂದರೆ ಅದು ಚಾಕಲೇಟ್, ಕೆಫಿನ್, ಹವಾಮಾನ, ಸಂಸ್ಕರಿತ ಆಹಾರ ಮತ್ತು ಒತ್ತಡ. ನೀವು ಯಾವುದಾದರೂ ಆಹಾರಕ್ಕೆ ಹೆಚ್ಚು ಸೂಕ್ಷ್ಮವಾಗಿದ್ದರೆ ಆಗ ನೀವು ಮೈಗ್ರೇನ್ ಗೆ ಒಳಪಡುವಂತಹ ಸಾಧ್ಯತೆಯು ಅಧಿಕವಾಗಿರುವುದು ಎಂದು ಹೇಳಲಾಗುತ್ತದೆ. ಅತಿಯಾದ ಗಾಳಿ ಅಥವಾ ಮಂಜು ಬೀಳುವುದರಿಂದಲೂ ಮೈಗ್ರೇನ್ ಬರುವುದು.

ಗರ್ಭಧಾರಣೆ ವೇಳೆ ಮೈಗ್ರೇನ್ ಗೆ ಔಷಧಿ ತೆಗೆದುಕೊಳ್ಳಬಹುದೇ?
ಮೈಗ್ರೇನ್ ಕಾಣಿಸಿಕೊಂಡರೆ ಆಗ ನೀವು ತಕ್ಷಣ ಹೋಗಿ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುವಿರಿ. ಆದರೆ ಅಸ್ಪಿರಿನ್ ಅಥವಾ ಇಬುಪ್ರೊಫೆನ್ ನಂತಹ ಸ್ಟಿರಾಯ್ಡ್ ಮುಕ್ತವಾಗಿರುವಂತಹ ಉರಿಯೂತ ಶಮನಕಾರಿ ಮಾತ್ರೆಗಳು ಗರ್ಭದಲ್ಲಿರುವಂತಹ ಮಗುವಿಗೆ ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಇವುಗಳನ್ನು ಸೇವಿಸಲೇ ಬಾರದು. ಅಸ್ಪಿರಿನ್ ಅನ್ನು ನೀವು ಗರ್ಭ ಧರಿಸುವ ಆರಂಭದಲ್ಲಿ ತೆಗೆದುಕೊಂಡರೆ ಅದರಿಂದ ಗರ್ಭಪಾತವಾಗಬಹುದು. ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ಇದನ್ನು ತೆಗೆದುಕೊಂಡರೆ ಆಗ ಮಗುವಿನ ಹೃದಯಕ್ಕೆ ಸಮಸ್ಯೆಯಾಗಬಹುದು. ಇನ್ನೊಂದೆಡೆಯಲ್ಲಿ ಅಸೆಟಾಮಿನೋಫೆನ್ ನಂತಹ ಮಾತ್ರೆಗಳು ಗರ್ಭಧಾರಣೆ ವೇಳೆ ಸೇವಿಸಲು ಸೂಕ್ತವಾಗಿದೆ. ಅದಾಗ್ಯೂ, ನೀವು ಯಾವುದೇ ಅಪಾಯವನ್ನು ಎದುರಿಸದೆ ನೇರವಾಗಿ ವೈದ್ಯರ ಸಲಹೆ ಪಡೆದರೆ ಅದರಿಂದ ತುಂಬಾ ನೆರವು ಸಿಗುವುದು.

ಗರ್ಭಧಾರಣೆ ವೇಳೆ ಮೈಗ್ರೇನ್ ನಿಭಾಯಿಸುವುದು ಹೇಗೆ?
ಗರ್ಭದಲ್ಲಿರುವಂತಹ ಮಗುವಿಗೆ ಅಪಾಯವಾಗುತ್ತದೆ ಎನ್ನುವ ಕಾರಣಕ್ಕಾಗಿ ನೀವು ಮೈಗ್ರೇನ್ ಗೆ ಮಾತ್ರೆಗಳನ್ನು ಸೇವನೆ ಮಾಡದೆ ಇದ್ದರೆ ಆಗ ನೀವು ತುಂಬಾ ಪರಿಣಾಮಕಾರಿಯಾಗಿ ಇದನ್ನು ನಿಭಾಯಿಸಬಹುದಾಗಿದೆ. ಯಾವುದೇ ಔಷಧಿಯು ಇಲ್ಲದೆ ನೀವು ತುಂಬಾ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನದಿಂದ ಮೈಗ್ರೇನ್ ನ್ನು ನಿಭಾಯಿಸುವುದು ಹೇಗೆ ಎಂದು ತಿಳಿಯಿರಿ.

ಕಾರಣ ಹುಡುಕಿ
ನಿಮಗೆ ಮೈಗ್ರೇನ್ ಬರಲು ಕಾರಣ ಏನು ಎಂದು ನೀವು ಇದನ್ನು ಕಂಡು ಹಿಡಿಯಬೇಕಾಗಿದೆ. ಸ್ನಾಯುಗಳ ಸೆಳೆತ ಅಥವಾ ರಕ್ತದೊತ್ತಡದಲ್ಲಿ ಅಸಮತೋಲನ ಹೀಗೆ ಇದಕ್ಕೆ ಮೂಲ ಕಾರಣವೇನೆಂದು ಪತ್ತೆ ಮಾಡಿಕೊಂಡರೆ ನೀವು ಅರ್ಧ ಯುದ್ಧ ಗೆದ್ದಂತೆ. ಇದಕ್ಕಾಗಿ ನೀವು ಒಂದು ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮೈಗ್ರೇನ್ ಬರಲು ಕಾರಣವೇನು ಎಂದು ತಿಳಿಯಲು ನೆರವಾಗುವುದು.

ತಣ್ಣಗಿನ ಬಟ್ಟೆ ಹಾಕಿ ಅಥವಾ ತಣ್ಣೀರಿನ ಸ್ನಾನ ಮಾಡಿ
ಇದು ತಲೆಯ ನರಗಳಿಗೆ ಆರಾಮ ನೀಡುವುದು ಮತ್ತು ಯಾವುದೇ ರೀತಿಯ ನೋವಿನಿಂದ ಆರಾಮ ನೀಡುವುದು. ಇದು ನೋವನ್ನು ಸ್ಪರ್ಶವಿಲ್ಲದಂತೆ ಮಾಡುವುದು. ನಿಮಗೆ ತಂಪು ಆಗದೆ ಇದ್ದರೆ ಆಗ ನೀವು ಬಿಸಿ ನೀರಿನ ಬಟ್ಟೆ ಅಥವಾ ಬಿಸಿ ನೀರಿನ ಸ್ನಾನ ಮಾಡಬಹುದು. ಇದು ಕೂಡ ಸ್ನಾಯುಗಳಿಗೆ ಆರಾಮ ನೀಡುವುದು ಮತ್ತು ನೋವು ನಿವಾರಿಸುವುದು.

ವ್ಯಾಯಾಮ
ವ್ಯಾಯಾಮದಿಂದ ದೇಹದಲ್ಲಿ ಒಕ್ಸಿಟಾಸಿನ್ ಎನ್ನುವ ಉತ್ತಮ ಭಾವನೆ ಮೂಡಿಸುವ ಹಾರ್ಮೋನು ಹೆಚ್ಚಾಗುವುದು. ಇದು ನೈಸರ್ಗಿಕ ನೋವು ನಿವಾರಕವಾಗಿ ಕೆಲಸ ಮಾಡುವುದು ಮತ್ತು ಮೈಗ್ರೇನ್ ನೋವು ಕಡಿಮೆ ಮಾಡುವುದು. ಗರ್ಭಧಾರಣೆ ವೇಳೆ ವ್ಯಾಯಾಮ ಮಾಡುವ ಮೊದಲು ನೀವು ವೈದ್ಯರ ಸಲಹೆ ಪಡೆಯಿರಿ.

ನಿದ್ರೆ
ಮೈಗ್ರೇನ್ ತಲೆನೋವು ನಿವಾರಣೆ ಮಾಡಲು ನಿದ್ರೆಯು ತುಂಬಾ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ನಿದ್ರೆಯು ಮೈಗ್ರೇನ್ ಗೆ ಕಾರಣವಾಗಿರುವಂತಹ ಒತ್ತಡ ನಿವಾರಣೆ ಮಾಡುವುದು ಮತ್ತು ತಕ್ಷಣ ಆರಾಮ ನೀಡುವುದು. ನೋವಿನಿಂದಾಗಿ ನಿಮಗೆ ನಿದ್ರೆ ಬರದೆ ಇದ್ದರೆ ಆಗ ನೀವು ಸ್ವಲ್ಪ ಧ್ಯಾನ ಮಾಡಿ ನಿದ್ರೆಯ ಹಾರ್ಮೋನು ಉತ್ಪತ್ತಿಯಾಗುವಂತೆ ಮಾಡಿಕೊಳ್ಳಿ.



Click it and Unblock the Notifications











