Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಗರ್ಭಾವಸ್ಥೆಯಲ್ಲಿರುವಾಗ ಸ್ತನ ಕ್ಯಾನ್ಸರ್-ನೀವು ತಿಳಿದಿರಲೇಬೇಕಾದ ಸಂಗತಿಗಳು
ಗರ್ಭಾವಸ್ಥೆ ಮಹಿಳೆಯರಿಗೊಂದು ಸುಂದರ ಅನುಭವ ತಂದುಕೊಡುವ ಹಂತ. ಇದರಿಂದ ಹೆಣ್ಣಿಗೊಂದು ಪರಿಪೂರ್ಣತೆಯ ಭಾವ ಹಾಗೂ ಸ್ಥಾನ ದೊರೆಯುವುದು. ಇಂತಹ ಸಂದರ್ಭದಲ್ಲಿ ಗರ್ಭಿಣಿಯರು ಆರೋಗ್ಯದ ಕುರಿತು ಸಾಕಷ್ಟು ಕಾಳಜಿಯನ್ನು ವಹಿಸಬೇಕಾಗುವುದು. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಇರುವಾಗ ಮಹಿಳೆಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಹಾಗಂತ ಎಲ್ಲಾ ಸಮಸ್ಯೆಗಳಿಗೂ ಔಷಧಗಳನ್ನು ನೀಡಲಾಗುವುದಿಲ್ಲ. ತಾಯಿಗೆ ನೀಡಿದ ಔಷಧವು ಮಗುವಿನ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ.

ಅದರಲ್ಲೂ ಗರ್ಭಾವಸ್ಥೆಯಲ್ಲಿ ಇರುವಾಗ ಸ್ತನ ಕ್ಯಾನ್ಸರ್‍ನಂತಹ ಆರೋಗ್ಯ ಸಮಸ್ಯೆಯು ಕಾಣಿಸಿಕೊಂಡರೆ ಸಾಕಷ್ಟು ತೊಂದರೆಗಳು ಉಂಟಾಗುವುದು. ಕೆಲವು ಸಂಶೋಧನೆ ಹಾಗೂ ಅಧ್ಯಯನಗಳ ಪ್ರಕಾರ ಪ್ರತಿ 3000 ಮಹಿಳೆಯರಲ್ಲಿ ಒಬ್ಬ ಮಹಿಳೆಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಎಂದು ಹೇಳಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಸ್ತನಗಳ ಮೇಲೆ ಸಾಕಷ್ಟು ಬದಲಾವಣೆಗಳು
ಗರ್ಭಾವಸ್ಥೆಯಲ್ಲಿ ಸ್ತನಗಳ ಮೇಲೆ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಲಿರುತ್ತವೆ. ಹಾಗಾಗಿ ಅಂತಹ ಸಮಯದಲ್ಲಿ ಕ್ಯಾನ್ಸರ್‍ಅನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾಗುವುದು. ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡರೆ ಮೊದಲ ಹಂತದಲ್ಲಿಯೇ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾಗುವುದು. ಈ ನಿಟ್ಟಿನಲ್ಲಿ ಆಗಾಗ ಗರ್ಭಾವಸ್ಥೆಯ ತಪಾಸಣೆಯನ್ನು ಮಾಡಿಸುತ್ತಲೇ ಇರಬೇಕು. ಕ್ಯಾನ್ಸರ್ ತಡೆಗಟ್ಟುವ ಔಷಧಗಳನ್ನು ಅಥವಾ ಚಿಕಿತ್ಸಾ ಕ್ರಮಗಳನ್ನು ಗರ್ಭಾವಸ್ಥೆಯಲ್ಲಿ ಪಡೆದುಕೊಂಡರೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಸಾಕಷ್ಟು ಋಣಾತ್ಮಕ ಫಲಿತಾಂಶ ನೀಡುತ್ತದೆ. ಗರ್ಭಾವಸ್ಥೆಯಲ್ಲಿನ ಅಪಾಯಗಳು ಸರ್ವಕಾಲಿಕ ಸಮಯವನ್ನು ತಲುಪುತ್ತವೆ. ತಾಯಿಗೆ ಭ್ರೂಣವನ್ನು ಸುರಕ್ಷಿತವಾಗಿಡಲು ವೈದ್ಯರು ಹೆಚ್ಚಿನ ಜವಾಬ್ದಾರಿಯನ್ನು ಕೈಗೊಳ್ಳಬೇಕಾಗುವುದು. ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡರೆ, ಅದರ ಚಿಕಿತ್ಸಾ ಅವಧಿಯಲ್ಲಿ ವಿವಿಧ ವಿಷಯಗಳನ್ನು ಪರಿಗಣಿಸಬೇಕಾಗುವುದು. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳುವ ಹಂಬಲವಿದ್ದರೆ ಲೇಖನದ ಮುಂದಿನ ಭಾಗದಲ್ಲಿ ತಿಳಿಸಲಾದ ಸಾಕಷ್ಟು ಮಾಹಿತಿಯನ್ನು ಅರಿಯಿರಿ.

ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‍ನ ರೋಗ ಲಕ್ಷಣ ಗುರುತಿಸುವುದು ಹೇಗೆ?
ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಂಡರೆ ಗುರುತಿಸಿಸುವುದು ಸ್ವಲ್ಪ ಕಷ್ಟ ಎಂದು ಹೇಳಬಹುದು. ಈ ಸ್ಥಿತಿಯಲ್ಲಿ ಸ್ತನವು ದಟ್ಟ ಮತ್ತು ಮೃದುತ್ವವನ್ನು ಪಡೆದುಕೊಂಡಿರುತ್ತದೆ. ಹಾಗಾಗಿ ನಿತ್ಯದ ಗರ್ಭಧಾರಣೆಯ ತಪಾಸಣೆಯ ಜೊತೆಗೆ ಸ್ತನ ಪರೀಕ್ಷೆಯನ್ನು ಮಾಡುವುದಕ್ಕೆ ವೈದ್ಯರು ಸಲಹೆ ನೀಡುವರು. ಸ್ತನ ಭಾಗದಲ್ಲಿ ಸಂಶಯಾಸ್ಪದ ಗಡ್ಡೆಯು ಕಂಡುಬಂದರೆ, ವೈದ್ಯರು ಸಾಮಾನ್ಯವಾಗಿ ಅಲ್ಟ್ರಾ ಸೌಂಡ್ ಪರೀಕ್ಷೆಯ ಮೂಲಕ ಅದನ್ನು ತೆಗೆಯಲಾಗುತ್ತದೆ. ಇದು ಬೆಳೆಯುತ್ತಿರುವ ಭ್ರೂಣದ ಮೇಲೆ ಪ್ರಭಾವ ಬೀರುವುದು.
ಬಯಾಪ್ಸಿ ಸ್ತನ ಕ್ಯಾನ್ಸರ್ ಪತ್ತೆಹಚ್ಚಲು ಮತ್ತೊಂದು ಸುರಕ್ಷಿತವಾದ ಮಾರ್ಗ ಎಂದು ಹೇಳಲಾಗುವುದು. ಸ್ತನದಲ್ಲಿ ಉಂಟಾದ ಗಡ್ಡೆಯನ್ನು ಪರೀಕ್ಷಿಸಿದ ಬಳಿಕ ವೈದ್ಯರು ಅಂಗಾಂಶದ ಒಂದು ಸಣ್ಣ ಭಾಗವನ್ನು ತೆಗೆದು ಸೂಕ್ಷ್ಮದರ್ಶಕದ ಮೂಲಕ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲಾಗುವುದು. ನಂತರ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಸ್ತನ ಕ್ಯಾನ್ಸರ್ ಮಗುವಿನ ಮೇಲೆ ಪ್ರಭಾವ ಬೀರುವುದು ಎಂದು ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಇರುತ್ತದೆ. ನಿಜಾಮಶವೆಂದರೆ ಸ್ತನ ಕ್ಯಾನ್ಸರ್ ಭ್ರೂಣದ ಮೇಲೆ ಯಾವುದೇ ಪರಿಣಾಮ ಬೀರದು. ಕ್ಯಾನ್ಸರ್ ಜೀವಕೋಶಗಳು ಭ್ರೂಣದ ಮೇಲೆ ಪ್ರಭಾವ ಬೀರಲು ಹೋದರೆ ಭ್ರೂಣದ ಸುತ್ತಲು ಇರುವ ಪ್ರತಿರಕ್ಷಣಾ ಕವಚವು ತಡೆಯುವುದು.

ಮಗುವಿನ ಮೇಲೆ ಕ್ಯಾನ್ಸರ್ ಪ್ರಭಾವ ಬೀರುವುದೇ?
ಸ್ತನ ಕ್ಯಾನ್ಸರ್ ಮಗುವಿನ ಮೇಲೆ ಪರಿಣಾಮ ಬೀರಬಹುದು ಎನ್ನುವ ಊಹಾ ಪೋಹಗಳು ತಲೆಯಲ್ಲಿ ತುಂಬಿರುತ್ತವೆ. ಅವುಗಳನ್ನು ಮೊದಲು ತಲೆಯಿಂದ ಆಚೆ ಹಾಕಿ. ಸ್ತನ ಕ್ಯಾನ್ಸರ್ ಭ್ರೂಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕ್ಯಾನ್ಸರ್ ಜೀವಕೋಶಗಳು ಹಾಗೊಮ್ಮೆ ಕ್ಯಾನ್ಸರ್ ಜೀವಕೋಶಗಳು ಭ್ರೂಣದ ತಡೆಗೋಡೆಯ ಮೇಲೆ ಹಾದುಹೋಗಲು ಪ್ರಯತ್ನಿಸಿದರೆ ಭ್ರೂಣವು ತಕ್ಷಣ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ.
ಕ್ಯಾನ್ಸರ್ ಜೀವಕೋಶಗಳು ಭ್ರೂಣಕ್ಕೆ ಹಾದುಹೋಗುವ ಪ್ರಕರಣಗಳು ಅಪರೂಪ ಎಂದು ಹೆಳಲಾಗುವುದು. ಆದರೆ ತಾಯಿ ಕ್ಯಾನ್ಸರ್‍ಗೆ ತೆಗೆದುಕೊಳ್ಳುವ ಚಿಕಿತ್ಸೆಯ ಆಯ್ಕೆಯು ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯು ಬೆಳೆಯುತ್ತಿರುವ ಮಗುವಿನ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ ಎಂದು ಹೇಳಲಾಗುವುದು. ಹಾಗಾಗಿ ಪ್ರಸವದ ನಂತರ ಚಿಕಿತ್ಸೆಯನ್ನು ನೀಡಲಾಗುವುದು.

ಗರ್ಭಾವಸ್ಥೆಯಲ್ಲಿ ಕೀಮೋಥೆರಪಿಗೆ ಒಳಗಾಗಬಹುದೇ?
ಕೀಮೋಥೆರಪಿಯ ಔಷಧಗಳನ್ನು ಗರ್ಭಾವಸ್ಥೆಯಲ್ಲಿ ಬಳಸಲಾಗುತ್ತದೆ. ಆದರೆ ಕೀಮೋಥೆರಪಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚೆಂದು ಹೇಳಲಾಗುವುದು. ಸಾಧ್ಯವಾದಷ್ಟು ಮೊದಲ ತ್ರೈಮಾಸಿಕದಲ್ಲಿ ಪ್ರಕ್ರಿಯೆಯನ್ನು ತಪ್ಪಿಸಬೇಕು.

ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ
ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಕೀಮೋಥೆರಪಿ ಸುರಕ್ಷಿತವಾದದ್ದು ಎಂದು ಹೇಳಲಾಗುತ್ತದೆ. ಮಗುವು ಕಡಿಮೆ ಜನನ ತೂಕ ಹಾಗೂ ಮುಂಚಿತವಾಗಿಯೇ ಪ್ರಸವ ಆಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುತ್ತದೆ. ಜನನದ ಸಮಯದಲ್ಲಿ ತೊಂದರೆ ಉಂಟಾಗದೆ ಇರಲು 3 ಅಥವಾ 4 ವಾರಗಳ ಮೊದಲೇ ಕೀಮೋಥೆರಪಿಯನ್ನು ನಿಲ್ಲಿಸಬಹುದು.

ಇತರ ಚಿಕಿತ್ಸಾ ವಿಧಾನಗಳು ಯಾವವು?
ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಅದರ ಗಾತ್ರ ಹಾಗೂ ಹಂತ ಯಾವುದು ಎನ್ನುವುದು ಬಹಳ ಗಮನಾರ್ಹ ವಿಚಾರವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಶಸ್ತ್ರ ಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆಯುವುದು ಅತ್ಯುತ್ತಮವಾದ ವಿಧಾನ. ಈ ವಿಧಾನದಿಂದ ಹುಟ್ಟಲಿರುವ ಮಗುವಿಗೆ ಯಾವುದೇ ತೊಂದರೆ ಉಂಟಾಗದು.

ಸ್ತನಛೇದನ ಮತ್ತು ಸ್ತನ ಸಂರಕ್ಷಣೆ
ಚಿಕಿತ್ಸೆಯಲ್ಲಿ ಸ್ತನಛೇದನ ಮತ್ತು ಸ್ತನ ಸಂರಕ್ಷಣೆ ಎನ್ನುವ ಎರಡು ವಿಧಾನಗಳ ಮೂಲಕ ಚಿಕಿತ್ಸೆ ನೀಡಲಾಗುವುದು. ಸ್ತನ ಛೇದನದಲ್ಲಿ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಂಪೂರ್ಣವಾಗಿ ಸ್ತನವನ್ನು ತೆಗೆಯುವ ಕ್ರಮವಾಗಿರುತ್ತದೆ. ಸ್ತನ ಸಂರಕ್ಷಣೆಯಲ್ಲಿ ವಿಕಿರಣ ಅಥವಾ ಕೀಮೋಥೆರಪಿಯನ್ನು ಅನುಸರಿಸಬೇಕಾಗುವುದು. ವಿಕಿರಣದ ಚಿಕಿತ್ಸೆಯು ಮಗುವಿನ ಮೇಲೆ ಗಂಭೀರ ಪರಿಣಾಮ ಬೀರಬಹುದು. ವಿಕಿರಣ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡರೆ ಪ್ರಸವದ ನಂತರ ಕೈಗೊಳ್ಳಲು ವೈದ್ಯರು ಕಾಯಬೇಕಾಗುವುದು.

ಮಗುವಿಗೆ ಸ್ತನ ಪಾನ ಮಾಡಿಸಬಹುದೇ?
ಸ್ತನ ಕ್ಯಾನ್ಸರ್ ಹೊಂದಿರುವಾಗ ಮಗುವಿಗೆ ಸ್ತನ ಪಾನ ಮಾಡಿಸುವುದು ಕಷ್ಟ. ಈಗಾಗಲೇ ಕ್ಯಾನ್ಸರ್‍ಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದರೆ ಅಥವಾ ಕೀಮೋಥೆರಪಿ ಅಥವಾ ವಿಕಿರಣ ಚಿಕಿತ್ಸೆಯನ್ನು ಹೊಂದಿದ್ದೀರಿ ಎಂದಾದರೆ ಸ್ತನ ಪಾನ ಮಾಡಿಸುವುದು ಸುರಕ್ಷಿತವಾಗಿರುತ್ತದೆ. ಅದೇ ಚಿಕಿತ್ಸೆಗೆ ಒಳಗಾಗುವ ಹಂತದಲ್ಲಿದ್ದರೆ ಕ್ಯಾನ್ಸರ್ ನಿವಾರಣೆಗೆ ಸಾಕಷ್ಟು ಔಷಧಗಳನ್ನು ಬಳಸಲಾಗಿರುತ್ತವೆ. ಆ ಸಂದರ್ಭದಲ್ಲಿ ಮಗುವಿಗೆ ಸ್ತನ ಪಾನ ಮಾಡಿಸಬಾರದು ಎಂದು ಆದೇಶ ಮಾಡಲಾಗುವುದು.

ಮಗುವಿನ ಆರೋಗ್ಯದ ಮೇಲೆ...
ಸ್ತನ ಕ್ಯಾನ್ಸರ್ ಮಗುವಿನ ಆರೋಗ್ಯದ ಮೇಲೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಅದಕ್ಕೆ ಸೂಕ್ತ ಎಚ್ಚರಿಕೆ ಹಾಗೂ ಚಿಕಿತ್ಸೆ ಹೊಂದುವುದರಿಂದ ಗರ್ಭದ ಮೇಲೆ ಯಾವುದೇ ಹಾನಿ ಉಂಟಾಗದು. ಕ್ಯಾನ್ಸರ್ ಹೊಂದಿರುವ ಕೆಲವು ಮಹಿಳೆಯರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಅನೇಕ ಕಥೆಗಳನ್ನು ಕಾಣಬಹುದು. ಗರ್ಭಾವಸ್ಥೆಯಲ್ಲಿರುವಾಗ ಕುಟುಂಬದೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧ ಹಾಗೂ ವೈದ್ಯರಲ್ಲಿ ಸೂಕ್ತ ರೀತಿಯ ತಪಾಸಣೆ ಹೊಂದುವುದರಿಂದ ಯಾವುದೇ ತೊಂದರೆ ಉಂಟಾಗದು.



Click it and Unblock the Notifications