Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರು ಅತಿಯಾಗಿ ಆಲೂಗಡ್ಡೆ ಚಿಪ್ಸ್ ತಿನ್ನಬಾರದು, ಆರೋಗ್ಯಕ್ಕೆ ತುಂಬಾ ಅಪಾಯಕಾರಿ
ಗರ್ಭಾವಸ್ಥೆಯಲ್ಲಿ ಇರುವಾಗ ಸಾಮಾನ್ಯವಾಗಿ ಆರೋಗ್ಯಕರವಾದ ಸಾತ್ವಿಕ ಆಹಾರವನ್ನು ಸೇವಿಸಬೇಕು. ಇದನ್ನೇ ವೈದ್ಯರು ಸಹ ಸಲಹೆ ನೀಡುತ್ತಾರೆ. ಗರ್ಭದಲ್ಲಿ ಮಗುವಿನ ಬೆಳವಣಿಗೆ ಅತ್ಯುತ್ತಮ ರೀತಿಯಲ್ಲಿ ಆಗಲು ಸಾಕಷ್ಟು ಪೋಷಕಾಂಶಗಳು, ವಿಟಮಿನ್‍ಗಳು ಆಹಾರದಲ್ಲಿ ಇರಬೇಕು. ಅಂತಹ ತರಕಾರಿಗಳಲ್ಲಿ ಆಲೂಗಡ್ಡೆಯೂ ಒಂದು. ಇದು ಅತ್ಯುತ್ತಮ ಪೋಷಕಾಂಶವನ್ನು ಹೊಂದಿರುವ ತರಕಾರಿ ಎನ್ನುವ ಹಿರಿಮೆಯನ್ನು ಪಡೆದುಕೊಂಡಿದೆ.

ಕೆಲವು ಆಹಾರ ಪದಾರ್ಥಗಳು ಮತ್ತು ತರಕಾರಿಗಳು ಸಾಕಷ್ಟು ಪೋಷಕಾಂಶಗಳನ್ನು ಹಾಗೂ ಖನಿಜಾಂಶಗಳನ್ನು ಒಳಗೊಂಡಿರುತ್ತವೆ. ಆದರೆ ಅವುಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಸೂಕ್ತವಾದದ್ದಲ್ಲ ಎನ್ನಲಾಗುತ್ತದೆ. ಅಂತಹ ತರಕಾರಿಗಳ ಭಕ್ಷ್ಯಗಳಲ್ಲಿ ಆಲೂಗಡ್ಡೆಯ ಚಿಪ್ಸ್ ಸಹ ಒಂದು. ಆಲೂಗಡ್ಡೆಯ ಚಿಪ್ಸ್ ತಿನ್ನುವಾಗ ಗರ್ಭಿಣಿಯರು ಸಾಕಷ್ಟು ಜಾಗರೂಕತೆ ಹಾಗೂ ಮಿತಿಯನ್ನು ಹೊಂದಿರಬೇಕು ಎನ್ನಲಾಗುವುದು. ಅತಿಯಾಗಿ ಆಲೂಗಡ್ಡೆಯ ಚಿಪ್ಸ್ ತಿನ್ನುವುದರಿಂದ ಗರ್ಭಿಣಿಯರ ತೂಕ ಅಧಿಕವಾಗುವುದು. ಒಟ್ಟಾರೆಯಾಗಿ ಆರೋಗ್ಯದಲ್ಲಿ ಅಪಾಯ ಉಂಟಾಗುವ ಸಾಧ್ಯತೆಗಳಿರುತ್ತವೆ.

ಗರ್ಭಾವಸ್ಥೆಯಲ್ಲಿ ಹೆಚ್ಚು ಆಲೂಗಡ್ಡೆ ಚಿಪ್ಸ್ ಸೇವಿಸುವುದರಿಂದ ಏಕೆ ಆರೋಗ್ಯಕ್ಕೆ ಹಾನಿಕರ?
ಗರ್ಭಾವಸ್ಥೆಯಲ್ಲಿ ಇರುವಾಗ ಗರ್ಭಿಣಿಯರು ಸಾಕಷ್ಟು ಆಹಾರ ಪದಾರ್ಥಗಳ ಬಗ್ಗೆ ಬಯಕೆ ಹೊಂದಿರುತ್ತಾರೆ. ಅಲ್ಲದೆ ಅದಕ್ಕೆ ಅನುಗುಣವಾಗಿಯೇ ಆಹಾರವನ್ನು ಸೇವಿಸುತ್ತಾರೆ. ಗರ್ಭಾವಸ್ಥೆಯಲ್ಲಿ ನಾಲಿಗೆಯು ಅಧಿಕ ಹುಳಿ, ಉಪ್ಪು, ಖಾರ ಹಾಗೂ ಸಿಹಿಯನ್ನು ಬಯಸುತ್ತದೆ. ಅದಕ್ಕೆ ಅನುಗುಣವಾಗಿ ಆಹಾರವನ್ನು ಸೇವಿಸುವುದು ಸಹಜ. ಅದರಲ್ಲೂ ಕೆಲವರು ಗರಿಗರಿಯಾದ ಹಾಗೂ ರುಚಿಯಾದ ಆಲೂಗಡ್ಡೆ ಚಿಪ್ಸ್ ಅನ್ನು ಅತಿಯಾಗಿ ಸೇವಿಸುತ್ತಾರೆ. ಈ ಚಿಪ್ಸ್‍ಅಲ್ಲಿ ಅಧಿಕ ಉಪ್ಪು ಇರುವುದರಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಒಂದು ಆಗೂಗಡ್ಡೆಯ ಚಿಪ್ಸ್ ಪ್ಯಾಕ್‍ನಲ್ಲಿ ಇರುವ ಉಪ್ಪಿನ ಪ್ರಮಾಣವು ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವುದು. ಅಲ್ಲದೆ ಬಹಳಷ್ಟು ಆರೋಗ್ಯ ಸಮಸ್ಯೆಯು ಕಾಡಬಹುದು.

ಇದರಲ್ಲಿ ಬಳಸಿರುವ ರಾಸಾಯನಿಕಗಳು ಕಡಿಮೆ ಗುಣಮಟ್ಟದ್ದಾಗಿವೆ
ಈ ಚಿಪ್ಸ್‌ಗಳನ್ನು ತಯಾರಿಸುವಾಗ ನಿಗದಿಪಡಿಸಿದ ಗುಣಮಟ್ಟವಿರುವ ಸಾಮಾಗ್ರಿಗಳನ್ನೇ ಬಳಸಬೇಕೆಂಬ ಕಾನೂನು ಇದ್ದರೂ ಜನಸಾಮಾನ್ಯರಿಗೆ ಈ ಬಗ್ಗೆ ಅರಿವಿಲ್ಲದೇ ಇರುವುದನ್ನು ಸಂಸ್ಥೆಗಳು ತಮ್ಮ ಲಾಭದ ನೆವವನ್ನಾಗಿ ಪರಿಗಣಿಸಿಕೊಂಡಿವೆ. ಇದಕ್ಕೆ ಬಳಸಲಾಗುವ ಎಣ್ಣೆ ಎಂದರೆ ಆರೋಗ್ಯಕ್ಕೆ ಅತಿ ಮಾರಕವಾದ ಪಾಮ್ ಎಣ್ಣೆ. ಹಲವು ಖ್ಯಾತ ವೈದ್ಯರ ಮತ್ತು ಆಹಾರತಜ್ಞರ ಪ್ರಕಾರ ಒಂದು ಪ್ಯಾಕೆಟ್ ಆಲೂಗಡ್ಡೆ ಚಿಪ್ಸ್ ತಿಂದರೆ ಐದು ಲೀಟರ್ ಕೆಟ್ಟ ಎಣ್ಣೆಯನ್ನು ಸೇವಿಸಿದಷ್ಟೇ ಹಾನಿ ನಮ್ಮ ಹೊಟ್ಟೆಗಳಿಗೆ ಆಗುತ್ತದೆ. ಅಲ್ಲದೇ ಅತಿ ಹೆಚ್ಚು ಉಪ್ಪು ಇರುವುದರಿಂದ ಹೃದಯದ ಬಡಿತ ಹೆಚ್ಚುತ್ತದೆ ಮತ್ತು ರಕ್ತದ ಒತ್ತಡವೂ ಹೆಚ್ಚುತ್ತದೆ. ಅತಿ ಹೆಚ್ಚು ಖಾರ ಇರುವುದರಿಂದ ಜೀರ್ಣಾಂಗಗಳಲ್ಲಿ ಉರಿ ತರಿಸುತ್ತದೆ.

ನೀರಿನ ಧಾರಣೆ
ಅತಿಯಾದ ಉಪ್ಪು ಸೇವನೆಯಿಂದ ದೇಹದಲ್ಲಿ ಹೆಚ್ಚು ನೀರನ್ನು ತಡೆ ಹಿಡಿಯುತ್ತದೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಉಳಿದ ದಿನಕ್ಕಿಂತ ಹೆಚ್ಚು ನೀರಿನಂಶವು ದೇಹದಲ್ಲಿ ಉಳಿದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಅಧಿಕ ಉಪ್ಪಿನ ಚಿಪ್ಸ್‍ಗಳನ್ನು ಸೇವಿಸಿದರೆ ಅದು ನಿಮ್ಮ ದೇಹದಲ್ಲಿ ಇನ್ನಷ್ಟು ನೀರು ಉಳಿದುಕೊಳ್ಳುವಂತೆ ಮಾಡುವುದು. ಇದರ ಪರಿಣಾಮದಿಂದ ಕೈ-ಕಾಲುಗಳಲ್ಲಿ ಮತ್ತು ದೇಹದ ಇತರ ಭಾಗದಲ್ಲಿ ಊತ ಮತ್ತು ಅಸ್ವಸ್ಥತೆ ಉಂಟಾಗುವಂತೆ ಮಾಡುತ್ತದೆ.

ತೀವ್ರ ರಕ್ತದೊತ್ತಡ
ಗರ್ಭಾವಸ್ಥೆಯಲ್ಲಿ ಇರುವಾಗ ಅಧಿಕ ರಕ್ತದೊತ್ತಡವನ್ನು ಈಗಾಗಲೇ ಹೊಂದಿದ್ದೀರಿ ಎಂದಾದರೆ ಮಗುವಿಗೆ ತೊಂದರೆಗಳ ಅಪಾಯವು ಹೆಚ್ಚುತ್ತದೆ. ಆಲೂಗಡ್ಡೆಯ ಚಿಪ್ಸ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ರಕ್ತದ ಮಟ್ಟವು ನಿಯಂತ್ರಿಸುವುದು ಕಷ್ಟವಾಗುತ್ತದೆ. ಹೆಚ್ಚಿನ ಉಪ್ಪು ಸೇವನೆಯಿಂದ ಮಗುವಿಗೆ ಪ್ರಿಕ್ಲಾಂಪ್ಸಿಯ ಹೊಂದುವ ಅಪಾಯ ಇರುತ್ತದೆ.

ಎದೆಯುರಿ ಮತ್ತು ಅಜೀರ್ಣ ಸಮಸ್ಯೆ
ಗರ್ಭಾವಸ್ಥೆಯಲ್ಲಿ ಇರುವಾಗ ಎದೆಯುರಿ ಮತ್ತು ಅಜೀರ್ಣ ಸಮಸ್ಯೆಯು ಸಾಮಾನ್ಯವಾಗಿರುತ್ತದೆ. ಸಾಕಷ್ಟು ಉಪ್ಪನ್ನು ತಿನ್ನುವುದರಿಂದ ಮಗುವಿಗೆ ಜೀರ್ಣಕಾರಿ ಅಂಗಗಳಿಗೆ ಹಾನಿಯನ್ನುಂಟುಮಾಡುವುದು. ತಾಯಿಯು ತೀವ್ರವಾದ ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೊಂದಿದ್ದರೆ ಆಹಾರದ ಬಗ್ಗೆ ವೈದ್ಯರಲ್ಲಿ ಸಾಕಷ್ಟು ಸಲಹೆಯನ್ನು ಪಡೆದುಕೊಳ್ಳುವುದನ್ನು ಮರೆಯದಿರಿ.

ಆಲೂಗಡ್ಡೆ ಚಿಪ್ಸ್‍ಗೆ ಪರ್ಯಾಯವಾಗಿ ಏನನ್ನು ಸೇವಿಸಬೇಕು
ಗರ್ಭಾವಸ್ಥೆಯಲ್ಲಿ ಆಲೂಗಡ್ಡೆಯ ಚಿಪ್ಸ್ ಅನ್ನು ಮಿತವಾಗಿ ಸೇವಿಸಬೇಕು. ಇದರಿಂದ ದೈನಂದಿನ ಕ್ಯಾಲೋರಿ ಹೆಚ್ಚುವುದು. ಉಪ್ಪು ಸೇವನೆಯನ್ನು ಮಿತಿಯಿಂದ ಸೇವಿಸಿದರೆ ಸುರಕ್ಷಿತವಾಗಿರುತ್ತಾರೆ. ಪ್ರಮಾಣವನ್ನು ಸೀಮಿತಗೊಳಿಸುವುದರ ಮೂಲಕ ತಾಯಿ ಮತ್ತು ಮಗುವಿನ ಸಂಭಾವ್ಯ ಅಪಾಯವನ್ನು ತಡೆಯಬಹುದು. ಒಣ ದ್ರಾಕ್ಷಿ, ಒಣ ಹಣ್ಣುಗಳನ್ನು ಚಿಪ್ಸ್‍ಗಳಿಗೆ ಪರ್ಯಾಯವಾಗಿ ಸೇವಿಸುವುದು ಉತ್ತಮ. ನೀವು ಸೇವಿಸುವ ಆಹಾರ ಪದಾರ್ಥಗಳು ಪೋಷಕಾಂಶದಿಂದ ಪೂರ್ಣವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮರೆಯದಿರಿ.



Click it and Unblock the Notifications
