ಗರ್ಭನಿರೋಧಕ ಸುಳ್ಳುಗಳನ್ನು ನಂಬಬೇಡಿ, ಇದರಿಂದ ಕೂಡ ಗರ್ಭಿಣಿಯಾಗುವ ಸಾಧ್ಯತೆ ಇದೆಯಂತೆ!

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿರುವಂತಹ ದಂಪತಿಯು ಯಾವಾಗಲೂ ತಮಗೆ ವಿಳಂಬವಾಗಿ ಮಗು ಬೇಕು ಅಥವಾ ಇನ್ಯಾವುದೋ ಕಾರಣಕ್ಕಾಗಿ ಗರ್ಭ ನಿರೋಧಕಗಳನ್ನು ಬಳಕೆ ಮಾಡಿಕೊಳ್ಳುವರು. ಇಂದಿನ ಆಧುನಿಕ ದಿನಗಳಲ್ಲಿ ಹೆಚ್ಚಾಗಿ ಮಹಿಳೆಯರು ಕೂಡ ಉದ್ಯೋಗದಲ್ಲಿರುವ ಕಾರಣದಿಂದಾಗಿ ಅವರು ತಮ್ಮ ವೃತ್ತಿ ಜೀವನ ಹಾಗೂ ಸಾಂಸಾರಿಕ ಜೀವನವನ್ನು ಸರಿ ಹೊಂದಿಸಿಕೊಂಡು ಹೋಗಲು ಗರ್ಭ ಧರಿಸುವುದನ್ನು ವಿಳಂಬಗೊಳಿಸುವರು.

Birth Control Myths That Putting You at Risk of Pregnancy

ಇದರಲ್ಲಿ ಹೆಚ್ಚಾಗಿ ಸುಶಿಕ್ಷಿತ ಮಹಿಳೆಯರು ಇಂದಿನ ವಿಧಾನಗಳಾಗಿರುವ ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವರು. ಆದರೆ ಗರ್ಭನಿರೋಧಕದ ಬಗ್ಗೆ ಕೆಲವೊಂದು ಸುಳ್ಳುಗಳು ಹರಿದಾಡುತ್ತಿದೆ. ಇಂತಹ ಸುಳ್ಳುಗಳನ್ನು ನಂಬಿ ಕೆಲವು ಮಂದಿ ಲೈಂಗಿಕ ಕ್ರಿಯೆಯಲ್ಲಿ ಅಸುರಕ್ಷಿತವಾಗಿ ತೊಡಗಿಕೊಂಡು ಗರ್ಭ ಧರಿಸುವರು. ಇಂತಹ ಸುಳ್ಳುಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

ಗರ್ಭ ನಿರೋಧಕಗಳಿಗೆ ಸ್ವಲ್ಪ ಕಾಲ ವಿರಾಮ ನೀಡಬಹುದು

ಗರ್ಭ ನಿರೋಧಕಗಳಿಗೆ ಸ್ವಲ್ಪ ಕಾಲ ವಿರಾಮ ನೀಡಬಹುದು

ಖಂಡಿತವಾಗಿಯೂ ಇಲ್ಲ. ಗರ್ಭ ನಿರೋಧಕಗಳಿಂದ ನೀವು ವಿರಾಮ ಪಡೆಯುವುದಕ್ಕೆ ಕಾರಣಗಳೇ ಇಲ್ಲ. ಇದು ನಿಮ್ಮನ್ನು ಆರೋಗ್ಯಕಾರಿಯಾಗಿಸುವುದು ಮಾತ್ರವಲ್ಲದೆ, ಗರ್ಭಿಣಿಯನ್ನಾಗಿಯೂ ಮಾಡಬಹುದು. ನೀವು ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಕೂಡಲೇ ಅಥವಾ ಐಯುಡಿ ತೆಗೆದ ತಕ್ಷಣವೇ ಗರ್ಭಿಣಿ ಆಗಬಹುದು. ಮಗು ಪಡೆಯಲು ನಿರ್ಧರಿಸಿದ್ದರೆ ಮಾತ್ರ ನೀವು ಗರ್ಭ ನಿರೋಧಕ ಮಾತ್ರೆ ತೆಗೆದು ಕೊಳ್ಳುವುದನ್ನು ನಿಲ್ಲಿಸಿ.

ಹೊರತೆಗೆಯುವುದು ಕೂಡ ಗರ್ಭ ನಿರೋಧಕದಷ್ಟೇ ಪರಿಣಾಮಕಾರಿ

ಹೊರತೆಗೆಯುವುದು ಕೂಡ ಗರ್ಭ ನಿರೋಧಕದಷ್ಟೇ ಪರಿಣಾಮಕಾರಿ

ಗರ್ಭ ಧರಿಸದೆ ಇರಲು ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಜನನೇಂದ್ರೀಯವನ್ನು ಹೊರಗೆ ತೆಗೆಯುವುದು ತುಂಬಾ ಸುಲಭ ಹಾಗೂ ಒಳ್ಳೆಯ ವಿಧಾನ ಎಂದು ಭಾವಿಸಿರುವರು. ಆದರೆ ಇದು ಸುಳ್ಳು. ಈ ವಿಧಾನವು ಪರಿಣಾಮಕಾರಿಯಾಗಿ ಇರದೇ ಇರಲು ಹಲವಾರು ಕಾರಣಗಳು ಇವೆ. ಆದರೆ ಇದು ತುಂಬಾ ಅಸಾಮಾನ್ಯವೆಂದು ಹೇಳಲಾಗುತ್ತದೆ. ಯಾಕೆಂದರೆ ಮೊದಲನೇಯದಾಗಿ ನಿಮ್ಮ ಸಂಗಾತಿಯು ಇದನ್ನು ಸರಿಯಾದ ಸಮಯದಲ್ಲಿ ಮಾಡಲು ಸಾಧ್ಯವಿಲ್ಲ ಮತ್ತು ಎರಡನೇದಾಗಿ ಸ್ಖಲನಕ್ಕೆ ಮೊದಲೇ ಬಂದಿರುವಂತಹ ವೀರ್ಯವು ನಿಮ್ಮನ್ನು ಗರ್ಭಿಣಿ ಆಗಿ ಮಾಡಲು ಶಕ್ತವಾಗಿದೆ. ಹೊರ ತೆಗೆಯುವಂತಹ ಕ್ರಮವು ಯಾವುದೇ ರೀತಿಯ ಲೈಂಗಿಕ ರೋಗಗಳಿಂದ ನಿಮಗೆ ರಕ್ಷಣೆ ನೀಡದು. ಇದನ್ನು ನೀವು ಮಾಡಬೇಡಿ.

ತಪ್ಪಾಗಿ ಹೋದರೆ ಆಗ ನೀವು ಮರುದಿನ ಗರ್ಭನಿರೋಧಕ ತೆಗೆದುಕೊಳ್ಳಿ

ತಪ್ಪಾಗಿ ಹೋದರೆ ಆಗ ನೀವು ಮರುದಿನ ಗರ್ಭನಿರೋಧಕ ತೆಗೆದುಕೊಳ್ಳಿ

ಇದು ನಿಜ. ಯಾಕೆಂದರೆ ನಿಮ್ಮ ಗರ್ಭ ನಿರೋಧಕ ವಿಧಾನಗಳು ವಿಫಲವಾಗಿದೆ ಎಂದು ನಿಮಗೆ ಅನಿಸಿದರೆ ಆಗ ನೀವು ಈ ಕ್ರಮವನ್ನು ಅಳವಡಿಸಿಕೊಳ್ಳಬಹುದು. ಹೊರ ತೆಗೆಯುವ ವಿಧಾನಕ್ಕೆ ನೀವು ಇದನ್ನು ಪರ್ಯಾಯವಾಗಿ ಬಳಕೆ ಮಾಡಿಕೊಳ್ಳಬಹುದು. ಮೊದಲನೇಯದಾಗಿ ನಿಮ್ಮ ಸಂಗಾತಿಯು ಸರಿಯಾದ ಸಮಯದಲ್ಲಿ ಹೊರತೆಗೆದಿದ್ದಾರೆಯಾ ಎಂದು ತಿಳಿದಿರುವುದಿಲ್ಲ. ಸ್ಖಲನಕ್ಕೆ ಮೊದಲು ಬರುವ ವೀರ್ಯವು ಗರ್ಭ ಧರಿಸುವಂತೆ ಮಾಡುವುದು. ಎರಡನೇಯದಾಗಿ ತುರ್ತು ಗರ್ಭ ನಿರೋಧಕಗಳು ತುಂಬಾ ದುಬಾರಿ ಆಗಿರುವುದು. ಇದರಿಂದ ನೀವು ತುಂಬಾ ದುಬಾರಿ ಹಣ ತೆತ್ತು ಗರ್ಭ ನಿರೋಧಕ ಕ್ರಮ ಅಳವಡಿಸಿಕೊಳ್ಳಬೇಕಾಗುತ್ತದೆ. ಹದಿಹರೆಯದವರಿಗೆ ಇದು ತುಂಬಾ ದುಬಾರಿ ಎಂದು ಕಾಣಿಸಬಹುದು.

ಕೆಲವು ಗರ್ಭ ನಿರೋಧಕಗಳು ಸಂಗಾತಿಗೆ ಲೈಂಗಿಕ ಕ್ರಿಯೆಯ ಖುಷಿ ನೀಡದು

ಕೆಲವು ಗರ್ಭ ನಿರೋಧಕಗಳು ಸಂಗಾತಿಗೆ ಲೈಂಗಿಕ ಕ್ರಿಯೆಯ ಖುಷಿ ನೀಡದು

ನೀವು ಶಿಶ್ನ ಬಳಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರೆ ಆಗ ನೀವು ಕಾಂಡೋಮ್ ಬಳಸಿಕೊಳ್ಳುವ ಬಗ್ಗೆ ಕೇಳಿರಬಹುದು. ಆದರೆ ಇದು ಕೆಲವೊಮ್ಮೆ ತುಂಬಾ ಸಡಿಲ ಮತ್ತು ಇನ್ನು ಕೆಲವೊಮ್ಮೆ ತುಂಬಾ ಬಿಗಿಯಾಗಿರುವುದು. ಕಾಂಡೋಮ್ ಬಳಸದೆ ಇರಲು ಹಲವಾರು ಕಾರಣಗಳು ಇರಬಹುದು. ಇದನ್ನು ನೀವು ನಂಬಬೇಡಿ. ಆದರೆ ಗರ್ಭ ನಿರೋಧಕದಲ್ಲಿ ಪ್ರಮುಖ ಪಾತ್ರ ವಹಿಸಿರುವಂತಹ ಕಾಂಡೋಮ್ ಗಳು ವಿವಿಧ ಗಾತ್ರ, ಆಕಾರ ಮತ್ತು ವಿಧಗಳಲ್ಲಿ ಬರುವುದು. ಇದು ಪ್ರತಿಯೊಬ್ಬರಿಗೂ ಹೊಂದಿಕೆಯಾಗುವುದು.

ಕೆಲವು ಗರ್ಭ ನಿರೋಧಕಗಳು ಸಂಗಾತಿಗೆ ಲೈಂಗಿಕ ಕ್ರಿಯೆಯ ಖುಷಿ ನೀಡದು

ಕೆಲವು ಗರ್ಭ ನಿರೋಧಕಗಳು ಸಂಗಾತಿಗೆ ಲೈಂಗಿಕ ಕ್ರಿಯೆಯ ಖುಷಿ ನೀಡದು

ಕೆಲವೊಂದು ವಿಧದ ಕಾಂಡೋಮ್ ಗಳು ಸಂವೇದನೆ ಹೆಚ್ಚಿಸುವುದು, ಬಿಸಿ ಉಂಟು ಮಾಡುವುದು ಮತ್ತು ಆರಾಮವನ್ನು ಒದಗಿಸುವುದು. ಐಯುಡಿ ಬಗ್ಗೆ ಹೇಳುವುದಾದರೆ ಅದನ್ನು ನಿಮ್ಮ ಸಂಗಾತಿಯು ಪತ್ತೆ ಮಾಡಲು ಸಾಧ್ಯವೇ ಇಲ್ಲ. ಗರ್ಭಕಂಠದ ಮೇಲಿನ ಭಾಗದಲ್ಲಿ ಐಯುಡಿ ಅಳವಡಿಸಲಾಗಿರುತ್ತದೆ. ಶಿಶ್ನವು ಈ ಭಾಗಕ್ಕೆ ತಲುಪುವುದು ತುಂಬಾ ಕಷ್ಟಕರ. ಐಯುಡಿಯ ಸ್ಟ್ರಿಂಗ್ ನಿಮ್ಮ ಸಂಗಾತಿಯ ಅನುಭವಕ್ಕೆ ಬರಬಹುದು. ಆದರೆ ಇದು ನಿಮ್ಮ ಗರ್ಭ ನಿರೋಧಕ ಕಾರ್ಯಕ್ಕೆ ತೆರಬೇಕಾಗಿರುವ ಸಣ್ಣ ಬೆಲೆ ಆಗಿರುವುದು. ನಿಮಗೆ ಗರ್ಭ ನಿರೋಧಕಗಳಿಂದ ಹೆಚ್ಚಿನ ಖುಷಿ ಸಿಗುತ್ತಿಲ್ಲ ಎಂದು ಅನಿಸಿದರೆ ಆಗ ನೀವು ಮಗುವನ್ನು ಪಡೆಯದೆ ಬೇರೆ ವಿಧಾನಗಳನ್ನು ಹುಡುಕಬಹುದು.

ಕಾಂಡೋಮ್ ನ್ನು ಯಾವಾಗಲೂ ನೀವು ವ್ಯಾಲೆಟ್ ನಲ್ಲಿ ಇಟ್ಟುಕೊಂಡಿರಿ. ಯಾವಾಗಲೂ ಇದು ಜತೆಗಿರಲಿ…

ಕಾಂಡೋಮ್ ನ್ನು ಯಾವಾಗಲೂ ನೀವು ವ್ಯಾಲೆಟ್ ನಲ್ಲಿ ಇಟ್ಟುಕೊಂಡಿರಿ. ಯಾವಾಗಲೂ ಇದು ಜತೆಗಿರಲಿ…

ಇದು ತಪ್ಪು. ಯಾಕೆಂದರೆ ನೀವು ಪರ್ಸ್ ನಲ್ಲಿ ಕಾಂಡೋಮ್ ನ್ನು ಇಟ್ಟುಕೊಳ್ಳುವ ಕಾರಣದಿಂದಾಗಿ ಅದು ಬೇಗನೆ ಹರಿದುಹೋಗುವಂತಹ ಅಪಾಯವು ಇರುವುದು. ಪರ್ಸ್ ನಲ್ಲಿರುವ ಬಿಸಿ ಮತ್ತು ತರುಚುವಿಕೆಯಿಂದಾಗಿ ಕಾಂಡೋಮ್ ಬೇಗನೆ ದುರ್ಬಲ ಆಗಬಹುದು. ಅದು ನಿಜವಾಗಿಯು ಪಡೆಯುವ ಬಿಸಿ ಹಾಗೂ ತರುಚುವಿಕೆಯ ಮೊದಲೇ ದುರ್ಬಲವಾಗಬಹುದು. ಇದನ್ನು ನೀವು ತುಂಬಾ ಒಣ ಹಾಗೂ ತಂಪಾದ ಪ್ರದೇಶದಲ್ಲಿ ಇಟ್ಟುಬಿಡಿ. ನೀವು ಇಲ್ಲಿ ಪ್ರಮುಖವಾಗಿ ಕಾಂಡೋಮ್ ನ ಎಕ್ಸ್ ಪೈಯರಿ ದಿನಾಂಕ ನೋಡಿಕೊಳ್ಳಿ.

ಗರ್ಭ ನಿರೋಧಕ ಮಾತ್ರೆಗಳು ಅಷ್ಟು ಪರಿಣಾಮಕಾರಿಯಾಗಿಲ್ಲ ಮತ್ತು ಇದರಿಂದ ಒಂದೆರಡು ಸಲ ಅದನ್ನು ತೆಗೆದುಕೊಳ್ಳದೆ ಇದ್ದರೂ ಏನೂ ಆಗದು…

ಗರ್ಭ ನಿರೋಧಕ ಮಾತ್ರೆಗಳು ಅಷ್ಟು ಪರಿಣಾಮಕಾರಿಯಾಗಿಲ್ಲ ಮತ್ತು ಇದರಿಂದ ಒಂದೆರಡು ಸಲ ಅದನ್ನು ತೆಗೆದುಕೊಳ್ಳದೆ ಇದ್ದರೂ ಏನೂ ಆಗದು…

ಕೆಲವು ಗರ್ಭ ನಿರೋಧಕ ಮಾತ್ರೆಗಳನ್ನು ಮಹಿಳೆಯರು ತೆಗೆದುಕೊಳ್ಳುತ್ತಾ ಇದ್ದರೂ ಆಗ ಅವರು ಗರ್ಭ ಧರಿಸಿರುವುದು ಸತ್ಯ. ಆದರೆ ಸರಿಯಾದ ಕ್ರಮದಲ್ಲಿ ಅದನ್ನು ತೆಗೆದುಕೊಂಡರೆ ಆಗ ನೀವು ಗರ್ಭ ಧರಿಸುವಂತಹ ಸಾಧ್ಯತೆ ತುಂಬಾ ಕಡಿಮೆ ಇರುವುದು. ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವ 100 ಮಹಿಳೆಯರಲ್ಲಿ ಒಬ್ಬರು ಮಾತ್ರ ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಒಂದು ಅಥವಾ ಎರಡು ಸಲ ನೀವು ಮಾತ್ರೆ ತೆಗೆದುಕೊಳ್ಳದೆ ಇದ್ದರೆ ಆಗ ನೀವು ಗರ್ಭ ಧರಿಸುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ನಿಮಗೆ ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳಲು ನೆನಪು ಆಗುತ್ತಿಲ್ಲವಾದರೆ ಆಗ ನೀವು ಮೊಬೈಲ್ ನಲ್ಲಿ ರಿಮೈಂಡರ್ ಇಟ್ಟುಕೊಳ್ಳಿ ಅಥವಾ ಇದಕ್ಕೆ ಪರ್ಯಾಯವಾಗಿ ಇರುವಂತಹ ಐಯುಡಿ ಬಳಸಿಕೊಳ್ಳಿ.

ನಾನು ಗರ್ಭ ಧಾರಣೆ ಮಾಡುವುದಿಲ್ಲವೆಂದು ನಂಬಿಕೊಂಡಿರುವುದು

ನಾನು ಗರ್ಭ ಧಾರಣೆ ಮಾಡುವುದಿಲ್ಲವೆಂದು ನಂಬಿಕೊಂಡಿರುವುದು

ಮಹಿಳೆಯರು ಗರ್ಭ ಧಾರಣೆ ಮಾಡುವುದಿಲ್ಲವೆಂದು ತಿಳಿದುಕೊಳ್ಳಲು ಹಲವಾರು ಕಾರಣಗಳು ಇವೆ. ಮೊದಲ ಸಲ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ನೀವು ಗರ್ಭ ಧರಿಸುವುದಿಲ್ಲ ಎಂದು ಕೆಲವರು ಹೇಳಬಹುದು. ಇನ್ನು ಕೆಲವರು ಋತುಚಕ್ರದ ವೇಳೆ ಸೆಕ್ಸ್ ನಡೆಸಿದರೆ ಗರ್ಭ ಧರಿಸುವಂತಹ ಸಾಧ್ಯತೆಯು ಕಡಿಮೆ ಎಂದು ಹೇಳಬಹುದು. ತಿಂಗಳ ಕೆಲವೊಂದು ಸಂದರ್ಭದಲ್ಲಿ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಆಗ ನೀವು ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದಿಲ್ಲ ಎಂದು ಇನ್ನು ಕೆಲವರು ನಿಮಗೆ ಹೇಳಬಹುದು.

ನಾನು ಗರ್ಭ ಧಾರಣೆ ಮಾಡುವುದಿಲ್ಲವೆಂದು ನಂಬಿಕೊಂಡಿರುವುದು

ನಾನು ಗರ್ಭ ಧಾರಣೆ ಮಾಡುವುದಿಲ್ಲವೆಂದು ನಂಬಿಕೊಂಡಿರುವುದು

ನೀವು ಅಸುರಕ್ಷಿತವಾಗಿರುವ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ನೀವು ಖಂಡಿತವಾಗಿಯೂ ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದರಲ್ಲಿ ಯಾವುದೇ ಅನುಮಾನಗಳು ಇಲ್ಲ. ಇದರಿಂದ ನೀವು ಕುಟುಂಬ ಯೋಜನೆಯಲ್ಲಿ ತೊಡಗಿದ್ದರೆ ಆಗ ನೀವು ಕೆಲವು ಸುರಕ್ಷಿತವಾಗಿರುವ ಗರ್ಭ ನಿರೋಧಕಗಳನ್ನು ಬಳಕೆ ಮಾಡಿಕೊಳ್ಳಿ.

English summary

Birth Control Myths That Putting You at Risk of Pregnancy

What are some common myths about birth control? Read on so next time you hear someone claim condoms aren't comfortable for their partner, you know the real facts.
X
Desktop Bottom Promotion