ಗರ್ಭಾವಸ್ಥೆಯಲ್ಲಿರುವಾಗ ನೆಚ್ಚಿನ ಆಹಾರವನ್ನೂ ಇಷ್ಟ ಇಷ್ಟವಾಗದಿರುವುದಕ್ಕೆ ಕಾರಣ ಏನು?

Posted By: Divya pandith
Subscribe to Boldsky

ಗರ್ಭಾವಸ್ಥೆಯ ಸಮಾಚಾರವನ್ನು ಮಾತನಾಡುವಾಗ ಹೆಚ್ಚಿನದಾಗಿ ನಾಲಿಗೆಯ ರುಚಿ, ವಾಂತಿಯ ಸಂವೇದನೆ ಹಾಗೂ ಬಯಕೆಯ ಆಹಾರದ ಬಗ್ಗೆ ಮಾತನಾಡುತ್ತಾರೆ. ಹುಣಸೆ ಹಾಗೂ ಮಾವಿನಕಾಯಿಯ ಹುಳಿಯನ್ನು ತಿನ್ನಲು ಬಹುತೇಕ ಗರ್ಭಿಣಿಯರು ಬಯಸುತ್ತಾರೆ. ಕೆಲವು ಮಹಿಳೆಯರಿಗೆ ವಿಲಕ್ಷಣವಾದ ಬಯಕೆಗಳು ಉಂಟಾಗುತ್ತವೆ. ಮಣ್ಣು, ಕಬ್ಬಿಣ, ಸುಣ್ಣ, ಪ್ಲಾಸ್ಟರ್, ಸೀಮೆ ಸುಣ್ಣ ಹೀಗೆ ವಿವಿಧ ಬಗೆಯ ವಸ್ತುಗಳನ್ನು ತಿನ್ನಬೇಕೆಂದು ಬಯಸುತ್ತಾರೆ.

ಕೆಲವರು ಆಹಾರವನ್ನು ಸೇವಿಸುವುದಕ್ಕೆ ಇಷ್ಟ ಪಡುವುದಿಲ್ಲ. ಆಹಾರ ಸೇವಿಸುವುದು ಎಂದರೆ ವಾಕರಿಕೆಯನ್ನು ವ್ಯಕ್ತ ಪಡಿಸುತ್ತಾರೆ. ಕೆಲವರು ಈ ಮೊದಲು ಇಷ್ಟ ಪಡುತ್ತಿದ್ದ ಆಹಾಋವನ್ನು ಗರ್ಭಾವಸ್ಥೆಯಲ್ಲಿರುವಾಗ ಸೇವಿಸುವುದಕ್ಕೆ ಹೇಸುತ್ತಾರೆ. ಅದೇನೇ ಆದರೂ ಗರ್ಭಿಣಿಯು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಾಗಿ ಪೋಷಕಾಂಶ ಭರಿತವಾದ ಆಹಾರವನ್ನು ಸೇವಿಸಬೇಕು. ಹೆಚ್ಚು ನೀರು ಹಾಗೂ ಹಣ್ಣು ಹಂಪಲುಗಳನ್ನು ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. 

ಗರ್ಭಾವಸ್ಥೆಯಲ್ಲಿರುವ ಕೆಲವು ಮಹಿಳೆಯರು ಮೊದಲು ಇಷ್ಟ ಪಡುತ್ತಿದ್ದ ಆಹಾರವನ್ನು ಏಕೆ ಈಗ ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಯಾವುದೇ ಬಗೆಯ ಸೂಕ್ತ ಮಾಹಿತಿ ದೊರೆತಿಲ್ಲ. ಈ ವಿಚಾರದ ಕುರಿತು ಅನೇಕ ಸಿದ್ಧಾಂತಗಳು ಹಾಗೂ ಊಹಾಪೋಹಗಳಿರುವುದನ್ನು ಕಾಣಬಹುದು. ಆದರೆ ಅವುಗಳಲ್ಲಿ ಯಾವುದನ್ನೂ ನಿರ್ಣಾಯಕವೆಂದು ಪರಿಗಣಿಸುವುದಿಲ್ಲ.

ಗರ್ಭಾವಸ್ಥೆಯಲ್ಲಿ ಆಹಾರ ತಿರಸ್ಕಾರವನ್ನು ಉಂಟುಮಾಡುವುದರ ಕುರಿತು ಅನೇಕ ವಿವವರಣೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ಕಠಿಣ ಅವಧಿಯನ್ನು ನಿಭಾಯಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ. ಗರ್ಭಾವಸ್ಥೆಯಲ್ಲಿ ಆಹಾರ ಸೇವನೆಯಲ್ಲಿ ವ್ಯತ್ಯಾಸ ಬಯಸುವುದು ಏಕೆ? ಮುಂಜಾನೆಯ ಅಸಹಜವಾದ ಆರೋಗ್ಯ. ದೇಹದಲ್ಲಾಗುವ ಆಂತರಿಕ ಬದಲಾವಣೆಯಿಂದ ರುಚಿಯಲ್ಲಿ ಬದಲಾವಣೆ ಉಂಟಾಗಬಹುದು ಎನ್ನುವುದು. ಗರ್ಭಿಣಿಯರು ಆಹಾರವನ್ನು ತಿರಸ್ಕರಿಸುವಾಗ ಗಮನಿಸಬಹುದಾದ ಒಂದು ಬದಲಾವಣೆ ಲಾಲಾರಸ. 

ಗರ್ಭಿಣಿಯರ ವಾಂತಿ ಸಮಸ್ಯೆಗೆ ಮನೆ ಮದ್ದು

ಈ ಸಂದರ್ಭದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಲಾಲಾರಸವು ಉತ್ಪತ್ತಿಯಾಗುತ್ತದೆ. ಅಲ್ಲದೆ ಬಾಯಲ್ಲಿ ಲೋಹೀಯ ರುಚಿಯನ್ನು ಉಂಟುಮಾಡುತ್ತದೆ. ಅದಕ್ಕಾಗಿ ಅನೇಕ ಗರ್ಭಿಣಿಯರು ಇದನ್ನು ಕಹಿಯಾದ ರುಚಿ ಎಂದು ಭಾವಿಸುತ್ತಾರೆ. ಹಾಗಾಗಿಯೇ ಅನೇಕ ಮಹಿಳೆಯರು ಗರ್ಭಾವಸ್ಥೆ ಮುಂದುವರಿಯುತ್ತಿದ್ದಂತೆ ಹಿಂದೆ ಇಷ್ಟ ಪಡುವ ಆಹಾರವನ್ನು ಇಷ್ಟ ಪಡದೆ ಇರಬಹುದು. ಈ ಕಾರಣದಿಂದಲೇ ಸಾಮಾನ್ಯವಾಗಿ ಗರ್ಭಿಣಿಯರಿಗೆ ಮುಂಜಾನೆ ವಾಕರಿಕೆಯಾಗುವಂತೆ ಭಾಸವಾಗುತ್ತದೆ. ವಾಸನೆ ಹಾಗೂ ರುಚಿಯಿಂದಾಗಿ ವಾಂತಿಯಾಗುವ ಸಾಧ್ಯತೆ ಇರುತ್ತದೆ....

ಆಹಾರದ ತಿರಸ್ಕಾರ

ಆಹಾರದ ತಿರಸ್ಕಾರ

ಹೆಚ್ಚಿನ ಮಹಿಳೆಯರಲ್ಲಿ ಮೊದಲ ತ್ರೈಮಾಸಿಕದಿಂದ ಆಹಾರ ತಿರಸ್ಕಾರವು ಉಂಟಾಗುತ್ತದೆ. ಕೆಲವರಿಗೆ ಮೊದಲ ತ್ರೈಮಾಸಿಕ ಮುಗಿಯುತ್ತಿದ್ದಂತೆ ಆಹಾರ ತಿರಸ್ಕಾರವು ಮರೆಯಾಗುವುದು. ಕೆಲವರಿಗೆ ಸಂಪೂರ್ಣವಾಗಿ ಗರ್ಭಾವಸ್ಥೆಯ ಕೊನೆಯವರೆಗೂ ಮುಂದುವರಿಯುತ್ತದೆ. ಇನ್ನೂ ಕೆಲವರಿಗೆ ಮಗು ಹಿಟ್ಟಿದ ನಂತರವೂ ಮುಂದುವರಿಯುವ ಸಾಧ್ಯತೆಗಳಿರುತ್ತವೆ.

ತಿರಸ್ಕರಿಸಬಹುದಾದ ಆಹಾರಗಳು

ತಿರಸ್ಕರಿಸಬಹುದಾದ ಆಹಾರಗಳು

ಗರ್ಭಾವಸ್ಥೆಯಲ್ಲಿರುವಾಗ ಸಾಮಾನ್ಯವಾಗಿ ಹೆಚ್ಚು ಪ್ರಭಲವಾದ ವಾಸನೆಯಿಂದ ಕೂಡಿರುವ ಆಹಾರವನ್ನು ಹೆಚ್ಚು ದ್ವೇಷಿಸುತ್ತಾರೆ. ಕೆಲವೊಮ್ಮೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿರುವಾಗ ತಿರಸ್ಕರಿಸಲ್ಪಡುವ ಆಹಾರಗಳೆಂದರೆ ಹಾಲು, ಹಾಲಿನ ಉತ್ಪನ್ನ, ಮೊಟ್ಟೆ, ಮೀನು, ಮಾಂಸ, ಬೆಳ್ಳುಳ್ಳಿ, ಮಸಾಲೆಯುಕ್ತ ಆಹಾರ, ಕಾಫಿ, ಅಧಿಕ ಕೊಬ್ಬಿನಂಶ ಹೊಂದಿರುವಂತಹ ಆಹಾರ ಪದಾರ್ಥಗಳು.

ಆಹಾರ ತಿರಸ್ಕಾರಗಳಿಗೆ ಕಾರಣಗಳು

ಆಹಾರ ತಿರಸ್ಕಾರಗಳಿಗೆ ಕಾರಣಗಳು

ಗರ್ಭಾವಸ್ಥೆಯಲ್ಲಿರುವಾಗ ಆಹಾರ ತಿರಸ್ಕಾರಕ್ಕೆ ಯಾವುದೇ ಘನ ಕಾರಣಗಳಿಲ್ಲ. ತಜ್ಞರು ಹಾಗೂ ವೈದ್ಯರು ಕೆಲವು ಸಿದ್ಧಾಂತಗಳನ್ನು ನೀಡುತ್ತಾರೆ. ಈ ಸಿದ್ಧಾಂತಗಳಲ್ಲಿ ಒಂದರಿಂದಾಗಿ ಅಥವಾ ಕೆಲವೊಂದರ ಸಂಯೋಜನೆಯಿಂದ ನೀವು ಪ್ರೀತಿಸುತ್ತಿದ್ದ ಆಹಾರವನ್ನು ನೀವು ದ್ವೇಷಿಸುವ ಸಾಧ್ಯತೆಗಳಿವೆ. ಮಗುವನ್ನು ನಿರೀಕ್ಷಿಸುವ ಸಮಯದಲ್ಲಿ ರುಚಿಯಲ್ಲಿ ಬದಲಾಗುವ ಬದಲಾವಣೆಗೆ ಕಾರಣಗಳು ಈ ಕೆಳಗಿನಂತಿರಬಹುದು ಎಂದು ಹೇಳಲಾಗುತ್ತದೆ.

ಎಚ್ ಸಿ ಜಿ-- ಹ್ಯೂಮನ್ ಕೋರಿಯಾನಿಕ್ ಗೋನಾಡೋಟ್ರೋಪಿನ್

ಎಚ್ ಸಿ ಜಿ-- ಹ್ಯೂಮನ್ ಕೋರಿಯಾನಿಕ್ ಗೋನಾಡೋಟ್ರೋಪಿನ್

ಹ್ಯೂಮನ್ ಕೋರಿಯಾನಿಕ್ ಗೋನಾಡೋಟ್ರೋಪಿನ್ ಹಾರ್ಮೋನ್ ಗರ್ಭಾವಸ್ಥೆಯಲ್ಲಿ ವಿವಿಧ ಪಾತ್ರಗಳನ್ನು ವಹಿಸುತ್ತದೆ. ಇದು 11 ವಾರಗಳಲ್ಲಿ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ನಂತರ ಅದರ ಮಟ್ಟಗಳು ಕಡಿಮೆಯಾಗುತ್ತಾ ಸಾಗುತ್ತದೆ. 11 ನೇ ವಾರದಲ್ಲಿಯೇ ಹೆಚ್ಚಿನ ಮಹಿಳೆಯರು ಆಹಾರ ತಿರಸ್ಕಾರವನ್ನು ದೂರುತ್ತಾರೆ. ಹಾಗಾಗಿ ಇದನ್ನು ಗರ್ಭಾವಸ್ಥೆಯಲ್ಲಿ ಆಹಾರ ಹಾನಿಯನ್ನು ಉಂಟುಮಾಡುವ ಈ ಹಾರ್ಮೋನ್ ಎಂದು ಹೇಳಲಾಗುತ್ತದೆ.

ಮುಂಜಾನೆಯ ಕಿರಿಕಿರಿ

ಮುಂಜಾನೆಯ ಕಿರಿಕಿರಿ

ಮುಂಜಾಣೆ ಆರೋಗ್ಯದಲ್ಲಿ ಉಂಟಾಗುವ ಕಿರಿಕಿರಿಯಿಂದ ಗರ್ಭಿಣಿಯು ಆಹಾರವನ್ನು ಸೇವಿಸುವುದಕ್ಕೆ ಬಯಸುವುದಿಲ್ಲ. ಗರ್ಭಾವಸ್ಥೆಯ ಆಹಾರ ತಿರಸ್ಕಾರಕ್ಕೆ ಬೆಳಗಿನ ಆರೋಗ್ಯ ಸಮಸ್ಯೆಯೇ ಕಾರಣ ಎಂದು ಹೇಳಬಹುದು ಅಥವಾ ಇವುಗಳಿಗೆ ಸಂಬಂಧಿಸಿದ ಇತರ ಕಾರಣಗಳಿಂದ ಬದಲಾವಣೆ ಉಂಟಾಗಬಹುದು ಎಂದು ಭಾವಿಸಲಾಗುತ್ತದೆ.

ವಾಸನೆ ಮತ್ತು ರುಚಿಯ ಬಲವಾದ ಅರ್ಥ

ವಾಸನೆ ಮತ್ತು ರುಚಿಯ ಬಲವಾದ ಅರ್ಥ

ಮಹಿಳೆಯರು ಗರ್ಭಿಣಿಯಾಗಿದ್ದಾಗ ವಾಸನೆ ಮತ್ತು ರುಚಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಲವಾದ ವಾಸನೆಯನ್ನು ಹೊಂದಿರುವ ಯಾವುದೇ ಆಹಾರವು ಮಹಿಳೆಯರಿಗೆ ಹಾನಿ ಉಂಟುಮಾಡುವುದಕ್ಕೆ ಕಾರಣವಾಗಬಹುದು. ಇದರಿಂದಲೇ ಗ್ರಹಿಸುವ ಕ್ರಿಯೆ ಹೆಚ್ಚುತ್ತದೆ. ಆಗ ರುಚಿ ಮತ್ತು ವಾಸನೆಯ ಅರ್ಥದಲ್ಲಿ ಗರ್ಭಾವಸ್ಥೆಯಲ್ಲಿ ಆಹಾರ ತಿರಸ್ಕಾರಕ್ಕೆ ಒಂದು ಕಾರಣವೆಂದು ಸಾಮಾನ್ಯವಾಗಿ ಉಲ್ಲೇಖಿಸಲಾಗಿದೆ.

ಹೆಚ್ಚಿದ ಲಾಲಾರಸ

ಹೆಚ್ಚಿದ ಲಾಲಾರಸ

ಕೆಲವು ಗರ್ಭಧಾರಣೆಯ ಹಾರ್ಮೋನುಗಳು ಗರ್ಭಾವಸ್ಥೆಯ ಸಮಯದಲ್ಲಿ ಸಾಕ್ಷಾಧಾರವಾಗಿರುತ್ತದೆ. ಈ ಹೆಚ್ಚಿದ ಲಾಲಾರಸ ಸಹ ಒಂದು ಕಹಿ ಲೋಹದ ರುಚಿ ತೆರೆದಿಡುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಆಹಾರವನ್ನು ತಿರಸ್ಕರಿಸುವ ಕಾರಣ ಕಹಿ ರುಚಿ ಎಂದು ಹೇಳಬಹುದು. ಕೆಲವು ಮಹಿಳೆಯರು ಹೇಳುವುದೇನೆಂದರೆ ಲೋಹೀಯ ರುಚಿ ಆಹಾರವನ್ನು ತಿರಸ್ಕರಿಸುವಂತೆ ಮಾಡುತ್ತದೆ ಎಂದು.

ಉದ್ದೇಶಪೂರ್ವಕ ತಿರಸ್ಕಾರಗಳು

ಉದ್ದೇಶಪೂರ್ವಕ ತಿರಸ್ಕಾರಗಳು

ದೇಹ ಹೇಳಿದಂತೆ ನಾವು ಕೇಳಬೇಕು ಎನ್ನುವ ಮಾತಿದೆ. ಸಾಮಾನ್ಯವಾಗಿ ನಮ್ಮ ದೇಹವು ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ನಮಗೆ ಸೂಚಿಸುತ್ತದೆ. ಒಬ್ಬ ಮಹಿಳೆ ಗರ್ಭಿಣಿಯಾಗಿದ್ದಾಗ ಅದೇ ಆಗಿರುತ್ತದೆ. ಗರ್ಭಾವಸ್ಥೆಯಲ್ಲಿ ರಕ್ಷಿಸುವ ಕಾರ್ಯವಿಧಾನವಾಗಿ ದೇಹವು ಆಹಾರ ತಿರಸ್ಕಾರವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಸಿದ್ಧಾಂತವಾಗಿದೆ. ಬೆಳೆಯುತ್ತಿರುವ ಭ್ರೂಣಕ್ಕೆ ಕೆಟ್ಟದಾಗಿದೆ ಎಂದು ಮಹಿಳೆಯು ತಿರಸ್ಕರಿಸಿದ ಆಹಾರವು ನಮಗೆ ಸೂಚಿಸುತ್ತದೆ. ಈ ಸಿದ್ಧಾಂತವನ್ನು ಬೆಂಬಲಿಸುವ ಇನ್ನೊಂದು ಅಂಶವೆಂದರೆ ಮುಂಜಾನೆಯ ಅನಾರೋಗ್ಯ. ಈ ಬದಲಾವಣೆಯಿಂದ ಗರ್ಭಪಾತಗಳು ಮತ್ತು ಪೂರ್ವ-ಪ್ರೌಢ ಜನನಗಳನ್ನು ಅನುಭವಿಸುತ್ತಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಮೊದಲ ತ್ರೈಮಾಸಿಕದಲ್ಲಿ ಆಹಾರಕ್ಕೆ ತಿರಸ್ಕಾರವು ಸಾಮಾನ್ಯವಾಗಿ ಸಂಭವಿಸುತ್ತದೆ. ಮಗುವಿನ ಅತ್ಯಂತ ದುರ್ಬಲ ಸ್ಥಿತಿಯನ್ನು ಈ ಸಿದ್ಧಾಂತವನ್ನು ಬೆಂಬಲಿಸುತ್ತದೆ.

ನಿಭಾಯಿಸುವುದು ಹೇಗೆ?

ನಿಭಾಯಿಸುವುದು ಹೇಗೆ?

ಗರ್ಭಾವಸ್ಥೆಯಲ್ಲಿ ಆಹಾರ ತಿರಸ್ಕಾರವನ್ನು ನಿಭಾಯಿಸುವುದು ಕೊಂಚ ಕಷ್ಟ. ನೀವು ತಿರಸ್ಕರಿಸುವ ಆಹಾರದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ನಿಮ್ಮ ದೇಹದ ಮಾತನ್ನು ಕೇಳಿ

ನಿಮ್ಮ ದೇಹದ ಮಾತನ್ನು ಕೇಳಿ

ನಿಮ್ಮ ದೇಹದ ಮಾತನ್ನು ಕೇಳುವುದು ಒಳ್ಳೆಯದು. ನಿಮಗೆ ಬಯಕೆಯಾಗುವ ಆಹಾರವನ್ನು ಸೇವಿಸಿ. ಅದು ನಿಮ್ಮ ದೇಹಕ್ಕೆ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ದೇಹ ಬೇಡ ಎನ್ನುವುದನ್ನು ತಿರಸ್ಕರಿಸಿ. ದೇಹಕ್ಕೆ ಅದರ ಅಗತ್ಯವಿಲ್ಲ ಎನ್ನುವುದನ್ನು ಹೇಳುತ್ತದೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

 ನೀವು ತಿರಸ್ಕರಿಸಿದ ಆಹಾರಗಳನ್ನು ಬದಲಾಯಿಸಿ

ನೀವು ತಿರಸ್ಕರಿಸಿದ ಆಹಾರಗಳನ್ನು ಬದಲಾಯಿಸಿ

ಕೆಲವೊಮ್ಮೆ ನೀವು ಕಡೆಗಣಿಸದ ಆಹಾರವು ನೀವು ನಿರ್ಲಕ್ಷಿಸಿ ಮತ್ತು ತಪ್ಪಿಸಲು ಅಸಾಧ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅಂತಹ ಸಂದರ್ಭಗಳಲ್ಲಿ ನೀವು ನಿರ್ದಿಷ್ಟ ಆಹಾರ ಪದ್ಧತಿಯನ್ನು ಅದೇ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಮತ್ತೊಂದು ಆಹಾರ ಪದಾರ್ಥದೊಂದಿಗೆ ಬದಲಿಸಬೇಕಾಗಬಹುದು. ಉದಾಹರಣೆಗೆ: ನೀವು ಬಸಳೆಯನ್ನು ತಿನ್ನುವುದನ್ನು ತಿರಸ್ಕರಿಸಿದರೆ ಅದರ ಬದಲಾಗಿ ನುಗ್ಗೆಕಾಯಿ, ಮೆಥಿ ಎಲೆಗಳನ್ನು ಸೇವಿಸಿ. ಆಗ ಪೋಷಕಾಂಶವು ಪೂರ್ಣಗೊಳ್ಳುತ್ತವೆ.

ಆಹಾರವನ್ನು ಮರೆಮಾಚಿ

ಆಹಾರವನ್ನು ಮರೆಮಾಚಿ

ನಿಮಗೆ ಕೆಲವು ತರಕಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ಹಣ್ಣುಗಳೊಂದಿಗೆ ನಯವಾಗಿ ಸೇರಿಸಿ. ಅದರ ರುಚಿ ಮತ್ತು ವಾಸನೆಯನ್ನು ಮರೆಮಾಡಲು ವೆನಿಲ್ಲಾ ಅಥವಾ ಏಲಕ್ಕಿ ರೀತಿಯ ಸ್ವಾದಿಷ್ಟ ಪದಾರ್ಥಗಳನ್ನು ಸೇರಿಸಿ.

ನಿಮ್ಮ ಹೊಟ್ಟೆಯನ್ನು ಖಾಲಿಯಾಗಿ ಇಡಬೇಡಿ

ನಿಮ್ಮ ಹೊಟ್ಟೆಯನ್ನು ಖಾಲಿಯಾಗಿ ಇಡಬೇಡಿ

ಹೊಟ್ಟೆ ಖಾಲಿಯಾಗಿ ಇದ್ದಾಗ ಆಹಾರಕ್ಕೆ ತಿರಸ್ಕಾರವು ಹೆಚ್ಚಾಗುತ್ತದೆ ಅಥವಾ ತಿನ್ನಲು ಹಸಿವಿನಿಂದ ತನಕ ನೀವು ನಿರೀಕ್ಷಿಸಿದಾಗ ಕಂಡುಬರುತ್ತದೆ. ಗಿಡಮೂಲಿಕೆ, ಚಹಾ ಮತ್ತು ಇನ್ನಿತರ ಆಹಾರಗಳಿಂದ ಹೊಟ್ಟೆಯನ್ನು ನಿರತವಾಗಿರಿಸಿಕೊಳ್ಳಿ. ನೀವು ಬೀಜಗಳು, ಹಣ್ಣುಗಳು ಮತ್ತು ಉಪ್ಪಿನಕಾಯಿಗಳಂತಹ ಕಚ್ಚಿ ತಿನ್ನುವುದರ ಮೂಲಕ ಆಹ್ಲಾದಕರ ಅನುಭವವನ್ನು ಹೊಂದಬಹುದು.

ಇತರ ಮಾರ್ಗ

ಇತರ ಮಾರ್ಗ

ಮೇಲಿನ ಯಾವುದೇ ಸುಳಿವುಗಳು ನಿಮಗೆ ಸಹಾಯ ಮಾಡದಿದ್ದರೆ ನೀವು ತಿರಸ್ಕರಿಸುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿಮಗೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಿಮ್ಮ ವೈದ್ಯರು ಅದರ ಬಗ್ಗೆ ತಿಳಿದುಕೊಳ್ಳಬೇಕಾಗಬಹುದು. ನಿಮ್ಮ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ನೀವು ತೆಗೆದುಕೊಳ್ಳಬೇಕಾದ ಪೂರಕಗಳ ಬಗ್ಗೆ ನಿಮ್ಮ ವೈದ್ಯರು ನಿಮಗೆ ಸಲಹೆ ನೀಡುತ್ತಾರೆ. ನೀವು ಈಗಾಗಲೇ ಪೂರ್ವ-ಪ್ರಸವ ಜೀವಸತ್ವಗಳು, ನಿಯಾಸಿನ್ ಮಾತ್ರೆಗಳು, ಕಬ್ಬಿಣ ಮತ್ತು ಕ್ಯಾಲ್ಸಿಯಂಗಳನ್ನು ತೆಗೆದುಕೊಳ್ಳಬಹುದು. ಇವುಗಳ ಜೊತೆಯಲ್ಲಿ, ನಿಮ್ಮ ವೈದ್ಯರು ಇತರ ಅಗತ್ಯವಾದ ಪೂರಕಗಳನ್ನು ಕೂಡ ತೆಗೆದುಕೊಳ್ಳಲು ಸಲಹೆ ನೀಡುವರು.

English summary

Why You Start Disliking Your Favourite Food During Pregnancy?

Women are known to develop aversion to foods that they consumed on a daily basis. They might even hate food that they previously loved. Most women experience pregnancy food aversions during the first trimester. But the case may differ from woman to woman and pregnancy to pregnancy.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more