Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕ್ಯಾನ್ಸರ್ ಬಂದರೆ ಮಹಿಳೆಯರು ಗರ್ಭಧರಿಸುವ ಸಾಧ್ಯತೆ ತುಂಬಾ ಕಡಿಮೆ!
ಕ್ಯಾನ್ಸರ್ ಎನ್ನುವುದು ಸಂಪೂರ್ಣ ಜೀವನವನ್ನೇ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಕಂಡುಕೊಂಡಿವೆ. ಇದರಿಂದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬಹುದು. ಚಿಕಿತ್ಸೆ ವೇಳೆ ದೇಹವು ಹಲವಾರು ರೀತಿಯಿಂದ ಬದಲಾವಣೆಗೆ ಗುರಿಯಾಗುವುದು. ಆದರೆ ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಮತ್ತೆ ಸಾಮಾನ್ಯ ಜೀವನ ನಡೆಸಬಹುದು. ಆದರೆ ಕ್ಯಾನ್ಸರ್‌ನಿಂದ ಪರಿಹಾರ ಪಡೆದ ಬಳಿಕ ಗರ್ಭಧಾರಣೆ ಮಾಡಬಹುದೇ ಎನ್ನುವ ಪ್ರಶ್ನೆಯಿದೆ.
ಕ್ಯಾನ್ಸರ್ ವಿರುದ್ಧ ಹೋರಾಡಿ ಅದರಿಂದ ಹೊರಬರುವ ಮಹಿಳೆಯರು ಗರ್ಭಧರಿಸುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಅಧ್ಯಯನಗಳು ಹೇಳಿವೆ. ಈ ಸುದ್ಧಿ ತುಂಬಾ ಅಚ್ಚರಿ ಮೂಡಿಸುತ್ತದೆ. ಆದರೆ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆ ಪಡೆದ ಬಳಿಕ ಫಲವತ್ತತೆ ಕಡಿಮೆಯಾಗುತ್ತದೆಯಾ ಎನ್ನುವುದನ್ನು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ತಿಳಿಸಲಿದೆ....

ಕ್ಯಾನ್ಸರ್‌ನ ವಿಧಗಳು
ಎಲ್ಲಾ ರೀತಿಯ ಕ್ಯಾನ್ಸರ್‌ಗಳು ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆಯಾ? ಎಂಬ ಪ್ರಶ್ನೆಗೆ ಹೌದು ಎನ್ನುತ್ತದೆ ಅಧ್ಯಯನಗಳು. ಗರ್ಭಧರಿಸುವ ಮೊದಲು ಕ್ಯಾನ್ಸರ್‌ಗೆ ತುತ್ತಾಗುವ ಮಹಿಳೆಯರು ಇದರಿಂದ ಚೇತರಿಸಿಕೊಂಡರೂ ಮತ್ತೆ ಗರ್ಭಧರಿಸುವ ಸಾಧ್ಯತೆ ತುಂಬಾ ಕಡಿಮೆ ಎಂದು ಅಧ್ಯಯನಗಳು ಹೇಳಿವೆ.

ಫಲವತ್ತತೆಯ ಸಂರಕ್ಷಣೆ
ಫಲವತ್ತತೆಯನ್ನು ಸಂರಕ್ಷಿಸಲು ಹೊಸ ಅಧ್ಯಯನಗಳು ಹೆಚ್ಚಿನ ಗಮನಹರಿಸುತ್ತಾ ಇದೆ ಮತ್ತು ಫಲವತ್ತತೆ ಉಳಿಸಿಕೊಳ್ಳಲು ಹಲವಾರು ಹೊಸ ವಿಧಾನಗಳನ್ನು ಹುಡುಕಲಾಗುತ್ತಿದೆ.

ಅಪಾಯದ ಸಾಧ್ಯತೆ
ಕ್ಯಾನ್ಸರ್ ನಿಂದಾಗಿ ಸುಮಾರು 50ರಷ್ಟು ಫಲವತ್ತತೆ ಕುಸಿತವಾಗುವುದು. ಕ್ಯಾನ್ಸರ್ ಮತ್ತು ಕ್ಯಾನ್ಸರ್ ನ ಚಿಕಿತ್ಸೆಯ ವಿಧಾನಗಳು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಫಲವತ್ತತೆಗೆ ಹಾನಿಯಾಗುವುದು.

ಕೀಮೋಥೆರಪಿ
ರೇಡಿಯೋಥೆರಪಿ ಮತ್ತು ಕೀಮೋಥೆರಪಿಯನ್ನು ದೇಹವು ಸಹಿಸಲು ತುಂಬಾ ಕಷ್ಟಪಡುತ್ತದೆ. ಇದರಿಂದ ಗರ್ಭಕೋಶ ಮತ್ತು ಅಂಡಾಶಯಗಳ ಮೇಲೆ ವಿವಿಧ ಹಂತಗಳಲ್ಲಿ ಹಲವಾರು ರೀತಿಯ ಪರಿಣಾಮ ಉಂಟಾಗುವುದು.

ಅಧ್ಯಯನ
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡು ಅದರಿಂದ ಹೊರಬಂದ ಸುಮಾರು 23 ಸಾವಿರ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದ ಬಳಿಕ ಈ ನಿರ್ಣಯಕ್ಕೆ ಬರಲಾಗಿದೆ.

ಮುಂದಿನ ಅಧ್ಯಯನ
ಇಂತಹ ಸಮಸ್ಯೆಯನ್ನು ಕಡಿಮೆ ಮಾಡಲು ಫಲವತ್ತತೆ ಸಂರಕ್ಷಿಸುವಂತಹ ಕೆಲಸ ಮಾಡಬೇಕಾಗಿದೆ. ಇದಕ್ಕೆ ವಿಜ್ಞಾನಿಗಳು ಯಾವುದಾದರೂ ವಿಧಾನ ಕಂಡುಕೊಳ್ಳಬೇಕು. ಹದಿಹರೆಯದ ಕ್ಯಾನ್ಸರ್ ಪೀಡಿತ ಮಹಿಳೆಯರ ಫಲವತ್ತೆ ಸಂರಕ್ಷಣೆಗೆ ಮಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಾ ಇದೆ ಎಂದು ಅಧ್ಯಯನಗಳು ಹೇಳಿವೆ.



Click it and Unblock the Notifications
