Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಣ್ಣನೆಯ ಹವೆಗೆ, ಸಾಥ್ ನೀಡುವ ಅಲರ್ಜಿಯ ಕಿರಿಕಿರಿ...
ನಾವು ಸೇವಿಸುವ ಆಹಾರ, ವಾಸಿಸುವ ವಾತಾವರಣ, ಜೀವನಶೈಲಿ ಹೀಗೆ ಅನೇಕ ಕಾರಣಗಳಿಗೆ ನಮ್ಮ ದೇಹವು ಪ್ರತಿಕ್ರಿಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವೊಂದು ಬಾರಿ ಅಸುರಕ್ಷಿತಗೊಂಡು ಅಲರ್ಜಿಗೆ ಕಾರಣವಾಗುತ್ತದೆ. ಅಲರ್ಜಿಯು ನಮ್ಮಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯ ಅಸಹಜ ಪ್ರತಿಕ್ರಿಯೆ. ವಿಶೇಷವಾಗಿ ಚಳಿಗಾಲದಲ್ಲಿ ಗರ್ಭಿಣಿಯರು ಅನೇಕ ರೀತಿಯ ಅಡ್ಡಪರಿಣಾಮಗಳಿಂದ ಅಪಾಯಕ್ಕೆ ತುತ್ತಾಗುವ ಸಂದರ್ಭಗಳು ಎದುರಾಗುತ್ತವೆ. ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆ, ರೋಗ ನಿರೋಧಕ ಶಕ್ತಿಯ ಕೊರತೆಯು ನಿಮಗೆ ಹೆಚ್ಚು ಪರಿಣಾಮವನ್ನು ಉಂಟು ಮಾಡಿ ಸೀನು ಬರುವಿಕೆ, ನವೆಯಾಗುವ ಕಣ್ಣುಗಳು ಮತ್ತು ಉಬ್ಬಸದಂತಹ ತೊಂದರೆಗಳಿಂದ ಬಳಲಬೇಕಾಗುತ್ತದೆ.
ಈ ಸಂದರ್ಭದಲ್ಲಿ ಎಲ್ಲದಕ್ಕೂ ಔಷಧಗಳನ್ನು ಬಳಸುವುದು ಹೆಚ್ಚು ಸೂಕ್ತವಲ್ಲ. ಈ ಪರಿಣಾಮಗಳು ಉಂಟಾಗಲು ಕಾರಣವಾಗುವ ಅಂಶಗಳನ್ನು ಮೊದಲು ಪತ್ತೆಹಚ್ಚಿ ಇವುಗಳನ್ನು ದೂರವಿಟ್ಟರೆ ಸಾಕು, ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ ಹಾಗೆಯೇ. ಈ ರೀತಿಯ ಸಮಸ್ಯೆಗಳಿಗೆ ಕೆಲವು ಪರಿಹಾರಗಳ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ...

ಧೂಮಪಾನ ಮಾಡುವವರಿಂದ ದೂರವಿರಿ
ನಮಗೆಲ್ಲರಿಗೂ ತಿಳಿದ ಹಾಗೆ ಧೂಮಪಾನದಿಂದ ಕ್ಯಾನ್ಸರ್ ಸಂಭವಿಸುತ್ತದೆ. ಆದರೆ ಪರೋಕ್ಷವಾದ ಧೂಮಪಾನ ಅಥವಾ ಹವ್ಯಾಸಿ ಧೂಮಪಾನವೂ ಸಹ ಹೆಚ್ಚು ಅಪಾಯವೆಂದು ಹೆಚ್ಚಿನವರಿಗೆ ತಿಳಿದಿಲ್ಲ. ವಿಶೇಷವಾಗಿ ಗರ್ಭಿಣಿಯರು ಈ ವಿಷಯವಾಗಿ ಹೆಚ್ಚು ಜಾಗೃತರಾಗಿರಬೇಕು. ಧೂಮಪಾನವು ಕೇವಲ ತಾಯಿಯ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡದೇ ಭ್ರೂಣದ ಬೆಳವಣಿಗೆಗೂ ಸಹ ತೊಡಕನ್ನುಂಟು ಮಾಡುತ್ತದೆ. ಅಲರ್ಜಿ ನಿವಾರಣೆಗೆ ಇಲ್ಲಿವೆ ಸೂಪರ್ ಮನೆಮದ್ದು
ಪ್ರಚೋದನಕಾರಿ ಅಂಶವನ್ನು ಮೊದಲು ಕಂಡುಹಿಡಿಯಿರಿ
ಅಲರ್ಜಿಯನ್ನು ತಡೆಯಲು ಮೊದಲು ಅದಕ್ಕೆ ಕಾರಣವಾಗುವುದನ್ನು ತಡೆಯಿರಿ. ಅಲರ್ಜಿಯ ಪ್ರಕ್ರಿಯೆಯನ್ನು ಸುಗಮಗೊಳಿಸುವ ಪ್ರಚೋದಕ ಸಾಧನವನ್ನು ಕಂಡುಹಿಡಿಯಿರಿ. ಸಿಗರೇಟಿನ ಹೊಗೆ, ಧೂಳು, ಪರಾಗ, ಕೆಲವು ಆಹಾರಗಳು, ಸಾಕು ಪ್ರಾಣಿಗಳು ಇವೆಲ್ಲವೂ ಅರ್ಲಜಿಯ ಪ್ರಚೋದಕಗಳೇ. ನಿಮಗೆ ನಿಜವಾದ ಕಾರಣ ಕಂಡುಹಿಡಿಯಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಅಲರ್ಜಿ ಚಿಕಿತ್ಸೆಯನ್ನು ಮಾಡಿಸಿ.
ರಾಸಾಯನಿಕ ವಸ್ತುಗಳಿಂದ ದೂರವಿರಿ
ನೀವು ರಾಸಾಯನಿಕ ವಸ್ತುಗಳಾದ ಪೇಂಟ್ ಮತ್ತು ತಿನ್ನರ್ ಗಳನ್ನು ಮೂಸಿ ಅದರ ವಾಸನೆಯನ್ನು ತೆಗೆದುಕೊಂಡರೆ, ನಿಮ್ಮ ದೇಹವು ಅದಕ್ಕೆ ಪ್ರತಿಕ್ರಯಿಸಿ ಚರ್ಮದ ನವೆ, ತೇವಗೊಳುವ ಕಣ್ಣುಗಳು ಮತ್ತು ಸೀನು ಬರುವ ಸಂಭವವಿರುತ್ತದೆ. ಆದ್ದರಿಂದ ಹೊಸದಾಗಿ ಬಣ್ಣ ಬಳಿದ ಸ್ಥಳಕ್ಕೆ ಅಥವಾ ಇವುಗಳನ್ನು ತಯಾರಿಸುವ ಪ್ರದೇಶಗಳಿಗೆ ಹೋಗದಿರಿ.
ಅಲರ್ಜಿ ನಿವಾರಿಸುವ ಔಷಧದ ಬಳಕೆ
ಆಂಟಿಹಿಸ್ಟಾಮೈನ್ಸ್ ಎಂಬ ಔಷಧವು ಹಿಸ್ಟಾಮೈನ್ ಪ್ರಮಾಣವನ್ನು ನಿಯಂತ್ರಿಸಿ ನಿಮ್ಮ ರಕ್ತದಲ್ಲಿ ಅಲರ್ಜಿಗೆ ಕಾರಣವಾಗುವ ಅಂಶವನ್ನು ಹೋಗಲಾಡಿಸುತ್ತದೆ. ಇದು ಹೆಚ್ಚು ಸುರಕ್ಷಿತವಾಗಿದ್ದರೂ ಸಹ ಗರ್ಭಿಣಿಯರು ಇದನ್ನು ಉಪಯೋಗಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅವಶ್ಯಕ. ಏಕೆಂದರೆ ಇದೂ ಸಹ ಆಯಾಸ ಮತ್ತು ಬಳಲುವಿಕೆ ಸಂಭವಿಸಲು ಕಾರಣವಾಗುತ್ತದೆ.



Click it and Unblock the Notifications

