Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಿಣಿಯರೇ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಇರಲಿ ಎಚ್ಚರ!
ಪ್ರಕೃತಿ ದತ್ತವಾದ ಕೊಡುಗೆಯಾಗಿರುವ ತಾಯ್ತನವೆಂಬುದು ಹೆಣ್ಣಿಗೆ ವರವಾಗಿದೆ. ಈ ಸಮಯಗಳಲ್ಲಿ ಆಕೆ ತನ್ನ ದೇಹದ ಕಡೆಗೆ ಆರೈಕೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ತನ್ನೊಂದಿಗೆ ಇನ್ನೊಂದು ಜೀವವನ್ನು ಹೊರುವ ಒಡಲು ಕೆಟ್ಟದ್ದು ಒಳ್ಳೆಯದರ ಬಗೆಗೆ ಯೋಚಿಸಬೇಕು. ನಿಮಗೆ ಹೆಚ್ಚು ತ್ರಾಸನ್ನು ನೀಡುವ ಆಹಾರವನ್ನು ಸೇವಿಸಲೇಬಾರದು ಅಂತೆಯೇ ಬಾಯಿ ರುಚಿಯೆಂದು ಸಿಕ್ಕಸಿಕ್ಕದ್ದನ್ನೆಲ್ಲಾ ತುರುಕಬಾರದು ಇದರಿಂದ ನಂತರ ಉಂಟಾಗುವ ಸಮಸ್ಯೆಯನ್ನು ನೀವೇ ಅನುಭವಿಸಬೇಕಾಗುತ್ತದೆ.
ಅಂತೆಯೇ ಮಳೆಗಾಲದಲ್ಲಿಯೂ ಕೂಡ ಸಾಧ್ಯವಾದಷ್ಟು ಮುನ್ನೆಚ್ಚರಿಕೆಯನ್ನು ಪಾಲಿಸುವುದು ಅಷ್ಟೇ ಮುಖ್ಯ. ಗರ್ಭಿಣಿಯರು ಸೇವಿಸುವ ಆಹಾರವೇ ಒಡಲ ಕಂದನಿಗೂ ಆಹಾರವಾಗಿರುವುದರಿಂದ ಆಹಾರದ ಮೂಲಕ ಅನೈಚ್ಛಿಕವಾಗಿ ಸೇರುವ ವಿಷಕಾರಿ ಪದಾರ್ಥಗಳು ಕಂದನ ಹೊಟ್ಟೆಯನ್ನೂ ಸೇರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಸೇವಿಸುವ ಆಹಾರದ ಕುರಿತು ಕೊಂಚ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ.

ರಸ್ತೆ ಬದಿಯ ಆಹಾರದಿಂದ ಆದಷ್ಟು ದೂರವಿರಿ
ನೀವು ಆಹಾರವನ್ನು ಸೇವಿಸುವ ಪರಿಸರವು ಶುಚಿಯಾಗಿ ಮತ್ತು ಆರೋಗ್ಯಕರವಾಗಿದೆಯೇ ಎಂಬುದನ್ನು ಗಮನಿಸಿ. ತೆರೆದಿಟ್ಟ ಆಹಾರವನ್ನು ಯಾವುದೇ ಕಾರಣಕ್ಕು ಸೇವಿಸಲು ಹೋಗಬೇಡಿ. ಅದರಲ್ಲೂ ರಸ್ತೆ ಬದಿಯ ವ್ಯಾಪಾರಿಗಳ ಬಳಿ ಬೇಡವೇ ಬೇಡ. ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದನ್ನು ಮಾತ್ರ ಮರೆಯಬೇಡಿ.

ಮೀನಿನ ರುಚಿಗೆ ಮರುಳಾಗದಿರಿ
ಸಾಮಾನ್ಯವಾಗಿ ಕಾರ್ಖಾನೆಗಳ ತ್ಯಾಜ್ಯ ವಸ್ತುಗಳಿಂದ ಪಾದರಸವು ಕಡಲನ್ನು ಸೇರುತ್ತದೆ. ಹೀಗೆ ಸೇರಿದ ಪಾದರಸವು ಮೀಥೈಲ್ ಮರ್ಕುರಿಯಾಗಿ ಪರಿವರ್ತನೆಗೊಳ್ಳುತ್ತದೆ. ಈ ಅಪಾಯಕಾರಿ ಸಂಯುಕ್ತವು ಆ ಕಲುಷಿತ ನೀರಿನಲ್ಲಿರುವ ಮೀನುಗಳನ್ನು ಸೇರಿ ಅದರ ಮಾಂಸದೊಡನೆ ಒಂದುಗೂಡುತ್ತದೆ. ಕೆಲವೊಮ್ಮೆ ಮೀನನ್ನು ಸರಿಯಾಗಿ ಬೇಯಿಸಿದ ನಂತರವೂ ಅಲ್ಲೇ ಉಳಿಯುತ್ತದೆ.

ಎಣ್ಣೆ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ
ದಿನನಿತ್ಯ ಆಹಾರಕ್ರಮದಲ್ಲಿ ತುಪ್ಪ, ಆಲೀವ್ ಎಣ್ಣೆ, ಜೋಳದ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಹಾರ ತಯಾರಿಸಲು ಬಳಸಿ. ಇವು ಲಘು ಎಣ್ಣೆಗಳು ಆರೋಗ್ಯಕ್ಕೆ ಉತ್ತಮ. ಸಾಸಿವೆ ಎಣ್ಣೆ, ಬೆಣ್ಣೆ, ಕಡಲೆ ಕಾಳು ಎಣ್ಣೆ ಮತ್ತು ಇನ್ನಿತರ ಭಾರವಾದ ಎಣ್ಣೆಗಳನ್ನು ಬಳಸಬೇಡಿ. ಈ ಎಣ್ಣೆಗಳು ಉಷ್ಣಕಾರಕ ಗುಣಗಳನ್ನು ಹೊಂದಿರುತ್ತವೆ.

ಮೊಟ್ಟೆಯಿಂದ ದೂರವಿರಿ
ಮೊಟ್ಟೆ ಸಾಮಾನ್ಯವಾಗಿ ಗರ್ಭಿಣಿಯರು ಮೊಟ್ಟೆಯನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಹಸಿ ಅಥವಾ ಅರೆಬೆಂದ ಮೊಟ್ಟೆಯು ಗರ್ಭಿಣಿ ಮಹಿಳೆಯರು ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಸೇರಲ್ಪಡುತ್ತದೆ. ಹಸಿ ಮೊಟ್ಟೆ ಹಾಕಿರುವಂತಹ ಪದಾರ್ಥಗಳಾದ ಕುಕ್ಕಿ ಡೌಗ್, ಕೇಕ್, ಮನೆಯಲ್ಲೇ ತಯಾರಿಸಿದ ಸಾಸ್ ಇತ್ಯಾದಿಗಳಿಂದ ಆದಷ್ಟು ದೂರವಿರುವುದೇ ಉತ್ತಮ.

ಬೆಳ್ಳುಳ್ಳಿಯನ್ನು ಸೇವಿಸಿ
ಸಾಮಾನ್ಯವಾಗಿ ಮಳೆಗಾಲದಲ್ಲಿ ಶೀತ, ಜ್ವರ, ಫ್ಲೂ, ಕೆಮ್ಮು ಮೊದಲಾದವು ಸುಲಭವಾಗಿ ಗರ್ಭಿಣಿಗೆ ಆವರಿಸುತ್ತವೆ. ಇದಕ್ಕೆ ಕುಂಠಿತಗೊಂಡ ರೋಗ ನಿರೋಧಕ ಶಕ್ತಿ ಕಾರಣ. ಆದರೆ ಬೆಳ್ಳುಳ್ಳಿಯ ಸೇವನೆ ಈ ಶಕ್ತಿ ಕುಂಠಿತಗೊಳ್ಳದಂತೆ ತಡೆಯುತ್ತದೆ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಶೀತ, ಪ್ಲೂ ಜ್ವರ, ಕೆಮ್ಮು ನೆಗಡಿ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ.

ದಿನನಿತ್ಯ ಎಳನೀರು ಕುಡಿಯಿರಿ
ಗರ್ಭಿಣಿಯಾದ ಮೊದಲ ಮೂರು ತಿಂಗಳಿನಲ್ಲಿ ಎಳನೀರನ್ನು ಸೇವಿಸುವುದರಿಂದ ಮುಂಜಾನೆ ಮಂಕುತನ, ಮಲಬದ್ಧತೆ, ಎದೆ ಉರಿ, ಸುಸ್ತು, ತಲೆ ಸುತ್ತುವಿಕೆ, ನಿರ್ಜಲೀಕರಣವನ್ನು ತಡೆಯಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಇದು ನಮ್ಮ ದೇಹದಲ್ಲಿ ಕಳೆದು ಹೋಗಿರುವ ಉಪ್ಪಿನಂಶವನ್ನು ಸಹ ಮರು ತುಂಬಿಸುತ್ತದೆಯಂತೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಎಳನೀರು, ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಮೂತ್ರಾನಾಳದ ಇನ್‌ಫೆಕ್ಷನ್ ಅನ್ನು ತಡೆಯುತ್ತದೆ ಮತ್ತು ಅಧಿಕ ರಕ್ತ ಒತ್ತಡವನ್ನು ಕಡಿಮೆ ಮಾಡುತ್ತದೆ.



Click it and Unblock the Notifications
