Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜಿಡ್ಡು ಕೂದಲಿನ ಸಮಸ್ಯೆಯೇ? ಚಿಂತೆ ಬಿಡಿ, ಮನೆಮದ್ದು ಅನುಸರಿಸಿ
ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದೆ. ತನ್ನೊಳಗೆ ಇನ್ನೊಂದು ಜೀವವನ್ನು ಇಟ್ಟುಕೊಂಡು ತಾಯ್ತನದ ಸುಖವನ್ನು ಅನುಭವಿಸುವ ಹೆಣ್ಣು ಸಂಭ್ರಮದಿಂದ ತನ್ನ ಪುಟ್ಟ ಕಂದಮ್ಮನ ಆಗಮನಕ್ಕೆ ಸಿದ್ಧಳಾಗಿರುತ್ತಾಳೆ. ಈ ಸಮಯದಲ್ಲಿ ಉಂಟಾಗುವ ನೋವು ಎಲ್ಲವನ್ನೂ ಆ ಪುಟ್ಟ ಮಗುವಿನ ಮುಖವನ್ನು ನೋಡಿ ಆಕೆ ಮರೆಯುತ್ತಾಳೆ. ಮತ್ತು ಆ ಕಂದನೇ ತನ್ನ ಸರ್ವಸ್ವ ಎಂಬುದಾಗಿ ಆಕೆ ಭಾವಿಸುತ್ತಾಳೆ.
ವಾಂತಿ, ತಲೆಸುತ್ತು, ಹೊಟ್ಟೆ ತೊಳೆಸುವಿಕೆ, ಸುಸ್ತು ಇದರೊಂದಿಗೆ ದೈಹಿಕವಾಗಿ ಕೆಲವೊಂದು ಸಂಕಟಗಳನ್ನು ಗರ್ಭಿಣಿ ಈ ಸಮಯದಲ್ಲಿ ಅನುಭವಿಸುತ್ತಿರುತ್ತಾಳೆ. ಇದರೊಂದಿಗೆ ತಲೆಗೂದಲು ಉದುರುವಿಕೆ ಮತ್ತು ಎಣ್ಣೆಯುಕ್ತ ಕೂದಲಿನ ಸಮಸ್ಯೆಯನ್ನು ಆಕೆ ಸಾಮಾನ್ಯವಾಗಿ ಅನುಭವಿಸುತ್ತಿರುತ್ತಾಳೆ. ದೇಹದಲ್ಲಿರುವ ರಾಸಾಯನಿಕ ಅಸಮತೋಲನದಿಂದಾಗಿ ಕೂದಲು ಈ ರೀತಿಯ ಬದಲಾವಣೆಯನ್ನು ಗರ್ಭಾವಸ್ಥೆಯಲ್ಲಿ ಕಾಣುತ್ತದೆ. ಮಗುವಿನ ಜನನದ ನಂತರ ತಲೆಗೂದಲು ಪುನಃ ಮೊದಲಿನ ರೂಪಕ್ಕೆ ಮರಳುತ್ತದೆ. ಹೆರಿಗೆಯ ನಂತರ ಕೂದಲುದುರುವ ಸಮಸ್ಯೆ ಕಾಡುತ್ತಿದೆಯೇ?
ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ಏರಿಳಿತದಿಂದಾಗಿ ಕೂದಲಿನ ಕಿರುಚೀಲಗಳಲ್ಲಿ ಮೇದೋಗ್ರಂಥಿಗಳ ಸ್ರಾವ ಹೆಚ್ಚಾಗಿರುತ್ತದೆ. ಇದರ ಫಲಿತಾಂಶವಾಗಿ ಕೂದಲು ಎಣ್ಣೆಪಸೆಯಿಂದ ಕೂಡಿ ಜಿಡ್ಡು ಜಿಡ್ಡಾಗಿ ತೋರುತ್ತದೆ. ಆದರೆ ಈ ಸಮಸ್ಯೆಯನ್ನು ದೂರಮಾಡಲು ಕೆಲವೊಂದು ಸರಳ ಪರಿಹಾರೋಪಾಯಗಳಿದ್ದು ಅವುಗಳನ್ನು ಅನುಸರಿಸಿದರೆ ಕೂದಲಿನ ಜಿಡ್ಡನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ.
ಆರೋಗ್ಯಯು ಡಯೆಟ್ಗೆ ಹೊಂದಿಕೊಳ್ಳುವುದು, ಐರನ್ ಮತ್ತು ವಿಟಮಿನ್ಗಳು ಹೇರಳವಾಗಿರುವ ಆಹಾರಗಳನ್ನು ಸೇವಿಸುವುದು ಮೊದಲಾದ ವಿಧಾನಗಳನ್ನು ಅನುಸರಿಸುವುದರಿಂದ ತಲೆಬುರುಡೆಯ ಜಿಡ್ಡನ್ನು ದೂರಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ.

ಆಗಾಗ್ಗೆ ಕೂದಲನ್ನು ತೊಳೆದುಕೊಳ್ಳದಿರಿ
ಕೂದಲನ್ನು ಆಗಾಗ್ಗೆ ತೊಳೆದುಕೊಳ್ಳುವುದು ಪರಿಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಕೊಂಡೊಯ್ಯಬಹುದು. ತಲೆಬುರುಡೆಯಲ್ಲಿ ಹೆಚ್ಚಿನ ಜಿಡ್ಡನ್ನು ಇದು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಕೂದಲನ್ನು ಆಗಾಗ್ಗೆ ತೊಳೆದುಕೊಳ್ಳದಿರಿ. ಮೃದು ಶಾಂಪೂವಿನಿಂದ ಕೂದಲನ್ನು ವಾರಕ್ಕೊಮ್ಮೆ ತೊಳೆದುಕೊಳ್ಳಿ.
ಕಂಡೀಷನರ್ ಬಳಕೆ ಬೇಡ
ಕೂದಲನ್ನು ಮಾಯಿಶ್ಚರೈಸ್ ಮಾಡಲು ಕಂಡೀಷನ್ ಬಳಕೆಯನ್ನು ಮಾಡಲಾಗುತ್ತದೆ. ಆದರೆ ನಿಮ್ಮ ಕೂದಲು ಈಗಾಗಲೇ ಜಿಡ್ಡಿನಂಶದಿಂದ ಕೂಡಿದೆ ಎಂದಾದಲ್ಲಿ, ಕಂಡೀಷನಿಂಗ್ ಬಳಕೆಯನ್ನು ಮಾಡದಿರಿ. ಗರ್ಭಾವಸ್ಥೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮವಾಗಿದೆ.
ಒತ್ತಡ ಮತ್ತು ಚಿಂತೆಯನ್ನು ತ್ಯಜಿಸಿ
ಹಾರ್ಮೋನುಗಳಲ್ಲದೆ ಒತ್ತಡ ಮತ್ತು ಚಿಂತೆ ಕೂಡ ಕೂದಲಿನ ಪ್ರಗತಿಗೆ ಮಾರಕವಾಗಿದೆ. ಒತ್ತಡವು ಕೋರ್ಟಿಸಲ್ ಹಾರ್ಮೋನು ಅನ್ನು ಬಿಡುಗಡೆ ಮಾಡುವುದರಿಂದ ಇದು ಕೂದಲಿಗೆ ಹೆಚ್ಚು ಜಿಡ್ಡನ್ನು ಹೊರಬಿಡುತ್ತದೆ. ಇದರಿಂದ ಕೂಡ ನಿಮ್ಮ ಕೂದಲು ಎಣ್ಣೆ ಎಣ್ಣೆಯಾಗಿ ತೋರುತ್ತದೆ.
ಆರೋಗ್ಯಯುತ ಡಯೆಟ್
ನಿಮ್ಮ ದೇಹಕ್ಕೆ ನೀವೇನು ತೆಗೆದುಕೊಳ್ಳುತ್ತೀರಿ ಎಂಬುದು ಕೂಡ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯಯುತ ಹಣ್ಣುಗಳು ಮತ್ತು ತರಕಾರಿಗಳಿಗೆ ಒಗ್ಗಿಕೊಳ್ಳಿ. ಐರನ್ ಮತ್ತು ವಿಟಮಿನ್ಗಳು ಅಧಿಕವಾಗಿರುವ ಆಹಾರಗಳನ್ನು ಸೇವಿಸಿ. ಕೂದಲಿಗೆ ಹೆಚ್ಚಿನ ಪೋಷಣೆಯನ್ನು ಇವುಗಳು ಒದಗಿಸುತ್ತವೆ ಮತ್ತು ಕೂದಲುದುರುವಿಕೆಯನ್ನು ತಡೆಗಟ್ಟಿ ಕೂದಲು ತೆಳ್ಳಗಾಗುವುದನ್ನು ತಪ್ಪಿಸುತ್ತವೆ.
ಟೊಮೇಟೊ ಜ್ಯೂಸ್
ಕೂದಲಿನ ಜಿಡ್ಡಿನಂಶವನ್ನು ಹೊರತೆಗೆಯಲು ಟೊಮೇಟೊ ಸಹಕಾರಿ. ಮುಲ್ತಾನಿ ಮಿಟ್ಟಿಯೊಂದಿಗೆ ಟೊಮೇಟೊ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದನ್ನು ತಲೆಗೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ಕೂದಲು ತೊಳೆದುಕೊಳ್ಳಿ. ಕೂದಲಿನ ಜಿಡ್ಡಿನಂಶವನ್ನು ದೂರಮಾಡಲು ಈ ಪರಿಹಾರ ಅತ್ಯುತ್ತಮವಾಗಿದೆ.



Click it and Unblock the Notifications

