Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಗರ್ಭಿಣಿಯರೇ, ಆರೋಗ್ಯದ ಕಾಳಜಿ ಅಂದುಕೊಂಡಷ್ಟು ಸುಲಭವಲ್ಲ
ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನಾವು ಒಂದಲ್ಲಾ ಒಂದು ರೀತಿಯ ಕಸರತ್ತು ಮಾಡುತ್ತಲೇ ಇರುತ್ತೇವೆ...ಅದಕ್ಕಾಗಿ ಹಲವಾರು ವ್ಯಾಯಮಗಳು, ಡಯಟ್, ಇತ್ಯಾದಿ ಇತ್ಯಾದಿಗಳ ಮೊರೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಗರ್ಭಿಣಿಯಾದಾಗ ಆರೋಗ್ಯಕ್ಕಾಗಿ ಮಾಡುವ ಎಲ್ಲಾ, ನೀತಿ ನಿಯಮಗಳು ಕೂಡ ವೈದ್ಯರನ್ನು ಕೇಳಿ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಗರ್ಭಿಣಿಯರು ಮಾಡಬಾರದ 10 ಕಾರ್ಯಗಳು
ನೀವು ಸೇವಿಸಬೇಕಾದ ಆಹಾರ, ಬಳಸಬೇಕಾದ ಉತ್ಪನ್ನಗಳು, ದೈನಂದಿನ ಚಟುವಟಿಕೆಗಳು ಮತ್ತು ವ್ಯಾಯಾಮವನ್ನು ಸಹ ನಿಮ್ಮ ವೈದ್ಯರ ಅನುಮೋದನೆಯ ಮೇರೆಗೆ ಸೇವಿಸಬೇಕಾಗಿ ಬರುತ್ತದೆ. ಆದರೆ ಕೆಲವೊಮ್ಮೆ ಗಡಿಬಿಡಿಯ ಜೀವನ ಶೈಲಿಯ ಮಧ್ಯೆ ಇಂತಹ ಕೆಲವು ಸಣ್ಣ-ಪುಟ್ಟ ವಿಚಾರಗಳನ್ನು ವೈದ್ಯರ ಬಳಿ ನೀವೇ ಕೇಳುವುದನ್ನು ಮರೆಯಬಹುದು ಅಥವಾ ವೈದ್ಯರು ಹೇಳಲು ಮರೆಯಬಹುದು. ಅದಕ್ಕಾಗಿ ನಾವು ಇಂದು ಗರ್ಭಿಣಿಯರು ಮಾಡಲೇ ಬಾರದಂತಹ ಕೆಲವೊಂದು ಕೆಲಸಗಳ ಪಟ್ಟಿಯನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ, ಅವು ಯಾವುದು ಎಂಬುದನ್ನು ಮುಂದೆ ಓದಿ... ಗರ್ಭಿಣಿಯರೇ ವೈದ್ಯರಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಲು ಮುಚ್ಚುಮರೆ ಯಾಕೆ?

ಹೊಟ್ಟೆಯನ್ನು ಬ್ಲೀಚ್ ಮಾಡಿಕೊಳ್ಳುವುದು
ಮುಖದ ಮೇಲೆ ಮತ್ತು ದೇಹದ ಇತರೆ ಭಾಗದ ಮೇಲೆ ಬ್ಲೀಚ್ ಮಾಡಿಕೊಳ್ಳುವುದು ಸರಿ, ಆದರೆ ನಿಮ್ಮ ಹೊಟ್ಟೆಯ ಮೇಲೆ ಮಾತ್ರ ಬ್ಲೀಚ್ ಮಾಡಿಕೊಳ್ಳಲು ಹೋಗಬಾರದು ಎಂದು ಪ್ರಸೂತಿ ತಜ್ಞರು ಸಲಹೆ ನೀಡುತ್ತಾರೆ, ಅಲ್ಲದೆ ಬ್ಲೀಚ್ ಅನ್ನು ಬಳಸುವಾಗ ಯಾವಾಗಲು ಸ್ವಾಭಾವಿಕವಾದ ಬ್ಲೀಚ್ ಅನ್ನೆ ಬಳಸಿ, ಇಲ್ಲವಾದಲ್ಲಿ ಅದರ ಹಿಂಬದಿಯಲ್ಲಿ ಅಥವಾ ಆ ಬ್ಲೀಚ್ ಜೊತೆಗೆ ನೀಡಿರುವ ಕೈಪಿಡಿಯಲ್ಲಿನ ಸೂಚನೆಗಳನ್ನು ಓದಿಕೊಂಡು ಕನಿಷ್ಠ ಪ್ರಮಾಣದಲ್ಲಿ ಬಳಸಿ.

ಗ್ರೀನ್ ಟೀ ಸೇವಿಸಬೇಡಿ
ಗರ್ಭಿಣಿಯಾಗಿರುವಾಗ ಯಾವುದೇ ಕಾರಣಕ್ಕು ಕೆಫಿನ್ ಸೇವಿಸುವುದು ಒಳ್ಳೆಯದಲ್ಲ. ಗ್ರೀನ್ ಟೀಯಲ್ಲಿ ಸಹ ಈ ಅಂಶಗಳು ಅಲ್ಪ ಪ್ರಮಾಣದಲ್ಲಿ ಇರುತ್ತವೆ. ಗ್ರೀನ್ ಟೀಯು ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಗರ್ಭಿಣಿಯರಿಗೆ ಮೊದಲೇ ಜೀರ್ಣಕ್ರಿಯೆ ಹೆಚ್ಚಿನ ವೇಗದಲ್ಲಿ ನಡೆಯುವಾಗ ಗ್ರೀನ್ ಟೀ ಸೇವನೆಯು ಅದನ್ನು ಇನ್ನಷ್ಟು ಬಿಗಡಾಯಿಸಬಹುದು. ಗರ್ಭಿಣಿ ಮಹಿಳೆಯರು ಅಪ್ಪಿತಪ್ಪಿಯೂ ಹಸಿರು ಚಹಾ ಸೇವಿಸಬಾರದು!

ರೆಫ್ಲೆಕ್ಸಾಲಾಜಿ ಅಥವಾ ಮಸಾಜ್
ತರಬೇತಿ ಹೊಂದಿರದ ವ್ಯಕ್ತಿಗಳ ಕೈಯಲ್ಲಿ ಮಸಾಜ್ ಅಥವಾ ರೆಫ್ಲೆಕ್ಸಾಲಾಜಿ ಮಾಡಿಕೊಳ್ಳಲು ಹೋಗಬೇಡಿ. ಇದು ನಿಮ್ಮ ಗರ್ಭಾಶಯದ ಮೇಲೆ ಒತ್ತಡವನ್ನು ಹಾಕುತ್ತದೆ ಮತ್ತು ಅವಧಿ ಪೂರ್ವ ಹೆರಿಗೆಯಾಗಲು ಪ್ರೋತ್ಸಾಹ ನೀಡುತ್ತದೆ. ಆದ್ದರಿಂದ ಕಾಲುಗಳ ಮಸಾಜ್ ಅನ್ನು ಸಹ ಮಾಡಿಸಿಕೊಳ್ಳಲು ಹೋಗಬೇಡಿ. ಪಾದಗಳ ಆಯಕಟ್ಟಿನ ಸ್ಥಳದಲ್ಲಿ ತಪ್ಪಾಗಿ ಒತ್ತುವುದು ಅಥವಾ ಮಸಾಜ್ ಮಾಡುವುದರಿಂದ ಅವಧಿ ಪೂರ್ವ ಪ್ರಸವವಾಗುವ ಸಾಧ್ಯತೆಗಳು ಇರುತ್ತವೆ.

ಬಿಸಿ ನೀರು, ಸ್ಟೀಮ್ ಬಾತ್ ಗರ್ಭಿಣಿಯಾಗಿರುವಾಗ ಮಾಡಬೇಡಿ
ಅಧಿಕ ಉಷ್ಣಾಂಶವಿರುವ ಸೌನವು ಗರ್ಭಾಶಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇವು ಗರ್ಭದ ಮೇಲೆ ಅಧಿಕ ಉಷ್ಣಾಂಶವನ್ನು ಉಂಟು ಮಾಡುತ್ತವೆ. ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ, ಇದು ಗರ್ಭದಲ್ಲಿರುವ ಮಗುವಿನ ಸಾವಿಗೂ ಕಾರಣವಾಗುತ್ತದೆ. ಇದರ ಜೊತೆಗೆ ಹೊಟ್ಟೆಯ ಅಕ್ಕ-ಪಕ್ಕ ಬಿಸಿ ನೀರಿನ ಬ್ಯಾಗ್ ಸಹ ಇರಿಸಿಕೊಳ್ಳಬೇಡಿ. ಗರ್ಭಿಣಿಯರು ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದೇ?

ಚೈನೀಸ್ ಫುಡ್
ಚೈನೀಸ್ ಫುಡ್‌ನಲ್ಲಿ ಮೊನೊಸೋಡಿಯಂ ಗ್ಲುಟಮೇಟ್ ಅಥವಾ ಎಂಎಸ್‌ಜಿ ಎಂಬ ಅಂಶಗಳು ಇರುತ್ತವೆ. ಇವು ಗರ್ಭದಲ್ಲಿ ಬೆಳೆಯುವ ಮಗುವಿಗೆ ಹಾನಿಕಾರಕ ಎಂದು ದೀಪ್‌ಶಿಕಾ ಅಗರ್‌ವಾಲ್‌ರವರು ತಿಳಿಸುತ್ತಾರೆ. ಜೊತೆಗೆ ಈ ಆಹಾರ ಪದಾರ್ಥದಲ್ಲಿ ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಏಕೆಂದರೆ ಇದರಲ್ಲಿ ಉಪ್ಪು, ಮಸಾಲೆ ಮತ್ತು ಸೋಯಾ ಸಾಸ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇವು ನಿರ್ಜಲೀಕರಣ ಸಮಸ್ಯೆಯನ್ನು ತಂದೊಡ್ಡಬಹುದು.

ಆಬ್ ಕ್ರಂಚಸ್
ಹೊಟ್ಟೆಗೆ ವ್ಯಾಯಾಮ ನೀಡುವ ಅಥವಾ ಆಯಾಸವನ್ನು ನೀಡುವ ಯಾವುದೇ ಚಟುವಟಿಕೆ ಮಾಡಬೇಡಿ. ಅದರಲ್ಲೂ ಆಬ್ ಕ್ರಂಚಸ್ ಬೇಡವೇ ಬೇಡ. ಇವು ಹೊಟ್ಟೆಯ ಮೇಲೆ ಅಧಿಕ ಒತ್ತಡವನ್ನು ನೀಡುತ್ತವೆ. ನಿಮಗೆ ವ್ಯಾಯಾಮ ಮಾಡಲೇ ಬೇಕಾದಲ್ಲಿ ನಿಮ್ಮ ವೈದ್ಯರನ್ನು ಕೇಳಿ, ಅವರ ಸಲಹೆಯ ಪ್ರಕಾರ ವ್ಯಾಯಾಮಗಳನ್ನು ಮಾಡಿ. ನಿಮ್ಮ ವ್ಯಾಯಾಮದಲ್ಲಿ ನಡಿಗೆಯನ್ನು ಸೇರಿಸಿಕೊಳ್ಳಿ. ಇದು ನಿಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ.



Click it and Unblock the Notifications