Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಗರ್ಭಿಣಿ ಸ್ತ್ರೀ ಮಾತ್ರ ತಿಳಿದಿರುವ ಗರ್ಭಾವಸ್ಥೆಯ ಸತ್ಯಗಳು
ಹೆಣ್ಣಿಗೆ ತಾಯ್ತನೆಂಬುದು ಪ್ರಕೃತಿಯ ವರದಾನವಾಗಿದ್ದು ತನ್ನದೇ ಕರುಳ ಕುಡಿಯನ್ನು ಒಡಲಲ್ಲಿ ಹೊತ್ತು ಪೋಷಿಸುವ ಅನುಭೂತಿ ಆಕೆಗದು ಬೆಲೆ ಕಟ್ಟಲಾಗದ ಕ್ಷಣವಾಗಿದೆ. ತನ್ನೊಳಗೆ ಇನ್ನೊಂದು ಜೀವ ಬೆಳೆಯುತ್ತಿರುವಾಗ ಆಕೆಯಲ್ಲಿ ತೋರ್ಪಡಿಸಿಕೊಳ್ಳಲಾಗದೇ ಇರುವ ಭಾವನೆಗಳು ಸ್ಫುರಿಸುತ್ತವೆ.
ಆಕೆಗದು ವಿವರಿಸಲು ಸಾಧ್ಯಾವಾಗದೇ ಇರುವ ಸಂತಸವಾಗಿರುತ್ತದೆ. ತನ್ನ ಮಗು ಹೇಗಿರಬಹುದು, ಅದರ ಕಣ್ಣು, ಕೂದಲು, ತ್ವಚೆಯ ಬಣ್ಣ ಹೀಗೆ ತನ್ನ ಹುಟ್ಟಲಿರುವ ಕಂದಮ್ಮನ ಕುರಿತು ಆಕೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾಳೆ. ಈ ಸಂದರ್ಭದಲ್ಲಿ ಆಕೆ ಕೆಲವೊಂದು ದೈಹಿಕ ಬದಲಾವಣೆಗಳಿಗೂ ಒಳಗಾಗಬೇಕಾಗುತ್ತದೆ.

ಆಕೆಗದು ಪ್ರಥಮ ಗರ್ಭವಾಗಿದ್ದರೆ ಗರ್ಭಿಣಿಗೆ ಈ ಅನುಭವಗಳು ಹೊಸದಾಗಿರುತ್ತವೆ. ಆಕೆ ಅನುಭವಿಸುವ ಈ ಬದಲಾವಣೆಗಳಿಂದ ಸಿಡುಕುತನ, ಒತ್ತಡ, ಮಾನಸಿಕ ಅಸಮಾಧಾನಗಳು ಉಂಟಾಗುತ್ತಿರುತ್ತವೆ. ವ್ಯಕ್ತಪಡಿಸಲು ಸಾಧ್ಯವಾಗದೇ ಇರುವ ಸಂಗತಿಗಳು ಆಕೆಯೊಳಗೆ ನಡೆಯುತ್ತಿರುತ್ತದೆ. ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು, ಭಯಪಡದಿರಿ!
ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಅಂಶಗಳನ್ನು ನಾವು ತಿಳಿಸುತ್ತಿದ್ದು ಗರ್ಭಿಣಿ ಸ್ತ್ರೀ ಮಾತ್ರವೇ ಇದನ್ನು
ಅರ್ಥಮಾಡಿಕೊಳ್ಳಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ಮುಂದೆ ಓದಿ...
ಭಾವನೆಗಳ ತಾಕಲಾಟ
ಆಕೆಯ ದೇಹದಲ್ಲಿ ಉಂಟಾಗುತ್ತಿರುವ ಹಾರ್ಮೋನಲ್ ಬದಲಾವಣೆಗಳಿಂದಾಗಿ ಅಂತೆಯೇ ಆತಂಕ ಮತ್ತು ಉದ್ವೇಗದಿಂದಾಗಿ ಆಕೆಯಲ್ಲಿ ಮೂಡ್ ಬದಲಾಗುತ್ತಿರುತ್ತದೆ.
ಬೆಳಗ್ಗಿನ ಅನಾರೋಗ್ಯ
ಬೆಳಗ್ಗೆ ಆಕೆಯನ್ನು ಕಾಡುವ ದೈಹಿಕ ಸಮಸ್ಯೆಗಳು ಕೆಲವು ನಿಮಿಷಗಳಿಗೆ ಮಾತ್ರ ಸೀಮಿತವಾಗಿರದೇ ಒಮ್ಮೊಮ್ಮೆ ಕೆಲವು
ಗಂಟೆಗಳವರೆಗೆ ಆಕೆ ಅನುಭವಿಸಬೇಕಾಗುತ್ತದೆ.
ಮಲಬದ್ಧತೆ ಸಮಸ್ಯೆಗಳು
ಗರ್ಭಾವಸ್ಥೆಯಲ್ಲಿ ಸ್ತ್ರೀಯನ್ನು ಕಾಡುವ ಸಮಸ್ಯೆಯಾಗಿದೆ ಮಲಬದ್ಧತೆ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಕಡಿಮೆಯಾದ ಕರುಳಿನ ಚಲನೆಗಳಿಂದಾಗಿ, ಗರ್ಭಿಣೆಯು ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾಳೆ, ಇದು ಕಿರಿಕಿರಿಯನ್ನುಂಟು ಮಾಡುವುದು ಖಂಡಿತವಾಗಿದೆ.
ಆಗಾಗ್ಗೆ ವಾಶ್ರೂಮ್ ಭೇಟಿ
ಗಂಟೆಯಲ್ಲಿ ಆಗಾಗ್ಗೆ ಮೂತ್ರಕ್ಕೆ ಹೋಗುವ ಸಂಕಷ್ಟ ಆಕೆಗೆ ಮಾತ್ರವೇ ಅರ್ಥವಾಗುತ್ತದೆ. ಗರ್ಭದಿಂದ ಉಂಟಾಗುವ ಒತ್ತಡವು ಗಾಳಿಗುಳ್ಳೆಯ ಮೇಲೆ ಅನ್ವಯವಾಗುವುದರಿಂದ ಹೀಗೆ ಆಗುತ್ತದೆ.
ಮಗುವಿನ ಒದೆತದ ಸಂತಸ
ತನ್ನ ನವಜಾತ ಶಿಶು ತನ್ನದೇ ಕುಡಿ ಹೊಟ್ಟೆಯಲ್ಲಿ ಮೃದುವಾದ ಒದೆತಗಳನ್ನು ನೀಡಿದಾಗ ಆ ಸಂತಸ ಆಕೆಗೆ ವರ್ಣಿಸಲು ಆಗದ ಅನುಭವವಾಗಿರುತ್ತದೆ. ಇದೊಂದು ಭಾವನಾತ್ಮಕ ಕ್ಷಣವಾಗಿರುತ್ತದೆ



Click it and Unblock the Notifications



