For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಹರ್ಬಲ್ ಚಹಾ ಸೇವನೆಗೆ ಸುರಕ್ಷಿತವೇ?

By Jaya subramanya
|

ಗರ್ಭಾವಸ್ಥೆಯಲ್ಲಿ ಕಟ್ಟುನಿಟ್ಟಿನ ಆಹಾರವನ್ನು ಸ್ತ್ರೀಗೆ ನೀಡಲಾಗುತ್ತದೆ. ಆಕೆ ತನ್ನ ಗರ್ಭದಲ್ಲಿ ಇನ್ನೊಂದು ಮಗುವನ್ನು ಪಾಲಿಸಬೇಕಾಗಿರುವುದರಿಂದ ಕೊಂಚ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಆಕೆ ಪಾಲಿಸಬೇಕಾಗುತ್ತದೆ. ಈ ಸಮಯದಲ್ಲಿ ಸಿಕ್ಕಿದ್ದೆಲ್ಲಾ ತಿನ್ನಬೇಕೆಂಬ ಬಯಕೆ ಉಂಟಾಗುವುದು ಸಹಜವೇ ಹಾಗೆಂದು ಈ ಹವ್ಯಾಸಕ್ಕೆ ತಡೆಯನ್ನು ನೀವು ತಡೆಯನ್ನು ಹಾಕದೇ ಇದ್ದಲ್ಲಿ ಅದು ಇನ್ನಿತರ ಸಮಸ್ಯೆಗಳನ್ನು ಉಂಟುಮಾಡಬಹುದು.

Drinking Tea During Pregnancy: Is It Safe?

ಇಂತಹ ಆಸೆಗಳಲ್ಲಿ ಟೀ ಕಾಫಿ ಕುಡಿಯುವ ಚಟ ಕೂಡ ಒಂದು. ಕಾಫಿಯ ಕೆಫೇನ್ ಅಂಶ ಆಕೆಗೆ ಒಳ್ಳೆಯದಲ್ಲವೆಂದು ಹರ್ಬಲ್ ಚಹಾವನ್ನು ಆಕೆ ತನ್ನದಾಗಿಸುತ್ತಾಳೆ. ಆದರೆ ಈ ಟೀ ಗರ್ಭಿಣಿಗೆ ಉತ್ತಮವೇ ಅಲ್ಲವೇ ಎಂಬುದನ್ನು ವೈದ್ಯರ ಬಳಿ ಚರ್ಚಿಸಿ ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಯಾವ ಟೀ ಕುಡಿದರೆ ಒಳ್ಳೆಯದು?
ಎಫ್‎ಡಿಎ ಉಪದೇಶಿಸುವಂತೆ ಗರ್ಭಾವಸ್ಥೆಯಲ್ಲಿ ಸ್ತ್ರೀಯು ಹರ್ಬಲ್ ಚಹಾವನ್ನು ತೆಗೆದುಕೊಳ್ಳಬಾರದು ಎಂಬುದಿದ್ದು ಗರ್ಭಿಣಿ ಸ್ತ್ರೀಗೆ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬ ಗೊಂದಲ ಕೂಡ ಇಲ್ಲಿದೆ. ಅಂತೆಯೇ ಆಕೆಯು ಈ ಚಹಾವನ್ನು ತೆಗೆದುಕೊಳ್ಳುವುದು ಒಳ್ಳೆಯದೇ ಕೆಟ್ಟದ್ದೇ ಎಂಬ ಪರಿಶೀಲನೆ ಕೂಡ ನಡೆದಿಲ್ಲ.

ಹರ್ಬಲ್ ಚಹಾ ದೊರೆಯುವ ಮುಖ್ಯ ಬ್ರ್ಯಾಂಡ್ ಹೆಸರುಗಳೆಂದರೆ ಕರಿಮೆಣಸಿನ ಚಹಾ, ಲಿಂಬೆ ಚಹಾ ಅಥವಾ ಶುಂಠಿ ಚಹಾವಾಗಿದೆ. ಈ ವೈವಿಧ್ಯತೆಗಳು ಸೂಪರ್ ಮಾರುಕಟ್ಟೆಗಳಲ್ಲಿ ದೊರೆಯುತ್ತಿದ್ದು ಆದಷ್ಟು ಕಡಿಮೆ ಪ್ರಮಾಣದಲ್ಲೇ ಇದನ್ನು ಗರ್ಭಾವಸ್ಥೆಯಲ್ಲಿ ಸೇವಿಸುವುದು ಒಳ್ಳೆಯದು.

ಇನ್ನು ಗರ್ಭಿಣಿ ಸ್ತ್ರೀಗೆಂದೇ ವಿಶೇಷವಾಗಿ ತಯಾರಾದ ಚಹಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸಮಯದಲ್ಲಿ ಇಂತಹ ಹರ್ಬಲ್ ಚಹಾವನ್ನು ಸೇವಿಸುವುದು ಉತ್ತಮವಾಗಿರಬಹುದು. ಅಂತೆಯೇ ಇದನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರೊಂದಿಗೆ ಚರ್ಚಿಸುವುದು ಸೂಕ್ತವಾದುದು. ಅಂತೆಯೇ ಇದರಲ್ಲಿ ಬೆರೆಸಲಾದ ಸಾಮಾಗ್ರಿಗಳೂ ಅತ್ಯುತ್ತಮವೇ ಎಂಬುದಾಗಿ ವೈದರೊಂದಿಗೆ ದಾದಿಯೊಂದಿಗೆ ಸಮಾಲೋಚಿಸಿ. ಗರ್ಭಿಣಿಯರ ಆರೋಗ್ಯಕ್ಕೆ ಗಿಡಮೂಲಿಕೆಯ ಉಪಚಾರ
ಗರ್ಭಾವಸ್ಥೆಯಲ್ಲಿ ಸೇವಿಸಬಹುದಾದ ಇನ್ನೊಂದು ಹರ್ಬಲ್ ಚಹಾ ಗ್ರೀನ್ ಟೀಯಾಗಿದೆ. ಆದರೆ ಇದು ನಿಜವಾಗಿ ಹರ್ಬಲ್ ಚಹಾವಲ್ಲ. ನೀವು ಕಾಫಿ ಟೀಯನ್ನು ಬಿಟ್ಟು ಇದನ್ನೇ ನಿತ್ಯವೂ ಸೇವಿಸಬೇಕು ಎಂದಾದಲ್ಲಿ ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಇದು ಕೆಫೇನ್ ಮುಕ್ತವಾಗಿರುವುದಿಲ್ಲ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಹರ್ಬಲ್ ಚಹಾವನ್ನು ಸೇವಿಸಬೇಕೇ ಬೇಡವೆ ಎಂಬುದರ ಕುರಿತು ಹಲವಾರು ಚರ್ಚೆಗಳು ನಡೆಯುತ್ತಲೇ ಇದ್ದು ಖಾತ್ರಿಯನ್ನು ಪಡೆದುಕೊಂಡಿಲ್ಲ.

English summary

Drinking Tea During Pregnancy: Is It Safe?

The list of things that women should and shouldn't eat or drink during pregnancy can be a source of confusion and hard to keep track of. You know caffeine is something that you need to steer clear of or have a minimum quantity of it during pregnancy. To help ditch the coffee cravings, some pregnant women decide to turn to herbal teas instead.
X
Desktop Bottom Promotion