Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರು ಮೀನು ಸೇವಿಸಬಹುದೇ? ಈ ಲೇಖನ ಓದಿ
ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯವನ್ನು ಜೋಪಾನವಾಗಿ ಆರೈಕೆ ಮಾಡಿಕೊಳ್ಳುವ ಅನಿವಾರ್ಯತೆ ಹಾಗೂ ಜವಾಬ್ದಾರಿಯೂ ಹೌದು. ಹೀಗಿರುವಾಗ ಅನೇಕ ಗರ್ಭಿಣಿಯರು ಮಾಂಸಯುಕ್ತ ಆಹಾರಗಳನ್ನು ಸೇವಿಸಲು ಹಿಂಜರಿಯುತ್ತಾರೆ. ಇದು ಹಿಂದಿನ ಕಾಲದಿಂದಲೂ ಕೆಲವರ ಮನೆಯಲ್ಲಿ ನಡೆದುಕೊಂಡು ಬರುತ್ತಿರುವಂತಹ ಪದ್ಧತಿ. ಅಲ್ಲದೆ ಇಂತಹ ವಿಚಾರದಲ್ಲಿ ಹೆಚ್ಚು ಕಟ್ಟುನಿಟ್ಟಿನ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಅದರಲ್ಲೂ ಸೇವಿಸುವಾಗ ದೇಹಕ್ಕೆ ಸ್ವಲ್ಪ ಕೂಡ ಹಾನಿಕಾರಕವಾಗುವ ಆಹಾರ ಪದಾರ್ಥಗಳಿಂದ ದೂರವಿರುತ್ತಾರೆ.

ಇನ್ನು ಕೆಲವರಲ್ಲಿ ಶಿಶುವಿನ ಒಟ್ಟಾರೆ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾಗುವ ಆಹಾರ ಪದಾರ್ಥಗಳ ಸೇವನೆಯ ಬಗ್ಗೆ ಹೆಚ್ಚು ತಿಳುವಳಿಕೆಯ ಕೊರತೆಯಿರುತ್ತದೆ. ಈ ರೀತಿಯ ಆರೋಗ್ಯಕ್ಕೆ ಯೋಗ್ಯವಾದ ಸೇವಿಸಲು ಹಿಂಜರಿಯುವ ಪದಾರ್ಥಗಳಲ್ಲಿ ಮೀನಿನ ಸೇವನೆಯು ಮುಂಚೂಣಿಯಲ್ಲಿದೆ. ಮೀನಿನ ಸೇವನೆಯನ್ನು ಮಾಡದಿರುವುದಕ್ಕೆ ಪ್ರಮುಖವಾದ ಕಾರಣವೆಂದರೆ ಮೀನಿನಲ್ಲಿರುವ ಮುಳ್ಳುಗಳು ಮತ್ತು ಅದು ದೇಹಕ್ಕೆ ಹೆಚ್ಚು ಶಾಖ ನೀಡುವ ಆಹಾರವೆಂದು.
ಆದರೆ ಇತ್ತೀಚಿನ ಅಧ್ಯಯನವೊಂದು ಈ ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಪ್ರಚುರಪಡಿಸಿದೆ. ಗರ್ಭಿಣಿಯರು ಮೀನಿನ ಸೇವನೆಯಿಂದ ಆಕೆಯಲ್ಲಿ ಬೆಳೆಯುತ್ತಿರುವ ಶಿಶುವಿನ ಮೆದುಳಿಗೆ ಅಧಿಕ ಉಪಯೋಗವಾಗಲಿದ್ದು, ಈ ನಿಟ್ಟಿನಲ್ಲಿ ಸುಮಾರು 2000 ಮಹಿಳೆಯರು ಮತ್ತು ಮಕ್ಕಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಈ ಅಧ್ಯಯನವನ್ನು ಸುಮಾರು 5 ವರ್ಷಗಳ ಅವಧಿಗೆ ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬರನ್ನೂ ಗರ್ಭವತಿಯಾದ ದಿವಸದಿಂದ ಬಹಳ ಸೂಕ್ಷ್ಮವಾಗಿ ವೀಕ್ಷಿಸಲಾಗಿದೆ. ಇದರ ಪ್ರಕಾರ ಮೂರು ವಾರಕ್ಕೊಮ್ಮೆ ಮೀನು ಸೇವಿಸಿದ ಮಹಿಳೆಯರ ಮಕ್ಕಳ ಮೆದುಳಿನ ಕಾರ್ಯನಿರ್ವಹಣೆಯು ಮೀನು ಸೇವಿಸದ ಮಹಿಳೆಯರ ಮಕ್ಕಳ ಮೆದುಳಿನ ಕಾರ್ಯನಿರ್ವಹಣೆಗಿಂತ ಗಣನೀಯವಾಗಿ ಹೆಚ್ಚಿರುವುದು ಕಂಡು ಬಂದಿದೆ.
ಒಮೇಗಾ 6 ಫ್ಯಾಟ್ಟಿ ಆಸಿಡ್ ಸತ್ವವು ಅನೇಕ ಜಿಡ್ಡಿನ ಪದಾರ್ಥಗಳಲ್ಲಿ ಕಂಡುಬರುತ್ತದೆ. ಆದರೆ ಒಮೇಗಾ 3 ಫ್ಯಾಟ್ಟಿ ಆಸಿಡ್ ಸತ್ವವು ಮೀನಿನಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಶಿಶುವಿನ ಮೆದುಳಿನ ಬೆಳವಣಿಗೆಯು ಪ್ರಾಥಮಿಕವಾಗಿ ಗರ್ಭಾವಸ್ಥೆಯಲ್ಲಿಯೇ ಪ್ರಾರಂಭವಾಗುತ್ತದೆ. ಗರ್ಭಿಣಿಯರ ಆಹಾರ ಶೈಲಿಯಲ್ಲಿ ಅವಶ್ಯಕ ಸತ್ವಗಳ ಕೊರತೆಯಿಂದ ಶಿಶುವಿನ ಮೆದುಳಿನ ಸಮರ್ಪಕ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನದ ವರದಿ ಹೇಳುತ್ತದೆ.
ಆದರೂ ಸಹ ಈ ವಿಷಯದಲ್ಲಿ ಜಾಗೃತೆ ಅವಶ್ಯಕ. ಏಕೆಂದರೆ ಅನಾರೋಗ್ಯಕರ ವಾತಾವರಣದಿಂದ ತಂದ ಮೀನನ್ನು ಸೇವಿಸಿದರೆ ಅದರಲ್ಲಿರುವ ಮರ್ಕ್ಯೂರಿ ಅಂಶದಿಂದ ದೇಹಕ್ಕೆ ಹೆಚ್ಚು ಹಾನಿಕರ. ಕಡಲ ಆಹಾರಗಳ ಸೇವನೆಯು ಮೆದುಳಿಗೆ ಹೆಚ್ಚು ಉಪಯುಕ್ತವಾಗಿದ್ದರೂ ಸಹ, ಮೀನುಗಳು ತಮ್ಮ ವಾತಾವರಣದ ವಿಷಕಾರಿ ಹಾನಿಕಾರಕ ಅಂಶಗಳನ್ನು ತನ್ನ ದೇಹಕ್ಕೆ ಸೇರಿಸಿಕೊಂಡಿರುತ್ತವೆ. ಆದ್ದರಿಂದ ಮೀನನ್ನು ಸೇವಿಸುವಾಗ ಈ ಅಂಶದ ಬಗ್ಗೆ ಎಚ್ಚರವಿರಲಿ.
ಆದರೂ ಸಹ ಈ ಅಧ್ಯಯನದಲ್ಲಿ ಮೀನಿನ ಸೇವನೆಯಿಂದ ಗರ್ಭಿಣಿಯರಿಗೆ ಮತ್ತು ಶಿಶುವಿಗೆ ಯಾವುದೇ ದುಷ್ಪರಿಣಾಮಗಳು ಉಂಟಾಗಿರುವ ಬಗ್ಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಒಮೇಗಾ 3 ಫ್ಯಾಟ್ಟಿ ಆಸಿಡ್ ಸತ್ವ ಒಳಗೊಂಡಿರುವ ಆಹಾರಗಳ ಸೇವನೆಗೆ ಸಂಬಂಧಿಸಿದಂತೆ ಒಮ್ಮೆ ವೈದ್ಯರ ಅಭಿಪ್ರಾಯ ಪಡೆಯುವುದು ಹೆಚ್ಚು ಸೂಕ್ತ.



Click it and Unblock the Notifications



