Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಈ 5 ಬಗೆಯ ಗಿಡಮೂಲಿಕೆಗಳು ಗರ್ಭಿಣಿಯರಿಗೆ ಸೂಕ್ತವಲ್ಲ
ಗರ್ಭಿಣಿರನ್ನು ನಾವು ಸಾಮಾನ್ಯರನ್ನು ಕಂಡ ಹಾಗೆ ಕಾಣಲು ಆಗುವುದಿಲ್ಲ. ಅವರು ನಮ್ಮಂತೆಯೇ ಎಂದು ಭಾವಿಸಿದರು ಸಹ ಅವರ ಹೊಟ್ಟೆಯಲ್ಲಿ ಮತ್ತೊಂದು ಜೀವ ಬೆಳೆಯುತ್ತಿದೆ ಎಂಬುದನ್ನು ಮರೆಯಬಾರದು. ಹಾಗಾಗಿ ಅವರ ಆಹಾರ, ಓಡಾಟ, ದೈನಂದಿನ ಕೆಲಸಗಳಲ್ಲಿ ಸ್ವಲ್ಪ ಮಾರ್ಪಾಡುಗಳು ಮಾಡಿಕೊಳ್ಳಬೇಕಾಗಿರುತ್ತದೆ. ನಾವು ಏನು ಊಟವನ್ನು ಮಾಡುತ್ತೇವೆಯೋ, ಅದನ್ನೆ ಅವರಿಗು ನೀಡುವಾಗ ನಾವು ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ. ಇದು ಅವರ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಹಾಗಾಗಿ, ಗರ್ಭಿಣಿಯರು ಏನು ಸೇವಿಸಬೇಕು ಮತ್ತು ಏನು ಸೇವಿಸಬಾರದು ಎಂಬುದರ ಕುರಿತು ಒಂದು ದೊಡ್ಡ ಪಟ್ಟಿಯೇ ಇದೆ. ಯಾವ ಮಟ್ಟಿಗೆ ನೀವು ಇದನ್ನು ಪಾಲಿಸಬೇಕು ಎಂದರೆ ಆರೋಗ್ಯಕರ ಎಂದು ತಿಳಿದಿರುವ ಆಹಾರ ಪದಾರ್ಥವನ್ನು ಸಹ, ಇದನ್ನು ಸೇವಿಸಬೇಕೆ, ಬೇಡವೇ ಎಂದು ವೈದ್ಯರನ್ನು ಕೇಳಿ ಸೇವಿಸಬೇಕಾಗುತ್ತದೆ. ಈ ವಿಚಾರದಲ್ಲಿ ಸೊಪ್ಪು ಮತ್ತು ಗಿಡಮೂಲಿಕೆಗಳು ಸಹ ಹೊರತಲ್ಲ ಎಂಬುದನ್ನು ನೀವು ತಪ್ಪದೆ ಗಮನಿಸಬೇಕು, ಬನ್ನಿ ಅಂತಹ ಆಹಾರಗಳು ಯಾವುದು ಎಂಬುದನ್ನು ಮುಂದೆ ಓದಿ...

ಗೊಖ್ರು
ಇದನ್ನು ಸಾಮಾನ್ಯವಾಗಿ ಮೂತ್ರ ಪಿಂಡ ಮತ್ತು ಮೂತ್ರ ವಿಸರ್ಜನಾಂಗದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದೊಂದು ಸ್ವಾಭಾವಿಕವಾದ ಕಾಮೋತ್ತೇಜಕ ಉತ್ಪನ್ನವಾಗಿದೆ. ಆದರೂ ಸಹ ಇದನ್ನು ಗರ್ಭಿಣಿಯರು ಬಳಸುವುದು ಕ್ಷೇಮವಲ್ಲ ಎಂದು ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ದೃಢಪಟ್ಟಿದೆ. ಅಲ್ಲದೆ ಇದು, ಅವರ ಗರ್ಭದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಶತಾವರಿ
ಇದು ಸಹ ಜನಪ್ರಿಯವಾದ ಕಾಮೋತ್ತೇಜಕ ಗಿಡಮೂಲಿಕೆಯಾಗಿದೆ. ಇದನ್ನು ಅಜೀರ್ಣ ಮತ್ತು ಅಲ್ಸರ್ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಹ ಬಳಸಲಾಗುತ್ತದೆ. ಇದನ್ನು ಸಹ ಗರ್ಭಿಣಿಯರು ಬಳಸಬಾರದು. ಇಂಡಿಯನ್ ಜರ್ನಲ್ ಆಫ್ ಎಕ್ಸ್‌ಪೆರಿಮೆಂಟಲ್ ಬಯಾಲಜಿ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಅಧ್ಯಯನದ ಪ್ರಕಾರ ಶತಾವರಿಯನ್ನು ಬಳಸಿದ ಗರ್ಭಿಣಿಯರಲ್ಲಿ ದೇಹದ ತೂಕ ಗಣನೀಯವಾಗಿ ಕಡಿಮೆ ಆಗಿರುವುದನ್ನು ಮತ್ತು ಮಗುವಿನ ಬೆಳವಣಿಗೆ ನಿಧಾನವಾಗಿರುವುದು ಪತ್ತೆಯಾಗಿದೆಯಂತೆ. ಗರ್ಭಿಣಿಯರ ಆರೋಗ್ಯಕ್ಕೆ ಗಿಡಮೂಲಿಕೆಯ ಉಪಚಾರ
ಗಿಂಕೊ ಬಿಲೊಬ
ಅಲ್ಜೀಮರ್ ರೋಗವನ್ನು ನಿವಾರಿಸುವ ಮತ್ತು ನಿಮ್ಮನ್ನು ಕಾಮೋತ್ತೇಜಕಗೊಳಿಸುವ ಸಾಮರ್ಥ್ಯವಿರುವ ಈ ಗಿಡಮೂಲಿಕೆಯನ್ನು ಸಹ ಗರ್ಭಿಣಿಯರು ತಮ್ಮ ಗರ್ಭಾವಧಿಯಲ್ಲಿ ಸೇವಿಸಬಾರದು. ಏಕೆಂದರೆ ಇದು ಗರ್ಭಿಣಿಯರ ದೇಹದಲ್ಲಿನ ಕಿರುತ್ತಟ್ಟೆಗಳ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ತಿಳಿದುಬಂದಿದೆ. ಪ್ರಸವದ ಸಂದರ್ಭದಲ್ಲಿ ಅಧಿಕ ರಕ್ತಸ್ರಾವಕ್ಕೆ ಇದು ಕಾರಣವಾಗುತ್ತದೆ ಎಂಬುದನ್ನು ನಾವು ಗಮನಿಸಬೇಕು. ಇದನ್ನು ಸೇವಿಸಿದರೆ, ಪ್ರಸವ ವೇದನೆಯ ಯಾತನೆ ಮತ್ತಷ್ಟು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಸೆಂಟ್ ಜಾನ್ ವೊರ್ಟ್
ಸೆಂಟ್ ಜಾನ್ ವೊರ್ಟ್ ಅನ್ನು ಸೇವಿಸುವುದರಿಂದ ಹುಟ್ಟುವ ಮಗುವಿನ ತೂಕ ಕಡಿಮೆಯಾಗುತ್ತದೆ ಎಂದು ಕೆನಡಿಯನ್ ಜರ್ನಲ್ ಆಫ್ ಫಾರ್ಮಕಾಲಜಿ ತಿಳಿಸಿದೆ. ಈ ವಿಚಾರವನ್ನು ಅವರು ತಮ್ಮ ಪತ್ರಿಕೆಯಲ್ಲಿ ಪ್ರಕಟ ಮಾಡಿದ್ದಾರೆ. ಈ ಗಿಡಮೂಲಿಕೆಯನ್ನು ಸುಸ್ತು, ಹಸಿವು ಇಲ್ಲದಿರುವಿಕೆ ಮತ್ತು ಖಿನ್ನತೆಗೆ ಔಷಧಿಯಾಗಿ ಬಳಸಲಾಗುತ್ತದೆ.
ಲಿಕೊರೈಸ್
ಅಮೆರಿಕನ್ ಜರ್ನಲ್ ಎಪಿಡೆಮಿಯಾಲಜಿ ಪ್ರಕಾರ ಲಿಕೋರೈಸ್ ಗರ್ಭಿಣಿಯರ ದೇಹದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ಹುಟ್ಟುವ ಮಗುವಿನ ಮಾನಸಿಕ ಕಾರ್ಯಕ್ಷಮತೆ ಕುಗ್ಗುವಂತೆ ಮಾಡಿ, ಹಲವಾರು ಮಾನಸಿಕ ಕಾಯಿಲೆಗಳಿಗೆ ಗುರಿ ಮಾಡುತ್ತದೆಯಂತೆ. ಇದಕ್ಕೆ ಈ ಬೇರಿನಲ್ಲಿರುವ ಗ್ಲಿಸಿರ್ರಿಜ ಎಂಬ ಅಂಶವೇ ಕಾರಣ ಎಂದು ಹೇಳಲಾಗುತ್ತದೆ. ಇದನ್ನು ಹೊರತುಪಡಿಸಿದರೆ, ಈ ಗಿಡಮೂಲಿಕೆಯು ಜೀರ್ಣಕ್ರಿಯೆ ಮತ್ತು ಹಾರ್ಮೋನ್‌ಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.



Click it and Unblock the Notifications
