Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ತಾಯಿ ಮಗುವಿನ ಆರೋಗ್ಯಕ್ಕಾಗಿ-'ಕೊಬ್ಬರಿ ಎಣ್ಣೆ'
ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ನೀವು ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಸಾಕಾಗೋದಿಲ್ಲ. ಈ ನಿಟ್ಟಿನಲ್ಲಿ ಕೊಬ್ಬರಿ ಎಣ್ಣೆಯ ಮಹತ್ವ ಅಪಾರವಾದದ್ದು. ಹಾಗಂತ ಕೊಬ್ಬರಿ ಎಣ್ಣೆಯನ್ನು ಬಸುರಿ, ಬಾಣಂತಿ ಮತ್ತು ಶಿಶುಗಳಿಗೆ ಬಳಸುವ ಪದ್ಧತಿ ಇವತ್ತು ನಿನ್ನೆಯಿಂದಲ್ಲ, ಪ್ರಾಚೀನ ಕಾಲದಿಂದಲೂ ಇತ್ತು. ಇದೆಷ್ಟು ಸರಿಯಾದ ಕ್ರಮ ಅನ್ನೋದ್ರ ಬಗ್ಗೆ ಇತ್ತೀಚೆಗೆ ಸಂಶೋಧನೆಗೆ ಇಳಿದ ಕೆಲವು ಸಂಶೋಧಕರು, ಕೊಬ್ಬರಿ ಎಣ್ಣೆಯ ಮಹತ್ವ ಮತ್ತು ಅದರ ನಂಬಲಸಾಧ್ಯವಾದ ಕೆಲವು ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
ದೇಹದ ಮೆಟಬಾಲಿಸಂ ಮತ್ತು ಹಾರ್ಮೋಮನುಗಳ ಕಾರ್ಯಚಟುವಟಿಕೆ ಮತ್ತು ದೇಹದ ರೋಗನಿರೋಧಕ ಶಕ್ತಿಯ ವರ್ಧನೆಗೆ ಕೊಬ್ಬರಿ ಎಣ್ಣೆ ಒಂದು ಉತ್ತಮವಾದ ಎಣ್ಣೆ ಅನ್ನೋದನ್ನು ಅವರು ಬಹಿರಂಗ ಪಡಿಸಿದ್ದಾರೆ. ಕೊಬ್ಬರಿ ಎಣ್ಣೆಯನ್ನು ಪ್ರಗ್ನೆನ್ಸಿಗೂ ಮುನ್ನ, ಪ್ರಗ್ನೆನ್ಸಿಯಲ್ಲಿ ಮತ್ತು ಹೆರಿಗೆಯ ನಂತ್ರ ಬಳಸೋದ್ರಿಂದ ಆಗುವ ಲಾಭಗಳೇನು ಅನ್ನೋದ್ರ ಸಂಪೂರ್ಣ ವಿವರ ತಿಳಿದುಕೊಳ್ಳೋದಕ್ಕೆ ಈ ಸ್ಟೋರಿಯ ಮುಂದಿನ ಭಾಗವನ್ನು ಓದಿ.

ಬಸುರಿಯಾಗುವುದಕ್ಕೂ ಮುನ್ನ
ಕೊಬ್ಬರಿ ಎಣ್ಣೆಯನ್ನು ಆಗಾಗ ಅಡುಗೆಯಲ್ಲಿ, ಮಸಾಜ್ ಮಾಡಿಕೊಳ್ಳೋದಕ್ಕೆ ಹೀಗೆ ಬಳಕೆ ಮಾಡ್ತಾ ಇರೋದ್ರಿಂದ ನಿಮ್ಮ ಹಾರ್ಮೋನುಗಳು ಸಮತೋಲನದಲ್ಲಿರಲು ಇದು ಸಹಕಾರಿಯಾಗುತ್ತೆ. ಯಾವುದೇ ಹೆಣ್ಣು ತಾಯಿಯಾಗಬೇಕು ಅಂದ್ರೆ ಆಕೆಯ ದೇಹದ ಹಾರ್ಮೋನುಗಳ ಕಾರ್ಯಚಟುವಟಿಕೆ ಉತ್ತಮವಾಗಿರಬೇಕು ಮತ್ತು ಸಮತೋಲನದಲ್ಲಿ ಇರಬೇಕು,. ಸರಿಯಾಗಿ ಬ್ಯಾಲೆನ್ಸ್ ಆಗಿರುವ ಹಾರ್ಮೋನುಗಳಿಂದಾಗಿ ಹೆಣ್ಣು ಗರ್ಭ ಧರಿಸಲು ಸಹಕಾರಿಯಾಗುತ್ತೆ ಅನ್ನುವ ವಿಚಾರ ಎಲ್ಲರಿಗೂ ತಿಳಿದಿರೋದೆ. ಆ ನಿಟ್ಟಿನಲ್ಲಿ ಕೊಬ್ಬರಿ ಎಣ್ಣೆ ಸಹಕಾರಿಯಾಗಿರುತ್ತೆ ಅನ್ನೋದು ಸಂಶೋಧನೆಯಿಂದಲೇ ತಿಳಿದುಬಂದಿರುವ ಸತ್ಯ.

ನೀವು ಬಸುರಿಯಾಗಿದ್ದಾಗ ಯಾಕೆ ಬೇಕು ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ಲ್ಯೂರಿಕ್ ಆಸಿಡ್ ಅಂಶವಿರುತ್ತೆ. ಇದು ತಾಯಿಯ ಎದೆಹಾಲಿನಲ್ಲೂ ಇರುತ್ತೆ. ಲ್ಯೂರಿಕ್ ಆಸಿಡ್ ಅಂಶ ಆಂಟಿವೈರಲ್, ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಆಗಿರುತ್ತೆ. ಪ್ರಗ್ನೆನ್ಸಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸೋದ್ರಿಂದ ನಿಮ್ಮ ಮತ್ತು ನಿಮ್ಮ ಮಗುವಿನ ಇಮ್ಯುನಿಟಿ ಸಿಸ್ಟಮ್ ಅಂದ್ರೆ ರೋಗನಿರೋಧಕ ಶಕ್ತಿ ಹೆಚ್ಚಳವಾಗಲು ಸಹಕಾರಿಯಾಗಿದೆ. ಕೊಬ್ಬರಿ ಎಣ್ಣೆ ರಕ್ತದ ಶುಗರ್ ಲೆವೆಲ್ ನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ಹೊಂದಿದೆ ಅನ್ನೋದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ನೀವು ಬಸುರಿಯಾಗಿದ್ದಾಗ ಕೊಬ್ಬರಿ ಎಣ್ಣೆ ಬಳಸೋದ್ರಿಂದ ಗೆಸ್ಟೇಷನಲ್ ಡಯಾಬಿಟೀಸ್ ಅಂದ್ರೆ ಬಸುರಿಯಾಗಿದ್ದಾಗ ಕಾಣಿಸಿಕೊಳ್ಳುವ ಶುಗರ್ ಸಮಸ್ಯೆ ಬಾಧಿಸುವ ಸಾಧ್ಯತೆ ವಿರಳವಾಗಿರುತ್ತೆ

ನೀವು ಬಸುರಿಯಾಗಿದ್ದಾಗ ಯಾಕೆ ಬೇಕು ಕೊಬ್ಬರಿ ಎಣ್ಣೆ
ಬಸುರಿಯಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಅಂದ್ರೆ ಮಾರ್ನಿಂಗ್ ಸಿಕ್ನೆಸ್ ಅಂದ್ರೆ ಬೆಳಗಿನಜಾವದಲ್ಲಿ ವಾಂತಿ, ತಲೆಸುತ್ತುವಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ. ಆದ್ರೆ ನಿಮ್ಮ ಅಡುಗೆ ಸೂಪ್, ಸಾಂಬಾರ್ ಇತ್ಯಾದಿಗಳಲ್ಲಿ ಬೇರೆ ಎಣ್ಣೆಗಳಿಗಿಂತ ಕೊಬ್ಬರಿ ಎಣ್ಣೆ ಬಳಕೆ ಮಾಡೋದ್ರಿಂದ ಈ ಸಮಸ್ಯೆಯಿಂದ ದೂರವಿರಬಹುದು ಕೊಬ್ಬರಿ ಎಣ್ಣೆಯ ಮಸಾಜ್ ಮಾಡಿಕೊಳ್ಳೋದ್ರಿಂದ ಬಸುರಿ ಹೆಂಗಸರಲ್ಲಿ ಹೊಟ್ಟೆಯ ಭಾಗದಲ್ಲಿ ಆಗುವ ತುರಿಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕೇವಲ ಹೊಟ್ಟೆ ಮಾತ್ರವಲ್ಲ ಪೂರ್ತಿ ದೇಹಕ್ಕೆ ಮಸಾಜ್ ಮಾಡಿಕೊಳ್ಳೋದ್ರಿಂದ ಚರ್ಮದಲ್ಲಿ ಆಗುವ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಅಷ್ಟೇ ಅಲ್ಲ ಪ್ರಗ್ನೆನ್ಸಿಯಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ ಗಳನ್ನು ಕಡಿಮೆಗೊಳಿಸಲು ಕೂಡ ಇದು ನೆರವಾಗುತ್ತೆ. ಪ್ರತಿದಿನ ದೇಹಕ್ಕೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳೋದು ಪ್ರಗ್ನೆಂಟ್ ಮಹಿಳೆಯರಿಗೆ ಉತ್ತಮವಾದದ್ದು.

ಹೆರಿಗೆಯ ನಂತ್ರ ಯಾಕೆ ಬೇಕು ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆ ನಾನ್-ಟಾಕ್ಸಿಕ್ ಮತ್ತು ಮಕ್ಕಳ ಸೂಕ್ಷ್ಮ ತ್ವಚೆಗೆ ಹೇಳಿ ಮಾಡಿಸಿದ ಎಣ್ಣೆ. ನಿಮ್ಮ ಮಗುವಿಗೆ ಡೈಯಪರ್ ನಿಂದಾಗುವ ಅಥ್ವಾ ಇತರೆ ಕಾರಣಗಳಿಗಾಗುವ ರ್ಯಾಷಸ್ ಗಳನ್ನು ನಿವಾರಿಸಲು ಕೊಬ್ಬರಿ ಎಣ್ಣೆ ಸೂಕ್ತವಾದ ಎಣ್ಣೆಯಾಗಿರುತ್ತೆ. ಅಷ್ಟೇ ಅಲ್ಲ ಕೊಬ್ಬರಿ ಎಣ್ಣೆಯ ಪರಿಮಳ ಕೂಡ ವಾವ್ ಅನ್ನಿಸುವಂತಿರುತ್ತೆ. ಹಾಲುಣಿಸುವಾಗ ಹಲವು ಸಮಸ್ಯೆಗಳು ಎದುರಾಗುತ್ತೆ. ಪ್ರಮುಖವಾಗಿ ಸ್ತನಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳೋದು, ಸ್ತನದ ತೊಟ್ಟಿನಲ್ಲಿ ಉರಿ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ನೀವು ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳೋದು ಉತ್ತಮ.

ಹೆರಿಗೆಯ ನಂತ್ರ ಯಾಕೆ ಬೇಕು ಕೊಬ್ಬರಿ ಎಣ್ಣೆ
ಎದೆಯಲ್ಲಿ ಮಗುವಿಗೆ ಸಾಕಾಗುವಷ್ಟು ಹಾಲು ಉತ್ಪತ್ತಿಯಾಗ್ತಿಲ್ಲ ಅಂದ್ರೆ ಅದಕ್ಕೂ ಪರಿಹಾರ ನೀಡಲಿದ್ಯಂತೆ ಕೊಬ್ಬರಿ ಎಣ್ಣೆ. ಕೊಬ್ಬರಿ ಎಣ್ಣೆಯಲ್ಲಿರುವ ಮೀಡಿಯಮ್ ಚೈನ್ ಫ್ಯಾಟಿ ಆಸಿಡ್ ಎದೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗಿ ಮಗುವಿನ ಅಗತ್ಯತೆಯನ್ನು ಪೂರೈಸುತ್ತೆ. ಕೊಬ್ಬರಿ ಎಣ್ಣೆ ನಿಮ್ಮ ಮಗುವಿಗೆ ಮಸಾಜ್ ಮಾಡಲು ಹೇಳಿ ಮಾಡಿಸಿದ ಎಣ್ಣೆ. ಮಗುವಿಗೆ ರಿಲ್ಯಾಕ್ಸ್ ಫೀಲ್ ಆಗಲು ಮತ್ತು ಖುಷಿಯಾಗಿ ಮಗು ನಿದ್ರಿಸುವಂತೆ ಮಾಡಲು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡೋದು ಸೂಕ್ತ. ಮಗು ಚೆನ್ನಾಗಿ ನಿದ್ದೆ ಮಾಡುತ್ತೆ ಅಂದ್ರೆ ತಾಯಿಯೂ ಕೂಡ ಉತ್ತಮವಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತೆ. ಒಟ್ಟಿನಲ್ಲಿ ನಿಮ್ಮ ಮಗು ನಿಮ್ಮ ಕೈಯಲ್ಲಿರುವ ಅಮೂಲ್ಯವಾದ ರತ್ನ. ಆ ಮಗುವಿನ ಆರೋಗ್ಯಕ್ಕಾಗಿ ನೀವು ಏನು ಬೇದ್ರೂ ಮಾಡಲು ಸಿದ್ಧರಿರ್ತೀರಿ ನಿಜ. ಆ ನಿಟ್ಟಿನಲ್ಲಿ ಕೊಬ್ಬರಿ ಎಣ್ಣೆ ಒಂದು ಅತ್ಯುತ್ತಮವಾದ ವಸ್ತು ಅನ್ನೋದನ್ನು ಮರೀಬೇಡಿ..



Click it and Unblock the Notifications
