Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಧಾರಣೆ ತಡೆಗಾಗಿ ಪರಿಣಾಮಕಾರಿ ವಿಧಾನಗಳು
Pre Natal
oi-Staff
By Arpitha
ಮದುವೆಯಾದ ತಕ್ಷಣ ಮಗುವಾಗಬೇಕು ಎಂಬ ಟ್ರೆಂಡ್ ಈಗ ಬದಲಾಗಿದೆ. ಮದುವೆಯಾಗಿ ಸ್ವಲ್ಪ ದಿನ ನೆಮ್ಮದಿಯಾಗಿ ಯಾವುದೇ ಜಂಜಾಟ ಮತ್ತು ಹೆಚ್ಚು ಜವಾಬ್ದಾರಿ ಇಲ್ಲದೆ ಬದುಕಲು ಈಗಿನ ಯುವಕರು ಇಷ್ಟಪಡುತ್ತಾರೆ.
ಜೊತೆಗೆ ಮಗುವಾಗುವ ಮೊದಲು ಜೀವನದಲ್ಲಿ ಸೆಟಲ್ ಆಗಬೇಕು ಎಂಬುದು ಕೂಡ ಪ್ರತಿಯೊಬ್ಬರ ಇಷ್ಟವಾಗಿರುತ್ತದೆ. ಹಾಗೆಯೇ ಗರ್ಭಿಣಿಯಾಗುವುದನ್ನು ತಪ್ಪಿಸಲು ಸಾಕಷ್ಟು ವಿಧಾನಗಳಿವೆ. ಒಮ್ಮೆ ಮಗುವಾದರೆ ಎರಡರಿಂದ ನಾಲ್ಕು ವರ್ಷ ಕೆಲಸಕ್ಕೆ ಹಿಂತಿರುಗಲು ಕಷ್ಟವಾಗುವುದರಿಂದ ಮಗು ಪಡೆಯುವ ಮೊದಲು ಎಲ್ಲವನ್ನೂ ಸರಿಯಾಗಿ ಯೋಜಿಸಿಕೊಳ್ಳುವುದು ಸೂಕ್ತ. ಗರ್ಭಧಾರಣೆ ಯಶಸ್ವಿಯಾಗುವುದು ಹೇಗೆ?
ಹಾಗಾಗಿ ಸಾಕಷ್ಟು ಜನರಿಗೆ ಇಂತಹ ಸಮಸ್ಯೆಗಳಿಂದ ದೂರವಿರಲು ಸಾಕಷ್ಟು ಪರಿಣಾಮಕಾರಿ ಗರ್ಭನಿರೋಧಕಗಳಿವೆ ಎಂಬುದು ತಿಳಿದಿರುವುದಿಲ್ಲ. ಗರ್ಭಧಾರಣೆಯನ್ನು ತಡೆಯಲು ಪರಿಣಾಮಕಾರಿಯಾದ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
ರಕ್ಷಣಾಕವಚ

ಮೊದಲ ಮಗುವನ್ನು ಪಡೆಯುವ ಮೊದಲು ಸಂಗಾತಿಗಳಿಬ್ಬರೂ ಸರಿಯಾಗಿ ನಿರ್ಧರಿಸಿ ಇಬ್ಬರೂ ರಕ್ಷಣೆಯಾಗಿ ಕಾಂಡೋಮ್ ಬಳಸಬಹುದು.ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಕಾಂಡೋಮ್ ದೊರೆಯುತ್ತದೆ.ಇದನ್ನು ಬಳಸಿದಲ್ಲಿ ಗರ್ಭಧಾರಣೆಯಾಗುವುದನ್ನು ತಡೆಯಬಹುದು.
ಗರ್ಭನಿರೋಧಕ ಮಾತ್ರೆಗಳು
ಮೊದಲ ಮಗುವನ್ನು ಬೇಕಾದಾಗ ಪಡೆಯಲು ಮಾರುಕಟ್ಟೆಯಲ್ಲಿ ಸಾಕಷ್ಟು ಗರ್ಭನಿರೋಧಕಗಳು ದೊರೆಯುತ್ತವೆ. ಪ್ರತಿದಿನ ಅಥವಾ ವಾರ,ತಿಂಗಳು ಗಳಲ್ಲಿ ತೆಗೆದುಕೊಳ್ಳಬಹುದಾದ ಬೇರೆಬೇರೆ ರೀತಿಯ ಗರ್ಭನಿರೋಧಕ ಮಾತ್ರೆಗಳು ದೊರೆಯುತ್ತವೆ. ಗರ್ಭನಿರೋಧಕ ಮಾತ್ರೆಯ ಬಗ್ಗೆ ಕೆಲ ಮಾಹಿತಿ
ಗರ್ಭನಿರೋಧಕ ಇಂಜೆಕ್ಷನ್
ಮಾರುಕಟ್ಟೆಯಲ್ಲಿ ಗರ್ಭಧಾರಣೆಯನ್ನು ಮೂರು ತಿಂಗಳುಗಳವರೆಗೆ ತಡೆಯಬಹುದಾದ ಇಂಜೆಕ್ಷನ್‌ಗಳು ದೊರೆಯುತ್ತವೆ. ಇದು ಪರಿಣಾಮಕಾರಿಯಾದ ಗರ್ಭನಿರೊಧಕವಾದರೂ ಕೂಡ ವೈದ್ಯರಲ್ಲಿ ಸರಿಯಾದ ಮಾಹಿತಿ ಪಡೆದು ತೆಗೆದುಕೊಳ್ಳದಿದ್ದಲ್ಲಿ ಮೂಳೆಗಳ ಮೇಲೆ ಅಡ್ಡ ಪರಿಣಾಮ ಬೀರುವ ಸಂಭವವಿರುವುದರಿಂದ ಮಾಹಿತಿ ಪಡೆದು ತೆಗೆದುಕೊಳ್ಳುವುದು ಸೂಕ್ತ.
ಅಂಡೋತ್ಪತ್ತಿ ದಿನಾಂಕ
ಮುಟ್ಟಿನ ದಿನದ ಆಧಾರದ ಮೇಲೆ ಅಂಡೋತ್ಪತ್ತಿ ಸಮಯವನ್ನು ಕಂಡುಹಿಡಿದುಕೊಂಡರೆ ಮಗುವಾಗುವುದನ್ನು ತಡೆಯಬಹುದು. ಸಾಮಾನ್ಯವಾಗಿ ಋತುಸ್ರಾವವಾಗುವ ಮೊದಲ ಒಂದು ವಾರ ಮತ್ತು ನಂತರದ ಒಂದುವಾರ ಗರ್ಭಧಾರಣೆಯಾಗುವ ಸಂಭವವಿಲ್ಲದಿರುವುದರಿಂದ ಇದನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸುರಕ್ಷಿತ ಸಮಯ ಎಂದು ಪರಿಗಣಿಸಲಾಗುತ್ತದೆ.
Comments
English summary



Click it and Unblock the Notifications



