Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಹೆರಿಗೆಯ ಸ್ಪಷ್ಟ ಸೂಚನೆಗಳಿವು-ನಿರ್ಲಕ್ಷಿಸಬೇಡಿ
ತಾಯಿಯಾಗುವುದು ಪ್ರತಿಯೊಂದು ಹೆಣ್ಣಿಗೂ ಇರುವ ಮಹತ್ವಾಕಾಂಕ್ಷೆ. ಆಕೆಯ ಜೀವನವನ್ನು ಪರಿಪೂರ್ಣವಾಗಿಸುವ ಒಂದು ಸುಂದರ ಅನುಭವ. ನವಮಾಸಗಳು ಪೂರ್ಣಗೊಂಡ ಬಳಿಕ ಮಡಿಲಲ್ಲಿ ನಗುವ ಹಸುಕಂದನ ಮುಖ ನೋಡಿದ ಕೂಡಲೇ ಜೀವನ ಸಾರ್ಥಕವಾದ ಭಾವನೆ ಹೆರಿಗೆಯ ಎಲ್ಲಾ ನೋವನ್ನು ಮರೆಸುತ್ತದೆ. ಈ ನವಮಾಸಗಳಲ್ಲಿ ತಾಯಿಯ ದೇಹ ಹಲವು ಬದಲಾವಣೆಗಳಿಗೆ ಒಳಪಡುತ್ತದೆ. ಒಂದು ಜೀವವನ್ನು ಭೂಮಿಯ ಮೇಲೆ ತಂದ ಬಳಿಕ ಅದರ ಲಾಲನೆ ಪಾಲನೆ ಮತ್ತು ಸಮಾಜದ ಗಣ್ಯ ವ್ಯಕ್ತಿಯಾಗಿಸಲು ನೀಡುವ ತರಬೇತಿ ಹೆಣ್ಣನ್ನು ಜವಾಬ್ದಾರಿಯುತ ತಾಯಿಯನ್ನಾಗಿಸುತ್ತದೆ.
ಆದರೆ ಪ್ರಥಮ ಹೆರಿಗೆ ಪ್ರತಿಯೊಬ್ಬರಲ್ಲಿಯೂ ಆತಂಕ ಮತ್ತು ದುಗುಡವನ್ನು ಹೆಚ್ಚಿಸುತ್ತದೆ. ಇಂದು ಪ್ರಸೂತಿತಜ್ಞರು ಎಲ್ಲೆಡೆ ಲಭ್ಯರಿದ್ದು ಅನುಭವಿ ದಾದಿಯರು ನಿಮ್ಮ ನೆರವಿಗೆ ಬರುವುದರಿಂದ ಹೆರಿಗೆಯ ಕುರಿತಾದ ಆತಂಕಕ್ಕೆ ಕಾರಣವಿಲ್ಲ. ಆದರೂ ಮೊದಲ ಹೆರಿಗೆಯಲ್ಲಿ ಆಗುವ ನೋವನ್ನು ಕಲ್ಪಿಸಿಕೊಂಡೇ ಹೆಚ್ಚಿನ ಯುವತಿಯರು ಹೆದರಿ ನಡುಗುತ್ತಾರೆ. ಈ ನೋವು ಯಾವಾಗ ಪ್ರಾರಂಭವಾಗುತ್ತದೆ? ಎಷ್ಟು ಹೊತ್ತು ಇರುತ್ತದೆ?
ನೋವು ಎಷ್ಟು ಹೆಚ್ಚಿರುತ್ತದೆ ಎಂಬ ಪ್ರಶ್ನೆಗಳು ಪ್ರತಿ ಗರ್ಭಿಣಿಯನ್ನೂ ಕಾಡುತ್ತವೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವುದು ಪ್ರಸೂತಿತಜ್ಞರಿಗೂ ಕಷ್ಟ. ಏಕೆಂದರೆ ಪ್ರತಿಯೊಬ್ಬರ ದೇಹರಚನೆ ಕೊಂಚವಾಗಿ ಭಿನ್ನವಾಗಿದ್ದು ಹಲವು ಪರೀಕ್ಷೆಗಳ ಬಳಿಕವೇ ಒಂದು ಸ್ಥೂಲವಾದ ತೀರ್ಮಾನಕ್ಕೆ ಅವರು ಬರಲು ಸಾಧ್ಯ. ಗರ್ಭಾವಸ್ಥೆಯಲ್ಲಿ ಉಂಟಾಗುವ ಹೆರಿಗೆ ನೋವಿನ ಲಕ್ಷಣಗಳು
ಇಂದು ವೈದ್ಯವಿಜ್ಞಾನ ತುಂಬಾ ಮುಂದುವರೆದಿದ್ದು ಪ್ರಸೂತಿತಜ್ಞರು ಈ ಬಗ್ಗೆ ಸಾಕಷ್ಟು ನಿಖರವಾದ ವಿವರಣೆಯನ್ನು ನೀಡಬಲ್ಲರು. ಅಷ್ಟೇ ಅಲ್ಲ, ನಿಮ್ಮ ಹೆರಿಗೆಯ ಸಂಭಾವ್ಯ ದಿನಾಂಕವನ್ನೂ ನೀಡಬಲ್ಲರು. ಆ ದಿನಾಂಕಕ್ಕೂ ಮುನ್ನವೇ ಆಸ್ಪತ್ರೆಗೆ ದಾಖಲಾಗಿ ಪ್ರಸೂತಿತಜ್ಞರು ನೀಡುವ ಔಷಧಿ ಮತ್ತು ಆರೈಕೆಗಳನ್ನು ಸರಿಯಾದ ಸಮಯಕ್ಕೆ ಪಡೆಯುವ ಮೂಲಕ ಸುಖಕರ ಹೆರಿಗೆ ಸಾಧ್ಯ. ಆದರೆ ಕೆಲವೊಮ್ಮೆ ವೈದ್ಯರು ನೀಡಿದ ದಿನಾಂಕಕ್ಕೂ ಮೊದಲೇ ಹೆರಿಗೆ ನೋವು ಪ್ರಾರಂಭವಾಗಿಬಿಡುತ್ತದೆ. ಇದನ್ನು ನಿರೀಕ್ಷಿಸಿರದ ಮನೆಯವರು ಗಾಬರಿಯಾಗಿ ಸಿಕ್ಕ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಆ ವಾಹನದಲ್ಲಿಯೇ ಹೆರಿಗೆಯಾದ ಪ್ರಸಂಗಗಳಿವೆ. ಗರ್ಭಾವಸ್ಥೆಯಲ್ಲಿ ಕಂಡುಬರುವ ಲಕ್ಷಣಗಳು ಅನುವಂಶೀಯವೇ?
ಆದರೆ ಹೆರಿಗೆಯಾಗಲಿದೆ ಎಂಬುದನ್ನು ಗರ್ಭಿಣಿಯ ದೇಹ ಕೆಲವು ಸಂಜ್ಞೆಗಳ ಮೂಲಕ ಸೂಚನೆ ನೀಡುತ್ತದೆ. ನಿಮ್ಮ ಮನೆಯ ಹಿರಿಯ ತಾಯಿಯರು ಈ ಅನುಭವವನ್ನು ಈಗಾಗಲೇ ಪಡೆದಿರುವುದರಿಂದ ಹೆರಿಗೆಯಾಗಲಿರುವ ಸೂಚನೆಯನ್ನು ಕೂಡಲೇ ಗಮನಿಸುತ್ತಾರೆ. ಈ ಸೂಚನೆಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಧಾವಿಸುವುದು ಅತ್ಯಂತ ಕ್ಷೇಮವಾಗಿದೆ. ಈ ಸೂಚನೆಗಳು ಯಾವುವು ಎಂಬ ಅಮೂಲ್ಯ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಹೊಟ್ಟೆ ಕಿವುಚಿದಂತಾಗುವುದು ಹೆಚ್ಚುತ್ತದೆ
ಸಾಮಾನ್ಯವಾಗಿ ಏಳನೆಯ ತಿಂಗಳಿನಿಂದಲೇ ನಿಧಾನವಾಗಿ ಹೊಟ್ಟೆ ಕಿವುಚಿದಂತಾಗುತ್ತಿದ್ದರೂ ಅದಕ್ಕೆ ಹೆಚ್ಚಿನ ತಲೆಬಿಸಿ ಮಾಡಬೇಕಾಗಿಲ್ಲ. ಏನಾದರೂ ಕೊಂಚ ಆಹಾರ ಸೇವಿಸಿದರೆ ಇದು ಕಡಿಮೆಯಾಗುತ್ತದೆ. ಆದರೆ ಎಂಟೂವರೆ ತಿಂಗಳ ಬಳಿಕ ಈ ಕಿವುಚುವಿಕೆ ಹೆಚ್ಚುತ್ತಾ ಹೋಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆ ಕಿವುಚಿದಂತಾಗುವುದು ಹೆಚ್ಚುತ್ತದೆ
ಒಂದು ವೇಳೆ ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಕಿವುಚುವಿಕೆ ಮುಂದುವರೆದರೆ ನಿರ್ಲಕ್ಷ್ಯ ಸಲ್ಲದು. ಕೂಡಲೇ ನಿಮ್ಮ ಆರೈಕೆಯ ಹೊಣೆ ಹೊತ್ತಿರುವವರಿಗೆ ಅಥವಾ ನಿಮ್ಮ ವೈದ್ಯರಿಗೆ ಕೂಡಲೇ ಸುದ್ದಿ ಮುಟ್ಟಿಸುವುದು ಅಗತ್ಯ. ಒಂದು ವೇಳೆ ಹೆರಿಗೆಯ ಪ್ರಾರಂಭದ ಲಕ್ಷಣವಾಗಿದ್ದರೆ ನೀರು ಕುಡಿಯುವುದರಿಂದ ಮತ್ತು ಏನನ್ನೂ ತಿನ್ನುವುದರಿಂದ ಈ ಕಿವುಚುವಿಕೆ ನಿಲ್ಲದು.

ಆಮ್ನಿಯಾಟಿಕ್ ದ್ರವದಲ್ಲಿ ಹೆಚ್ಚಳ
ಮಗುವಿನ ಮೂತ್ರ ಮತ್ತು ವಿಷಕಾರಿ ವಸ್ತುಗಳನ್ನೂ ಗರ್ಭಾವಸ್ಥೆಯಲ್ಲಿ ತಾಯಿಯ ಮೂತ್ರದ ಮೂಲಕವೇ ಹೊರಹಾಕಲಾಗುತ್ತದೆ. ಮಗುವಿನ ಮೂತ್ರವನ್ನು ಸಂಗ್ರಹಿಸಲು omniotic sac ಎಂಬ ಚೀಲವಿದೆ. ಹನ್ನೊಂದನೇ ವಾರದಲ್ಲಿ ಈ ಚೀಲ ನಿಧಾನವಾಗಿ ತುಂಬಿಕೊಳ್ಳಲು ಪ್ರಾರಂಭವಾಗುತ್ತದೆ. ಮೊದಮೊದಲು ಈ ಪ್ರಮಾಣ ತೀರಾ ಅಲ್ಪವಾಗಿರುವುದರಿಂದ ಹೆಚ್ಚಿನ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದರೆ ಇಪ್ಪತ್ತನೆಯ ವಾರದ ಬಳಿಕ ಮಗುವಿನ ಮೂತ್ರವೂ ಹೆಚ್ಚುವುದರಿಂದ ಪದೇ ಪದೇ ತಾಯಿಗೆ ಮೂತ್ರಕ್ಕೆ ಅವಸರವಾಗುತ್ತದೆ. ಹೆರಿಗೆ ಹತ್ತರವಾದಂತೆ ಈ ಚೀಲವನ್ನು ಬರಿದು ಮಾಡಿ ಹೆರಿಗೆ ಸುಲಭವಾಗಲು ದೇಹ ಅವಸರಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಮ್ನಿಯಾಟಿಕ್ ದ್ರವದಲ್ಲಿ ಹೆಚ್ಚಳ
ನಿಸರ್ಗ ನೀಡಿರುವ ಈ ವರದಾನ ಹೆರಿಗೆ ಸಮೀಪಿಸುತ್ತಿದೆ ಎಂದು ಸೂಚಿಸುವ ಸ್ಪಷ್ಟ ಸೂಚನೆಯಾಗಿದೆ. ಹೆರಿಗೆಗೂ ಮುನ್ನ ಅನೈಚ್ಛಿಕವಾಗಿ ಮತ್ತು ಅತಿ ನಿಧಾನವಾಗಿ ಮೂತ್ರ ತೊಟ್ಟುತೊಟ್ಟಾಗಿ ಹೊರಬರಲು ಪ್ರಾರಂಭಿಸುತ್ತದೆ. ಹೆರಿಗೆ ಸಮೀಪಿಸುತ್ತಿದ್ದಂತೆ ಇದು ತಾರಕಕ್ಕೇರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ "water breaking" ಎಂದು ಕರೆಯುತ್ತಾರೆ. ಈ ಸೂಚನೆ ಸಿಕ್ಕ ಕೂಡಲೇ ಮನೆಯವರು ಪ್ರಸೂತಿಗೃಹಕ್ಕೆ ಕಳುಹಿಸಲು ಏರ್ಪಾಡು ಮಾಡುವುದು ಉತ್ತಮ.

ಗರ್ಭಕೋಶದ ಕುತ್ತಿಗೆಯ ಭಾಗ ಸೆಳೆತ ಕಳೆದುಕೊಳ್ಳುತ್ತದೆ
ಗರ್ಭಾವಸ್ಥೆಯ ಅಷ್ಟೂ ದಿನಗಳಲ್ಲಿ ತಾಯಿಯ ಗರ್ಭ ದೊಡ್ಡದಾಗುತ್ತಾ ಹೋಗುತ್ತದೆಯೇ ವಿನಃ ಗರ್ಭಕೋಶದ ಕಂಠ ಅಥವಾ ಇಕ್ಕಟ್ಟಿನ ಭಾಗ (cervix) ಹೆಚ್ಚೂ ಕಡಿಮೆ ಮೊದಲಿದ್ದ ಹಾಗೇ ಇರುತ್ತದೆ, ಮತ್ತು ಇರಬೇಕು ಕೂಡಾ. ಏಕೆಂದರೆ ತಾಯಿಯಾಗುವವಳು ನಿಂತಿರುವಾಗ ಆಕೆಯ ಒಳ ಅಂಗಗಳ ಭಾರ ಕೊಂಚವಾದರೂ ಗರ್ಭದ ಮೇಲೆ ಬೀಳುತ್ತದೆ. ಗರ್ಭಕೋಶದ ಕಂಠ ಈಗ ಹಿಗ್ಗಬಾರದು, ಆಗಲೇ ಮಗು ಗರ್ಭಕೋಶದೊಳಗೆ ಭದ್ರವಾಗಿರಲು ಸಾಧ್ಯ. ಆದರೆ ಹೆರಿಗೆಯ ದಿನ ಸಮೀಪಿಸುತ್ತಿದ್ದಂತೆಯೇ ಈ ಕಂಠ ತನ್ನ ಸೆಳೆತವನ್ನು ಕಳೆದುಕೊಂಡು ಅಗಲವಾಗಲು ಸಿದ್ಧವಾಗುತ್ತದೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ (Cervical dilation) ಎಂದು ಕರೆಯುತ್ತಾರೆ. ತಾಯಿಯಾಗುವವಳಿಗೆ ಈ ಅನುಭವ ಸ್ಪಷ್ಟವಾಗಿ ಆಗುತ್ತದೆ.

ಗರ್ಭಕೋಶದ ಕುತ್ತಿಗೆಯ ಭಾಗ ಸೆಳೆತ ಕಳೆದುಕೊಳ್ಳುತ್ತದೆ
ಇಷ್ಟರವರೆಗೆ ಮಗುವನ್ನು ಜಾರದಂತೆ ಹಿಡಿದಿಟ್ಟುಕೊಂಡಿದ್ದ ಹೊಟ್ಟೆ ಏಕಾ ಏಕಿ ಸಡಿಲವಾದಂತೆ, ಹೊಟ್ಟೆಯ ಮಗು ಇನ್ನಷ್ಟು ಕೆಳಗೆ ಜಾರಿದ ಅನುಭವವಾಗುತ್ತದೆ. ಇದು ಹೆರಿಗೆ ಸಮೀಪಿಸುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ಕೆಲವರಿಗೆ ಈ ಪ್ರಕ್ರಿಯೆ ನಿಧಾನವಾಗಿ ಆಗುತ್ತದೆ. ಗಾಬರಿ ಬೇಡ, ಪ್ರಸೂತಿ ತಜ್ಞರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿಯಿದ್ದು ಅವರು ಕಾಳಜಿ ವಹಿಸುತ್ತಾರೆ. ನಿಮ್ಮ ಕೆಲಸವೇನಿದ್ದರೂ ಸೂಕ್ತ ಸಮಯಕ್ಕೆ ವೈದ್ಯರ ಬಳಿ ತಲುಪುವುದು ಮಾತ್ರ.

ಅತಿಸಾರ ಹೆಚ್ಚಾಗುತ್ತದೆ
ಹೆರಿಗೆಯ ದಿನ ಸಮೀಪಿಸುತ್ತಿದ್ದಂತೆಯೇ ಗರ್ಭಿಣಿಯಲ್ಲಿ ಅತಿಸಾರ ತೊಂದರೆಯೂ ಹೆಚ್ಚಾಗುತ್ತಾ ಹೋಗುತ್ತದೆ. ವಾಸ್ತವವಾಗಿ ಇದು ನಿಸರ್ಗ ನೀಡಿದ ಒಂದು ವರದಾನವಾಗಿದೆ. ಏಕೆಂದರೆ ಒಂದು ವೇಳೆ ಇತರ ಸಮಯದಲ್ಲಿ ಆಗುವಂತೆ ಮಲವಿಸರ್ಜನೆಯ ಸಮಯದಲ್ಲಿ ಹೆಚ್ಚಿನ ಒತ್ತಡ ನೀಡಬೇಕಾದರೆ ಇದು ಪ್ರತ್ಯಕ್ಷವಾಗಿ ಅವಧಿಗೂ ಮುನ್ನವೇ ಹೆರಿಗೆಗೆ ಪ್ರಚೋದಿಸಬಹುದು. ಆದ್ದರಿಂದ ಹೆರಿಗೆಯ ಸಮಯ ಹತ್ತಿರಾದಂತೆ ಪ್ರಸೂತಿತಜ್ಞರು ಹೆಚ್ಚಿನ ದ್ರವಾಹಾರಗಳನ್ನು ಸೇವಿಸಲು ಸಲಹೆ ಮಾಡುತ್ತಾರೆ. ಹೆರಿಗೆಗೂ ಮುನ್ನ ಜೀರ್ಣಾಂಗಗಳನ್ನು ಬರಿದುಗೊಳಿಸಿ ಸುಸೂತ್ರ ಹೆರಿಗೆಗೆ ಹೆಚ್ಚಿನ ಸ್ಥಳಾವಕಾಶ ಮಾಡಿಕೊಡಲು ದೇಹ ಬಲವಂತವಾಗಿ ಅತಿಸಾರಕ್ಕೆ ಸೂಚನೆ ನೀಡುತ್ತದೆ. ಹೆರಿಗೆಗೂ ಮುನ್ನ ನಾಲ್ಕಾರು ಬಾರಿ ಅತಿಸಾರವಾದರೆ ಇದು ಸಹಾ ಹೆರಿಗೆಯ ಸಮಯ ಹತ್ತಿರವಾಗಿದೆ ಎಂಬ ಸೂಚನೆಯಾಗಿದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ prostaglandins release ಎಂದು ಕರೆಯುತ್ತಾರೆ.

ಅತಿಯಾದ ಬೆನ್ನು ನೋವು ಆವರಿಸುತ್ತದೆ
ಸಾಮಾನ್ಯವಾಗಿ ಏಳನೆಯ ತಿಂಗಳಿನಿಂದಲೇ ಮಗುವಿನ ಭಾರವನ್ನು ಸರಿದೂಗಿಸಲು ಗರ್ಭಿಣಿ ಕೊಂಚ ಹಿಂಭಾಗಕ್ಕೆ ಓಲುವಂತೆ ನಡೆಯಬೇಕಾಗುತ್ತದೆ. ಇದರ ಪರಿಣಾಮವಾಗಿ ಬೆನ್ನುಮೂಳೆ, ಸೊಂಟದ ಮತ್ತು ಬೆನ್ನಿನ ಸ್ನಾಯುಗಳು ಹೆಚ್ಚಿನ ಒತ್ತಡಕ್ಕೊಳಗಾಗಿ ಕೊಂಚ ನೋವು ಬಾಧಿಸುತ್ತದೆ. ಇದು ಸಾಮಾನ್ಯವಾಗಿದೆ. ಆದರೆ ಹೆರಿಗೆ ಸಮೀಪಿಸುತ್ತಿದ್ದಂತೆ ಬೆನ್ನಿನ ಕೆಳಭಾಗ, ಕೆಳಹೊಟ್ಟೆಯ ಭಾಗದಲ್ಲಿ ವಿಪರೀತವಾಗಿ ನೋವು ಕೊಡುತ್ತವೆ. ಏಕೆಂದರೆ ಈ ಭಾಗದ ಅಷ್ಟೂ ಸ್ನಾಯುಗಳು ಸಡಿಲವಾಗಿ ಮಗು ಹೊರಬರಲು ದಾರಿ ಮಾಡಿಕೊಡಬೇಕು.

ಅತಿಯಾದ ಬೆನ್ನು ನೋವು ಆವರಿಸುತ್ತದೆ
ಜೊತೆಗೇ ಮೂಳೆಗಳ ಸಂದುಗಳೂ ಸೂಜಿ ಚುಚ್ಚಿದಂತೆ ನೋವು ನೀಡುತ್ತವೆ. ಈ ನೋವನ್ನು ತಡೆಯಲು ನಿಧಾನವಾಗಿ ನಡೆಯುತ್ತಿರುವುದು ಮತ್ತು ನಿಂತ ಭಂಗಿಯಲ್ಲಿ ಮುಂದೆ ಬಾಗುವುದು ಉತ್ತಮ. ಯಾವುದೇ ಕಾರಣಕ್ಕೂ ಹೊಟ್ಟೆ ಕೆಳಗಿರುವಂತೆ ಮಲಗಕೂಡದು. ಕೆಳಬರುತ್ತಿರುವ ಮಗುವಿನ ತಲೆ ಬೆನ್ನುಹುರಿಗೆ ಕೊಂಚ ಒತ್ತಡ ನೀಡುವುದು ಈ ನೋವನ್ನು ಹೆಚ್ಚಿಸುತ್ತದೆ. ಈ ಸೂಚನೆಯನ್ನು ಅಲಕ್ಷಿಸದೇ ಕೂಡಲೇ ವೈದ್ಯರ ಬಳಿ ಕೊಂಡೊಯ್ಯಬೇಕು.



Click it and Unblock the Notifications