Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹದಿಹರೆಯದಲ್ಲಿ ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳೇನು?
ಜೀವನದಲ್ಲಿ ಎಲ್ಲದಕ್ಕೂ ಒಂದು ಸಮಯ ಎಂಬುದಿರುತ್ತದೆ. ನಮ್ಮ ದೇಹ ಕೂಡ ಹಂತ ಹಂತವಾಗಿ ಬೆಳೆದು ಸಮಯಕ್ಕೆ ಸರಿಯಾಗಿ ತಯಾರಾಗುತ್ತದೆ. ಅನಿರೀಕ್ಷಿತವಾಗಿ ಸಮಸ್ಯೆಗಳು ಬಂದಾಗ ಅದಕ್ಕೆ ಹೊಂದಿಕೊಳ್ಳಲು ನಮ್ಮ ದೇಹ ಸಮಯ ತೆಗೆದುಕೊಳ್ಳುತ್ತದೆ.
ಪ್ರತಿಯೊಬ್ಬ ಮಹಿಳೆಯೂ ಗರ್ಭಿಣಿಯಾಗುವುದರ ಬಗ್ಗೆ ತನ್ನದೇ ಆದ ಕನಸನ್ನು ಹೊಂದಿರುವುದು ಸಹಜ. ಮಗುವನ್ನು ಹೊತ್ತು ಹೆರುವುದು ತಾಯಿ ಹೃದಯಕ್ಕೆ ಸಂತೋಷ ನೀಡುವುದರ ಜೊತೆಗೆ ಮಹಿಳೆಯನ್ನು ಪರಿಪೂರ್ಣಳನ್ನಾಗಿಸುತ್ತದೆ. ಆದರೆ ಹದಿಹರೆಯದಲ್ಲಿ ಗರ್ಭಧಾರಣೆ ಹೊಂದುವುದು ಕೂಡ ಪ್ರಕೃತಿಗೆ ವಿರುದ್ಧವಾದ ಕ್ರಿಯೆಗಳಲ್ಲಿ ಒಂದು. ಹೆರಿಗೆ ಅವಧಿಯಲ್ಲಿ ಅಪ್ಪಿತಪ್ಪಿಯೂ ಇಂತಹ ತಪ್ಪು ಮಾಡದಿರಿ!
ಅನಿರೀಕ್ಷಿತವಾಗಿ ಗರ್ಭಿಣಿಯಾದಾಗ ಸಂತೋಷ ಮತ್ತು ಸಂಭ್ರಮ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು ಸಹಜ. ಹದಿಹರೆಯದಲ್ಲಿ ಗರ್ಭವತಿಯಾಗುವುದರಿಂದ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೊಟ್ಟಮೊದಲು ಮಗು ಮತ್ತು ತಾಯಿ ಇಬ್ಬರೂ ದೈಹಿಕವಾಗಿ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗಿ ಬರುತ್ತದೆ. ಇದಲ್ಲದೆ ಸಾಮಾಜಿಕವಾಗಿ ಮತ್ತು ಹಣಕಾಸಿನ ವಿಷಯದಲ್ಲಿ ಕೂಡ ಸಮಸ್ಯೆಗಳು ತಪ್ಪಿದ್ದಲ್ಲ. ಹದಿಹರೆಯದ ಗರ್ಭಧಾರಣೆಗೆ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮುಖ್ಯ ಕಾರಣಗಳಲ್ಲಿ ಒಂದು.
ಬಲವಂತವಾಗಿ ಮದುವೆ ಮಾಡಿಸಿ ಸಂಸಾರದ ಜಂಜಾಟದಲ್ಲಿ ಬೀಳುವಂತೆ ಮಾಡುವುದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಸಣ್ಣ ವಯಸ್ಸಿಗೆ ದೈಹಿಕ ಸಂಪರ್ಕ ಹೊಂದಿ ಗರ್ಭಿಣಿ ಆಗುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಕೆಲವೊಮ್ಮೆ ಹದಿಹರೆಯದ ತರುಣಿಯರು ಎಚ್ಚರಿಕೆಯಿಂದ ಇರದ ಕಾರಣದಿಂದಲೂ ಕೂಡ ಗರ್ಭಿಣಿಯಾಗುತ್ತಾರೆ. ದೈಹಿಕ ಆರೋಗ್ಯದ ಜೊತೆಗೆ ಹದಿಹರೆಯದಲ್ಲಿ ಗರ್ಭವತಿಯಾಗುವುದರಿಂದ ಇತರ ತೊಂದರೆಗಳು ಕೂಡ ಕಾಣಿಸಿಕೊಳ್ಳುತ್ತದೆ ಅದರ ಬಗ್ಗೆ ಮಾಹಿತಿ ಇಲ್ಲಿದೆ...

ಅಧಿಕ ರಕ್ತದೊತ್ತಡ
ಹದಿಹರೆಯದಲ್ಲಿ ಗರ್ಭಿಣಿಯಾಗುದರಿಂದ ಕುಟುಂಬದಲ್ಲಿ ಒತ್ತಡ ಕಾಣಿಸಿಕೊಳ್ಳುವುದರ ಜೊತೆಗೆ ಸಾಮಾಜಿಕವಾಗಿ ಕೂಡ ಅವಹೇಳನಕ್ಕೆ ಒಳಗಾಗಬೇಕಾಗುತ್ತದೆ.ಇದರಿಂದ ಅಧಿಕ ಒತ್ತಡಕ್ಕೆ ಒಳಗಾಗಿ ರಕ್ತದೊತ್ತಡದಲ್ಲಿ ಏರುಪೇರಾಗುತ್ತದೆ. ಹದಿಹರೆಯದಲ್ಲಿ ತಾಯಿಯಾಗುತ್ತಿರುವವರಲ್ಲಿ 20-30 ರಲ್ಲಿ ತಾಯಿಯಾಗುವವರಿಗಿಂತ ಹೆಚ್ಚು ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣುತ್ತದೆ.

ಅಕಾಲಿಕ ಹೆರಿಗೆ
ಅಕಾಲಿಕ ಹೆರಿಗೆ ಹದಿಹರೆಯದ ಗರ್ಭಿಣಿಯರಲ್ಲಿ ಕಾಣುವ ಇನ್ನೊಂದು ಸಮಸ್ಯೆ. ಹದಿಹರೆಯದಲ್ಲಿ ಬಾಲಕಿಯ ದೇಹವು ತಾಯಿಯಾಗಲು ತಯಾರಾಗುತ್ತಿರುತ್ತದೆ. ಆದರೆ ದೇಹ ತಯಾರಾಗುವ ಮೊದಲೇ ಗರ್ಭವತಿಯಾದಲ್ಲಿ ಅಕಾಲಿಕ ಹೆರಿಗೆಯಾಗಿ ತಾಯಿ ಮತ್ತು ಮಗು ಇಬ್ಬರಿಗೂ ಕೂಡ ತೊಂದರೆಯಾಗಬಹುದು.

ಇತರ ಆರೋಗ್ಯದ ತೊಂದರೆಗಳು
ಹರೆಯದ ತಾಯಂದಿರು ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಅನುಭವಿಸಬೇಕಾಗುತ್ತದೆ. ಹದಿಹರೆಯದಲ್ಲಿ ಗರ್ಭಿಣಿಯಾದಾಗ ತೂಕ ಕಡಿಮೆಯಾಗುವುದು, ಲೈಂಗಿಕ ರೋಗಗಳು, ಅನೀಮಿಯ, ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಜೊತೆಗೆ ಹೆರಿಗೆ ಸಂದರ್ಭದಲ್ಲಿ ತಾಯಿಗೆ ಹೆಚ್ಚು ರಕ್ತ ಸ್ರಾವವಾಗುವ ಸಂಭವವಿರುತ್ತದೆ.

ಮಗುವಿಗೆ ತೊಂದರೆ
ಅಕಾಲಿಕ ಹೆರಿಗೆಯಿಂದ ಕೇವಲ ತಾಯಿಗೆ ಮಾತ್ರವಲ್ಲ ಮಗುವಿಗೆ ಕೂಡ ಸಮಸ್ಯೆ. ಮಗು ಹುಟ್ಟುವಾಗ ಕಡಿಮೆ ತೂಕ ಹೊಂದಿರುವುದು ಹರಿಹರೆಯದಲ್ಲಿ ಮಗು ಹೆರುವಾಗ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಜೊತೆಗೆ ಕಾಮಾಲೆ, ಮಲೇರಿಯ ಮುಂತಾದ ಅನಾರೋಗ್ಯಗಳು ಕಾಣಿಸಿಕೊಳ್ಳಬಹುದು. ಅದೆಲ್ಲದಕ್ಕಿಂತ ಹೆಚ್ಚಾಗಿ ತಾಯಿಗೆ ಮಗುವನ್ನು ನೋಡಿಕೊಳ್ಳುವ ಶಕ್ತಿ ಇರುವುದಿಲ್ಲ.



Click it and Unblock the Notifications