Latest Updates
-
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ!
ಒಂಬತ್ತನೇ ತಿಂಗಳಲ್ಲಿ ಗರ್ಭಿಣಿಯರು ಪಾಲಿಸಬೇಕಾದ ಎಚ್ಚರಿಕೆಗಳೇನು?
ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಸುಂದರ ಕನಸು. ಹತ್ತು ಹಲವು ಹರಕೆ ಹೊತ್ತು ವೈದ್ಯರ ಸಲಹೆಗಳನ್ನು ಪಾಲಿಸಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ಬಳಿಕ ಹಾಗು ತನ್ನ ಗರ್ಭದಲ್ಲಿ ಬೆಳೆಯುವ ಪುಟ್ಟ ಕಂದಮ್ಮನ ಕನಸನ್ನು ನನಸಾಗಿಸಿದ ಬಳಿಕ ಅಳ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ತಜ್ಞರ ಅನುಭವದ ಪ್ರಕಾರ ಸೂಕ್ತ ವಯಸ್ಸಿನಲ್ಲಿ ಗರ್ಭವತಿಯಾಗುವುದು ಅತ್ಯಂತ ಸಂತೋಷಕರ ವಿಷಯವಾಗಬೇಕು ಹಾಗೂ ನವಮಾಸದುದ್ದಕ್ಕೂ ಸಂತೋಷದಿಂದ ದಿನಗಳನ್ನು ಕಳೆಯಬೇಕು. ಇದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಈ ಮನೋಭಾವ ಮತ್ತು ಆರೋಗ್ಯವಂತ ಶರೀರ ಮಗುವಿನ ಬೆಳವಣಿಗೆಗೆ ಹಾಗೂ ಸುಖಕರ ಪ್ರಸವಕ್ಕೆ ನಾಂದಿಯಾಗುತ್ತದೆ.
ಸಂತೋಷದಿಂದಿರುವ ಮನಸ್ಸು ಒಂದು ಧನಾತ್ಮಕ ವಾತಾವರಣವನ್ನು ಸೃಷ್ಟಿಸಿ ತಾಯಿ ಮತ್ತು ಮಗುವಿಗೆ ಹಾನಿಕರವಾಗುವ ದುಷ್ಟಶಕ್ತಿಗಳನ್ನು ದೂರವಿರಿಸುತ್ತದೆ. ಒಮ್ಮೆ ಗರ್ಭವತಿಯಾಗಬೇಕೆಂಬ ಸ್ಪಷ್ಟ ಬಯಕೆ ಮೂಡಿದ ಬಳಿಕ ಗರ್ಭ ಧರಿಸಿದರೆ ಈ ಹಂತದಲ್ಲಿ ಕಾಡುವ ಆರೋಗ್ಯ ವೈಪರೀತ್ಯಗಳು ಅತ್ಯಂತ ಕಡಿಮೆಯಾಗುತ್ತವೆ. ನಲವತ್ತರ ಬಳಿಕದ ಗರ್ಭಧಾರಣೆ: ಅಪಾಯ ಕಟ್ಟಿಟ್ಟ ಬುತ್ತಿ

ಗರ್ಭಾವಸ್ಥೆಯಲ್ಲಿ ಅತಿ ಮುಖ್ಯವಾಗಬೇಕಾಗಿರುವುದೆಂದರೆ ಬೆಳೆಯುತ್ತಿರುವ ನಿಮ್ಮ ಕೆಳಹೊಟ್ಟೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು. ಇದರೊಳಗೆ ತನ್ನ ರಕ್ತವನ್ನು ಹಂಚಿಕೊಳ್ಳುವ, ತನ್ನ ಹೃದಯದೊಂದಿಗೇ ಮಿಡಿಯುವ ಪುಟ್ಟ ಕಂದನಿದೆ ಎಂಬ ಭಾವನೆ ಮೂಡಿದ ಬಳಿಕ ನಿಮಗೆ ಗರ್ಭವತಿಯಾಗಿರುವ ಬಗ್ಗೆ ಅಭಿಮಾನ ಮೂಡುತ್ತದೆ.
ಅಷ್ಟೇ ಏಕೆ ಈ ತಿಂಗಳ ಕೊನೆಗೆ ತಾನು ತಾಯಿಯಾಗಲಿದ್ದೇನೆ ಎನ್ನುವ ವಿಚಾರವು ನಿಮ್ಮಲ್ಲಿ ಇನ್ನಷ್ಟು ಉದ್ವೇಗ, ಸಂತೋಷ ಎಲ್ಲವೂ ಒಟ್ಟಿಗೆ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಬನ್ನಿ ಒಂಬತ್ತನೆ ತಿಂಗಳಿನಲ್ಲಿ ನಿಮ್ಮ ದೇಹದಲ್ಲಿ ಕಂಡು ಬರುವ ಬದಲಾವಣೆಗಳು ಯಾವುವು ಮುಂದೆ ಓದಿ...
ಪೆಲ್ವಿಕ್ ನೋವು
ನಿಮ್ಮ ಮಗುವಿನ ತಲೆಯು ಈ ಅವಧಿಯಲ್ಲಿ ಪೆಲ್ವಿಕ್ ಭಾಗದಲ್ಲಿ ಬಂದು ಕೂರುತ್ತದೆ. ಕೆಳಹೊಟ್ಟೆ ಮತ್ತು ಪೆಲ್ವಿಸ್ ಭಾಗದಲ್ಲಿ ನಿಮಗೆ ಇದರಿಂದ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಇದು ಹೆರಿಗೆ ನೋವಿನ ಲಕ್ಷಣ. ಇಂತಹ ನೋವು ಬಂದಾಗ ಸ್ವಲ್ಪ ಜಾಗರೂಕರಾಗಿರಿ.
ಸ್ತನಗಳಲ್ಲಿ ಸ್ರವಿಸುವಿಕೆ
ಈ ಅವಧಿಯಲ್ಲಿ ನಿಮ್ಮ ಸ್ತನಗಳು ತುಂಬಾ ಸೂಕ್ಷ್ಮವಾಗುತ್ತಾ ಸಾಗುತ್ತವೆ. ಈ ಹಂತದಲ್ಲಿ ಹಳದಿ ಬಣ್ಣದ ಕೊಲೊಸ್ಟ್ರಮ್ ಎನ್ನುವ ದ್ರವವು ನಿಮ್ಮ ಸ್ತನದಿಂದ ಸ್ರವಿಸುತ್ತದೆ. ಇದು ಮಗುವಿನ ಮೊದಲ ಆಹಾರವಾಗಿರುತ್ತದೆ. ಇದು ನೀವು ಮಗುವಿಗೆ ಹಾಲು ಕುಡಿಸಲು ಸಿದ್ಧರಾಗಿದ್ದೀರಿ ಎಂದು ತೋರಿಸುತ್ತದೆ. ಇಲ್ಲಿಯವರೆಗೆ ನೀವು ಬ್ರೀಸ್ಟ್ ಪ್ಯಾಡ್‌ಗಳನ್ನು ಧರಿಸುವುದರಿಂದ ಈ ಸಮಸ್ಯೆಯನ್ನು ನಿಭಾಯಿಸಬಹುದು.
ಯೋನಿಯಲ್ಲಿ ಸ್ರವಿಸುವಿಕೆ ಮತ್ತು ಕಲೆಗಳು
ಯೋನಿಯಲ್ಲಿ ಸ್ರವಿಸುವಿಕೆ ಅಧಿಕವಾಗಿ ಕಂಡು ಬಂದಷ್ಟು, ನೀವು ಸಾಮಾನ್ಯ ಮಟ್ಟದ ಪಿಎಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಇನ್‍ಫೆಕ್ಷನ್‌ಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನೆರವಾಗುತ್ತದೆ. ಮತ್ತೊಂದು ಅಂಶ ಕಲೆಗಳು, ನಿಮಗೆ ಹೆರಿಗೆ ನೋವು ಆರಂಭವಾಗುವುದನ್ನು ತೋರಿಸುತ್ತವೆ. ಆದರೆ ಗಮನಿಸಬೇಕಾದ ಅಂಶವೊಂದಿದೆ, ಒಂಬತ್ತನೆ ತಿಂಗಳಿನಲ್ಲಿ ಕಲೆಗಳು ಕಾಣಿಸಿಕೊಳ್ಳಲು ಹಲವಾರು ವೈದ್ಯಕೀಯ ಕಾರಣಗಳು ಇರಬಹುದು, ಆದರೆ ನಿಮಗೆ "ರಕ್ತ"ದ ಕಲೆಗಳು ಕಂಡು ಬಂದ ತಕ್ಷಣ, ವೈದ್ಯರನ್ನು ಅಥವಾ ಆಸ್ಪತ್ರೆಯನ್ನು ಸಂಪರ್ಕಿಸುವುದನ್ನು ಮರೆಯಬೇಡಿ. ಗರ್ಭಿಣಿಯರೇ ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ಮರೆಯದಿರಿ
ಸುಳ್ಳು ಕುಗ್ಗುವಿಕೆಗಳು
ಇದನ್ನು ಬ್ರಾಕ್ಸ್‌ಟನ್ ಹಿಕ್ಸ್ ಕಾಂಟ್ರ್ಯಾಕ್ಷನ್ಸ್ ಎಂದು ಸಹ ಕರೆಯುತ್ತಾರೆ. ಇದು ನಿಮ್ಮ ಹೊಟ್ಟೆಯಲ್ಲಿ ಕುಗ್ಗುವಿಕೆಯ ಅನುಭವವನ್ನು ತರುತ್ತದೆ. ಇದು ಅಂದಾಜು 30 ಸೆಕೆಂಡ್‌ಗಳ ಕಾಲ ಇರುತ್ತದೆ. ಒಂದು ವೇಳೆ ಅದಕ್ಕೂ ಮೇಲೆ ಇದು ನಿಮಗೆ ಕಾಣಿಸಿಕೊಂಡಲ್ಲಿ, ಮತ್ತು ಜೊತೆಗೆ ಬೆನ್ನು ನೋವು ಕಾಣಿಸಿಕೊಂಡಲ್ಲಿ ಮೊದಲು ವೈದ್ಯರ ಬಳಿಗೆ ಹೋಗಿ. ಏಕೆಂದರೆ ನಿಮಗೆ ಹೆರಿಗೆ ನೋವು ಆರಂಭವಾಗಿರಬಹುದು.
ನಿಮ್ಮ ಮಗುವಿನ ಬೆಳವಣಿಗೆ
ನಿಮ್ಮ ಮಗುವಿಗೆ ಏನಾಗುತ್ತದೆ ಎಂದು ನೋಡಿ. ಈ ಅವಧಿಯಲ್ಲಿ ನಿಮ್ಮ ಮಗುವಿನ ತ್ವಚೆಯು ಮೃದುವಾಗುತ್ತದೆ: ಲನುಗೊ ಎಂಬ ಕೂದಲು ನಿಮ್ಮ ಮಗುವಿನ ತ್ವಚೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ಮಗುವನ್ನು ಗರ್ಭದಲ್ಲಿರುವಾಗಲೇ ರಕ್ಷಿಸಲು, ಹುಟ್ಟಿಕೊಂಡಿರುತ್ತದೆ.
ನಿಮ್ಮ ಮಗು ಉಸಿರಾಡುವುದನ್ನು ಕಲಿಯುತ್ತದೆ
ಹೌದು, ನಿಮ್ಮ ಹೆರಿಗೆ ದಿನ ಸಮೀಪಿಸಿದಂತೆಲ್ಲ, ನಿಮ್ಮ ಮಗು ಉಸಿರಾಡುವುದನ್ನು ಪ್ರಯತ್ನಿಸಲು ಆರಂಭಿಸುತ್ತದೆ. ಉಸಿರನ್ನು ಒಳಗೆ ತೆಗೆದುಕೊಳ್ಳುವ ಮತ್ತು ಹೊರಗೆ ಹಾಕುವ ಬಗೆಯನ್ನು ಇದು ಪ್ರಯತ್ನಿಸುತ್ತದೆ. ಇದರಿಂದ ಮಗು ಹುಟ್ಟಿದ ಮೇಲೆ ಜೀವಿಸಲು ಬೇಕಾದ ತರಬೇತಿ ಅದಕ್ಕೆ ಗರ್ಭದಲ್ಲಿಯೇ ದೊರೆಯುತ್ತದೆ, ಇದು ಮಗುವಿಗೆ ತೀರಾ ಅವಶ್ಯಕ.
ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗುತ್ತದೆ
ಈ ಕೊನೆಯ ದಿನಗಳಲ್ಲಿ ನಿಮ್ಮ ಪ್ಲಾಸೆಂಟಾವು ನಿಮ್ಮ ಮಗುವಿಗೆ ಅವಶ್ಯಕವಾದ ಆಂಟಿಬಯೋಟಿಕ್‌ಗಳನ್ನು ಒದಗಿಸುತ್ತದೆ. ಇವುಗಳು ಇನ್‌ಫೆಕ್ಷನ್ ಮೇಲೆ ಹೋರಾಡುತ್ತವೆ ಮತ್ತು ಪ್ರಸವದ ನಂತರ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಗು ಜನಿಸಿದ ನಂತರ ನೀವು ಕುಡಿಸುವ ಎದೆ ಹಾಲು ಸಹ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಬನ್ನಿ ಮಗುವಿಗೆ ಎದೆಹಾಲು ಏಕೆ ಮುಖ್ಯ ಎನ್ನುವುದರ ಕುರಿತು ಇಲ್ಲಿ ಓದಿ. ಮಗುವಿನ ದೈಹಿಕ ಕ್ಷಮತೆಗೆ ತಾಯಿಯ ಎದೆ ಹಾಲು ಅತ್ಯಗತ್ಯ
ನಿಮ್ಮ ಮಗುವಿನ ಜನನ
ನೀವು ಹೆರಿಗೆ ಕೋಣೆಗೆ ಈ ತಿಂಗಳಿನಲ್ಲಿ ಯಾವಾಗ ಬೇಕಾದರು ಹೋಗಬಹುದು. ಆದರೆ ಕೊನೆಯ ಎರಡು ವಾರಗಳು ಹೆರಿಗೆ ನೋವಿನ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಹೆರಿಗೆ ಬ್ಯಾಗ್ ಮತ್ತು ಕಿಟ್ ಸಿದ್ಧವಾಗಿಟ್ಟುಕೊಳಿ. ಅದು ಸ್ವಾಭಾವಿಕ ಹೆರಿಗೆ ಅಥವಾ ಸಿ-ಸೆಕ್ಷನ್ ಯಾವುದಾದರು ಸರಿ, ಮಗುವಿನ ಜನನವು ನೋವನ್ನು ಮರೆಸುತ್ತದೆ. ಯಾವಾಗ ನೀವು ಕಣ್ಣು ಬಿಟ್ಟು ಮಗುವನ್ನು ನೋಡುತ್ತೀರೋ, ಆಗ ನೀವು ಇಷ್ಟು ದಿನ ಪಟ್ಟ ನೋವಿಗೆ ಸಾರ್ಥಕತೆ ದೊರೆಯುತ್ತದೆ.



Click it and Unblock the Notifications
