Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ವಿಶ್ವ ಹಾಲುಣಿಸುವ ದಿನಾಚರಣೆ: ಸ್ತನ್ಯಪಾನದ ಮಹತ್ವ ಅರಿಯಿರಿ
ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ರೋಮಾಂಚನದ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಮಗುವಿಗೆ ಹಾಲುಣಿಸುವ ಸಮಯ ವಿಶೇಷವಾಗಿರು ವಂತಹದ್ದು. ಎದೆ ಹಾಲು ಮಗುವಿನ ಸಿಗುವ ಅತೀ ಶ್ರೇಷ್ಠ ನೈಸರ್ಗಿಕ ಆಹಾರ.
ಇದು ಕೇವಲ ಮಗುವಿಗೆ ಆಹಾರ ಮಾತ್ರವಲ್ಲದೆ, ಹಲವಾರು ರೀತಿಯ ಅನಾರೋಗ್ಯದಿಂದ ಮಗುವನ್ನು ಕಾಪಾಡುತ್ತದೆ. ಯಾಕೆಂದರೆ ಎದೆ ಹಾಲು ರಕ್ತಕ್ಕೆ ವಿವಿಧ ರೀತಿಯ ರೋಗನಿರೋಧಕಗಳನ್ನು ಪೂರೈಸುತ್ತದೆ. ಅಷ್ಟೇ ಅಲ್ಲದೆ ಎದೆ ಹಾಲಿನಲ್ಲಿ ಮೂರು ಖನಿಜಗಳು ಅಂದರೆ ಕ್ಯಾಲ್ಶಿಯಂ, ರಂಜಕ ಮತ್ತು ಕಬ್ಬಿಣಾಂಶಗಳು ಸಹ ಇರುತ್ತವೆ. ಎದೆಹಾಲಿನಲ್ಲಿ ಈ ಖನಿಜಗಳು ಉನ್ನತವಾದ ಜೈವಿಕ ಲಭ್ಯತೆಯ ಪ್ರಮಾಣಗಳಲ್ಲಿ

ಲಭಿಸುತ್ತದೆ. ಅಷ್ಟೇ ಅಲ್ಲದೆ ಕುತೂಹಲಕಾರಿ ವಿಚಾರವೇನೆಂದರೆ ಎದೆ ಹಾಲು ಕುಡಿಸುವುದರಿಂದ ತಾಯಿಗೆ ಗರ್ಭಾಶಯದ ಮತ್ತು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಿರುತ್ತದೆ. ಜೊತೆಗೆ ಆಸ್ಟಿಯೊಪೊರೊಸಿಸ್ ಸಹ ಬರುವುದಿಲ್ಲವಂತೆ! ಎದೆ ಹಾಲನ್ನು ಹೆಚ್ಚಿಸುವ 10 ಮನೆಮದ್ದುಗಳು
ಹಾಗಾಗಿ ಪ್ರತಿ ವರ್ಷ ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ 1ನೇ ದಿನಾಂಕದಂದು ವಿಶ್ವ ಎದೆ ಹಾಲು ಕುಡಿಸುವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಬನ್ನಿ ಎದೆಹಾಲುಣಿಸುವುದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ...
*ಮಗು ಹುಟ್ಟಿ ಆರು ತಿಂಗಳವರೆಗೆ ಹಗಲು ಮತ್ತು ರಾತ್ರಿ ಎದೆ ಹಾಲು ಕುಡಿಸುವುದರಿಂದ ಮಗುವಿಗೆ ಕೊಲೊಸ್ಟ್ರಮ್ ಎಂಬ ಅಂಶವು ದೊರೆಯುತ್ತದೆ. ಇದು ಮಗುವನ್ನು ಹಲವಾರು ಕಾಯಿಲೆಗಳಿಂದ ಕಾಪಾಡುತ್ತದೆ. ಜೊತೆಗೆ ಮಗುವಿನ ಬೆಳವಣಿಗೆಯು ಇದರಿಂದ ಸರಾಗವಾಗಿ ನಡೆಯುತ್ತದೆ.
*ಕಿಂಟಾಂಪೊ ಹೆಲ್ತ್ ರಿಸರ್ಚ್ ಸೆಂಟರ್ ನಡೆಸಿದ ಅಧ್ಯಯನಗಳ ಪ್ರಕಾರ ಮಗುವು ಜನಿಸಿದ ಒಂದು ಗಂಟೆಯ ಒಳಗೆ ಎದೆ ಹಾಲು ಕುಡಿಸುವುದರಿಂದ ಒಂದು ಕೋಟಿ ಮಕ್ಕಳ ಜೀವವನ್ನು ಉಳಿಸಬಹುದಂತೆ!!
ಇನ್ನೂ ಒಂದು ಕುತೂಹಲಕಾರಿ ವಿಚಾರವೊಂದಿದೆ. ಅದೇನೆಂದರೆ ಎದೆ ಹಾಲು ಕುಡಿಸುವುದರಿಂದ ಆ ಅವಧಿಯಲ್ಲಿ ತಾಯಿಯು ಮತ್ತೆ ಗರ್ಭವತಿಯಾಗುವ ಸಾಧ್ಯತೆ ತೀರಾ ಕಡಿಮೆಯಾಗುತ್ತದೆಯಂತೆ!. ನೋಡಿದಿರಾ ಎದೆ ಹಾಲು ಕುಡಿಸುವುದು ಸ್ವಾಭಾವಿಕ ಜನನ ನಿಯಂತ್ರಣದಂತೆ ಕೆಲಸ ಮಾಡುತ್ತದೆಯಂತೆ! ಅದೂ ಉಚಿತವಾಗಿ!! ಎದೆ ಹಾಲುಣಿಸುವ ಸಮಯದಲ್ಲಿ ಸ್ತನದ ರಕ್ಷಣೆ
*ಎದೆ ಹಾಲು ಕುಡಿಸುವುದು ಮತ್ತು ಅದನ್ನು ಮುಂದುವರಿಸುವುದರಿಂದ ಹೆರಿಗೆ ಸಂದರ್ಭದಲ್ಲಿ ಸಂಭಾವಿಸುವ ರಕ್ತ ಸ್ರಾವ ಮತ್ತು ಗರ್ಭಪೊರೆಯ ಸಮಸ್ಯೆಗಳು ನಿವಾರಣೆಯಾಗಿ ಸಾವು ಸಂಭವಿಸುವ ಸಾಧ್ಯತೆ ತೀರಾ ಕಡಿಮೆಯಾಗುತ್ತವೆಯಂತೆ. ಜೊತೆಗೆ ಅಪೌಷ್ಟಿಕತೆಯಿಂದ ಸಂಭವಿಸುವ ಪ್ರತಿ ಐದು ಸಾವುಗಳಲ್ಲಿ ಶೇ.50-60 ಕಡಿಮೆಯಾಗುತ್ತವೆಯಂತೆ!!
*ನಮಗೆ ಗೊತ್ತಿರುವ ಇತರೆ ಆರೋಗ್ಯಕಾರಿ ಪ್ರಯೋಜನಗಳ ಹೊರತಾಗಿಯೂ ಶೇ.40 ರಷ್ಟು ಮಕ್ಕಳಿಗೂ ಸಹ ಎದೆ ಹಾಲು ಕುಡಿಯುವ ಭಾಗ್ಯ ಆರು ತಿಂಗಳಗಳವರೆಗೆ ದೊರೆಯುತ್ತಿಲ್ಲ. ದುರಂತ ಎಂದರೆ ಮಲ್ಟಿಪಲ್ ಇಂಡಿಕೇಟರ್ ಕ್ಲಸ್ಟರ್ ಸರ್ವೇ ಪ್ರಕಾರ (MICS) ಎದೆ ಹಾಲು ಕುಡಿಸುವ ದರವು 2008ರಲ್ಲಿ ಶೇ.63.7 ಆಗಿದ್ದರೆ, 2011ರಲ್ಲಿ ಶೇ.46 ಆಗಿತ್ತು.



Click it and Unblock the Notifications


