Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಗರ್ಭಾವಸ್ಥೆಯಲ್ಲಿನ ತುರಿಕೆಗೆ ಮನೆಮದ್ದೇ ಎಂದಿಗೂ ಬೆಸ್ಟ್
ಹೆಣ್ಣಿಗೆ ತಾಯ್ತನವೆಂಬುದು ಸುಮಧುರವಾದ ಅನುಭೂತಿಯಾಗಿದೆ. ತನ್ನದೇ ಪಡಿಯಚ್ಚನ್ನು ಉದರದೊಳಗೆ ಒಂಬತ್ತು ತಿಂಗಳು ಹೊತ್ತು ಜೀವಂತ ಬೊಂಬೆಗೆ ಜನ್ಮವೀಯುವ ಆ ಸಮಯ ಆಕೆಗೆ ಸಕಲ ಐಶ್ವರ್ಯಗಳಿಂದಲೂ ಮಿಗಿಲಾದುದು. ಈ ಸುಸಂದರ್ಭಕ್ಕಾಗಿಯೇ ಆಕೆ ತನ್ನೆಲ್ಲಾ ನೋವನ್ನು ಸಹಿಸಿಕೊಂಡು ತನ್ನ ಕಂದನನ್ನು ಹೊರುತ್ತಾಳೆ.
ಗರ್ಭಾವಸ್ಥೆಯ ಸಮಯದಲ್ಲಿ ಆಕೆಗೆ ಕಾಡುವ ಸಂಕಟ ಒಂದೆರಡಲ್ಲ. ವಾಂತಿ, ನಾಸಿಯಾ, ಹೊಟ್ಟೆನೋವು, ಮಲಬದ್ಧತೆ, ಗ್ಯಾಸ್ ಇದರೊಂದಿಗೆ ಹೊಟ್ಟೆಯ ಬಳಿ ಸಹಿಲಸಾಧ್ಯವಾದ ತುರಿಕೆ ಕೂಡ ಉಂಟಾಗುತ್ತದೆ. ಎಸ್ಟ್ರೊಜೆನ್ ಮಟ್ಟವು ಹೆಚ್ಚಾಗುವುದರಿಂದಾಗಿ ಗರ್ಭಿಣಿಯರಲ್ಲಿ ಹೊಟ್ಟೆ ಮತ್ತು ಇತರ ಭಾಗಗಳಲ್ಲಿ ತುರಿಕೆ ಕಂಡುಬರುತ್ತದೆ. ಗರ್ಭಾವಧಿಯ ಕೊನೆಯ ತಿಂಗಳುಗಳಲ್ಲಿ ಹೊಟ್ಟೆಯ ಭಾಗದ ತ್ವಚೆಯು ಊದಿಕೊಂಡಿರುತ್ತದೆ ಮತ್ತು ಅದು ಒಣಗಲು ಆರಂಭಿಸಿರುತ್ತದೆ. ಇದರಿಂದ ಸಹ ಗರ್ಭಿಣಿಯರಲ್ಲಿ ತುರಿಕೆಯು ಕಂಡು ಬರುತ್ತದೆ.
ಸಾಮಾನ್ಯವಾಗಿ ಮಗುವು ಗರ್ಭಾಶಯದಲ್ಲಿ ಬೆಳೆಯುತ್ತಿದಂತೆ, ಪೆಲ್ವಿಕ್ ಭಾಗವು ಹಿಗ್ಗಲು ಆರಂಭಿಸುತ್ತದೆ. ಇದರಿಂದಾಗಿ ಗರ್ಭಿಣಿಯರಿಗೆ ಹೊಟ್ಟೆಯ ಭಾಗದಲ್ಲಿ ಹೆಚ್ಚು ತುರಿಕೆ ಕಾಣಿಸಿಕೊಳ್ಳುತ್ತದೆ. ಆದರೆ ತುರಿಕೆಯನ್ನು ನೀಗಿಸಿಕೊಳ್ಳಲು ಯಾವುದೇ ಕಾರಣಕ್ಕೂ ಔಷಧಿಗಳನ್ನು ಬಳಸಲು ಹೋಗಬೇಡಿ. ಅದು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಇದಕ್ಕಾಗಿ ಮನೆ ಮದ್ದುಗಳು ಅತ್ಯಂತ ಸುರಕ್ಷಿತವಾದ ಮಾರ್ಗಗಳಾಗಿರುತ್ತವೆ. ಆದ್ದರಿಂದ ಈ ಅಂಕಣದಲ್ಲಿ ನಾವು ಗರ್ಭಿಣಿಯರಲ್ಲಿ ಕಂಡು ಬರುವ ತುರಿಕೆಯನ್ನು ನಿವಾರಿಸುವ ಮನೆ ಮದ್ದುಗಳ ಕುರಿತಾಗಿ ಚರ್ಚಿಸಿದ್ದೇವೆ, ಅವು ಯಾವುದು ಎಂಬುದನ್ನು ಮುಂದೆ ಓದಿ..

ಓಟ್‍ಮೀಲ್ ಬಾತ್
ಉಗುರು ಬೆಚ್ಚಗಿನ ನೀರಿನಲ್ಲಿ ಓಟ್‌ಮೀಲ್ ಅನ್ನು ನೆನೆಸಿ ಅದನ್ನು ಸ್ನಾನ ಮಾಡಿ. ನಿಮಗೆ ಅನುಕೂಲವಿದ್ದಲ್ಲಿ, ಓಟ್ಸ್ ನೀರನ್ನು ತುಂಬಿರುವ ಬಾತ್‌ಟಬ್‌ನಲ್ಲಿ ಸ್ವಲ್ಪ ಹೊತ್ತು ಮುಳುಗಿ ಸ್ನಾನ ಮಾಡಿ. ಇದು ನಿಮ್ಮ ಹೊಟ್ಟೆಗೆ ಸ್ವಲ್ಪ ಆರಾಮವನ್ನು ನೀಡುತ್ತದೆ.

ಬೇಕಿಂಗ್ ಸೋಡಾ ಪೇಸ್ಟ್
ಒಂದು ಟೀ ಚಮಚದಷ್ಟು ಬೇಕಿಂಗ್ ಸೋಡಾಗೆ ಕೆಲವು ಹನಿ ನೀರನ್ನು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮಗೆ ತುರಿಕೆಯುಂಟು ಮಾಡುತ್ತಿರುವ ಹೊಟ್ಟೆಯ ಮೇಲೆ ಹಚ್ಚಿಕೊಳ್ಳಿ. ಇದು ನಿಮಗೆ ತುರಿಕೆಯಿಂದ ಆರಾಮವನ್ನು ನೀಡುತ್ತದೆ. ಇದು ಒಣಗಿದ ಮೇಲೆ ಅದನ್ನು ತೊಳೆಯಿರಿ.

ಬಿಸಿ ನೀರಿನ ಸ್ನಾನ ಮಾಡಬೇಡಿ
ಬಿಸಿ ನೀರು ಮಗುವಿಗೆ ಒಳ್ಳೆಯದಲ್ಲ. ಇದು ನಿಮ್ಮ ಮಗುವಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ ಇದು ಒಣ ತ್ವಚೆ ಮತ್ತು ಅದರ ಜೊತೆಗೆ ತುರಿಕೆಯನ್ನು ಸಹ ಉಂಟು ಮಾಡುತ್ತದೆ. ಅದಕ್ಕಾಗಿ ಯಾವಾಗಲು ಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮಾಡಿ. ಇದು ನಿಮ್ಮ ತ್ವಚೆಯಲ್ಲಿರುವ ಸ್ವಾಭಾವಿಕ ತೈಲಗಳನ್ನು ಹಾಳು ಮಾಡುವುದಿಲ್ಲ.

ಸ್ವಲ್ಪ ಮೆದುವಾದ ಮಾಯಿಶ್ಚರೈಸರ್ ಲೇಪಿಸಿ
ತುರಿಕೆಯಿಂದ ಮುಕ್ತಿ ಪಡೆಯಲು ಔಷಧೀಯ ಕ್ರೀಮ್‌ಗಳನ್ನು ಬಳಸಬೇಡಿ. ಇದು ನಿಮ್ಮ ಹೊಟ್ಟೆಯ ಮೇಲಷ್ಟೇ ಅಲ್ಲದೆ, ಅದರ ಒಳಗಿರುವ ಮಗುವಿನ ತ್ವಚೆಯ ಮೇಲೆ ಸಹ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ. ಕೆಲವೊಂದು ಕ್ರೀಮ್‌ಗಳು ಮಗುವಿನ ರಕ್ತವನ್ನು ಸಹ ಸೇರಿ ಅದರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅದಕ್ಕಾಗಿ ಒಂದು ಸ್ವಾಭಾವಿಕವಾದ ತುರಿಕೆ ನಿಯಂತ್ರಕವನ್ನು ಸ್ನಾನ ಮಾಡಿದ ನಂತರ ಹೊಟ್ಟೆಯ ಮೇಲೆ ಲೇಪಿಸಿ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯನ್ನು ಗರ್ಭಾವಧಿಯಲ್ಲಿ ಹೊಟ್ಟೆಯ ಮೇಲೆ ಲೇಪಿಸಿಕೊಳ್ಳುವುದರಿಂದ ತುರಿಕೆಯನ್ನು ತಡೆಯಬಹುದು. ಇದು ಗರ್ಭಿಣಿಯರಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ, ಅಲ್ಲದೆ ಇದು ತ್ವಚೆಗೆ ಪರಿಣಾಮಕಾರಿಯಾಗಿ ಪೋಷಣೆಯನ್ನು ಒದಗಿಸುತ್ತದೆ. ಆ ಮೂಲಕ ತುರಿಕೆಯನ್ನು ತಡೆಯುತ್ತದೆ.



Click it and Unblock the Notifications
