Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಧಾರಣೆಯ ಅವಧಿಯಲ್ಲಿ ಸೆಲೆಬ್ರಿಟಿಗಳ ಆರೋಗ್ಯದ ಗುಟ್ಟೇನು?
ಮಹಿಳೆಯರ ಜೀವನದಲ್ಲಿ ಗರ್ಭಿಣಿಯಾಗುವ ಕಾಲಾವಧಿಯು ಅತ್ಯಂತ ಮಹತ್ವದ ಘಟ್ಟವಾಗಿರುತ್ತದೆ. ಈ ಅವಧಿಯಲ್ಲಿ ತಾಯಿಯ ಗರ್ಭದಲ್ಲಿ ಮಗುವು ಬೆಳೆಯುತ್ತ ಇರುತ್ತದೆ, ಆಗ ಹೆಣ್ಣು ಒಂದು ದೇಹ ಎರಡು ಜೀವಗಳೆಂಬ ರೀತಿಯಲ್ಲಿ ಇರುತ್ತಾಳೆ. ಮಗುವಿನ ಆರೋಗ್ಯವು ಸಂಪೂರ್ಣವಾಗಿ ತಾಯಿಯೊಂದಿಗೆ ಸಂಬಂಧ ಹೊಂದಿರುತ್ತದೆ.
ಈ ಅವಧಿಯಲ್ಲಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯವನ್ನು ಸಹ ಕಾಪಾಡುವ ಜವಾಬ್ದಾರಿ ಇರುತ್ತದೆ. ಅದಕ್ಕೆ ಸರಿ ಹೊಂದುವ ಡಯಟ್ ಅನ್ನು ಈ ಅವಧಿಯಲ್ಲಿ ತಾಯಿಯಾದವಳು ಪಾಲಿಸಬೇಕು. ಈ ನಿಯಮಕ್ಕೆ ಸೆಲೆಬ್ರಿಟಿಗಳು ಸಹ ಹೊರತಾಗಿಲ್ಲ. ಎಷ್ಟಾದರು ಅವರು ಸಹ ಮನುಷ್ಯರಲ್ಲವೇ? ಆದರೆ ಸೆಲೆಬ್ರಿಟಿಗಳು ಏನು ಮಾಡುತ್ತಾರೆ ಎನ್ನುವ ಕುತೂಹಲ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿರುತ್ತದೆ. ಅವರು ಗರ್ಭಿಣಿಯಾದಾಗ ಏನು ತಿನ್ನುತ್ತಾರೆ ಎಂಬ ಅಂಶವನ್ನು ಸಹ ತಿಳಿದುಕೊಳ್ಳಲು ನಮ್ಮ ಹಾಲಿ ಮತ್ತು ಭಾವಿ ತಾಯಂದಿರು ಸಹ ಉತ್ಸುಕರಾಗಿರುತ್ತಾರೆ. ಬನ್ನಿ ಅವರು ಏನು ತಿನ್ನುತ್ತಾರೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ. ಗರ್ಭಿಣಿಯರ ಪಾಲಿನ ಸಂಜೀವಿನಿ ಈ ಪುಟ್ಟ ಒಣದ್ರಾಕ್ಷಿ
ಸೆಲೆಬ್ರಿಟಿಗಳು ಬಹುತೇಕ ಸಂದರ್ಭದಲ್ಲಿ ಇತರೆ ಸಾಮಾನ್ಯ ಹೆಂಗಸರು ನೋಡಿ ಅಸೂಯೆಪಡುವ ಮಟ್ಟಿಗೆ ದೈಹಿಕವಾಗಿ ಫಿಟ್ ಆಗಿರುತ್ತಾರೆ. ಅದರಲ್ಲೂ ಗರ್ಭಿಣಿಯಾಗಿರುವ ಸೆಲೆಬ್ರಿಟಿಯು ಏನನ್ನು ತಿನ್ನುತ್ತಾರೆ ಎಂಬುದು, ಕೆಲವರ ಕುತೂಹಲವನ್ನು ಕೆರಳಿಸುವ ವಿಚಾರವಾಗಿರುತ್ತದೆ. ಮಗು ಹುಟ್ಟಿದ ಮೇಲೆ, ಕೆಲವೇ ತಿಂಗಳುಗಳಲ್ಲಿ ಅವರು ಹೇಗೆ ತಮ್ಮ ದೇಹದ ಆಕಾರವನ್ನು ಮತ್ತೆ ಪುನಃ ಸಂಪಾದಿಸುತ್ತಾರೆ, ಆ ಕೊಬ್ಬನ್ನು ಹೇಗೆ ಕರಗಿಸಿಕೊಳ್ಳುತ್ತಾರೆ ಎಂಬುದು ಸಹ ಚರ್ಚಾರ್ಹ ವಿಷಯವಾಗಿದೆ. ಬನ್ನಿ ಸೆಲೆಬ್ರಿಟಿಗಳು ಗರ್ಭಧಾರಣೆಯ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಹೇಗೆ ನಿಭಾಯಿಸುತ್ತಾರೆ ಬನ್ನಿ ನೋಡೋಣ...

ನೀವು ಗರ್ಭಿಣಿಯಾದಾಗ ಏನು ತಿನ್ನುತ್ತೀರಿ
ಗರ್ಭಿಣಿಯಾದಾಗ ನೀವು ನಿಮಗಾಗಿ ಮಾತ್ರವಲ್ಲದೆ, ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಾಗಿ ಸಹ ತಿನ್ನಬೇಕಾಗುತ್ತದೆ. ಆದರೆ ಇದು ಇಬ್ಬರಿಗಾಗಿ ತಿನ್ನುವುದು ಎಂದರ್ಥವಲ್ಲ. ಏಕೆಂದರೆ ಇದೊಂದು ದೊಡ್ಡ ತಪ್ಪುಕಲ್ಪನೆಯಾಗಿರುತ್ತದೆ. ಇರುವ ಆಹಾರದಲ್ಲಿಯೇ ತಾಜಾ ಆದ, ಆರೋಗ್ಯಕರವಾದ ಮತ್ತು ಪರಿಪೂರ್ಣವಾದ ಆಹಾರವನ್ನು ಸೇವಿಸಿ.

ನಾರಿನಂಶ
ನಿಮ್ಮ ಜೀರ್ಣಾಂಗ ವ್ಯೂಹವು ಆರೋಗ್ಯಕರವಾಗಿರಬೇಕೆಂದರೆ, ನೀವು ನಾರಿನಂಶವನ್ನು ಹೊಂದಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕಾಗುತ್ತದೆ. ಆಹಾರದಲ್ಲಿರುವ ನಾರಿನಂಶವು (ಪಾಲಕ್, ಸೊಪ್ಪು)ನಿಮ್ಮ ಜೀರ್ಣಾಂಗ ವ್ಯೂಹವನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಜೊತೆಗೆ ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತವಾಗಿ ಇಡುತ್ತದೆ.

ಕಬ್ಬಿಣಾಂಶ
ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಗರ್ಭಿಣಿಯರು ಹೆಚ್ಚಾಗಿ ಸೇವಿಸಬೇಕು. ಇದು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಷ್ಟೇ ಅಲ್ಲ, ನಿಮ್ಮ ಹಿಮೋಗ್ಲೋಬಿನ್ ಪ್ರಮಾಣವನ್ನು ಸಹ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಪ್ರೋಟೀನ್
ಜೀವನದ ಎಲ್ಲಾ ಹಂತಗಳಲ್ಲಿಯೂ ಪ್ರೋಟೀನ್‍ಯುಕ್ತ ಆಹಾರ ಸೇವಿಸುವುದು ಅತ್ಯಗತ್ಯ. ಅದರಲ್ಲಿಯೂ ಗರ್ಭದಲ್ಲಿ ಬೆಳೆಯುವ ಮಗುವಿಗೆ ಪ್ರೋಟಿನ್ ಅತ್ಯಗತ್ಯ ಹೆಚ್ಚಾಗಿರುತ್ತದೆ. ಆದರೆ ಅದಕ್ಕಾಗಿ ನೀವು ಸರಿಯಾಗಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸುತ್ತಿದ್ದೀರಿ ಎಂದು ಖಾತ್ರಿಪಡಿಸಿಕೊಂಡು ನಂತರ ಸೇವಿಸಿ. ಅರೆಬೆಂದ ಆಹಾರವು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಲ್ಲ.

ಹೈನು ಉತ್ಪನ್ನಗಳು
ಗರ್ಭದಲ್ಲಿ ಬೆಳೆಯುವ ಮಗುವಿಗೆ ಕ್ಯಾಲ್ಸಿಯಂ ಅಧಿಕವಾಗಿ ಬೇಕಾಗುತ್ತದೆ. ಅದಕ್ಕಾಗಿ ಹಾಲು, ಚೀಸ್, ಮೊಸರು ಮತ್ತು ಮಜ್ಜಿಗೆ ಮುಂತಾದ ಆಹಾರ ಪದಾರ್ಥಗಳನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಿ.

ಎಳೆನೀರು
ಸೆಲೆಬ್ರಿಟಿಗಳು ಗರ್ಭಿಣಿಯಾಗಿರುವಾಗ ಎಳೆ ನೀರನ್ನು ಸಹ ಸೇವಿಸುತ್ತಾರೆ. ಅದರಲ್ಲಿಯೂ ತಾಜಾ ಮತ್ತು ಆರೋಗ್ಯಕರವಾದ ಎಳೆ ನೀರು ತಾಯಿ ಮತ್ತು ಮಗು ಇಬ್ಬರಿಗೂ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಜೀರ್ಣಾಂಗವ್ಯೂಹಕ್ಕೆ ಒಳ್ಳೆಯದು ಅಲ್ಲದೆ ಇದು ಗರ್ಭಿಣಿಯರಿಗೆ ಚೇತೋಹಾರಿ ಪಾನೀಯವಾಗಿರುತ್ತದೆ.



Click it and Unblock the Notifications
