Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರ್ಭಧಾರಣೆಯ ವೇಳೆ ಕಂಡುಬರುವ ಮಧುಮೇಹದ ನಿಯಂತ್ರಣ ಹೇಗೆ?
ಗರ್ಭಧಾರಣೆಯ ವೇಳೆ ಕಂಡುಬರುವ ಮಧುಮೇಹವು ಕೇವಲ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ, ನಿಮ್ಮ ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಹಾಗೂ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ. ಇಂತಹ ಸಂದರ್ಭದಲ್ಲಿ ಗರ್ಭಪಾತ, ಮೃತಾವಸ್ಥೆ, ಅಕಾಲಿಕ ಜನನ, ಜನನ ದೋಷಗಳು, ಹೆಚ್ಚಿನ ಬೆಳವಣಿಗೆ ಮತ್ತು ಮಗು ಹಾಗೂ ತಾಯಿಗೆ ಬರುವ ಇತರ ಸಮಸ್ಯೆಗಳನ್ನು ತಡೆಯಲು ರಕ್ತದಲ್ಲಿನ ಗ್ಲೂಕೋಸ್ ನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿರುತ್ತದೆ.
ನಿಮ್ಮ ಗರ್ಭಧಾರಣೆಯ ಆರಂಭದ ಹಂತದಲ್ಲೇ ಮಧುಮೇಹ ತಪಾಸಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಗುತ್ತದೆ. ಗರ್ಭಧಾರಣೆಯ ಆರಂಭಿಕ ಹಂತ ತುಂಬಾ ಮಹತ್ವದ್ದು, ಈ ವೇಳೆ ಮಗುವಿನ ಹೃದಯ, ಮೆದುಳು, ಕಿಡ್ನಿ ಮತ್ತು ಶ್ವಾಸಕೋಶ ಬೆಳೆಯಲು ಆರಂಭವಾಗುತ್ತದೆ. ಈ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದರೆ ಆಗ ಜನನ ದೋಷಗಳು ಬರಬಹುದು. ಗರ್ಭಧಾರಣೆ ವೇಳೆ ಮಧುಮೇಹ ನಿಮಗೆ ದೈಹಿಕ ಹಾಗೂ ಮಾಸಿಕವಾಗಿ ಪರಿಣಾಮ ಬೀರಬಹುದು. ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ವಿಧಾನಗಳು ನಿಮಗೆ ನೆರವಾಗಬಹುದು. ಡಯಾಬಿಟಿಸ್ ಇರುವ ಗರ್ಭಿಣಿ ಮಹಿಳೆಯರಿಗೆ ಇಲ್ಲಿ ಕೆಲವೊಂದು ಸಲಹೆಗಳಿವೆ. ಇದರಿಂದ ನೀವು ಆರೋಗ್ಯಕರ ಮತ್ತು ಸಂತಸದಿಂದ ಇರಬಹುದು. ಗರ್ಭಧಾರಣೆಯ ಸುಖವನ್ನು ಸವಿಯಲು ಹಲವು ಕಾರಣಗಳು
ಆರೋಗ್ಯಕರ ಆಹಾರಕ್ರಮ

ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೀವು ಆರೋಗ್ಯಕರ ಆಹಾರ ಕ್ರಮ ಪಾಲಿಸಬೇಕೆನ್ನುವುದು ಗರ್ಭಿಣಿಯರ ಆರೋಗ್ಯದ ಬಗ್ಗೆ ನೀಡಲಾಗುವ ಒಂದು ಅತ್ಯುತ್ತಮ ಸಲಹೆ.
ಯಾವುದೇ ಜಂಕ್ ಫುಡ್ ಸೇವಿಸಬೇಡಿ
ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯ ಸಮತೋಲಿತ ಆಹಾರಕ್ರಮವು ತುಂಬಾ ಮುಖ್ಯ. ಸಂಸ್ಕರಿತ ಆಹಾರದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ. ಡಯಾಬಿಟಿಸ್ ಇರುವ ಗರ್ಭಿಣಿ ಮಹಿಳೆಯರು ಜಂಕ್ ಫುಡ್ ತಿನ್ನಬಾರದು ಎನ್ನುವುದು ಗರ್ಭಿಣಿಯರ ಆರೋಗ್ಯದ ಸಲಹೆ
ವೈದ್ಯಕೀಯ ಪರೀಕ್ಷೆ ತಪ್ಪಿಸಬೇಡಿ
ನೀವು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಇದರಿಂದ ಗರ್ಭಧಾರಣೆಯ ಡಯಾಬಿಟಿಸ್ ನ್ನು ಸರಿಯಾಗಿ ಗಮನಿಸಲು ಸಾಧ್ಯ. ಗರ್ಭಧಾರಣೆಯ ಡಯಾಬಿಟಿಸ್ ರೋಗಿಯಾಗಿದ್ದರೆ ನೀವು ನಿಯಮಿತವಾಗಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಂಡು ಡಯಾಬಿಟಿಸ್ ಪರಿಸ್ಥಿತಿ ಗಮನಿಸಬೇಕು. ಪ್ರಸವ ಪ್ರಕ್ರಿಯೆಗೆ ಮಾನಸಿಕವಾಗಿ ಸನ್ನದ್ಧರಾಗಲು ಎಂಟು ಸಲಹೆಗಳು
ವ್ಯಾಯಾಮ
ನೀವು ಗರ್ಭಿಣಿಯಾಗಿರುವ ವೇಳೆ ತುಂಬಾ ಕಠಿಣ ವ್ಯಾಯಾಮಗಳನ್ನು ಮಾಡಬೇಕೆಂದಿಲ್ಲ. ಗರ್ಭಧಾರಣೆಯ ಪ್ರಮುಖ ಆರೋಗ್ಯ ಟಿಪ್ಸ್ ಏನೆಂದರೆ ಸಣ್ಣ ನಡಿಗೆ ಮತ್ತು ಸರಳ ವ್ಯಾಯಾಮ. ಗರ್ಭಧಾರಣೆ ವೇಳೆ ಮಧುಮೇಹ ಇದ್ದರೆ ಇದನ್ನು ತಪ್ಪದೆ ಮಾಡಬೇಕು.
ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಿ
ಒಮ್ಮೆ ನಿಮ್ಮಲ್ಲಿ ಗರ್ಭಧಾರಣೆಯ ಮಧುಮೇಹ ಕಂಡುಬಂದರೆ, ನಿಮಗೆ ನೀಡುವಂತಹ ಗರ್ಭಿಣೆಯ ಆರೋಗ್ಯದ ಟಿಪ್ಸ್ ಎಂದರೆ ನಿಯಮಿತವಾಗಿ ರಕ್ತದ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳಿ. ಇದನ್ನು ಸಾಮಾನ್ಯ ಮಟ್ಟದಲ್ಲಿರಿಸಿ ಮತ್ತು ಆರೋಗ್ಯಕರವಾಗಿ ಗರ್ಭಧಾರಣೆ ಸಮಯ ಕಳೆಯಿರಿ.



Click it and Unblock the Notifications




