ಗರ್ಭಿಣಿಯರಿಗಾಗಿ ಅತ್ಯುಪಯುಕ್ತ 12 ಮಾಹಿತಿಗಳು

By Super

ಸ್ತ್ರೀಯು ತನ್ನ ಹೊಟ್ಟೆಯಲ್ಲಿ ಮಗುವನ್ನು ಹೊತ್ತು ನಂತರ ಅದನ್ನು ಹೆರುವ ಅವಧಿಯನ್ನು ಬಸಿರು ಎನ್ನುತ್ತಾರೆ. ಇದೊಂದು ಮಗು ಬೆಳೆಯುವ ಒಂಭತ್ತು ತಿಂಗಳುಗಳ ಸುಧೀರ್ಘಾವಧಿ ಪ್ರಕ್ರಿಯೆಯಾಗಿದೆ.

ಇದರಲ್ಲಿ ತಾಯಿಯು ಮೊದಲ ಮೂರು ತಿಂಗಳು ಅತ್ಯಂತ ಜಾಗರೂಕತೆಯನ್ನು ತೆಗೆದುಕೊಳ್ಳಬೇಕಾದುದು ಅತ್ಯಾವಶ್ಯಕ. ಏಕೆಂದರೆ ಈ ಅವಧಿಯಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚಿರುತ್ತದೆ. ಗರ್ಭಿಣಿಯಾಗಿರುವ ಸ್ತ್ರೀಯು ಮೊದಲ ಮೂರು ತಿಂಗಳು ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಬೇಕಾದುದು ಅತ್ಯಗತ್ಯ. ಈ ತಿಂಗಳುಗಳು ಗರ್ಭಾವಧಿಯಲ್ಲಿ ಅತ್ಯಂತ ಕಠಿಣ ಕಾಲವಾಗಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಗರ್ಭಿಣಿಯ ದೇಹದಲ್ಲಿ ತೀವ್ರತರದ ಬದಲಾವಣೆಗಳು ಕಂಡುಬರುತ್ತವೆ.

ಬಸಿರಿನ ಬಗ್ಗೆ ಅತ್ಯುಪಯುಕ್ತ ಮಾಹಿತಿಗಳು

ಆಹಾರ ಅಭ್ಯಾಸಗಳು

ಆಹಾರ ಅಭ್ಯಾಸಗಳು

ತಾಯಿಯಾಗಲು ಹೊರಟಿರುವ ಸ್ತ್ರೀಯು ತನಗೆ ಸೂಕ್ತವಾದ ಆರೋಗ್ಯಕಾರಿ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಆಕೆಯು ತನ್ನ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳನ್ನು ಸೇವಿಸಬೇಕಾದುದು ಅತ್ಯಂತ ಮುಖ್ಯವಾದ ಅಂಶ. ಇದರ ಅರ್ಥ ತಾಯಿ ಏನು ಸೇವಿಸುತ್ತಾಳೊ ಅದನ್ನೆ ಮಗು ಸಹ ಪಡೆಯುತ್ತದೆ.

ವ್ಯಾಯಾಮ

ವ್ಯಾಯಾಮ

ತಾಯಿಯಾಗಲು ಹೊರಟಿರುವ ಸ್ತ್ರೀಯು ಪ್ರತಿದಿನವು ಅಗತ್ಯ ಪ್ರಮಾಣದ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮದಿಂದ ಹಲವಾರು ಪ್ರಯೋಜನಗಳಿವೆ. ಮೊದಲಿಗೆ ಮೊದಲ ಮೂರು ತಿಂಗಳು ನಿರಂತರ ವ್ಯಾಯಾಮ ಮಾಡುವುದರಿಂದ ಗರ್ಭಪಾತದ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಎರಡನೆಯದಾಗಿ ಗರ್ಭಾವಧಿಯಲ್ಲಿ ತಾಯಿಯ ದೇಹದ ತೂಕವು ಗಣನೀಯವಾಗಿ ಏರಿಕೆ ಕಾಣುತ್ತದೆ. ವ್ಯಾಯಾಮ ಮಾಡುವುದರಿಂದ ಆಕೆಯು ತೂಕವನ್ನು ಹತೋಟಿಯಲ್ಲಿಡಬಹುದು.

ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ

ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ

ಗರ್ಭಿಣಿಯು ಧೂಮಪಾನವನ್ನು ಅಥವಾ ಮಧ್ಯಪಾನವನ್ನು ಸೇವಿಸುವುದರಿಂದ ದೂರವಿರಬೇಕು. ಈ ಎರಡು ಅಂಶಗಳು ಮಗುವಿಗೆ ತೀವ್ರತರದ ಹಾನಿಯನ್ನುಂಟು ಮಾಡುತ್ತವೆ. ಒಂದು ವೇಳೆ ತಾಯಿಯು ಮಧ್ಯಪಾನ ಸೇವಿಸಿದರೆ, ಮಗುವು ಇದರಿಂದ ಅತಿ ಅಪಾಯವನ್ನು ಎದುರಿಸಬೇಕಾಗುತ್ತದೆ. ಮಧ್ಯಪಾನವು ಹುಟ್ಟುವ ಮಗುವಲ್ಲಿ ಹಲವಾರು ನ್ಯೂನತೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ತಾಯಿಯು ತಾನು ಸೇವಿಸುವ ಅಂಶಗಳ ಬಗ್ಗೆ ಅತಿ ಜಾಗರೂಕಳಾಗಿರಬೇಕಾದುದು ಅತ್ಯಾವಶ್ಯಕ.

ತಾಯ್ತನದ ಬಗ್ಗೆ ನಿಮ್ಮವರ ಬಳಿ ಮಾತನಾಡಿ

ತಾಯ್ತನದ ಬಗ್ಗೆ ನಿಮ್ಮವರ ಬಳಿ ಮಾತನಾಡಿ

ನಿಮಗೆ ನಿಮ್ಮ ವಯಸ್ಸಿನ ಸ್ನೇಹಿತರಿದ್ದರೆ ಅಥವಾ ಸಂಬಂಧಿಕರಿದ್ದರೆ ಅವರ ಜೊತೆಗೆ ನೀವು ತಾಯಿಯಾಗತ್ತಿರುವ ಕುರಿತು ಮಾತನಾಡಿ. ಅವರ ಅನುಭವವನ್ನು ಕೇಳಿ ಮತ್ತು ಅವರಿಂದ ಮಾಹಿತಿ ಪಡೆಯಿರಿ. ನೀವು ಒಮ್ಮೆ ತಾಯಿಯಾಗಿರುವುವರಿಂದ ಮಾಹಿತಿ ಪಡೆದರೆ ಅದರಿಂದ ನಿಮಗೆ ನೆಮ್ಮದಿ ಮತ್ತು ಙ್ಞಾನ ಎರಡು ದೊರೆಯುತ್ತದೆ. ಆಗ ನಿಮಗೆ ಗೊತ್ತಿಲ್ಲದಿರುವ ಹಲವು ಮಾಹಿತಿಗಳು ದೊರೆಯುವ ಸಾಧ್ಯತೆ ಇದೆ.

ಔಷಧಿಗಳನ್ನು ತೆಗೆದುಕೊಳ್ಳಬೇಡಿ

ಔಷಧಿಗಳನ್ನು ತೆಗೆದುಕೊಳ್ಳಬೇಡಿ

ನಿಮಗೆ ಓಕರಿಕೆ , ವಾಂತಿ ಮತ್ತು ಆಯಾಸವ ಇತ್ಯಾದಿಗಳು ಆಗುತ್ತಿದ್ದರೆ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಒಂದು ವೇಳೆ ನಿಮಗೆ ಔಷಧಿಯು ತೀರ ಅಗತ್ಯವಿದ್ದಲ್ಲಿ ಪ್ರಕೃತಿದತ್ತ ಔಷಧಿಗಳನ್ನು ಉಪಯೋಗಿಸಿ.

ಅಧಿಕವಾಗಿ ನೀರನ್ನು ಕುಡಿಯಿರಿ

ಅಧಿಕವಾಗಿ ನೀರನ್ನು ಕುಡಿಯಿರಿ

ಸಾಧ್ಯವಾದಷ್ಟು ನೀರನ್ನು ಹೆಚ್ಚಾಗಿ ಕುಡಿಯಿರಿ.ಪ್ರತೀದಿನ ಆರರಿಂದ ಎಂಟು ಲೋಟ ನೀರನ್ನು ಸೇವಿಸಿ. ನೀರನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಬೇಕಾದುದು ಅತ್ಯಾವಶ್ಯಕವೆಂಬುದನ್ನು ಮರೆಯಬೇಡಿ.

ಈಜಾಡಲು ಹೋಗಿ

ಈಜಾಡಲು ಹೋಗಿ

ಗರ್ಭಾವಧಿಯ ಕೊನೆಯ ಹಂತಗಳಲ್ಲಿ ಈಜಾಡಲು ಹೋಗಿ. ಈ ಅವಧಿಯಲ್ಲಿ ನಿಮಗೆ ನೋವು ಅಧಿಕವಾಗಿ ಕಾಡಬಹುದು. ಈಜಾಡುವುದರಿಂದ ನಿಮಗೆ ಸ್ವಲ್ಪ ಆರಾಮ ಸಿಗಬಹುದು. ಅಲ್ಲದೆ ಈಜು ನಿಮ್ಮ ತೂಕ ಕಡಿಮೆಯಾದ ಅನುಭವವನ್ನೊದಗಿಸುತ್ತದೆ.

ಮಸಾಲೆ ಮತ್ತು ಕರಿದ ಪದಾರ್ಥಗಳನ್ನು ಸೇವಿಸಬೇಡಿ

ಮಸಾಲೆ ಮತ್ತು ಕರಿದ ಪದಾರ್ಥಗಳನ್ನು ಸೇವಿಸಬೇಡಿ

ಗರ್ಭಿಣಿಯಾಗಿದ್ದಾಗ ನಿಮಗೆ ಎದೆಯುರಿತ ಅಥವಾ ಅದಕ್ಕೆ ಸಮಾನಾಂತರ ಸಮಸ್ಯೆಗಳು ಇದ್ದಲ್ಲಿ ಮಸಾಲೆ ಮತ್ತು ಕರಿದ ಪದಾರ್ಥಗಳನ್ನು ಸೇವಿಸಬೇಡಿ.

ಎತ್ತರವಾದ ತಲೆದಿಂಬುಗಳನ್ನು ಬಳಸಿ

ಎತ್ತರವಾದ ತಲೆದಿಂಬುಗಳನ್ನು ಬಳಸಿ

ಗರ್ಭಿಣಿಯು ಮಲಗಲು ಸ್ವಲ್ಪ ಎತ್ತರವಾದ ತಲೆದಿಂಬನ್ನು ಬಳಸಬೇಕು. ಒಂದೊಮ್ಮೆ ಸಾಧ್ಯವಾದರೆ ಗರ್ಭಿಣಿಯು ಸ್ತ್ರೀ ಗರ್ಭಿಣಿಯರಿಗಾಗಿಯೇ ವಿಶೇಷವಾಗಿ ರೂಪಿಸಲ್ಪಟ್ಟ ಹಾಸಿಗೆಯನ್ನು ಬಳಸುವುದು ಸೂಕ್ತ. ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಆಕೆಯು ತನ್ನ ತಲೆದಿಂಬನ್ನು ಸ್ವಲ್ಪಮಟ್ಟಿಗೆ ಏರಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಆಕೆಗೆ ಸ್ವಲ್ಪ ಆರಾಮ ದೊರೆಯುತ್ತದೆ.

ಛಾಯಾಚಿತ್ರಗಳನ್ನು ತೆಗೆಯಿರಿ

ಛಾಯಾಚಿತ್ರಗಳನ್ನು ತೆಗೆಯಿರಿ

ನೀವು ಗರ್ಭಿಣಿಯಾದಾಗ ಸಾಧ್ಯವಾದ ಮಟ್ಟಿಗೆ ಛಾಯಾಚಿತ್ರಗಳನ್ನು ತೆಗೆಯಿರಿ. ಏಕೆಂದರೆ ಛಾಯಾಚಿತ್ರಗಳು ನೆನಪಿನ ಅಮೂಲ್ಯ ಸಂಗ್ರಹಗಳಾಗಿರುತ್ತವೆ. ನಂತರ ನೀವು ಇವುಗಳನ್ನೆಲ್ಲ ಬಳಸಿ ಒಂದು ಸ್ಕ್ರಾಪ್ ಬುಕ್ ಅಥವಾ ಕೊಲಾಜನ್ನು ಮಾಡಬಹುದು. ಗರ್ಭಾವಧಿಯು ನಿಮ್ಮ ಜೀವನದ ಅತ್ಯಮೂಲ್ಯವಾದ ಅವಧಿಯಾಗಿರುತ್ತದೆ. ಇದನ್ನು ಸದಾಕಾಲ ನೀವು ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿಯಾದರು ಛಾಯಾಚಿತ್ರಗಳನ್ನು ತೆಗೆಯಿರಿ.

ಒಳ್ಳೆಯ ಪುಸ್ತಕಗಳನ್ನು ಓದಿ

ಒಳ್ಳೆಯ ಪುಸ್ತಕಗಳನ್ನು ಓದಿ

ತಾಯಿಯಾಗುವ ಕನಸು ಕಾಣುತ್ತಿರುವ ಸ್ತ್ರೀಯು ಒಳ್ಳೆಯ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸುವ ಪುಸ್ತಕಗಳನ್ನು ಓದಬೇಕು. ಒಂದು ವೇಳೆ ನೀವು ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಿದ್ದಲ್ಲಿ ವಿಷಾದದಿಂದ ಕೂಡಿದ ಮತ್ತು ಖಿನ್ನತೆಯನ್ನುಂಟು ಮಾಡುವ ಪುಸ್ತಕಗಳನ್ನು ಓದಬೇಡಿ.

ಮಕ್ಕಳ ಜನನ ಮತ್ತು ಬೆಳವಣಿಗೆಯ ಕುರಿತಾದ ಪುಸ್ತಕಗಳನ್ನು ಓದಿ. ಅಲ್ಲದೆ ನೀವು ಗರ್ಭಿಣಿಯರು ಓದಲು ಇರುವ ಹಲವಾರು ಪುಸ್ತಕಗಳನ್ನು ಓದಬಹುದು. ಇದರಿಂದ ನಿಮಗೆ ಗೊತ್ತಿಲ್ಲದ ಅನೇಕ ಮಾಹಿತಿ ಮತ್ತು ಙ್ಞಾನ ದೊರೆಯುತ್ತದೆ.

ನಿಮ್ಮ ಪೋಷಕರ ಜೊತೆಗೆ ಮಾತನಾಡಿ

ನಿಮ್ಮ ಪೋಷಕರ ಜೊತೆಗೆ ಮಾತನಾಡಿ

ನಿಮ್ಮ ಪೋಷಕರ ಅನುಭವದ ಕುರಿತಾಗಿ ಕೇಳಿ. ಅವರು ನಿಮಗೆ ಇದುವರೆಗು ಕಂಡು ಕೇಳರಿಯದ ವಿಷಯಗಳನ್ನು ತಿಳಿಸಬಹುದು. ಅವರು ನಿಮಗೆ ನಿಮ್ಮ ಮತ್ತು ಅವರ ಅನೇಕ ಕಥೆಗಳನ್ನು ತಿಳಿಸಬಹುದು. ಅಲ್ಲದೆ ನೀವು ಮಗುವಗಿದ್ದಾಗ ಹೇಗಿದ್ದಿರಿ ಎಂಬ ವಿಚಾರಗಳನ್ನು ಸಹ ಅವರು ನಿಮಗೆ ತಿಳಿಸಬಹುದು. ನಿಮಗೆ ಮಗುವಾದ ಮೇಲೆ ಈ ಕಥೆಗಳು ಹೇಗೆ ನಿಮ್ಮ ಮಗುವಿನ ಬೆಳವಣಿಗೆಯ ಜೊತೆಗೆ ಹೊಂದಾಣಿಕೆಯಾಗುತ್ತವೆ ಎಂಬ ಅಚ್ಚರಿಯನ್ನು ನೀವೇ ಕಣ್ಣಾರೆ ನೋಡುತ್ತೀರಿ. ಹಾಗಾಗಿ ಅವರ ಅನುಭವಗಳಿಂದ ಕಲಿಯಿರಿ.

ಗರ್ಭಿಣಿ ಸ್ತ್ರೀಗೆ ಇನ್‍ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಆಕೆಯನ್ನು ಮತ್ತಷ್ಟು ಸೊರಗಿದಂತೆ ಕಾಣುವಂತೆ ಮಾಡುತ್ತದೆ. ಆಗಾಗಿ ಗರ್ಭಿಣಿ ಇರುವ ಸ್ಥಳವನ್ನು ಆದಷ್ಟು ಸ್ವಚ್ಛವಾಗಿಡಬೇಕು. ಆಕೆಯ ಸುತ್ತ ಒಂದು ನಿರ್ಮಲ ಮತ್ತು ನಿಶ್ಕಲ್ಮಷವಾದ ವಾತಾವರಣವನ್ನು ನಿರ್ಮಿಸಬೇಕಾದುದು ಅತ್ಯಾವಶ್ಯಕ. ನಿಮ್ಮ ಗರ್ಭಾವಧಿಯನ್ನು ಖುಷಿಯಿಂದ ಅನುಭವಿಸಿ. ನಿಮ್ಮ ಕುರಿತು ಉತ್ತಮ ಕಾಳಜಿಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ.

X
Desktop Bottom Promotion