Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರ್ಭಧರಿಸಲು ನೆರವಾಗುವ ಆಹಾರಗಳು
ಸಾಮಾನ್ಯವಾಗಿ ಗರ್ಭಿಣಿಯರು ತಿನ್ನಬೇಕಾದ ಆಹಾರಗಳ ಉದ್ದ ಪಟ್ಟಿಯನ್ನು ನೋಡಿರಬಹುದು. ಆದರೆ ನೀವು ಗರ್ಭಧರಿಸಲು ಬಯಸುವಾಗ ಏನು ತಿನ್ನಬೇಕು ಎಂದು ನಿಮಗೆ ಗೊತ್ತೆ? ನೀವು ಬೇಗ ಗರ್ಭಧರಿಸಲು ನೆರವಾಗುವ ಆಹಾರಗಳು ನಿಮಗೆ ತಿಳಿದಿಲ್ಲ ಎಂದು ನಮಗೆ ಗೊತ್ತು. ಈ ಆಹಾರವನ್ನು ಸೇವಿಸುವುದರಿಂದ ನೀವು ಬೇಗ ಗರ್ಭಧರಿಸಬಹುದು.
ಅಂಡೋತ್ಪತ್ತಿಯ ಕಾಲ, ಋತು ಚಕ್ರ ಮತ್ತಿತರ ಸಂಗತಿಗಳು ನೀವು ಗರ್ಭಧರಿಸುವಲ್ಲಿ ನಿಸ್ಸಂಶಯವಾಗಿ ನೆರವಾಗುತ್ತವೆ. ಅದರೊಂದಿಗೆ ಆರೋಗ್ಯಕರ ಆಹಾರ ಕ್ರಮವು ನಿಮ್ಮ ಹಾದಿಯನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಆಲ್ಕೊಹಾಲ್, ಕೆಫೆನ್ ಮತ್ತು ಕೆಲವು ಆಹಾರಗಳಿಂದ ನೀವು ದೂರವಿರುವುದು ಬಹಳ ಒಳ್ಳೆಯದು. ಇವು ಗರ್ಭಧರಿಸಲು ತೊಂದರೆಯುಂಟುಮಾಡುತ್ತದೆ ಮಾತ್ರವಲ್ಲ ಗರ್ಭಧರಿಸಿದ ನಂತರ ನಿಮಗೆ ಮತ್ತು ನಿಮ್ಮ ಮಗುವಿಗೆ ಇಬ್ಬರಿಗೂ ಹಾನಿಕಾರಕ. ನಿಮಗೆ ನೆರವಾಗುವ ಆಹಾರಗಳು ಇಲ್ಲಿವೆ ನೋಡಿ:
ಗರ್ಭಧರಿಸಲು ನೆರವಾಗುವ ಆಹಾರಗಳು

ಹುರಳಿಕಾಯಿ
ಹುರಳಿಕಾಯಿಯಲ್ಲಿ ಪ್ರೊಟೀನ್ ಹೆಚ್ಚಿದ್ದು ನಿಮ್ಮ ಫಲವಂತಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಗರ್ಭಧರಿಸಲು ನೆರವಾಗುತ್ತದೆ.

ಕಾಳುಗಳು
ಕಾಳುಗಳಲ್ಲಿ ಆ್ಯಂಟಿಆ್ಯಕ್ಸಿಡೆಂಟ್ಸ್, ವಿಟಮಿನ್ಸ್, ಮತ್ತು ಕಬ್ಬಿಣದಂಶ ಹೆಚ್ಚಿರುತ್ತದೆ. ಇವುಗಳನ್ನು ಪ್ರತಿದಿನ ತಿನ್ನುವುದರಿಂದ ಬೇಗ ಗರ್ಭಧರಿಸಲು ನೆರವಾಗುತ್ತದೆ.

ಮೀನು
ಸಾಲಮೊನ್, ಕ್ಯಾಟ್ ಫಿಶ್, ಶ್ರಿಂಪ್ಸ್ ಮತ್ತು ತುನದಂತಹ ಮೀನುಗಳು ನಿಮ್ಮ ಫಲವಂತಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಮೀನು ಒಮೆಗ 3 ಫ್ಯಾಟಿ ಆಸಿಡ್ ಒದಗಿಸುತ್ತದೆ. ಇದು ಭ್ರೂಣದ ಬೆಳವಣಿಗೆಗೆ ಅತ್ಯಗತ್ಯ.

ಹಸಿರೆಲೆ ತರಕಾರಿಗಳು
ಹಸಿರೆಲೆ ತರಕಾರಿಗಳಲ್ಲಿ ಫೊಲೆಟ್ ಹೆಚ್ಚಿದ್ದು ಇದು ಅಂಡೋತ್ಪತ್ತಿಗೆ ನೆರವಾಗುತ್ತದೆ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಕೂಡ ಹೆಚ್ಚಿಸುತ್ತದೆ.

ಗೋಧಿ ಬ್ರೆಡ್
ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಾಡುತ್ತದೆ. ರಕ್ತದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾದಲ್ಲಿ ಸಂತಾನೋತ್ಪತ್ತಿಯ ಹಾರ್ಮೋನುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಗರ್ಭಧರಿಸಲು ಬಯಸಿದಂತಹ ಸಂದರ್ಭದಲ್ಲಿ ಈ ಬ್ರೆಡ್ಡನ್ನೇ ಬಳಸುವುದು ಒಳ್ಳೆಯದು.

ಆಲೀವ್ ಆಯಿಲ್
ಈ ಎಣ್ಣೆಯಲ್ಲಿ ಮೊನೊ ಸ್ಯಾಚುರೆಟೆಡ್ ಫ್ಯಾಟ್ ಇರುತ್ತದೆ. ಇದು ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಿಸುತ್ತದೆ ಮತ್ತು ಉರಿಯನ್ನು ನಿವಾರಿಸುತ್ತದೆ. ಉರಿಯು ಅಂಡೋತ್ಪತ್ತಿ, ಗರ್ಭಧಾರಣೆ ಮತ್ತು ಭ್ರೂಣದ ಬೆಳವಣಿಗೆ ಎಲ್ಲದರ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಆದ್ದರಿಂದ ಇದನ್ನು ಬಳಸುವುದು ಒಳ್ಳೆಯದು.



Click it and Unblock the Notifications
