ಡಯಾಬಿಟಿಸ್ ಇರುವ ಗರ್ಭಿಣಿಯರಿಗೆ ಕೆಲ ಟಿಪ್ಸ್

By Hemanth P

ನಿಮಗೆ ಡಯಾಬಿಟಿಸ್(ಮಧುಮೇಹ) ಇದ್ದರೆ ಆಗ ನಿಮ್ಮ ಗರ್ಭಧಾರಣೆ ತುಂಬಾ ಸವಾಲಿನದ್ದು ಹಾಗೂ ಸಮಸ್ಯೆ ಉಂಟು ಮಾಡಲಿದೆ. ನೀವು ಡಯಾಬಿಟಿಸ್ ಇರುವ ಗರ್ಭಿಣಿಯಾಗಿದ್ದರೆ ಆಗ ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣವು ಗರ್ಭಿಣಿಯ ಆರೋಗ್ಯದ ಪ್ರಮುಖ ಟಿಪ್ಸ್ ಆಗಲಿದೆ. ಗರ್ಭಧಾರಣೆಯ ಮಧುಮೇಹವು ಕೇವಲ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ, ನಿಮ್ಮ ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಹಾಗೂ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ. ಇಂತಹ ಸಂದರ್ಭದಲ್ಲಿ ಗರ್ಭಪಾತ, ಮೃತಾವಸ್ಥೆ, ಅಕಾಲಿಕ ಜನನ, ಜನನ ದೋಷಗಳು, ಹೆಚ್ಚಿನ ಬೆಳವಣಿಗೆ ಮತ್ತು ಮಗು ಹಾಗೂ ತಾಯಿಗೆ ಬರುವ ಇತರ ಸಮಸ್ಯೆಗಳನ್ನು ತಡೆಯಲು ರಕ್ತದಲ್ಲಿನ ಗ್ಲೂಕೋಸ್ ನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿರುತ್ತದೆ.

ನಿಮ್ಮ ಗರ್ಭಧಾರಣೆಯ ಆರಂಭದ ಹಂತದಲ್ಲೇ ಡಯಾಬಿಟಿಸ್ ತಪಾಸಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಗುತ್ತದೆ. ಗರ್ಭಧಾರಣೆಯ ಆರಂಭಿಕ ಹಂತ ತುಂಬಾ ಮಹತ್ವದ್ದು, ಈ ವೇಳೆ ಮಗುವಿನ ಹೃದಯ, ಮೆದುಳು, ಕಿಡ್ನಿ ಮತ್ತು ಶ್ವಾಸಕೋಶ ಬೆಳೆಯಲು ಆರಂಭವಾಗುತ್ತದೆ. ಈ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದರೆ ಆಗ ಜನನ ದೋಷಗಳು ಬರಬಹುದು.

ಗರ್ಭಧಾರಣೆ ವೇಳೆ ಡಯಾಬಿಟಿಸ್ ನಿಮಗೆ ದೈಹಿಕ ಹಾಗೂ ಮಾಸಿಕವಾಗಿ ಪರಿಣಾಮ ಬೀರಬಹುದು. ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ವಿಧಾನಗಳು ನಿಮಗೆ ನೆರವಾಗಬಹುದು. ಡಯಾಬಿಟಿಸ್ ಇರುವ ಗರ್ಭಿಣಿ ಮಹಿಳೆಯರಿಗೆ ಇಲ್ಲಿ ಕೆಲವೊಂದು ಟಿಪ್ಸ್ ಗಳಿವೆ. ಇದರಿಂದ ನೀವು ಆರೋಗ್ಯಕರ ಮತ್ತು ಸಂತಸದಿಂದ ಇರಬಹುದು.

ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಿ

ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಿ

ಒಮ್ಮೆ ನಿಮ್ಮಲ್ಲಿ ಗರ್ಭಧಾರಣೆಯ ಡಯಾಬಿಟಿಸ್ ಕಂಡುಬಂದರೆ, ನಿಮಗೆ ನೀಡುವಂತಹ ಗರ್ಭಿಣೆಯ ಆರೋಗ್ಯದ ಟಿಪ್ಸ್ ಎಂದರೆ ನಿಯಮಿತವಾಗಿ ರಕ್ತದ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳಿ. ಇದನ್ನು ಸಾಮಾನ್ಯ ಮಟ್ಟದಲ್ಲಿರಿಸಿ ಮತ್ತು ಆರೋಗ್ಯಕರವಾಗಿ ಗರ್ಭಧಾರಣೆ ಸಮಯ ಕಳೆಯಿರಿ.

ವ್ಯಾಯಾಮ

ವ್ಯಾಯಾಮ

ನೀವು ಗರ್ಭಿಣಿಯಾಗಿರುವ ವೇಳೆ ತುಂಬಾ ಕಠಿಣ ವ್ಯಾಯಾಮಗಳನ್ನು ಮಾಡಬೇಕೆಂದಿಲ್ಲ. ಗರ್ಭಧಾರಣೆಯ ಪ್ರಮುಖ ಆರೋಗ್ಯ ಟಿಪ್ಸ್ ಏನೆಂದರೆ ಸಣ್ಣ ನಡಿಗೆ ಮತ್ತು ಸರಳ ವ್ಯಾಯಾಮ. ಗರ್ಭಧಾರಣೆ ವೇಳೆ ಡಯಾಬಿಟಿಸ್ ಇದ್ದರೆ ಇದನ್ನು ತಪ್ಪದೆ ಮಾಡಬೇಕು.

ವೈದ್ಯಕೀಯ ಪರೀಕ್ಷೆ ತಪ್ಪಿಸಬೇಡಿ

ವೈದ್ಯಕೀಯ ಪರೀಕ್ಷೆ ತಪ್ಪಿಸಬೇಡಿ

ನೀವು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಇದರಿಂದ ಗರ್ಭಧಾರಣೆಯ ಡಯಾಬಿಟಿಸ್ ನ್ನು ಸರಿಯಾಗಿ ಗಮನಿಸಲು ಸಾಧ್ಯ. ಗರ್ಭಧಾರಣೆಯ ಡಯಾಬಿಟಿಸ್ ರೋಗಿಯಾಗಿದ್ದರೆ ನೀವು ನಿಯಮಿತವಾಗಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಂಡು ಡಯಾಬಿಟಿಸ್ ಪರಿಸ್ಥಿತಿ ಗಮನಿಸಬೇಕು.

ಆರೋಗ್ಯಕರ ಜೀವನಶೈಲಿ

ಆರೋಗ್ಯಕರ ಜೀವನಶೈಲಿ

ಆರೋಗ್ಯಕರ ಜೀವನ ಶೈಲಿಯೂ ನಿಮ್ಮ ಜೀವನ ಮತ್ತು ಜೀವನದ ಶೈಲಿಯಾಗಲಿ. ಸಮತೋಲಿತ ಆಹಾರ ಸೇವಿಸಿ, ಗರ್ಭಿಣಿಯಾಗಿರುವ ವೇಳೆ ನಿಮಗೆ ಸೂಚಿಸಿರುವಂತಹ ವ್ಯಾಯಾಮಗಳನ್ನು ಮಾಡಿ ಮತ್ತು ಜೀವನದ ಬಗ್ಗೆ ಧನಾತ್ಮಕ ಭಾವ ಬೆಳೆಸಿಕೊಳ್ಳಿ. ಇದು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಉಂಟು ಮಾಡಲಿದೆ.

ಯಾವುದೇ ಜಂಕ್ ಫುಡ್ ಸೇವಿಸಬೇಡಿ

ಯಾವುದೇ ಜಂಕ್ ಫುಡ್ ಸೇವಿಸಬೇಡಿ

ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯ ಸಮತೋಲಿತ ಆಹಾರಕ್ರಮವು ತುಂಬಾ ಮುಖ್ಯ. ಸಂಸ್ಕರಿತ ಆಹಾರದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ. ಡಯಾಬಿಟಿಸ್ ಇರುವ ಗರ್ಭಿಣಿ ಮಹಿಳೆಯರು ಜಂಕ್ ಫುಡ್ ತಿನ್ನಬಾರದು ಎನ್ನುವುದು ಗರ್ಭಿಣಿಯರ ಆರೋಗ್ಯದ ಸಲಹೆ

ಆರೋಗ್ಯಕರ ಆಹಾರಕ್ರಮ

ಆರೋಗ್ಯಕರ ಆಹಾರಕ್ರಮ

ಡಯಾಬಿಟಿಸ್ ನ್ನು ನಿಯಂತ್ರಣದಲ್ಲಿಡಲು ನೀವು ಆರೋಗ್ಯಕರ ಆಹಾರ ಕ್ರಮ ಪಾಲಿಸಬೇಕೆನ್ನುವುದು ಗರ್ಭಿಣಿಯರ ಆರೋಗ್ಯದ ಬಗ್ಗೆ ನೀಡಲಾಗುವ ಒಂದು ಅತ್ಯುತ್ತಮ ಸಲಹೆ.

ಯೋಗ

ಯೋಗ

ಯೋಗ ಮತ್ತು ಧ್ಯಾನ ನಿಮ್ಮ ದೇಹ ಹಾಗೂ ಮನಸ್ಸನ್ನು ಸಮತೋಲದಲ್ಲಿಡುತ್ತದೆ. ಇದು ನಿಮ್ಮ ಹಾರ್ಮೋನ್ ನ್ನು ಸಮತೋಲನದಲ್ಲಿಡುತ್ತದೆ. ನೀವು ಮಧುಮೇಹವಿರುವ ಗರ್ಭಿಣಿ ಮಹಿಳೆಯಾಗಿದ್ದರೆ ಯೋಗ ತರಗತಿಗೆ ಹೋಗಬಹುದು

ಆರಾಮವಾಗಿರಿ

ಆರಾಮವಾಗಿರಿ

ಗರ್ಭಧಾರಣೆಯ ಡಯಾಬಿಟಿಸ್ ನಿಮ್ಮ ಮೂಡ್ ನ್ನು ಕುಗ್ಗಿಸಲು ಬಿಡಬೇಡಿ. ಇದನ್ನು ಗರ್ಭಧಾರಣೆಯ ಆರೋಗ್ಯ ಸವಾಲು ಎಂದು ಪರಿಗಣಿಸಿ ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ನೀವು ಮಧುಮೇಹವಿರುವ ಗರ್ಭಿಣಿ ಮಹಿಳೆಯಾಗಿರುವ ಕಾರಣ ಒತ್ತಡ ಕಡಿಮೆ ಮಾಡಿ.

ದಾಖಲೆ ಇಡಿ

ದಾಖಲೆ ಇಡಿ

ಇದು ಅತ್ಯಂತ ಉಪಯೋಗಿ ಗರ್ಭಿಣಿಯ ಆರೋಗ್ಯದ ಟಿಪ್ಸ್. ನೀವು ಪ್ರತೀ ಸಲ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುವಾಗ ಅದರ ಬಗ್ಗೆ ಗಮನವಿಡಿ. ಇದರಿಂದ ನಿಮಗೆ ಹಾಗೂ ನಿಮ್ಮ ವೈದ್ಯರಿಗೆ ಸರಿಯಾಗಿ ಮೌಲ್ಯಮಾಪನ ಮತ್ತು ಬದಲಾವಣೆ ಮಾಡಿ ಚಿಕಿತ್ಸೆ ನೀಡಲು ಸಾಧ್ಯ.

ವೈದ್ಯರ ಸಲಹೆ ಪಡೆಯಿರಿ

ವೈದ್ಯರ ಸಲಹೆ ಪಡೆಯಿರಿ

ನಿಮಗೆ ಗರ್ಭಧಾರಣೆಯ ಮಧುಮೇಹವಿದ್ದರೆ ಅನುಭವಿ ವೈದ್ಯರೊಬ್ಬರ ಸಲಹೆ ಪಾಲಿಸಿ. ನೀವೇ ವೈದ್ಯರಾಗಲು ಹೋಗಬೇಡಿ, ಯಾಕೆಂದರೆ ಇದು ನಿಮಗೆ ಮತ್ತು ನಿಮ್ಮ ಗರ್ಭದಲ್ಲಿರುವ ಮಗುವಿಗೆ ಸಮಸ್ಯೆಯಾಗಬಹುದು.

Story first published: Saturday, December 7, 2013, 14:05 [IST]
X
Desktop Bottom Promotion