Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಸ್ಟೆಪ್ಸ್ ಬಳಿಕವಷ್ಟೇ ಗರ್ಭಿಣಿ ಎಂದು ಖಚಿತಪಡಿಸಬಹುದು
ಮುಟ್ಟು ನಿಂತ ತಕ್ಷಣ ಗರ್ಭಿಣಿಯೆಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಮುಟ್ಟು ಸ್ವಲ್ಪ ವಿಳಂಬವಾಗಿ ಆಗಬಹುದು. ಹೆಚ್ಚಿನವರಿಗೆ ತಾನು ಗರ್ಭಿಣಿಯೇ? ಅಲ್ಲವೇ? ಅನ್ನುವುದು 2 ತಿಂಗಳ ಬಳಿಕ ತಿಳಿಯುತ್ತದೆ. ವಾಂತಿ, ತಲೆಸುತ್ತು ಗರ್ಭಾವಸ್ಥೆಯ ಲಕ್ಷಣಗಳಾಗಿದ್ದರೂ, ಬರೀ ಈ ರೀತಿಯ ಲಕ್ಷಣಗಳನ್ನು ಇಟ್ಟು ಗರ್ಭಿಣಿಯಾಗಿದ್ದೇನೆ ಎಂದು ನಿರ್ಧಾರಕ್ಕೆ ಬರುವುದು ಸರಿಯಿಲ್ಲ.
ಗರ್ಭಿಣಿಯೆಂದು ಖಚಿತಪಡಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ನೀವು ಗರ್ಭಿಣಿಯಾಗಿದ್ದೀರಿ ಎಂಬ ನಿಮ್ಮ ನಂಬಿಕೆ ಸರಿಯಾಗಿದೆಯೇ? ಇಲ್ಲವೇ ಎಂದು ತಿಳಿಯಲು ವೈದ್ಯರನ್ನು ಕಾಣುವುದು ಅಗತ್ಯ. ವೈದ್ಯರು ದೃಢ ಪಡಿಸಿದ ಬಳಿಕವಷ್ಟೇ ನಿಮ್ಮ ಗಂಡ ಆಪ್ತರಿಗೆ, ಸ್ನೇಹಿತರಿಗೆ ತಿಳಿಸಿ. ಏಕೆಂದರೆ ಗರ್ಭಿಣಿಯೆಂದು ಹೇಳಿದಾಗ ಮನೆಯಲ್ಲಿ ಎಲ್ಲರೂ ಖುಷಿ ಪಡುತ್ತಾರೆ. ನಂತರ ಪರೀಕ್ಷಿಸಿದ ನಂತರ ಒಂದು ವೇಳೆ ಗರ್ಭಧಾರಣೆ ಆಗಿಲ್ಲ ಎಂದು ತಿಳಿದು ಬಂದರೆ ದುಃಖವಾಗುತ್ತದೆ. ಆದ್ದರಿಂದ ಖಚಿತ ಪಡಿಸಿಕೊಳ್ಳುವುದು ಅವಶ್ಯಕ.
ಗರ್ಭಧಾರಣೆ ಆಗಿದೆಯೇ? ಇಲ್ಲವೇ ಎಂದು ಖಚಿತ ಪಡಿಸಲು ಈ ಕೆಳಗಿನ ಪರೀಕ್ಷೆಗಳಿಂದ ದೃಢವಾದ ನಂತರವಷ್ಟೇ ನೀವು ಗರ್ಭಿಣಿಯೆಂದು ಮನೆಯವರಿಗೆ ಹೇಳಿ:

ಮುಟ್ಟಾಗದಿರುವುದು
ಮುಟ್ಟಿನ ಸಮಯ ಕಳೆದರೂ ಮುಟ್ಟಾಗದಿದ್ದರೆ ಇದು ಗರ್ಭಾವಸ್ಥೆಯ ಮೊದಲನೇ ಲಕ್ಷಣವಾಗಿದೆ.

ಟೆಸ್ಟ್ ಮೀಟರ್ ಪರೀಕ್ಷೆ
ಮುಟ್ಟಾಗದಿದ್ದಾಗ ಟೆಸ್ಟ್ ಮೀಟರ್ ನಲ್ಲಿ ಪರೀಕ್ಷೆ ಮಾಡಿದರೆ ಅದರಲ್ಲಿ ಒಂದು ಗೆರೆ (faint line) ಕಂಡು ಬರುತ್ತದೆ. ಇದು ನೀವು ಗರ್ಭಿಣಿ ಎಂದು ಹೇಳುವ ಎರಡನೇ ಲಕ್ಷಣವಾಗಿದೆ.

ವಾಂತಿ, ತಲೆ ಸುತ್ತು
ಗರ್ಭ ನಿಂತಾಗ ಹೆಚ್ಚಿನವರಲ್ಲಿ ವಾಂತಿ, ತಲೆ ಸುತ್ತು ಕಂಡು ಬರುವುದು. ಈ ರೀತಿ ಕಂಡು ಬಂದರೆ ಗರ್ಭಿಣಿಯಾಗಿರಬಹುದು, ಕೆಲವೊಮ್ಮೆ ಆರೋಗ್ಯ ಸಮಸ್ಯೆಯಿಂದಲೂ ಈ ರೀತಿ ಉಂಟಾಗುತ್ತದೆ. ಆದ್ದರಿಂದ ವೈದ್ಯರನ್ನು ಕಂಡು ಪರೀಕ್ಷಿಸುವುದು ಒಳ್ಳೆಯದು.

ಗಾಢವಾದ ಗೆರೆ
ಗರ್ಭಧಾರಣೆಯಾಗಿ ಎರಡು ವಾರಗಳು ಕಳೆದಿದ್ದರೆ pregnancy home test kitನಲ್ಲಿ ಪರೀಕ್ಷಿಸಿದಾಗ ಗಾಢವಾದ ಗೆರೆ ಕಂಡು ಬರುತ್ತದೆ.

ಈಗ ವೈದ್ಯರನ್ನು ಪರೀಕ್ಷಿಸಿ
ಈಗ ವೈದ್ಯರನ್ನು ಕಂಡು ಅವರು ಹೇಳಿದ ಪರೀಕ್ಷೆಗಳನ್ನು ಮಾಡಿಸಿ. ಆಗ ಗರ್ಭಿಣಿ ಹೌದೇ, ಅಲ್ಲವೇ? ಎನ್ನುವುದು ಖಚಿತವಾಗುವುದು.

ರಕ್ತಸ್ರಾವ ಕಂಡು ಬಂದರೆ
ಗರ್ಭಿಣಿ ಎಂದು ಖಚಿತವಾದ ಬಳಿಕ ಒಂದು ತಿಂಗಳು ಕಾಯಿರಿ. ಈ ಸಮಯದಲ್ಲಿ ರಕ್ತಸ್ರಾವ ಕಂಡು ಬಂದರೆ ಗರ್ಭಪಾತವಾಗಿರಬಹುದು. ಆದರೆ ಕೆಲವರಿಗೆ ಸ್ವಲ್ಪ ರಕ್ತಸ್ರಾವ ಕಂಡು ಬರುತ್ತದೆ. ಈ ರೀತಿ ಉಂಟಾದರೆ ಯಾವುದೇ ತೊಂದರೆಯಿಲ್ಲ. ಯಾವುದಕ್ಕೂ ವೈದ್ಯರನ್ನು ಕಾಣುವುದು ಒಳ್ಳೆಯದು.

ರಕ್ತದಲ್ಲಿ HGC ಪ್ರಮಾಣ ಪರೀಕ್ಷೆ
ಈ ಪರೀಕ್ಷೆಯನ್ನು ಬೆಳಗ್ಗೆ ಮಾಡಿಸಲಾಗುವುದು. ಆಗ ರಕ್ತದಲ್ಲಿರುವ HGC ಪ್ರಮಾಣ ಸರಿಯಾಗಿ ತಿಳಿಯುತ್ತದೆ.

ಸಾಮಾನ್ಯ ರಕ್ತ ಪರೀಕ್ಷೆ
ಉಳಿದ ಪರೀಕ್ಷೆಗಳು ಮಾಡಿದ ಬಳಿಕ ರಕ್ತ ಪರೀಕ್ಷೆ ಮಾಡಿಸಿ ದೇಹದಲ್ಲಿ ಥೈರಾಯ್ಡ್ ಅಂಶ, ಹಿಮೋಗ್ಲೋಬಿನ್ ಎಷ್ಟಿದೆ ಎಂದು ತಿಳಿಯಲಾಗುವುದು. ಮಧುಮೇಹ ಪರೀಕ್ಷೆಯೂ ಮಾಡಲಾಗುವುದು.

ಸ್ಕ್ಯಾನಿಂಗ್
ಗರ್ಭಿಣಿಯಾಗಿ 8 ವಾರಗಳ ಬಳಿಕ ಸ್ಕ್ಯಾನಿಂಗ್ ಮಾಡಿಸಬೇಕು. ನೋವು, ರಕ್ತ ಸ್ರಾವ ಕಂಡು ಬಂದರೆ ಈ ಸ್ಕ್ಯಾನಿಂಗ್ ಅನ್ನು 8 ವಾರಗಳಿಗಿಂತ ಮುಂಚೆಯೇ ಮಾಡಲಾಗುವುದು. ಇದರಿಂದ ಭ್ರೂಣ ಆರೊಗ್ಯವಾಗಿದೆಯೇ, ಇಲ್ಲವೇ ಎಂದು ತಿಳಿಯುವುದು.



Click it and Unblock the Notifications
