Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಾವಸ್ಥೆಯಲ್ಲಿ ಹೇಗೆ ಕೂರಬಾರದು?
ಗರ್ಭಿಣಿಯರು ಕೂರುವಾಗ ಬೆನ್ನಿಗೆ ಭಾರ ಬೀಳದಂತೆ ಕೂರಬೇಕು. ಇಲ್ಲದಿದ್ದರೆ ಸೊಂಟನೋವು ಕಾಡುವುದು, ಈ ಸೊಂಟ ನೋವಿನ ಸಮಸ್ಯೆ ಹೆರಿಗೆಯಾದ ಮೇಲೂ ಕೂಡ ನಿಮ್ಮನ್ನು ಹಿಂಬಾಲಿಸುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಜಾಗೃತವಾಗಿರಬೇಕು.
ಗರ್ಭಾವಸ್ಥೆಯಲ್ಲಿ ನಮ್ಮ ಕೂರುವ ಭಂಗಿ ಸರಿಯಿಲ್ಲದೆ ಸೊಂಟ ನೋವು, ಕೆಳ ಹೊಟ್ಟೆ ನೋವಿನಿಂದ ನರಳುವ ಬದಲು ಈ ಕೆಳಗಿನ ಟಿಪ್ಸ್ ಪಾಲಿಸುವುದು ಒಳ್ಳೆಯದು.

* ಕೂರುವಾಗ ಬೆನ್ನು ನೇರವಾಗಿದ್ದು, ಭುಜ ಹಿಂದೆಕ್ಕೆ ಸ್ವಲ್ಪ ಭಾಗಿ ಇರಬೇಕು. ದೇಹದ ತೂಕ ಹೆಚ್ಚಾದಂತೆ ಬೆನ್ನಿನ ಮೇಲೆ ಭಾರ ಬೀಳುವುದು. ಈ ರೀತಿ ಕೂರುವುದರಿಂದ ಬೆನ್ನಿನ ಮೇಲೆ ಅಧಿಕ ಭಾರ ಬೀಳುವುದಿಲ್ಲ.
* ಸಪೋರ್ಟ್ ನೀಡುವ ಚೇರ್ ನಲ್ಲಿ ಕೂರುವುದು ಒಳ್ಳೆಯದು. ಅದರಲ್ಲೂ ತುಂಬಾ ಹೊತ್ತು ಚೇರ್ ನಲ್ಲಿ ಕೆಲಸ ಮಾಡುವವರಾದರೆ ಕಂಫರ್ಟ್ ಆದ ಚೇರ್ ಬಳಸಿ.
* ಕೂತಲ್ಲಿಂದ ಬೇರೆ ಕಡೆ ನೋಡುವಾಗ ಬರೀ ಕತ್ತನ್ನು ತಿರುಗಿಸುವ ಬದಲು ಸಂಪೂರ್ಣ ದೇಹವನ್ನು ತಿರುಗಿಸಿ. ಬರೀ ಮೇಲ್ಭಾಗದ ಶರೀರ ಮಾತ್ರ ತಿರುಗಿಸುವುದರಿಂದ ಕೆಳ ಹೊಟ್ಟೆ ಮೇಲೆ ಅಧಿಕ ಒತ್ತಡ ಬೀಳುವುದು.
* ಕೂರುವಾಗ ದೇಹದ ಎರಡು ಕಾಲಿಗೆ ದೇಹದ ತೂಕ ಬೀಳುವಂತೆ ಕೂರಿ, ಇಲ್ಲದಿದ್ದರೆ ಕಾಲು ನೋವು ಕಂಡು ಬರುವುದು.
* ಪಾದಗಳು ನೆಲವನ್ನು ತಾಗುವಂತೆ ಕೂರುವುದು ಒಳ್ಳೆಯದು.
*ಗರ್ಭಿಣಿಯರು ಒಂದೇ ಭಂಗಿಯಲ್ಲಿ 30 ನಿಮಿಷಕ್ಕಿಂತ ಅಧಿಕ ಹೊತ್ತು ಕೂರಬಾರದು. ದೇಹದಲ್ಲಿ ರಕ್ತ ಸಂಚಾರ ಸರಿಯಾಗಿರಲು ಕೂರುವ ಭಂಗಿಯನ್ನು ಬದಲಾಯಿಸಿ ಅಥವಾ ಸ್ವಲ್ಪ ನಡೆದಾಡಿ ಮತ್ತೆ ಬಂದು ಕೂರಿ.
* ಗರ್ಭಿಣಿಯರು ಕಾಲು ಮೇಲೆ ಕಾಲು ಹಾಕಿ ಕೂರಬಾರದು.
* ಆಫೀಸ್ ನಲ್ಲಿ ತುಂಬಾ ಹೊತ್ತು ಕೂರಬೇಕಾಗುತ್ತದೆ. ಆಗ ಪ್ರತೀ ಅರ್ಧ ಅಥವಾ ಒಂದು ಗಂಟೆಗೊಮ್ಮೆ ಕಾಲುಗಳನ್ನು ನೀಡಿ. ನಿಮ್ಮ ಕೂರುವ ಭಂಗಿ ಸರಿಯಾಗಿದ್ದರೆ ಸೊಂಟ ನೋವು, ಬೆನ್ನು ನೋವಿನ ತೊಂದರೆಯಿಲ್ಲದೆ ಇರಬಹುದು.



Click it and Unblock the Notifications
