Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಗರ್ಭಿಣಿಯರು ಎಲ್ಲಾ ಹರ್ಬಲ್ ಟೀ ಕುಡಿಯಬಹುದೇ?
ಗರ್ಭಿಣಿಯರಿಗೆ ವೈದ್ಯರು ಟೀ ಕುಡಿಯುವುದು ಈ ಸಮಯದಲ್ಲಿ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅಧಿಕ ಕೆಫೀನ್ ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣದಿಂದ ಈ ರೀತಿ ಹೇಳುತ್ತಾರೆ. ಆದರೆ ಪ್ರತಿನಿತ್ಯ ಟೀ ಕುಡಿದು ಅಭ್ಯಾಸ ಇರುವವರಿಗೆ ಗರ್ಭಿಣಿಯಾದ ತಕ್ಷಣ ಟೀ ಕುಡಿಯಬೇಡವೆಂದು ಹೇಳಿದರೆ ಕುಡಿಯದಿರುವುದು ಕಷ್ಟವಾಗುತ್ತದೆ.
ಟೀ ಕುಡಿಯಲೇಬೆನ್ನುವ ಗರ್ಭಿಣಿಯರು ಹರ್ಬಲ್ ಟೀಯನ್ನು ಮಿತಿಯಲ್ಲಿ ಕುಡಿಯಬಹುದು. ಗರ್ಭಿಣಿಯರು ಕುಡಿಯಬಹುದಾದ ಆ ಹರ್ಬಲ್ ಟೀಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:

* ಪೆಪ್ಪರ್ ಮಿಂಟ್ ಟೀ ಕುಡಿಯುವುದರಿಂದ ಗರ್ಭಿಣಿಯರಿಗೆ ಬೆಳಗ್ಗೆ ಕಂಡಟು ಬರುವ ತಲೆ ಸುತ್ತು, ವಾಂತಿ, ಎದೆ ಉರಿ ಇವೆಲ್ಲಾ ಕಡಿಮೆಯಾಗುತ್ತದೆ.
* ಶುದ್ಧ ಶುಂಠಿ ಟೀಯನ್ನು ಕುಡಿಯುವುದರಿಂದ ಕೂಡ ಗರ್ಭಾವಸ್ಥೆಯ ಮೊದಲ 3 ತಿಂಗಳಿನಲ್ಲಿ ಕಂಡು ವಾಂತಿ, ಸುಸ್ತು ಇವೆನೆಲ್ಲಾ ಕಡಿಮೆ ಮಾಡುತ್ತದೆ.
* ಗರ್ಭಿಣಿಯರು ಗ್ರೀನ್ ಟೀಯನ್ನು ಕುಡಿಯಬಹುದು. ಆದರೆ ಮಿತಿಯಲ್ಲಿ ಕುಡಿಯಬೇಕಷ್ಟೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಅಧಿಕ ರಕ್ತದೊತ್ತವನ್ನು ಕಡಿಮೆ ಮಾಡುತ್ತದೆ. ಅದೇ ಗ್ರೀನ್ ಟೀಯನ್ನು ಅಧಿಕವಾಗಿ ಕುಡಿದರೆ ಅದು ನಿಮ್ಮ ಮೇಲೆ ಅಡ್ಡಪರಿಣಾಮ ಬೀರಿ ದೇಹವು ಕಬ್ಬಿಣದಂಶ ಮತ್ತು ಫಾಲಿಕ್ ಆಸಿಡ್ ಅನ್ನು ಹೀರಿಕೊಳ್ಳದಂತೆ ತಡೆಯುತ್ತದೆ.
* ರಾಸ್ ಬೆರ್ರಿ ಎಲೆಯಿಂದ ಮಾಡಿದ ಟೀಯನ್ನು ಹೆರಿಗೆಗೆ ಸ್ವಲ್ಪ ದಿನ ಮುಂದೆ ಕುಡಿಯುತ್ತಾರೆ. ಇದು ಹೆರಿಗೆ ಸುಲಭವಾಗಿ ಆಗಲು ಸಹಾಯಮಾಡುತ್ತದೆ ಎಂದು ಇದನ್ನು ಕುಡಿಯುತ್ತಾರೆ. ಇದನ್ನು ಕುಡಿಯುವುದಕ್ಕಿಂತ ಮುಂಚೆ ವೈದ್ಯರ ಸಲಹೆ ಪಡೆದು ನಂತರ ಕುಡಿಯಿರಿ.
* ತುಳಸಿ ಟೀ ಬೆಳಗ್ಗೆ ತಲೆ ಸುತ್ತುವುದು, ವಾಂತಿ ಬರುವುದು ಈ ರೀತಿಯ ಸಮಸ್ಯೆಗಳನ್ನು ತಡೆಯುವುದಾದರೂ ವೈದ್ಯರ ಸಲಹೆ ಪಡೆದು ನಂತರ ಕುಡಿಯಿರಿ.
ಹರ್ಬಲ್ ಟೀಯಲ್ಲಿ ಕೆಲವೇ ಕೆಲವು ಹರ್ಬಲ್ ಟೀಗಳನ್ನು ಮಾತ್ರ ಗರ್ಭಿಣಿಯರು ಕುಡಿಯಬಹುದು. ಆದ್ದರಿಂದ ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯಿರಿ.



Click it and Unblock the Notifications
