Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಮೈ ದುರ್ವಾಸನೆ-ಹೆರಿಗೆಯ ನಂತರ ಕಾಡುವ ಸಮಸ್ಯೆ
ಮಹಿಳೆ ಒಂದು ಮಗುವಿಗೆ ತಾಯಿಯಾದರೆ ಅವಳ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಹೆಣ್ಣಿನ ಜೀವನ ಪರಿಪೂರ್ಣವಾಗುವುದು ಅವಳು ತಾಯಿ ಆದ ಬಳಿಕವಷ್ಟೇ ಎಂದು ಹೇಳುತ್ತಾರೆ. ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಹೆಮ್ಮೆ ಸಂಗತಿ ಮಗು ಬಂದ ಮೇಲೆ ಗಂಡ, ಹಂಡತಿಯ ಬಾಂಧವ್ಯದ ಕೊಂಡಿ ಮತ್ತಷ್ಟು ಬಲವಾಗುವುದು.
ಒಂದು ವೇಳೆ ಸಂಸಾರದಲ್ಲಿ ಅಭಿಪ್ರಾಯ ವ್ಯತ್ಯಾಸವಿದ್ದರೆ , ಮಗುವಿದ್ದರೆ ಆ ಮಗುವಿಗೆ ಹೊಂದಿಕೊಂಡು ಹೋಗುತ್ತಾರೆ. ಮಗುವಾಗುವುದು ಸಂತೋಷದ ವಿಷಯವಾದರೂ ದೇಹದಲ್ಲಾಗುವ ಬದಲಾವಣೆಗಳೂ ಮಹಿಳೆಯರನ್ನು ಚಿಂತೆಗೀಡುತ್ತದೆ ಎನ್ನುವ ಮಾತನ್ನು ತಳ್ಳಿ ಹಾಕುವಂತಿಲ್ಲ.

ಕೆಲವರು ದಪ್ಪಗಾಗುತ್ತಾರೆ, ಹೊಟ್ಟೆ ಬರುವುದು, ಅಧಿಕವಾಗಿ ಮೈ ಬೆವರುವುದು, ದೇಹದ ಉಷ್ಣತೆ ಹೆಚ್ಚಾಗುವುದು ಹೀಗೆ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಬೆವರಿನಿಂದ ಮೈ ದುರ್ವಾಸನೆ ಬೀರುವುದು. ಮಗು ಹಾಲು ಕುಡಿಯುವವರಿಗೆ ಹಾಲಿನ ವಾಸನೆ ಕೂಡ ಬೀರುವುದು. ಆದ್ದರಿಂದ ಈ ಸಮಯದಲ್ಲಿ ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸದಿದ್ದರೆ ಮೈ ದುರ್ಗಂಧ ಬೀರುವುದು.
ದುರ್ಗಂಧ ಹೋಗಲಾಡಿಲು ಸ್ನಾನ ಮಾತ್ರ ಸಾಲದು, ಇಲ್ಲಿ ನೀಡಿರುವ ಟಿಪ್ಸ್ ನಿಮ್ಮನ್ನು ದುರ್ವಾಸನೆಯಿಂದ ಮುಕ್ತರಾಗಿ ಮಾಡುವಲ್ಲಿ ಸಹಕಾರಿಯಾಗಿದೆ:
ನಿಮ್ಮನ್ನು ಶುದ್ಧವಾಗಿಡಿ
ಹೆರಿಗೆಯಾಗಿ ಮಗು ಹಾಲು ಕುಡಿಯುವುದನ್ನು ನಿಲ್ಲಿಸುವವರಿಗೆ ಎರಡು ಬಾರಿ ಸ್ನಾನ ಮಾಡುವುದು ಒಳ್ಳೆಯದು. ಕಂಕುಳವನ್ನು ಅಷ್ಟೇ ಶುದ್ಧವಾಗಿಡಿ. ಹಾಕಿದ ಬಟ್ಟೆಯನ್ನು ಒಗೆಯದೆ ಮತ್ತೆ ಧರಿಸಬೇಡಿ.
ನಿಂಬೆ ಹಣ್ಣು
ಸ್ನಾನದ ನಂತರ ಒಂದು ಮಗ್ ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ, ಮೈಗೆ ಹಾಕಿಕೊಳ್ಳಿ. ಈ ರೀತಿ ಮಾಡಿದರೆ ಮೈ ದುರ್ವಾಸನೆ ಬೀರುವುದು ಕಡಿಮೆಯಾಗುವುದು.
ಆಪಲ್ ಸೈಡರ್ ವಿನಿಗರ್
ಆಪಲ್ ಸೈಡರ್ ವಿನಿಗರ್ ಅಷ್ಟೇ , ಸ್ನಾನ ಮಾಡಿ ಮೈ ಒರೆಸುವ ಮುನ್ನ ಅರ್ಧ ಬಕೆಟ್ ನೀರಿಗೆ ಸ್ವಲ್ಪ ವಿನಿಗರ್ ಹಾಕಿದರೆ ತ್ವಚೆಗೂ ಒಳ್ಳೆಯದು, ಮೈಯೂ ದುರ್ವಾಸನೆ ಬೀರುವುದಿಲ್ಲ.
ಸುಗಂಧದ್ರವ್ಯ ಬಳಸಿ
ಅದರಲ್ಲೂ ಮನೆಯಲ್ಲಿ ಮಾಡಿದ ಸುಗಂಧ ದ್ರವ್ಯ ಒಳ್ಳೆಯದು. ಟೀ ಟ್ರೀ ಆಯಿಲ್ ಅನ್ನು ನೈಸರ್ಗಿಕವಾದ ಸುಗಂಧ ದ್ರವ್ಯವಾಗಿ ಬಳಸಬಹುದು. 2-3 ಹನಿ ಟೀ ಟ್ರೀ ಆಯಿಲ್ ಅನ್ನು 1 ಗ್ಲಾಸ್ ನೀರಿಗೆ ಹಾಕಿ ಸ್ಪ್ರೇಯಲ್ಲಿ ಹಾಕಿಡಿ.
ಪುದೀನಾ ನೀರು ಸ್ನಾನ
ನೀರು ಕಾಯಿಸುವಾಗ ಸ್ವಲ್ಪ ಪುದೀನಾ ಹಾಕಿ ಕಾಯಿಸಿ. ಈ ನೀರು ಕೂಡ ಮೈ ದುರ್ವಾಸನೆ ಬೀರುವುದನ್ನು ತಡೆಯುತ್ತದೆ.
ಆಹಾರಕ್ರಮ
ಕೆಫೀನ್ , ಮದ್ಯ, ಅಧಿಕ ಮಾಂಸಾಹಾರ ಸೇವನೆ, ಬೆಳ್ಳುಳ್ಳಿ , ಕಡಿಮೆ ನಾರಿನಂಶವಿರುವ ಪದಾರ್ಥಗಳು ಇವೆಲ್ಲಾ ದೇಹ ದುರ್ಗಂಧ ಬೀರುವಂತೆ ಮಾಡುವುದು. ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ಮಿತಿಯಲ್ಲಿ ತಿನ್ನಿ.



Click it and Unblock the Notifications
