Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಲೇಟಾದಷ್ಟು ಗರ್ಭಧಾರಣೆಯ ಸಾಧ್ಯತೆ ಕಮ್ಮಿ, ಏಕೆ ಗೊತ್ತಾ?
ಮಗು ಬೇಕೆಂದು 35 ವರ್ಷದ ಬಳಿಕ ಪ್ರಯತ್ನಿಸುವ ಬದಲು, 30 ವರ್ಷದ ಒಳಗೆ ಪ್ರಯತ್ನಿಸಿದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚು ಎಂದು ಹೇಳಿರುವುದನ್ನು ಕೇಳಿರಬಹುದು. ಹಾಗಂತ 30 ವರ್ಷದ ಬಳಿಕ ಮಕ್ಕಳಾಗಲ್ಲ ಅಂತಲ್ಲ, ಆದರೆ ಮಕ್ಕಳಾಗುವ ಸಾಧ್ಯತೆ ತುಂಬಾ ಕಡಿಮೆ. ವಯಸ್ಸು ಹೆಚ್ಚಾದಂತೆ ಯಾವ ಚಿಕಿತ್ಸೆಯೂ ಪ್ರಯೋಜನಕಾರಿಯಾಗುವುದಿಲ್ಲ.
ವಯಸ್ಸು ಹೆಚ್ಚಾಗುತ್ತಿದ್ದಂತೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗಲು ನಮ್ಮ ದೇಹದಲ್ಲಾಗುವ ಯಾವ ರೀತಿಯ ಬದಲಾವಣೆಗಳು ಕಾರಣ ಎಂದು ತಿಳಿಯಲು ಮುಂದೆ ಓದಿ.

ಅಂಡಾಣುಗಳು ಸಾಯುವುದು
ಮಹಿಳೆಯ ಗರ್ಭಕೋಶದಲ್ಲಿರುವ ಅಂಡಾಣುಗಳಲ್ಲಿ ಪ್ರತೀಬಾರಿ ಮುಟ್ಟಾದಾಗ ಎರಡು ಅಂಡಾಣುಗಳು ಸಾಯುತ್ತವೆ. ಇದರಿಂದ ಅಂಡಾಣುಗಳು ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಅಂಡಾಣುಗಳ ಸಂಖ್ಯೆ ಕಮ್ಮಿಯಾದರೆ ಗರ್ಭಧಾರಣೆಯ ಸಾಮರ್ಥ್ಯ ಕುಗ್ಗುವುದು.

ಹಾರ್ಮೋನ್ ಗಳ ಚಟುವಟಿಕೆ ಕಡಿಮೆಯಾಗುವುದು
ನಮಗೆ ವಯಸ್ಸಾಗುತ್ತಿದ್ದ ಹಾಗೇ ಮಹಿಳೆಯರಿಗೆ ಮೆನೋಪಸ್ ಹಂತ ಪ್ರಾರಂಭವಾಗುವುದು. ಈ ಸಮಯದಲ್ಲಿ ಹಾರ್ಮೋನ್ ಗಳ ಚಟುವಟಿಕೆ ಸ್ವಾಭಾವಿಕವಾಗಿ ಕಮ್ಮಿಯಾಗುವುದು.

ಗರ್ಭಕೋಶದಲ್ಲಿ ತೊಂದರೆ
ವಯಸ್ಸು ಹೆಚ್ಚಾಗುತ್ತಿದ್ದಂತೆ ಗರ್ಭಕೊಶದಲ್ಲಿ Fibroids ಸಮಸ್ಯೆ ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಕೂಡ ಮಕ್ಕಳಾಗದಿರಲು ಒಂದು ಕಾರಣವಾಗಿದೆ.

ವಯಸ್ಸಾದಂತೆ ಬರುವ ಕಾಯಿಲೆಗಳು
ವಯಸ್ಸಾದಂತೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಈ ಸಮಸ್ಯೆಗಳು ನಿಮ್ಮ ಜೀವನ ಶೈಲಿ ಆರೋಗ್ಯಕರವಾಗಿರದಿದ್ದರೆ ಬೇಗನೆ ದಾಳಿ ಮಾಡುವುದು. ಈ ಸಮಸ್ಯೆಗಳಿರುವವರು ಗರ್ಭಧಾರಣೆಯಾದರೆ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾ ಅಪಾಯ.

ಕ್ರೋಮಾಸೋಮದ ತೊಂದರೆ (chromosomal defects)
ವಯಸ್ಸಾದಾಗ ಕ್ರೋಮಾಸೋಮದ ತೊಂದರೆ ಕಂಡು ಬರುವುದು. ಇದು ಗರ್ಭಧಾರಣೆಯಾದಾಗ ಸಮಸ್ಯೆಯನ್ನು ತರುವುದು.

ಹೃದಯದ ಒತ್ತಡ
ವಯಸ್ಸಾಗುತ್ತಿದ್ದಂತೆ ಹೃದಯ ಒತ್ತಡ ಹೆಚ್ಚಾಗುವುದು. ಈ ಸಮಯದಲ್ಲಿ ಗರ್ಭಧಾರಣೆಯ ರಿಸ್ಕ್ ತೆಗೆದುಕೊಳ್ಳದಿರುವುದು ಒಳ್ಳೆಯದು.

ಜರಾಯು ಸಮಸ್ಯೆ(Placental)
ವಯಸ್ಸಾದರೆ ಯೂಟ್ರಸ್ ಹಿಗ್ಗುವುದಿಲ್ಲ, ಇದರಿಂದ ಹೆರಿಗೆಯ ಸಮಯದಲ್ಲಿ ಕಷ್ಟವಾಗುವುದು, ಇದರಿಂದ ಜರಾಯು ಅಥವಾ ಮಾಸು ಚೀಲ ಹೊರಬೀಳದೆ ತೊಂದರೆ ಉಂಟಾಗುವುದು.

ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರಬಹುದು
ಮಗು ಅವಧಿಗೆ ಮುನ್ನ ಹುಟ್ಟಬಹುದು, ಅಥವಾ ಶರೀರದಲ್ಲಿ ನ್ಯೂನತೆ ಕಂಡು ಬರಬಹುದು. ಆರೋಗ್ಯವಂತ ಮಗುವನ್ನು ಪಡೆಯಲು ಯೌವನ ಪ್ರಾಯದಲ್ಲಿಯೇ ಪ್ರಯತ್ನಿಸಿ.



Click it and Unblock the Notifications