ಗರ್ಭಧರಿಸುವುದರ ಸುತ್ತ ಹಬ್ಬಿರುವ ಕತೆಗಳು

ಸಾಮಾನ್ಯವಾಗಿ ಹೆಂಗಸರ ಸುತ್ತಲೂ ಈ ಗರ್ಭಿಣಿಯರ ಬಗ್ಗೆ ಹರಡಿರುವ ಹಲವು ಕತೆಗಳು ಸುತ್ತುತ್ತಿರುತ್ತವೆ. ಸರಿಯಾದ ಆಹಾರ ತಿನ್ನುವುದರಿಂದ ಹಿಡಿದು ಸರಿಯಾದ ಲೈಂಗಿಕ ಭಂಗಿಯವರೆಗೆ ಎಲ್ಲವನ್ನೂ ಗರ್ಭಿಣಿಯಾಗಬಯಸುವ ಹೆಂಗಸರು ಯೋಚಿಸುತ್ತಾರೆ.

ಗರ್ಭಿಣಿಯರ ಸುತ್ತ ಹಬ್ಬಿರುವ ಪುರಾಣಗಳನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಅಜ್ಜಿಕತೆಯಿಂದ ಹಿಡಿದು ವೈಯುಕ್ತಿಕ ಆಲೋಚನೆಗಳವರೆಗೆ ಈ ಕತೆಗಳು ಪ್ರಸಿದ್ಧವಾಗಿದೆ. ಇವು ಹೆಂಗಸರನ್ನು ಸುಲಭವಾಗಿ ಪ್ರಭಾವಿಸುತ್ತವೆ. ಆದ್ದರಿಂದ ನೀವು ಕೂಡ ಈ ಕತೆಗಳ ಬಗ್ಗೆ ತಿಳಿದಿರುವುದು ಒಳ್ಳೆಯದು.

ಗರ್ಭಧರಿಸುವುದರ ಸುತ್ತ ಹರಡಿರುವ ಕತೆಗಳು ಅಸಂಖ್ಯ. ಉದಾಹರಣೆಗೆ ದಂಪತಿಗಳು ದಿನವೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಆದರೆ ಗರ್ಭಧರಿಸುವುದು ಹೆಣ್ಣಿನ ಅಂಡಾಣು ಬಿಡುಗಡೆಗೊಳ್ಳುವ ಸಮಯದ ಮೇಲೆ ಅವಲಂಭಿತವಾಗಿರುತ್ತದೆ! ನಿಮಗೆ ಗೊತ್ತೆ ಮುಟ್ಟಾದ 14 ದಿನಗಳ ನಂತರದ ದಿನಗಳು ಗರ್ಭಧರಿಸಲು ಒಳ್ಳೆಯ ಸಮಯ. ಆದರೆ ಯಾವುದೇ ಒಳ್ಳೆಯ ಸಮಯ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಎನ್ವಿರಾನ್ಮೆಂಟಲ್ ಹೆಲ್ತ್ ಸೈನ್ಸ್ ಅವರ ಪ್ರಕಾರ ಶೇ.30ರಷ್ಟು ಮಹಿಳೆಯರು ತಮ್ಮ ಋತುಚಕ್ರದ ದಿನದಿಂದ 10 ರಿಂದ 17ನೇ ದಿನದವರೆಗೆ ಫಲವತಿಯರಾಗಲು ಅರ್ಹರಾಗಿರುತ್ತಾರೆ. ಹಲವು ಮಂದಿ ದಂಪತಿಗಳು ಇದನ್ನು ನಂಬಿ ಇದನ್ನೇ ಪಾಲಿಸುತ್ತಾರೆ.

ಹೆಂಗಸರು ತಾವು ಋತುಮತಿಗಳಾಗಿದ್ದಾಗ ಗರ್ಭಧರಿಸಲು ಸಾಧ್ಯವಿಲ್ಲ ಎಂದುಕೊಳ್ಳುತ್ತಾರೆ. ಆದರೆ ನಿಮ್ಮ ಮುಟ್ಟಿನ ದಿನಗಳಲ್ಲಿ ಕೂಡ ಗರ್ಭಧರಿಸಬಹುದು ಎಂಬುದು ಒಂದು ಜನಪ್ರಿಯ ನಂಬಿಕೆ. ಇಲ್ಲಿವೆ ಆ ರೀತಿಯ ಗರ್ಭವತಿಯರಾಗುವ ಬಗೆಗಿನ ಕೆಲ ನಂಬಿಕೆಗಳು.

ಗರ್ಭವತಿಯರಾಗುವ ಬಗೆಗಿನ ನಂಬಿಕೆಗಳು

ಫಲವಂತಿಕೆಯ ದಿನಗಳು

ಫಲವಂತಿಕೆಯ ದಿನಗಳು

ಹಲವು ಮಂದಿ ದಂಪತಿಗಳು ಹೆಣ್ಣು ತನ್ನ ಫಲವಂತಿಕೆಯ ದಿನಗಳಲ್ಲಿ ಮಾತ್ರ ಗರ್ಭಧರಿಸಬಲ್ಲಳು ಎಂದು ಕೊಳ್ಳುತ್ತಾರೆ. ಹೆಣ್ಣಿನ ಅಂಡಾಣುವಿನೊಂದಿಗೆ ವೀರ್ಯಾಣು ಸಂಯೋಗ ಹೊಂದಿದರೆ ಆಕೆ ಯಾವಾಗ ಬೇಕಾದರೂ ಗರ್ಭ ಧರಿಸಬಹುದು.

ಅಂಡೋತ್ಪತಿಯ ದಿನಗಳು

ಅಂಡೋತ್ಪತಿಯ ದಿನಗಳು

ಹೆಂಗಸರು ಅಂಡೋತ್ಪತ್ತಿಯು ಮುಟ್ಟಾದ 14 ದಿನಗಳ ನಂತರ ಆಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಹಾರ್ಮೋನುಗಳ ಉತ್ಪಾದನೆಯ ಆಧಾರದ ಮೇಲೆ ಹೆಣ್ಣು ಮುಟ್ಟಾದ 2-3 ದಿನಗಳ ನಂತರದಲ್ಲೇ ಅಂಡೋತ್ಪತ್ತಿಯಾಗಬಹುದು.

ಪ್ರತಿದಿನ ಲೈಂಗಿಕಕ್ರಿಯೆಯಲ್ಲಿ ತೊಡಗಬೇಕು

ಪ್ರತಿದಿನ ಲೈಂಗಿಕಕ್ರಿಯೆಯಲ್ಲಿ ತೊಡಗಬೇಕು

ದಂಪತಿಗಳು ಈ ನಂಬಿಕೆಯನ್ನು ಅನುಸರಿಸುತ್ತಾರೆ. ದಿನವೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು ಆದರೆ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಗರ್ಭಧರಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ವೀರ್ಯಾಣು ಸಂಖ್ಯೆ ಮತ್ತು ಅದರ ಗುಣಮಟ್ಟ ನೀವು ದಿನವೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಕಡಿಮೆಯಾಗುತ್ತದೆ. ಇದು ಅಂಡಾಣು ವೀರ್ಯಾಣು ಸಂಯೋಗದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ವಿಶೇಷ ಭಂಗಿಗಳು

ವಿಶೇಷ ಭಂಗಿಗಳು

ಇದು ಕೂಡ ಮತ್ತೊಂದು ಜನಪ್ರಿಯ ನಂಬಿಕೆ. ಲೈಂಗಿಕ ಭಂಗಿಗಳು ವೀರ್ಯಾಣುವು ಸರಾಗವಾಗಿ ಹೆಣ್ಣಿನ ಜನನಾಂಗದೊಳಗೆ ಹೋಗಲು ನೆರವು ನೀಡುತ್ತವೆ. ಲೈಂಗಿಕ ಕ್ರಿಯೆಯ ಬಳಿಕ 5 ನಿಮಿಷಗಳವರೆಗೆ ಅಂಗಾತ ಮಲಗಿರುವುದು ಗರ್ಭಧರಿಸಲು ನೆರವಾಗಬಹುದು.

ಮುಟ್ಟಾದ ಸಮಯದಲ್ಲಿ ಗರ್ಭಧರಿಸಲು ಸಾಧ್ಯವಿಲ್ಲ

ಮುಟ್ಟಾದ ಸಮಯದಲ್ಲಿ ಗರ್ಭಧರಿಸಲು ಸಾಧ್ಯವಿಲ್ಲ

ಹಲವು ಮಂದಿ ಹೆಂಗಸರು ಇದನ್ನು ನಂಬುತ್ತಾರೆ ಮತ್ತು ಗರ್ಭಧರಿಸುತ್ತಾರೆ. ಅಧ್ಯಯನಗಳ ಪ್ರಕಾರ ಹೆಂಗಸರು ಮುಟ್ಟಾದ ದಿನಗಳಲ್ಲಿ ಹೆಚ್ಚು ಫಲವಂತಿಕೆಯಿಂದ ಕೂಡಿರುತ್ತಾರೆ. ಅದರಲ್ಲೂ ನಾಲ್ಕನೇ ದಿನ ಈ ಸಾಧ್ಯತೆ ಹೆಚ್ಚಿರುತ್ತದೆ.

ನೀವು ಒಂದೇ ಸಾರಿಗೆ ಗರ್ಭಧರಿಸಲು ಸಾಧ್ಯವಿಲ್ಲ

ನೀವು ಒಂದೇ ಸಾರಿಗೆ ಗರ್ಭಧರಿಸಲು ಸಾಧ್ಯವಿಲ್ಲ

ಹಲವು ಮಂದಿ ದಂಪತಿಗಳು ಗರ್ಭಧರಿಸಿರುವ ಸುದ್ದಿ ಕೇಳಲು ಕಷ್ಟ ಪಡುತ್ತಾರೆ. ಆದರೆ ಒಂದೇ ಬಾರಿಗೆ ಗರ್ಭಧರಿಸಬಲ್ಲ ಹೆಂಗಸರು ಇರುತ್ತಾರೆ. ಫಲವಂತಿಕೆ ಹೆಚ್ಚಿರುವ ಹೆಂಗಸರು ಮೊದಲ ಸಲವೇ ಗರ್ಭಧರಿಸುವ ಸಾಧ್ಯತೆಯಿರುತ್ತದೆ. ಇದು ಹಾರ್ಮೋನು ಮತ್ತು ವೀರ್ಯಾಣುವಿನ ಮೇಲೆ ಅವಲಂಭಿಸಿರುತ್ತದೆ.

ಲಿಂಗ ಪತ್ತೆ

ಲಿಂಗ ಪತ್ತೆ

ಅಜ್ಜಿಯರು ಮಗು ಹೆಣ್ಣೋ ಗಂಡೋ ಅನ್ನುವುದನ್ನು ನಿಮ್ಮನ್ನು ನೋಡಿಯೇ ಹೇಳಬಹುದು ಎನ್ನುವುದನ್ನು ಕೇಳಿರುತ್ತೇವೆ. ಇದನ್ನು ಅವರು ಮಾಡುವುದು ಹೊಟ್ಟೆಯ ಗಾತ್ರ ನೋಡಿ.

ಲೈಂಗಿಕ ಪರಾಕಾಷ್ಟೆ ಮುಟ್ಟುವುದು ಅಗತ್ಯ

ಲೈಂಗಿಕ ಪರಾಕಾಷ್ಟೆ ಮುಟ್ಟುವುದು ಅಗತ್ಯ

ಇದೊಂದು ತಮಾಷೆ ನಂಬಿಕೆ. ಹೆಣ್ಣಿಗೆ ಲೈಂಗಿಕ ತೃಪ್ತಿ ಸಿಗುವುದು ಇಲ್ಲಿ ಮುಖ್ಯ ಅಲ್ಲವೇ ಅಲ್ಲ. ಗರ್ಭಧರಿಸುವುದು ಮುಖ್ಯವಾಗಿ ನಿರ್ಧಾರಿತವಾಗುವುದು ಫಲವಂತಿಕೆಯ ಪ್ರಕ್ರಿಯೆಯಲ್ಲಿ.

Story first published: Friday, December 6, 2013, 14:02 [IST]
X
Desktop Bottom Promotion