Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಸುರಕ್ಷಿತವೇ?
ಗ್ರೀನ್ ಟೀ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ , ಬೊಜ್ಜನ್ನು ಕರಗಿಸುತ್ತದೆ. ಹೀಗೆ ಹತ್ತು ಹಲವು ಗುಣವಿರುವ ಗ್ರೀನ್ ಟೀಯನ್ನು ಗರ್ಭಿಣಿಯರು ಕುಡಿಯುವುದು ಸುರಕ್ಷಿತವೇ?
ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಸ್ವಲ್ಪ ಕುಡಿದರೆ ಯಾವುದೇ ತೊಂದರೆಯಿಲ್ಲ ಎನ್ನುತ್ತಾರೆ. ಆದರೆ ಗ್ರೀನ್ ಟೀ ದಿನಾ ಕುಡಿದರೆ ಉಂಟಾಗುವ ಅವಗುಣಗಳನ್ನು ತಿಳಿಯಲು ಮುಂದೆ ಓದಿ:

ಫಾಲಿಕ್ ಆಸಿಡ್ ಕಮ್ಮಿ ಮಾಡುತ್ತದೆ: ಗರ್ಭಿಣಿಯರ ದೇಹದಲ್ಲಿ ಫಾಲಿಕ್ ಆಸಿಡ್ ಹೆಚ್ಚು ಉತ್ಪತ್ತಿಯಾಗಬೇಕು. ಗ್ರಿನ್ ಟೀ ಕುಡಿದರೆ ಫಾಲಿಕ್ ಆಸಿಡ್ ಉತ್ಪತ್ತಿ ಕಡಿಮೆಯಾಗುವುದು.
ಕೆಫೀನ್: ಗ್ರೀನ್ ಟೀಯಲ್ಲಿ ಕೆಫೀನ್ ಅಂಶ ಇತರ ಟೀಯಲ್ಲಿರುವಷ್ಟು ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಇದೆ. ಗರ್ಭಾವಸ್ಥೆಯಲ್ಲಿ ತುಂಬಾ ಕೆಫೀನ್ ದೇಹವನ್ನು ಸೇರುವುದು ಒಳ್ಳೆಯದಲ್ಲ.
ಕಬ್ಬಿಣದಂಶ ಹೀರಿಕೊಳ್ಳಲು ತೊಂದರೆ ಉಂಟಾಗುವುದು: ಅಧಿಕ ಗ್ರೀನ್ ಕುಡಿದರೆ ದೆಹವು ಕಬ್ಬಿಣದಂಶ ಹೀರಿಕೊಳ್ಳುವುದಕ್ಕೆ ಅಡಚಣೆ ಉಂಟಾಗುವುದು. ಗರ್ಭಣಿಯರಿಗೆ ಕಬ್ಬಿಣದಂಶ ಅವಶ್ಯಕವಾದ ಖನಿಜಾಂಶವಾಗಿದೆ.
ಕಡಿಮೆ ತೂಕದ ಮಗು: ಕೆಫೀನ್ ಜಾಸ್ತಿ ದೇಹವನ್ನು ಸೇರಿದರೆ ಕಡಿಮೆ ತೂಕದ ಮಗು ಹುಟ್ಟುವ ಸಾಧ್ಯತೆ ಹೆಚ್ಚು.
ನಿರ್ಜಲೀಕರಣ ಮತ್ತು ಮಾಸುಚೀಲದ ಮೇಲೆ ಕೆಟ್ಟ ಪರಿಣಾಮ: ಇದರಲ್ಲಿರುವ ಕೆಫೀನ್ ನಿರ್ಜಲೀಕರಣ ಉಂಟಾಗುವಂತೆ ಮಾಡುತ್ತದೆ ಅಲ್ಲದೆ ಇದು ಮಾಸುಚೀಲವನ್ನು (ಗರ್ಭವೇಷ್ಟನ) ಮೀರಿ ಮಗುವಿನ ದೇಹಕ್ಕೆ ಸೇರುತ್ತದೆ. ಗರ್ಭದಲ್ಲಿರುವ ಮಗುವಿಗೆ ಕೆಫೀನ್ ಅಂಶ ಕರಗಿಸುವ ಸಾಮರ್ಥ್ಯಿರುವುದಿಲ್ಲ.



Click it and Unblock the Notifications
