ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆಗೆ ಪರಿಹಾರ

By Hemanth P

ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆ ಗರ್ಭಿಣಿ ಮಹಿಳೆಯರು ಎದುರಿಸುವಂತಹ ಸಾಮಾನ್ಯ ಸಮಸ್ಯೆ. ಗರ್ಭಧಾರಣೆ ವೇಳೆ ಮನಸ್ಥಿತಿ ಬದಲಾಗುವುದು, ರುಚಿ ಬದಲಾಗುವುದು, ದೈಹಿಕ ಮತ್ತು ಮಾನಸಿಕವಾಗಿ ಕೆಲವೊಂದು ಬದಲಾವಣೆಯಾಗುವುದು ಗರ್ಭಧಾರಣೆ ವೇಳೆ ಅನುಭವಕ್ಕೆ ಬರುತ್ತದೆ. ಸಾಮಾನ್ಯವೆಂದು ಕಾಣಿಸುವಂತಹ ಕೆಲವೊಂದು ವಿಷಯಗಳನ್ನು ಗರ್ಭಿಣಿ ಮಹಿಳೆಯರಿಗೆ ಮಾಡಲು ಸಾಧ್ಯವಿಲ್ಲ ಮತ್ತು ಗರ್ಭಧಾರಣೆಗೆ ಮೊದಲು ಸಾಮಾನ್ಯವಾಗಿ ಮಾಡುತ್ತಿದ್ದ ಕೆಲವೊಂದು ವಿಷಯಗಳನ್ನು ಗರ್ಭಿಣಿಯಾದ ಬಳಿಕ ಮಾಡಲು ಸಾಧ್ಯವಿಲ್ಲ. ದುರಾದೃಷ್ಟವೆಂದರೆ ಈ ಒಂದು ಕಾರಣದಿಂದಾಗಿ ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆಯು ಗರ್ಭಿಣಿ ಮಹಿಳೆಯರನ್ನು ದುಸ್ವಪ್ನವಾಗಿ ಕಾಡುತ್ತದೆ.

ಗರ್ಭಧಾರಣೆ ಎನ್ನುವುದು ಹೆಚ್ಚಿನ ಮಹಿಳೆಯರಿಗೆ ಸಂಭ್ರಮ. ಆದರೆ ಗ್ಯಾಸ್ ಸಮಸ್ಯೆಯು ಅವರನ್ನು ತೊಂದರೆಗೆ ಸಿಲುಕಿಸಬಹುದು. ಸ್ವತಃ ಮದ್ದು ಮಾಡುವ ಮೊದಲು ಗರ್ಭಿಣಿ ಮಹಿಳೆಯರು ಅಗತ್ಯವಾಗಿ ವೈದ್ಯಕೀಯ ಸಲಹೆ ಪಡೆಯುವುದು ತುಂಬಾ ಮುಖ್ಯ. ಗರ್ಭಧಾರಣೆ ವೇಳೆ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದರಿಂದ ಗ್ಯಾಸ್ ಸಮಸ್ಯೆ ನಿವಾರಿಸಬಹುದು ಮತ್ತು ಗರ್ಭಧಾರಣೆ ಸಮಸ್ಯೆಯನ್ನು ಒಳ್ಳೆಯ ಅನುಭವಾಗಿರಬಸಬಹುದು.

ಗರ್ಭಧಾರಣೆ ವೇಳೆ ಆಗುವಂತಹ ದೈಹಿಕ ಬದಲಾವಣೆಗಳಿಂದಾಗಿ ಗ್ಯಾಸ್ ಸಮಸ್ಯೆ ಬರುತ್ತದೆ. ಪ್ರೊಜೆಸ್ಟೆರಾನ್ ಮಟ್ಟ ಹೆಚ್ಚುವ ಮೂಲಕ ಅದು ಕರುಳಿನ ಸ್ನಾಯುಗಳನ್ನು ಸಡಿಲಿಸಿ ಜೀರ್ಣಕ್ರಿಯೆ ನಿಧಾನವಾಗಿಸುತ್ತದೆ. ಗರ್ಭಿಣೆಯಾಗಿರುವ ವೇಳೆ ಬದಲಾಗುವ ಆಹಾರ ಕ್ರಮವು ಗ್ಯಾಸ್ ಗೆ ಕಾರಣವಾಗಬಹುದು. ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆ ನಿವಾರಿಸಲು ಕೆಲವೊಂದು ಚಿಕಿತ್ಸಾ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಸ್ವಲ್ಪ ಊಟ

ಸ್ವಲ್ಪ ಊಟ

ಗರ್ಭಧಾರಣೆ ವೇಳೆ ಒಮ್ಮೆಲೇ ಹೊಟ್ಟೆತುಂಬಾ ತಿನ್ನುವ ಬದಲು ಕೆಲವು ಗಂಟೆಗಳ ಅಂತರದಲ್ಲಿ ಸ್ವಲ್ಪ ಸ್ವಲ್ಪ ತಿಂದರೆ ಆಗ ಗ್ಯಾಸ್ ಸಮಸ್ಯೆ ನಿವಾರಿಸಬಹುದು. ನಿಮ್ಮ ಚಯಾಪಚಯಾ ವ್ಯವಸ್ಥೆ ಹೆಚ್ಚಿನ ಆಹಾರ ಜೀರ್ಣಿಸಿಕೊಳ್ಳಲು ಕಷ್ಟಪಡಬಹುದು. ಸರಿಯಾಗಿ ಜೀರ್ಣವಾಗದಿದ್ದರೆ ಆಗ ಗ್ಯಾಸ್ ಉಂಟಾಗುತ್ತದೆ ಮತ್ತು ಆಹಾರದಿಂದ ಹೊಟ್ಟೆ ಉಬ್ಬರಿಸಬಹುದು.

ನಿಧಾನವಾಗಿ ತಿನ್ನಿ

ನಿಧಾನವಾಗಿ ತಿನ್ನಿ

ಆಹಾರವನ್ನು ಚೆನ್ನಾಗಿ ಜಗಿಯುವ ಮೂಲಕ ನಿಮ್ಮ ಊಟವನ್ನು ಆನಂದಿಸಿ. ಜೀರ್ಣಕ್ರಿಯೆಯ ಒಂದು ಭಾಗ ಬಾಯಿಯಲ್ಲೇ ಆಗುತ್ತದೆ. ಆಹಾರದೊಂದಿಗೆ ಎಂಜಲು ಸರಿಯಾಗಿ ಮಿಶ್ರಗೊಂಡರೆ ಆಗ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಪ್ರೊಜೆಸ್ಟೆರಾನ್ ಚಟುವಟಿಕೆಯಿಂದ ನಿಮ್ಮ ಚಯಾಪಚಯಾ ಕ್ರಿಯೆ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಗರ್ಭಧಾರಣೆ ವೇಳೆ ಸರಿಯಾಗಿ ಜಗಿದು ತಿನ್ನುವುದು ತುಂಬಾ ಮುಖ್ಯ.

ಎಚ್ಚರಿಕೆಯಿಂದ ಕುಡಿಯಿರಿ

ಎಚ್ಚರಿಕೆಯಿಂದ ಕುಡಿಯಿರಿ

ಮಿತವಾಗಿ ಅಥವಾ ಊಟದ ವೇಳೆ ನೀರು ಕುಡಿಯುವುದನ್ನು ಕಡಗಣಿಸಿ. ಊಟದ ವೇಳೆ ಕುಡಿಯುವ ನೀರಿನಿಂದ ಜೀರ್ಣಕಾರಿ ಕಿಣ್ವಗಳು ದುರ್ಬಲಗೊಂಡು ಜೀರ್ಣಕ್ರಿಯೆಯು ಕಡಿಮೆಯಾಗುವುದರಿಂದ ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆಯಾಗಬಹುದು. ನೇರವಾಗಿ ಗ್ಲಾಸ್ ನಲ್ಲಿ ನೀರು ಕುಡಿಯಿರಿ, ಸ್ಟ್ರಾ ಬಳಸಬೇಡಿ.

ಮಲಬದ್ಧತೆಯ ಚಿಕಿತ್ಸೆ

ಮಲಬದ್ಧತೆಯ ಚಿಕಿತ್ಸೆ

ಗರ್ಭಧಾರಣೆ ವೇಳೆ ಗ್ಯಾಸ್ ಉಂಟಾಗುವುದನ್ನು ತಡೆಯಲು ಮಲಬದ್ಧತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಿ. ಗರ್ಭಿಣಿ ಮಹಿಳೆಯರಲ್ಲಿ ಮಲಬದ್ಧತೆ ಸಾಮಾನ್ಯ. ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ನಾರಿನಾಂಶವಿರುವ ಆಹಾರ ಬಳಸಿ. ಸಂಸ್ಕರಿಸಿದ ಆಹಾರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡೆಗಣಿಸಿ.

ಗ್ಯಾಸ್ ಉಂಟುಮಾಡುವ ಆಹಾರ ತ್ಯಜಿಸಿ

ಗ್ಯಾಸ್ ಉಂಟುಮಾಡುವ ಆಹಾರ ತ್ಯಜಿಸಿ

ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆ ಉಂಟು ಮಾಡುವಂತಹ ಆಹಾರ ತಿನ್ನಬೇಡಿ. ಆಹಾರದಿಂದ ಗ್ಯಾಸ್ ಸಮಸ್ಯೆ ಉಂಟು ಮಾಡುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಉದಾಹರಣೆಗೆ ಡೈರಿ ಉತ್ಪನ್ನಗಳು ಲ್ಯಾಕ್ಟೋಸ್ ಸಹಿಸದ ವ್ಯಕ್ತಿಗಳಲ್ಲಿ ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆ ಉಂಟು ಮಾಡಬಹುದು. ಆದರೆ ಇತರರಿಗೆ ಅಲ್ಲ.

ದೈಹಿಕವಾಗಿ ಚಟುವಟಿಕೆಯಿಂದ ಇರಿ

ದೈಹಿಕವಾಗಿ ಚಟುವಟಿಕೆಯಿಂದ ಇರಿ

ನಿಮ್ಮ ವೈದ್ಯರು ಮಾರ್ಗದರ್ಶನ ನೀಡಿರುವಂತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ. ನೀವು ವ್ಯಾಯಾಮಕ್ಕೆ ಹಾಕಬಹುದಾದ ಶಕ್ತಿ ಮತ್ತು ಶ್ರಮದ ಬಗ್ಗೆ ನಿಮ್ಮ ವೈದ್ಯರಿಂದ ಸಲಹೆ ಪಡೆಯಿರಿ. ಸರಳ ವ್ಯಾಯಾಮಗಳನ್ನು ಮಾಡಿ. ಯೋಗದಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಬಹುದು.

ಮೆಂತ್ಯೆ ಒಂದು ಪರಿಹಾರ

ಮೆಂತ್ಯೆ ಒಂದು ಪರಿಹಾರ

ಒಂದು ಲೋಟ ನೀರಿನಲ್ಲಿ ಸ್ವಲ್ಪ ಮೆಂತ್ಯೆಯನ್ನು ರಾತ್ರಿಪೂರ್ತಿ ನೆನೆಸಿಡಿ. ಮರುದಿನ ಮೆಂತ್ಯೆಯನ್ನು ತೆಗೆದು ನೀರು ಕುಡಿಯಿರಿ, ಇದು ಹೊಟ್ಟೆನೋವು ನಿವಾರಿಸಿ ಗ್ಯಾಸ್ ಹೋಗಲಾಡಿಸುತ್ತದೆ. ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆ ನಿವಾರಿಸಲು ಸರಳ ಮನೆಮದ್ದನ್ನು ಪ್ರಯತ್ನಿಸಿ.

ಹೊಟ್ಟೆ ತುಂಬಿರಲಿ

ಹೊಟ್ಟೆ ತುಂಬಿರಲಿ

ಬೆಳಗ್ಗಿನ ಅನಾರೋಗ್ಯ ಮತ್ತು ಇತರ ದೈಹಿಕ ಸಮಸ್ಯೆಗಳಿಂದ ಕೆಲವು ಗರ್ಭಿಣಿ ಮಹಿಳೆಯರು ಕಡಿಮೆ ಆಹಾರ ಸೇವಿಸುತ್ತಾರೆ. ಚಯಾಪಚಯಾ ಕ್ರಿಯೆ ವೇಳೆ ಉಂಟಾಗುವ ಗ್ಯಾಸ್ಟ್ರಿಕ್ ಜ್ಯೂಸ್ ನಿಂದ ಹೊಟ್ಟೆ ಉಬ್ಬರಿಸಬಹುದು ಮತ್ತು ಇತರ ಆರೋಗ್ಯ ಸಮಸ್ಯೆ ಉಂಟಾಗಬಹುದು.

ಕಾರ್ಬನೇಟ್ ಪಾನೀಯ ಕಡೆಗಣಿಸಿ

ಕಾರ್ಬನೇಟ್ ಪಾನೀಯ ಕಡೆಗಣಿಸಿ

ಕಾರ್ಬನೇಟ್ ಪಾನೀಯದಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಗರ್ಭಿಣಿಯಾಗಿರುವ ವೇಳೆ ಕಾರ್ಬನೇಟ್ ಇರುವ ಪಾನೀಯವನ್ನು ಕಡೆಗಣಿಸಬೇಕು. ಇದು ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಸುತ್ತದೆ ಮತ್ತು ಇದರಿಂದ ಗರ್ಭಧಾರಣೆ ವೇಳೆ ಗ್ಯಾಸ್ ಸಮಸ್ಯೆಯಾಗುತ್ತದೆ.

Story first published: Monday, December 9, 2013, 4:32 [IST]
X
Desktop Bottom Promotion