Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ, ಈ ಆಹಾರಗಳನ್ನು ತಿನ್ನಬೇಡಿ!
ಗರ್ಭಿಣಿಯಾದಾಗ ಈ ಐದು ಬಗೆಯ ಆಹಾರವನ್ನು ಮುಟ್ಟಲೇಬೇಡಿ. ತಾಯಿಯಾಗುವವರು ಪೋಷಕಾಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನಿ. ಇದರ ಜೊತೆಗೆ ನಿಮಗೆಸರಿಹೊಂದುವ ಆರೋಗ್ಯಕಾರಿ ಪಥ್ಯವನ್ನು ಪಾಲಿಸಿ ಹಾಗೂ ಈ ಆಹಾರಗಳನ್ನು ಸೇವಿಸುವುದರಿಂದ ದೂರವಿದ್ದರೆ ಒಳ್ಳೆಯದು.
ಅಹಿತವನ್ನುಂಟು ಮಾಡುವ ಆಹಾರಗಳು ಅಪಾಯಕಾರಿಯಷ್ಟೇ ಅಲ್ಲದೆ ಗರ್ಭಪಾತವನ್ನು ಸಹ ಉಂಟು ಮಾಡುತ್ತವೆ. ಇಲ್ಲಿ ನಿಮಗಾಗಿ ಕೆಲವು ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದ್ದೇವೆ. ಅದನ್ನು ಸೇವಿಸುವುದನ್ನು ಮೊದಲು ಬಿಡಿ.

1. ಸಮುದ್ರ ಜನ್ಯ ಆಹಾರಗಳು
ಸಮುದ್ರ ಜನ್ಯ ಆಹಾರಗಳಲ್ಲಿ ಒಮೆಗಾ- 3 ಕೊಬ್ಬಿನ ಆಮ್ಲಗಳು ಇರುತ್ತವೆ. ಇವು ಮಗುವಿನ ಆರೋಗ್ಯಕ್ಕೆ ಉಪಯೋಗಕಾರಿ. ಆದರೂ ಸಹ ಇವುಗಳಲ್ಲಿ ಅತಿಯಾದ ಪಾದರಸ ಇರುವ ಕಾರಣ ಇದನ್ನು ಸೇವಿಸುವುದನ್ನು ನಿಯಂತ್ರಿಸಿ. ಏಕೆಂದರೆ ಈ ಪಾದರಸವು ನಿಮ್ಮ ಮಗುವಿನ ಮೆದುಳಿನ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಿ, ಅದಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ಸಾಲ್ಮನ್, ಏಡಿ, ಶಾರ್ಕ್ ಮಾಂಸವನ್ನು ಸೇವಿಸುವುದನ್ನು ನಿಯಂತ್ರಿಸಿ. ಸಾಮಾನ್ಯವಾಗಿ ಈ ಬಗೆಯ ಮೀನು ಮತ್ತು ಸಮುದ್ರ ಜನ್ಯ ಆಹಾರಗಳಲ್ಲಿ ಪಾದರಸವು ಇರುತ್ತದೆ.

2. ಕಚ್ಚಾ ಆಹಾರ
ಕಚ್ಚಾ ಆಹಾರವನ್ನು ಸೇವಿಸದಿರುವುದು ಆದಷ್ಟೂ ಒಳ್ಳೆಯದು. ಏಕೆಂದರೆ ಇಂತಹ ಆಹಾರ ಪದಾರ್ಥಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳು ಹೆಚ್ಚಾಗಿದ್ದು, ತಾಯಿ ಮತ್ತು ಆಕೆಯ ಗರ್ಭದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಹಾಗಾಗಿ ಶುಚಿಯಾಗಿ ಮತ್ತು ಪರಿಪೂರ್ಣವಾಗಿ ಅಡುಗೆ ಮಾಡಿದ ಆಹಾರವನ್ನೆ ಸೇವಿಸಿ. ಬ್ಯಾಕ್ಟೀರಿಯಾ ಮತ್ತು ವೈರಸ್ ಸುಲಭವಾಗಿ ಸೇರುವಂತಹ ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಿ.

3. ಪಾಶ್ಚರೀಕರಣಗೊಳ್ಳದ ಪಾನೀಯಗಳನ್ನು ಸೇವಿಸಬೇಡಿ
ಗರ್ಭಿಣಿಯು ಪಾಶ್ಚರೀಕರಣಗೊಳ್ಳದ ಹೈನು ಪದಾರ್ಥಗಳನ್ನು ಸೇವಿಸುವುದನ್ನು ನಿಯಂತ್ರಿಸಬೇಕು. ಕೆನೆ ಭರಿತ ಹಾಲನ್ನು ಬೇಕಾದರೆ ನೀವು ಸೇವಿಸಬಹುದು. ಆದರೆ ಫೆಟ ಅಥವಾ ಬೈನಂತಹ ಚೀಸ್‍ಗಳನ್ನು ಸೇವಿಸಬೇಡಿ.

ಇವುಗಳನ್ನು ತಿನ್ನಬಹುದು
ಆದರೆ ಹಾಲು ಅಥವಾ ಮೊಸರನ್ನು ನೀವು ಸೇವಿಸಬಹುದು. ಏಕೆಂದರೆ ಇವುಗಳು ಆರೋಗ್ಯಕಾರಿ ಮತ್ತು ಪಾಶ್ಚರೀಕರಣ ಪ್ರಕ್ರಿಯೆಗೆ ಒಳಪಟ್ಟಿರುತ್ತವೆ.

4. ತೊಳೆಯದೆ ಇರುವ ಹಣ್ಣು ಮತ್ತು ತರಕಾರಿಗಳು
ಗರ್ಭಿಣಿಯಾದಾಗ ಆದಷ್ಟು ಬೇಯಿಸಿದ ಆಹಾರವನ್ನು ಸೇವಿಸುವುದು ಉತ್ತಮ. ಹಾಗಾಗಿ ಬೇಯಿಸದ ಕಚ್ಛಾ ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಿ. ಜೊತೆಗೆ ತೊಳೆಯದೆ ಇರುವ ತರಕಾರಿ ಮತ್ತು ಹಣ್ಣುಗಳನ್ನು ಸಹ ಸೇವಿಸಬೇಡಿ.

5. ಕೇಫಿನ್, ಟೀ ಮತ್ತು ಆಲ್ಕೋಹಾಲ್
ಗರ್ಭಿಣಿಯಾದಾಗ ಕೇಫಿನ್, ಟೀ ಮತ್ತು ಆಲ್ಕೋಹಾಲ್‍ಗಳನ್ನು ಸೇವಿಸುವುದನ್ನು ನಿಯಂತ್ರಿಸಿ. ಏಕೆಂದರೆ ಇವುಗಳು ನಿಮ್ಮ ಗರ್ಭದ ಮೇಲೆ ಅಥವಾ ಹೆರಿಗೆಯ ಸಮಯದಲ್ಲಿ ನಿಮಗೆ ಅಪಾಯವನ್ನು ತಂದೊಡ್ಡಬಹುದು. ಈ ಮೂರು ಬಗೆಯ ಪಾನೀಯಗಳನ್ನು ಅತಿಯಾಗಿ ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಸಹ ಇದೆ ಎಂಬುದನ್ನು ಮರೆಯಬೇಡಿ.

ಡಯಟ್ ಬಗ್ಗೆ ಎಚ್ಚರ
ಈ ಎಲ್ಲಾ ಬಗೆಯ ಆಹಾರಗಳನ್ನು ನೀವು ಗರ್ಭಿಣಿಯಾದಾಗ ಸೇವಿಸಬೇಡಿ. ಅದಕ್ಕಾಗಿ ನಿಮ್ಮ ವೈದ್ಯರ ಬಳಿ ಇಂದೇ ಹೋಗಿ ನಿಮಗೆ ಯಾವ ಬಗೆಯ ಆಹಾರವು ಸೂಕ್ತವೆಂದು ಕೇಳಿ ತಿಳಿದುಕೊಳ್ಳಿ. ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಆರೋಗ್ಯವಂತವನ್ನಾಗಿ ಮಾಡಲು ಇಂದೇ ನಿರ್ಧರಿಸಿ.



Click it and Unblock the Notifications