Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಗರ್ಭಿಣಿಯರ ಸುರಕ್ಷತೆ ಮತ್ತು ಆರೊಗ್ಯಕ್ಕೆ 14 ಟಿಪ್ಸ್
ನೀವು ಗರ್ಭಿಣಿಯಾಗಿದ್ದರೆ ನಿಮಗೆ ವೈದ್ಯರ ಮೊದಲು ನೀಡುವ ಸಲಹೆ ಸುರಕ್ಷತೆ ಮತ್ತು ಆರೋಗ್ಯದ ಕಡೆ ಗಮನವಿರಲಿ ಎಂದು. ಮೊದಲ ಆರು ತಿಂಗಳಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದೇ ರೀತಿ ಅವರ ಚಟುವಟಿಕೆಗಳ ವಿಷಯದಲ್ಲೂ ಜಾಗೃತರಾಗಿರಬೇಕು. ಇಲ್ಲದೆ ಹೋದರೆ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಯಾವುದನ್ನೇ ಆಗಲಿ ಹೆಚ್ಚಾಗಿ ಮಾಡಿದರೆ ಆಯಾಸವಾಗುತ್ತದೆ. ಗರ್ಭಿಣಿಯಾಗಿದ್ದಾಗ ನಿಮ್ಮ ಹೊಟ್ಟೆಯ ಗಾತ್ರ ಹೆಚ್ಚುತ್ತಿರುತ್ತದೆ ಮತ್ತು ಹೆಚ್ಚಿದ ಭಾರದ ಕಾರಣದಿಂದ ಪಾದಗಳು ಊದಿಕೊಳ್ಳುತ್ತವೆ. ಆದ್ದರಿಂದ ನಿಮ್ಮನ್ನು ನೀವು ಜಾಗೃತರಾಗಿ ನೋಡಿಕೊಳ್ಳಿ.
ನಾವಿಂದು ಗರ್ಭಿಣಿಯರು ತಮ್ಮ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಮಾಡಬೇಕಾದ ಕೆಲ ಮುಖ್ಯ ವಿಷಯಗಳನ್ನು ತಿಳಿಸುತ್ತಿದ್ದೇವೆ. ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸಿ. ಅದೇ ರೀತಿ ನಾವು ಹೇಳುವುದರ ಕಡೆ ಕೂಡ ಗಮನವಿರಲಿ.

ಒಂದಕ್ಕೆ ಎರಡರಂತೆ ತಿನ್ನಿ
ಹೌದು ನೀವಿಗ ಇಬ್ಬರ ಊಟವನ್ನು ಒಬ್ಬರೇ ಮಾಡುತ್ತಿರುತ್ತೀರಿ. ಆದರೂ ಹೆಚ್ಚಾಗುವ ತೂಕದ ಕೂಡ ಗಮನವಿರಲಿ.

ಡಯೆಟ್
ಕೆಲವರು ಗರ್ಭಿಣಿಯರು ಮಾಂಸ ತಿನ್ನಬಾರದು ಎಂದು ಹೇಳುತ್ತಾರೆ. ಆದರೆ ಪರಿಣಿತರ ಪ್ರಕಾರ ಗರ್ಭಿಣಿಯರು ಮಾಂಸಹಾರವನ್ನು ಸೇವಿಸುವುದು ಒಳ್ಳೆಯದು. ಇದರಿಂದ ಅವರಿಗೆ ಅಗತ್ಯವಾದ ಪ್ರೊಟೀನ್ ಗಳು ಸಿಗುತ್ತವೆ.

ವ್ಯಾಯಾಮ
ವ್ಯಾಯಾಮವನ್ನು ಮಾಡುವುದು ಒಳ್ಳೆಯದು. ಪರಿಣತರ ಪ್ರಕಾರ ಗರ್ಭಿಣಿ ಹೆಂಗಸರು ವ್ಯಾಯಾಮ ಮಾಡುವುದರಿಂದ ಸುಸ್ತು, ಬಳಲಿಕೆಯಂತಹ ಸಮಸ್ಯೆಗಳಿಂದ ದೂರವುಳಿಯುತ್ತಾರೆ.

ಬಾಯಿ ಸ್ವಚ್ಛತೆ ಕಡೆ ಗಮನವಿರಲಿ
ಗರ್ಭಿಣಿ ಸ್ತ್ರೀಯರು ಹೆಚ್ಚಿನ ಬಾಯಿಯ ಸಂಬಂಧಿ ಸಮಸ್ಯೆಗಳಿಗೆ ಸಿಲುಕುತ್ತಾರೆ. ಆದ್ದರಿಂದ ಗರ್ಭ ಧರಿಸುವ ಮುನ್ನ ಮತ್ತು ನಂತರ ಕೂಡ ನಿಯಮಿತವಾಗಿ ದಂತವೈದ್ಯರನ್ನು ಕಾಣಿ.

ಔಷಧಗಳು
ವೈದ್ಯರ ಸಲಹೆಯಿಲ್ಲದೆ ಮಾತ್ರೆಗಳನ್ನು ಸೇವಿಸಬೇಡಿ. ಕೆಲವು ಮಾತ್ರಗಳಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ.

ಹರ್ಬಲ್ ಚಿಕಿತ್ಸೆ
ಕೆಲವು ಗರ್ಭಿಣಿಯರು ಹರ್ಬಲ್ ಚಿಕಿತ್ಸೆ ಒಳ್ಳೆಯದೆಂದು ಭಾವಿಸಿ ಗರ್ಭಾವಸ್ಥೆಯ ಸಮಯದಲ್ಲಿ ಆ ಚಿಕಿತ್ಸೆಯ ಮೊರೆಹೋಗುತ್ತಾರೆ. ಆದರೆ ಕೆಲವು ರೀತಿಯ ಗಿಡಮೂಲಿಕೆಗಳು ಗರ್ಭಪಾತಕ್ಕೆ ಕಾರಣವಾಗುತ್ತವೆ. ಆದ್ದರಿಂದ ಯಾವುದನ್ನೇ ಆಗಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಸಾಮೀಪ್ಯ ಸಾಂಗತ್ಯ
ಗರ್ಭಧಾರಣೆಯ ಅವಧಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಆದರೆ ನೀವು ಮತ್ತು ನಿಮ್ಮ ಸಂಗಾತಿ ನಿಮಗೆ ಅನುಕೂಲಕರವಾದ ಭಂಗಿಗಳಲ್ಲಿ ಮಾತ್ರ ಈ ಕ್ರಿಯೆಗೆ ಮುಂದಾಗಿ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನಿಮಗೆ ನೋವುಂಟಾದಲ್ಲಿ, ರಕ್ತ ಅಥವ ದ್ರವ ಸ್ರವಿಸಲು ಆರಂಭವಾದರೆ ಏನೋ ತೊಂದರೆಯಾಗಿದೆ ಎಂದರ್ಥ.

ಪ್ರಯಾಣ
ಗರ್ಭಿಣಿಯಾಗಿರುವಾಗ ಸುರಕ್ಷಿತವಾಗಿ ಪ್ರಯಾಣ ಮಾಡುವುದು ಅತ್ಯಂತ ಮುಖ್ಯವಾದ ಅಂಶ. ತುಂಬ ದೀರ್ಘ ಅವಧಿಯ ಪ್ರಯಾಣವಾದರೆ ನಿಮ್ಮ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಆದ್ದರಿಂದ ನೀವು ಯಾವ ರೀತಿಯಲ್ಲಿ ಪ್ರಯಾಣಿಸುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಪರಿಸರ
ಪರಿಸರ ಗರ್ಭಾವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಗೆ ಮತ್ತು ಮಾಲಿನ್ಯವಿರುವ ಪರಿಸರದಿಂದ ದೂರವುಳಿಯುವುದು ಉತ್ತಮ.

ಕೆಟ್ಟ ಅಭ್ಯಾಸ
ಸುರಕ್ಷಿತ ಮತ್ತು ಆರೋಗ್ಯಕರ ಗರ್ಭಾವಸ್ಥೆಗಾಗಿ ನೀವು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು. ನೀವಿಬ್ಬರೂ ಧೂಮಪಾನ ವ್ಯಸನಿಗಳಾಗಿದ್ದರೆ ಅಥವ ನಿಮ್ಮಲ್ಲಿ ಯಾರಾದರೂ ಒಬ್ಬರು ಇದಕ್ಕೆ ದಾಸರಾಗಿದ್ದರೂ ಕೂಡ ಅದನ್ನು ತ್ಯಜಿಸಿಬಿಡಬೇಕು.

ದೂರವಿರಬೇಕಾದ ವಸ್ತುಗಳು
ಡ್ರಗ್ ಮೊದಲಾದ ಮಾದಕ ಪದಾರ್ಥಗಳಿಂದ ದೂರವಿರಿ. ಇವುಗಳ ಸೇವನೆಯಿಂದ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಗರ್ಭಾವಸ್ಥೆಯ ಅವಧಿಯಲ್ಲಿ ಇವುಗಳಿಂದ ದೂರವಿರುವುದರ ಕಡೆ ಗಮನ ಅತ್ಯಗತ್ಯ.

ಸಂಬಂಧದಲ್ಲಿನ ಸಮಸ್ಯೆಗಳು
ನಿಮ್ಮ ಸಂಗಾತಿಯೊಡನೆ ಯಾವುದೇ ರೀತಿಯ ಸಮಸ್ಯೆಯಿದ್ದಲ್ಲಿ ಅದು ಗರ್ಭದ ಮೇಲೆ ಪರಿಣಾಮ ಬೀರುತ್ತದೆ. ಹೆಂಗಸರು ಈ ಸಮಯದಲ್ಲಿ ಹಲವು ರೀತಿಯ ಹಾರ್ಮೋನುಗಳ ಬದಲಾವಣೆಗೆ ಒಳಗಾಗುತ್ತಾರೆ.

ಅತ್ತೆ ಮನೆ ಸಮಸ್ಯೆಗಳು
ಅತ್ತೆ ಮಾವಂದಿರು ಈ ಸಮಯದಲ್ಲಿ ಹೆಚ್ಚು ನೆರವು ನೀಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಇಡೀ ಕುಟುಂಬದ ನೆರವನ್ನು ಈ ಸಮಯದಲ್ಲಿ ಗರ್ಭಿಣಿಯರು ಬಯಸುತ್ತಿರುತ್ತಾರೆ.

ವೈದ್ಯರ ನೆರವು
ನಿಮ್ಮ ವೈದ್ಯರ ನೆರವು ಎಲ್ಲ ಸಮಯದಲ್ಲೂ ನಿಮಗೆ ಸಿಗುವಂತಿರಬೇಕು. ಇದು ನಿಮ್ಮ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅತ್ಯಗತ್ಯ.



Click it and Unblock the Notifications











