Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಗರ್ಭಾವಸ್ಥೆಯಲ್ಲಿ ಯಾವ ಟೀ ಕುಡಿದರೆ ಒಳ್ಳೆಯದು?

ಟೀಯನ್ನು ಮುಖ್ಯವಾಗಿ 2 ವಿಧಗಳಾಗಿ ವಿಂಗಡಿಸಬಹುದು.
1. ಹರ್ಬಲ್ ಟೀ
2. ನಾನ್ ಹರ್ಬಲ್ ಟೀ
ನಾನ್ ಹರ್ಬಲ್ ಟೀಯಲ್ಲಿ ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ಬರುತ್ತದೆ. ಈ ಟೀಯನ್ನು ಟೀ ಗಿಡದ ಎಲೆಗಳಿಂದ ತಯಾರಿಸಲಾಗುವುದು. ಇದರಲ್ಲಿ ಕೆಫಿನ್ ಮತ್ತು antioxidants ಅಂಶ ಬೇರೆ-ಬೇರೆ ಪ್ರಮಾಣದಲ್ಲಿರುತ್ತದೆ.
ಹರ್ಬಲ್ ಟೀ: ಹರ್ಬಲ್ ಟೀಯನ್ನು ಬೇರು, ಬೆರ್ರಿ, ಹೂಗಳು, ಬೀಜಗಳು ಮತ್ತು ಹರ್ಬಲ್ ಎಲೆಗಳನ್ನು ಹಾಕಿ ತಯಾರಿಸಲಾಗುವುದು. ಇದರಲ್ಲಿ ಟೀ ಎಲೆಯಲ್ಲಿ ಬಳಸಿರುವುದಿಲ್ಲ. ಈ ಟೀಯನ್ನು ಆರ್ಯವೇದದಲ್ಲಿ ಉಪಯೋಗಿಸಲಾಗುವುದು.
ಗರ್ಭಾವಸ್ಥೆಯಲ್ಲಿ ನಾನ್ ಹರ್ಬಲ್ ಟೀ ಕುಡಿಯಬಹುದೇ?
ಇದರಲ್ಲಿ antioxidants ಪ್ರಮಾಣ ಅಧಿಕವಾಗಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದರಲ್ಲಿರುವ ಕೆಫಿನ್ ಅಂಶ ಮಗುವಿನ ಬೆಳಣಿಗೆಗೆ ಅಷ್ಟು ಒಳ್ಳೆಯದಲ್ಲ. ದೊಡ್ಡವರು ಕೆಫಿನ್ ಅಂಶವನ್ನು ಜೀರ್ಣಿಸಿಕೊಳ್ಳುವ ರೀತಿಯಲ್ಲಿ ಭ್ರೂಣದಲ್ಲಿರುವ ಮಗುವಿಗೆ ಕರಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನ್ ಹರ್ಬಲ್ ಟೀ ಕುಡಿಯಬಹುದೇ, ಕುಡಿಯುವುದಾದರೆ ಎಷ್ಟು ಪ್ರಮಾಣದಲ್ಲಿ ಕುಡಿದರೆ ಒಳ್ಳೆಯದು ಅನ್ನುವುದು ನಿಮ್ಮ ವೈದ್ಯರ ಹತ್ತಿರ ಕೇಳಿ ತಿಳಿದುಕೊಳ್ಳಿ.
ಹರ್ಬಲ್ ಟೀ: ಹರ್ಬಲ್ ಟೀ ನೈಸರ್ಗಿವಾಗಿ ಕೆಫಿನ್ ಮುಕ್ತ ಟೀ ಆಗಿದೆ. ಆದರೂ ಈ ಟೀ ಕುಡಿದರೆ ದೊರೆಯುವ ಪ್ರಯೋಜನಗಳ ಬಗ್ಗೆ ಮಿಶ್ರ ಅಭಿಪ್ರಾಯವಿದೆ. ಕೆಫಿನ್ ಮುಕ್ತವಾಗಿರುವುದರಿಂದ ಈ ಟೀ ಒಳ್ಳೆಯದೆನ್ನುವುದು ಒಂದು ಅಭಿಪ್ರಾಯವಾದರೆ, ತುಂಬಾ ಪ್ರಮಾಣದಲ್ಲಿ ಗಿಡಮೂಲಿಕೆಗಳನ್ನು ಹಾಕಿ ತಯಾರಿಸಿದಂತಹ ಟೀ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎನ್ನುವುದು ಮತ್ತೊಂದು ಅಭಿಪ್ರಾಯವಾಗಿದೆ.
ಉತ್ತಮ ಕಂಪನಿಯ ಹರ್ಬಲ್ ಟೀಯಲ್ಲಿ ಗಿಡ ಮೂಲಿಕೆಗಳನ್ನು ಅಗತ್ಯ ಪ್ರಮಾಣದಲ್ಲಿ ಬಳಸಿ ಟೀ ತಯಾರಿಸುತ್ತಾರೆ. ಆದ್ದರಿಂದ ಹರ್ಬಲ್ ಟೀ ಕುಡಿಯುವುದಾದರೆ ಒಳ್ಳೆಯ ಕಂಪನಿಯ ಟೀ ಪುಡಿ ಬಳಸುವುದು ಒಳ್ಳೆಯದು. ಈ ಟೀಯನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡರೆ ಒಳ್ಳೆಯುವುದು ಎಂದು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ.
ಸಾಮಾನ್ಯವಾಗಿ ಹರ್ಬಲ್ ಟೀಯಲ್ಲಿ ಈ ಕೆಳಗಿನ ಅಂಶಗಳಿದ್ದು ಅವುಗಳು ಗರ್ಭಿಣಿಯರ ಆರೋಗ್ಯಕ್ಕೆ ಈ ಕೆಳಗಿನಂತೆ ಪರಿಣಾಮಕಾರಿಯಾಗಿದೆ. ಇದನ್ನು ಓದಿದ ಮೇಲೆ ಹರ್ಬಲ್ ಟೀ ಕುಡಿಯಬೇಕೊ ಅಥವಾ ಬೇಡ್ವಾ ಅನ್ನುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.
ಕೆಂಪು ರೋಸ್ ಬೆರಿ ಎಲೆ: ಇದರಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಇದು ಯೂಟ್ರಸ್ ಆರೋಗ್ಯ ಕಾಪಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ತಲೆ ಸುತ್ತು ಕಡಿಮೆ ಮಾಡುತ್ತದೆ, ಹೆರಿಗೆ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಹೆರಿಗೆಯ ನಂತರ ಎದೆ ಹಾಲು ಹೆಚ್ಚಾಗಲು ಈ ಅಂಶ ಸಹಕಾರಿಯಾಗಿದೆ.
ಆದರೆ ರೋಸ್ ಬೆರಿ ಗರ್ಭಿಣಿಯಾದ 3 ತಿಂಗಳ ನಂತರ ತೆಗೆದುಕೊಳ್ಳುವುದು ಒಳ್ಳೆಯದು.
ಪುದೀನಾ: ಹರ್ಬಲ್ ಟೀಯಲ್ಲಿ ಪುದೀನಾ ಅಂಶವಿದ್ದುಇದು ತಲೆಸುತ್ತು ಕಡಿಮೆ ಮಾಡಲು ಸಹಕಾರಿಯಾಗಿದೆ.
ದೊಡ್ಡ ಪತ್ರೆ: ಇದು ತ್ವಚೆಯಲ್ಲಿ ತುರಿಕೆ, ತಲೆಸುತ್ತು, ಒತ್ತಡ ಇವುಗಳ ನಿವಾರಣೆಗೆ ಸಹಕಾರಿಯಾಗಿದೆ.
ಚಕ್ಕೆ: ಚಕ್ಕೆಯಲ್ಲಿ ಅಧಿಕ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಇದ್ದು ಇದು ಎದೆ ಉರಿ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.
ಗುಲಾಬಿ ದಳ: ಇದರಲ್ಲಿ ವಿಟಮಿನ್ ಸಿ ಅಂಶವಿದ್ದು ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಾಗಲು ಸಹಕಾರಿಯಾಗಿದೆ.
ಆಲ್ಫಾಆಲ್ಫಾ: ಇದನ್ನು ಗರ್ಭಿಣಿಯಾಗಿದ್ದಾಗ ಸೇವಿಸುವ ಬದಲು ಹೆರಿಗೆಯ ನಂತರ ಬಳಸುವುದು ಒಳ್ಳೆಯದು.



Click it and Unblock the Notifications
