Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಗರ್ಭಿಣಿಯರಿಗೆ ಟಾಪ್ 15 ಹೆಲ್ತ್ ಟಿಪ್ಸ್
ಗರ್ಭಿಣಿ ಎಂದು ಗೊತ್ತದ ತಕ್ಷಣ ಆ ಮಹಿಳೆಗೆ ಮನೆಯವರು ಮತ್ತು ವೈದ್ಯರು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಗರ್ಭಿಣಿಯರು ಆಹಾರದ ಬಗ್ಗೆ ಎಚ್ಚರಿಕೆವಹಿಸಿಬೇಕು. ಹೆಚ್ಚು ಮಾನಸಿಕ ಒತ್ತಡ ತಂದುಕೊಳ್ಳಬಾರದು ಹಾಗೂ ತಿಂಗಳಿಗೆ ಸರಿಯಾಗಿ ಚೆಕಪ್ ಮಾಡಿಸಬೇಕು ಈ ರೀತಿಯೆಲ್ಲಾ ಮಾರ್ಗದರ್ಶನ ನೀಡುತ್ತಾರೆ. ಮನೆಯವರ ಕೆಲವು ಸಲಹೆಗಳು ಕೇವಲ ನಂಬಿಕೆ ಮತ್ತು ಅರ್ಧ ಸತ್ಯವಾಗಿರುತ್ತದೆ. ವೈದ್ಯರ ಸಲಹೆಗಳಲ್ಲಿ ವೈಜ್ಞಾನಿಕ ಸತ್ಯವಿರುತ್ತದೆ.
ಇಲ್ಲಿ ನಾವು ಗರ್ಭಿಣಿಯರ ಆರೋಗ್ಯಕ್ಕೆ ವೈಜ್ಞಾನಿಕ ಆಧಾರಿತ ಆರೋಗ್ಯಕರ ಟಿಪ್ಸ್ ಗಳನ್ನು ನೀಡಿದ್ದೇವೆ ನೋಡಿ:

1. ಥೈರಾಯ್ಡ್ ಟೆಸ್ಟ್ ಮಾಡಿಸಿ
ಗರ್ಭಿಣಿಯರು ಥೈರಾಯ್ಡ್ ಪರೀಕ್ಷೆಯನ್ನು ಮಾಡಿಸಲೇಬೇಕು. ಥೈರಾಯ್ಡ್ ಸಮಸ್ಯೆ ಇತ್ತೀಚಿಕೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಥೈರಾಯ್ಡ್ ಸಮಸ್ಯೆಯಿಂದ ಗರ್ಭಪಾತ ಆಗಬಹುದು ಅಥವಾ ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಥೈರಾಯ್ಡ್ ಇದ್ದರೆ ಸೂಕ್ತವಾದ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.

2. ದೇಹದಲ್ಲಿ ನೀರಿನಂಶ ಅವಶ್ಯಕ
ಗರ್ಭಿಣಿಯರು ಜ್ಯೂಸ್ ಮತ್ತು ನೀರನ್ನು ಕುಡಿದು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಬೇಕು. ಏಕೆಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಅಜೀರ್ಣವಾಗುವುದು, ಗರ್ಭಪಾತ ಈ ರೀತಿಯ ತೊಂದರೆಗಳು ಉಂಟಾಗುವುದು.

3. ಬೆಕ್ಕಿನಿಂದ ದೂರವಿರಿ
ಬೆಕ್ಕನ್ನು ಹಿಡಿಯುವುದು, ಅದನ್ನು ಶುಚಿ ಮಾಡುವುದಾಗಲಿ ಮಾಡಬಾರದು. ಏಕೆಂದರೆ ಇದರಲ್ಲಿ ಪಾರಾಸೈಟ್ ಅಂಶವು ಟಾಕ್ಸೋಪ್ಲಾಸ್ಮೋಸಿಸ್(toxoplasmosis) ಎಂಬ ಸೋಂಕನ್ನು ಉಂಟು ಮಾಡುತ್ತದೆ. ಇದರಿಂದಾಗಿ ಮಗುವಿನ ಮೆದುಳಿಗೆ ಹಾನಿ ಉಂಟಾಗುತ್ತದೆ ಹಾಗೂ ಮಗುವಿನಲ್ಲಿ ಕುರುಡುತನ ಕೂಡ ಉಂಟಾಗಬಹುದು.

4. ಸ್ನಾಯು ಸೆಳೆತ ಉಂಟಾಗದಿರಲು ಬಾಳೆ ಹಣ್ಣು ತಿನ್ನಿ
ಗರ್ಭಿಣಿಯಾದಾ ಸ್ನಾಯು ಸೆಳೆತ ಕಂಡು ಬರುತ್ತದೆ. ಈ ಸ್ನಾಯು ಸೆಳೆತವನ್ನು ಬಾಳೆ ಹಣ್ಣು ಕಡಿಮೆ ಮಾಡುತ್ತದೆ. ಏಕೆಂದರೆ ಬಾಳೆ ಹಣ್ಣಿನಲ್ಲಿ ಪೊಟಾಷ್ಯಿಯಂ ಅಂಶವಿದೆ. ಪೊಟಾಷ್ಯಿಯಂ ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ.

5. ವ್ಯಾಯಾಮದ ಬಗ್ಗೆ ವೈದ್ಯರ ಸಲಹೆ
ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮುನ್ನ ವೈದ್ಯರನ್ನು ಕಂಡು ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ ಗರ್ಭಿಣಿಯಾಗಿರುವಾಗ ಜೋರಾಗಿ ಓಡುವ, ಭಾರ ಎತ್ತುವ ವ್ಯಾಯಾಮ ಒಳ್ಳೆಯದಲ್ಲ. ವ್ಯಾಯಾಮ ಮಾಡುವಾ ಸ್ಪೋರ್ಟ್ಸ್ ಬ್ರಾ ಮತ್ತು ಶೂ ಧರಿಸಿರಬೇಕು. ವ್ಯಾಯಾಮ ನಾರ್ಮಲ್ ಡೆಲಿವರಿಗೆ ಸಹಾಯ ಮಾಡುತ್ತದೆ.

6. ಫಾಲಿಕ್ ಆಸಿಡ್ ಇರುವ ಆಹಾರ
ಮಗು ಸರಿಯಾದ ರೀತಿಯಲ್ಲಿ ಬೆಳವಣಿಗೆ ಹೊಂದಲು ಮತ್ತು ಹೆರಿಗೆ ಸುಶ್ರೂತವಾಗಿ ನಡೆಯಲು ಫಾಲಿಕ್ ಆಸಿಡ್ ಇರುವ ಆಹಾರಗಳನ್ನು ತಿನ್ನಬೇಕು. ಬೀನ್ಸ್, ಸಿಟ್ರಸ್ ಇರುವ ಆಹಾರಗಳಲ್ಲಿ ದೇಹಕ್ಕೆ ಪ್ರತಿನಿತ್ಯ ಅಗತ್ಯವಿರುವ ಫಾಲಿಕ್ ಆಸಿಡ್ ದೊರೆಯುತ್ತದೆ.

7. ನಿದ್ದೆ
ಯಾವುದೇ ಮಾನಸಿಕ ಒತ್ತಡ ತೆಗೆದುಕೊಳ್ಳಬಾರದು. ಸಂಗೀತವನ್ನು ಕೇಳಿ. ದಿನದಲ್ಲಿ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ರಾತ್ರಿ ನಿದ್ದೆಗೆಡುವುದು, ನೈಟ್ ಶಿಫ್ಟ್ ಈ ರೀತಿಯ ಕಾರ್ಯಗಳನ್ನು ಮಾಡಬೇಡಿ.

8. ಬಾಯಿಯ ಶುದ್ಧತೆ
ಗರ್ಭಿಣಿಯಾಗಿರುವಾಗ ಬಾಯಿಯ ಶುದ್ಧತೆ ಬಗ್ಗೆ ತುಂಬಾ ಎಚ್ಚರಿಕೆವಹಿಸಬೇಕು. ಸೋಂಕಾಣು ತಗುಲಿದರೆ ಬಾಯಿಯ ಒಸಡಿನಲ್ಲಿ ರಕ್ತ ಕಂಡು ಬರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ.

9. ಫ್ಯಾಷನ್
ಸಮತಟ್ಟಾದ ಪಾದುಕೆಗಳನ್ನು ಧರಿಸಿ. ಫ್ಯಾಷನ್ ಗಾಗಿ ಹೈ ಹೀಲ್ಡ್ ಚಪ್ಪಲಿ ಧರಿಸಬಾರದು. ಲಿಪ್ ಸ್ಟಿಕ್, ನೇಲ್ ಪಾಲಿಷ್ ಇವುಗಳನ್ನು ಬಳಸಬಾರದು.

10. ಆಹಾರ:
ಅಧಿಕ ಕೊಬ್ಬಿನಂಶದ ಆಹಾರಗಳನ್ನು ತಿನ್ನಬಾರದು. ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಊಟವನ್ನು ಮಿತಿಯಲ್ಲಿ ಮಾಡಬೇಕು. ಹಣ್ಣುಗಳನ್ನು ತಮ್ಮ ಆಹಾರಕ್ರಮದಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳಬೇಕು.

11. ಭಾರ ಹೊರುವುದು
ಅಧಿಕ ಭಾರದ ವಸ್ತುಗಳನ್ನು ಹೊರಬಾರದು. ತುಂಬಾ ದೂರ ಪ್ರಯಾಣ ಮಾಡುವುದಾದರೆ ಎಚ್ಚರಿಕೆ. ಗರ್ಭಿಣಿಯಾಗಿದ್ದಾಗ ಸೇಫ್ಟಿ ಬೆಲ್ಟ್ ಧರಿಸುವುದು ಒಳ್ಳೆಯದು.

12. ಕೆಫೀನ್ ಅಂಶ
ಕಾಫಿ, ಟೀ ಹೆಚ್ಚಾಗಿ ಕುಡಿಯಬಾರದು. ಮದ್ಯಪಾನ, ಧೂಮಪಾನದ ಅಭ್ಯಾಸವಿರುವವರು ಆ ಅಭ್ಯಾಸಗಳನ್ನು ಬಿಡಬೇಕು. ಇಲ್ಲದಿದ್ದರೆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

13. ಮಾತ್ರೆ
ವೈದ್ಯರು ಬರೆದುಕೊಟ್ಟಿರುವ ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳಬೇಕು. ತಲೆನೋವು, ಶೀತ ಎಂದು ಸ್ವಚಿಕಿತ್ಸೆ ಮಾಡಿಕೊಳ್ಳ ಬೇಡಿ.

14. ಸ್ನಾನ
ತುಂಬಾ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಬೇಡಿ. ಹದ ಬಿಸಿ ನೀರು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು.

15. ದೇಹದ ತೂಕ
ಗರ್ಭಿಣಿಯರು ದೇಹದ ತೂಕ ತುಂಬಾ ಹೆಚ್ಚಾಗದಂತೆ ಎಚ್ಚರಿಕೆವಹಿಸಿಬೇಕು. ಪ್ರತಿದಿನ ಅರ್ಧಗಂಟೆ ನಡೆಯಿರಿ. ಮನೆ ಕೆಲಸವನ್ನು ಮಾಡಿ, ಓಡಾಡಿ, ಮಧ್ಯಾಹ್ನ ಹೊತ್ತು ಮಲಗಬೇಡಿ ದೇಹದ ತೂಕ ಹೆಚ್ಚಾಗುವುದು.



Click it and Unblock the Notifications
