Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವುದು ಹೇಗೆ?

ಅದರಲ್ಲೂ 90% ಮಹಿಳೆಯಿರಿಗೆ ಗರ್ಭಾವಸ್ಥೆಯಲ್ಲಿ ಈ ರೀತಿಯ ಸ್ಟ್ರೆಚ್ ಮಾರ್ಕ್ಸ್ ಕಂಡುಬರುತ್ತದೆ. ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಈ ರೀತಿಯ ಸ್ಟ್ರೆಚ್ ಮಾರ್ಕ್ಸ್ ತಡೆಯಬಹುದು ಮತ್ತು ಈ ಹಿಂದೆ ಬಿದ್ದಂತಹ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣದಂತೆ ತಡೆಯಬಹುದಾಗಿದೆ.
1. ಮಾಯಿಶ್ಚರೈಸರ್: ಪ್ರತಿದಿನ ತ್ವಚೆಯನ್ನು ಮಾಯಿಶ್ಚರೈಸರ್ ಮಾಡುತ್ತಿದ್ದವರಿಗೆ ಈ ರೀತಿಯ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ತುಂಬಾ ಕಡಿಮೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಒಂದು ವೇಳೆ ಹೊಟ್ಟೆಯಲ್ಲಿ ತುಂಬಾ ಸ್ಟ್ರೆಚ್ ಮಾರ್ಕ್ಸ್ ಬಿದ್ದಿದ್ದರೆ ಪ್ರತಿದಿನ ದೇಹವನ್ನು ಮಾಯಿಶ್ಚರೈಸ್ ಮಾಡಿ, ಈ ಕಲೆಗಳು ಕಾಣಿಸಿದಂತೆ ಮಾಡಬಹುದು. ಈ ರೀತಿ ಮಾಯಿಶ್ಚರೈಸರ್ ಗೆ ಲೋಳೆಸರ ಬಳಸಿದರೆ ತುಂಬಾ ಒಳ್ಳೆಯದು.
2. ರೆಟೋನಿಕ್ ಆಸಿಡ್ ಕ್ರೀಮ್ ಬಳಸಬಹುದು(retinoic acid cream): ಇದರಲ್ಲಿ ವಿಟಮಿನ್ ಎ ಅಂಶವಿದ್ದು ದೇಹದಲ್ಲಿ ಕೊಲೆಜಿನ್ ಉತ್ಪತ್ತಿಯನ್ನು ಹೆಚ್ಚು ಮಾಡುವುದರಿಂದ ತ್ವಚೆಯಲ್ಲಿರುವ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಸಹಕಾರಿಯಾಗಿದೆ. ಈ ಕ್ರೀಮ್ ಬಳಸುವವರು ತುಂಬಾ ಬಿಸಿಲಿಗೆ ಹೋಗಬಾರದು (ಮಳೆಗಾಲದಲ್ಲಿ ಸಮಸ್ಯೆಯಿಲ್ಲ, ಬೇಸಿಗೆಯಲ್ಲಿ ಹಚ್ಚಿ ಹೊರಗಡೆ ಹೋಗಬೇಡಿ, ಇದನ್ನು ರಾತ್ರಿ ಬಳಸಿದರೆ ಒಳ್ಳೆಯದು) . ಹಳೆಯ ಸ್ಟ್ರೆಚ್ ಮಾರ್ಕ್ಸ್ ಗೆ ಇದನ್ನು ಹಚ್ಚಿದರೆ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
3. ಗ್ಲೈಸೋಲಿಕ್ ಆಸಿಡ್ (glycolic acid): ಈ ಆಸಿಡ್ ತ್ವಚೆಯಲ್ಲಿ ಕೊಲೆಜಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುವುದು. ಇದನ್ನು ಗರ್ಭಾವಸ್ಥೆಯಲ್ಲಿ ಬೀಳುವ ಸ್ಟ್ರೆಚ್ ಮಾರ್ಕ್ಸ್ ತಪ್ಪಿಸಲು ಬಳಸಬಹುದು.
ಸಲಹೆ: ರೆಟೋಮಿಕ್ ಆಸಿಡ್ ಮತ್ತು ಗ್ಲೈಸೋಲಿಕ್ ಆಸಿಡ್ ಜೊತೆಗ ಬಳಸಬೇಡಿ. ಈ ರೀತಿ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ಹೆಚ್ಚಾಗುವುದು. ಗ್ಲೈಸೋಲಿಕ್ ಬಳಸುವುದಾದರೆ ರೆಟೋನಿಕ್ ಆಸಿಡ್ ಬಳಸಲು ಹೋಗಬೇಡಿ.
ರೆಟೋನಿಕ್ ಆಸಿಡ್ ಅನ್ನು ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಮಗುವಿಗೆ ಎದೆ ಹಾಲು ಕೊಡುವ ಸಮಯದಲ್ಲಿ ಬಳಸಬೇಡಿ.
4. ವಿಟಮಿನ್ ಇ ಎಣ್ಣೆ: ವಿಟಮಿನ್ ಇ ಸ್ಟ್ರೆಚ್ ಮಾರ್ಕ್ಸ್ ಮರೆಮಾಚುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದರಿಂದ ಪ್ರತಿದಿನ ಕಲೆಯ ಮೇಲೆ ಮಾಯಿಶ್ಚರೈಸರ್ ಮಾಡಿ ಕೆಲವೇ ತಿಂಗಳಿನಲ್ಲಿ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು.
5. ವಿಟಮಿನ್ ಸಿ : ವಿಟಮಿನ್ ಸಿ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಅಲ್ಲದೆ ನಿಂಬೆ ರಸ, ಕಿತ್ತಳೆ ರಸ ಇವುಗಳನ್ನು ತ್ವಚೆಗೆ ಹಚ್ಚುವುದರಿಂದ ತ್ವಚೆ ಸಮಸ್ಯೆ ನಿವಾರಿಸಬಹುದು.



Click it and Unblock the Notifications
