Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು ಗರ್ಭಿಣಿಯಾದರೆ ತಿಳಿಯುವುದು ಹೇಗೆ ?

ರುತುಸ್ರಾವ ರಜೆ
ರುತುಸ್ರಾವವು ನಿಲ್ಲುವುದು ಗರ್ಭಧಾರಣೆಯ ಮೊದಲ ಲಕ್ಷಣ. ಸಾಮಾನ್ಯವಾಗಿ ಮಹಿಳೆಯರ ರುತುಸ್ರಾವದ ಅವಧಿ 28 ದಿನಗಳದ್ದು. ಆದರೆ ಗರ್ಭಧರಿಸಿದ ಮೇಲೆ ಈ ಪ್ರಕ್ರಿಯೆ ನಡೆಯುವುದಿಲ್ಲ. ಮಹಿಳೆಯುರ ದೈಹಿಕ ಸ್ಥಿತಿಗತಿಯ ಆಧಾರದ ಮೇಲೆ ಗರಿಷ್ಟ ಒಂದು ವಾರದವರೆಗೆ ರುತುಸ್ರಾವವು ಮುಂದೆ ಹೋಗಬಹುದು. ಯಾಕೆಂದರೆ, ರುತುಸ್ರಾವ ನಿಗದಿತ ಅವಧಿಗೆ ಆಗದ ಎಲ್ಲಾ ಮಹಿಳೆಯರೂ ಗರ್ಭಧರಿಸಿದ್ದಾರೆ ಎಂದು ಇದರರ್ಥವಲ್ಲ. ಕೆಲವು ಬಾರಿ ವಿನಾಕಾರಣ ನಿಧಾನವಾಗಬಹುದು. ಆದರೆ ಒಂದು ವಾರದ ನಂತರವೂ ರುತುಸ್ರಾವವಾಗದೇ ಇದ್ದರೆ ಇದು ಗರ್ಭಧಾರಣೆಯ ನಿರ್ದಿಷ್ಟ ಚಿಹ್ನೆ ಎಂದೇ ಪರಿಗಣಿಸಬಹುದು. ಗರ್ಭಧಾರಣೆಯ ಹೊರತಾಗಿ ರುತುಸ್ರಾವವು ಲಯ ತಪ್ಪುವುದಕ್ಕೆ ಕಾರಣವಾಗುವ ಇನ್ನಿತರ ಸಂಗತಿಗಳೆಂದರೆ ಪಥ್ಯ, ತೂಕ ಮತ್ತು ಆತಂಕಗಳು.
ಮುಂಜಾನೆ ಲಕ್ಷಣಗಳು
ವಾಕರಿಕೆ ಅಥವಾ ವಾಂತಿಯಾಗುವಿಕೆ ಯಾವ ಸಮಯದಲ್ಲಿ ಬೇಕಾದರೂ ಆಗಬಹುದು, ಆದರೆ ಈ ಲಕ್ಷಣವನ್ನು ಬೆಳಗಿನ ಲಕ್ಷಣ ಎಂದೇ ಸಾಮನ್ಯವಾಗಿ ಹೇಳಲಾಗುತ್ತದೆ. ಈ ಲಕ್ಷಣ ಕಾಣುವುದು ಸಾಮಾನ್ಯವಾಗಿ ಗರ್ಭಧರಿಸಿದ ಎರಡು ವಾರದಲ್ಲಿ. ಇದು ಸುಮಾರು 14 ವಾರಗಳ ವರೆಗೂ ಮುಂದವರಿಯಬಹುದು. ಹೀಗೆ ವಾಂತಿಯಾಗುವುದಕ್ಕೆ ಕಾರಣ ವಾಸನೆ. ಗರ್ಭಧರಿಸಿದ ಅವಧಿಯಲ್ಲಿ ಮಹಿಳೆಯು ವಾಸನೆ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಸಿಗರೇಟು ಹೊಗೆ, ಸುಗಂಧ ಮತ್ತು ಬೇಯಿಸಿದ ಆಹಾರದ ವಾಸನೆಯು ಗರ್ಭಿಣಿಗೆ ವಾಂತಿ ಅಥವಾ ವಾಕರಿಕೆಗೆ ಕಾರಣವಾಗುತ್ತದೆ.
ವಾಂತಿಗೆ ಕಾರಣವಾಗುವುದು ಎಸ್ಟ್ರೋಜೆನ್= ವೇಗವಾಗಿ ಏರುವುದು. ಇದರಿಂದಾಗಿ ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ.
ಕೆಲವು ಮಹಿಳೆಯರಿಗೆ ನಿತ್ಯ ತಿನ್ನುವ ಅಥವಾ ಇಷ್ಟಪಡುವ ಆಹಾರ ಹೇವರಿಕೆಯನ್ನು ತರಿಸಬಹುದು. ಇನ್ನು ಕೆಲವು ಮಹಿಳೆಯರಿಗೆ ತಾವು ಎಂದೂ ತಿನ್ನದ ಅಥವಾ ಅಪರೂಪಕ್ಕೆ ಸಿಗುವ ಆಹಾರವು ಬೇಕು ಎನ್ನಿಸುವಂತೆ ತೀವ್ರ ಬಯಕೆಯಾಗಬಹುದು. ಈ ವೈಚಿತ್ರ‍್ಯವು ಸಾಮಾನ್ಯವಾಗಿ ಮೊದಲು ಮೂರು ತಿಂಗಳಲ್ಲಿ ಆಗುತ್ತದೆ.
ಸ್ತನದಲ್ಲಿ ಬದಲಾವಣೆ
ಗರ್ಭಿಣಿಯರ ಸ್ತನದಲ್ಲಿ ಜುಮ್ಮೆನಿಸುವಿಕೆ, ನೋಯುತ್ತಿರುವ ಅಥವಾ ನವಿರಾದ ಸಂವೇದನೆಯು ಅನುಭವವಾಗುತ್ತದೆ. ಇದರಿಂದಾಗಿ ಸ್ತ್ರೀಯು ಗರ್ಭಿಣಿಯಾಗಿದ್ದಾಳೋ ಇಲ್ಲವೋ ಎನ್ನುವುದರ ಖಚಿತ ಲಕ್ಷಣವಾಗಿದೆ. ಹೊಟ್ಟೆಯೊಳಗೆ ಮಗು ಬೆಳೆದಂತೆಲ್ಲಾ ಸ್ತನವೂ ವೃದ್ಧಿಯಾಗುತ್ತದೆ. ತುಂಬಿದಂತೆ ಅಥವಾ ಭಾರವಾದಂತೆ ಭಾಸವಾಗುತ್ತದೆ ಮತ್ತು ಸ್ಪರ್ಶಕ್ಕೆ ತುಂಬಾ ವೇಗವಾಗಿ ಸ್ಪಂದಿಸುತ್ತದೆ. ತೊಟ್ಟುಗಳೂ ಕೂಡಾ ಸಂವೇದನೆಯನ್ನು ಹೊಂದುತ್ತವೆ. ಬಟ್ಟೆ ಬದಲಿಸುವಾಗ ಕಿರಿಕಿರಿಯಾಗುತ್ತದೆ ಮತ್ತು ಭುಜದ ಮೇಲೆ ಭಾರ ಹಾಕಿದಂತೆ ಭಾಸವಾಗುತ್ತದೆ. ಅಲ್ಲದೇ ತೊಟ್ಟುಗಳು ಹೆಚ್ಚು ಕಪ್ಪಗಾಗಿದ್ದು, ದೊಡ್ಡದಾದಂತೆ ಕಾಣುತ್ತದೆ.
ಈ ಎಲ್ಲಾ ದೇಹದ ಲಕ್ಷಣಗಳಿಂದ ಗರ್ಭಿಣಿಯೆಂದು ಖಚಿತಪಡಿಸಿಕೊಳ್ಳಬಹುದು.



Click it and Unblock the Notifications
