Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಟ್ಟೆಯಲ್ಲಿ ಮಗು ಒದ್ದರೆ ಏನು ಅರ್ಥ?

ಮಗು ಹೊಟ್ಟೆಯಲ್ಲಿ ಒದೆಯುವಾಗ ಮೊದಮೊದಲು ಗ್ಯಾಸ್ ಸಮಸ್ಯೆ ಇರಬಹುದು ಎಂದು ಭಾವಿಸುತ್ತಾರೆ ಆದರೆ ನಿಧಾನಕ್ಕೆ ಅದು ಮಗುವಿನ ಕದಲಿಕೆ ಎಂಬುದು ಮನವರಿಕೆಯಾಗುತ್ತದೆ. ಮಗು ಈ ರೀತಿ ಒದೆಯುವುದರಿಂದ ಮಗುವಿನ ಆರೋಗ್ಯವಾಗಿದೆ ಎಂದು ತಿಳಿಯಬಹುದು.
ಮಗುವಿನ ಕದಲಿಕೆ ಯಾವಾಗ ಪ್ರಾರಂಭವಾಗುತ್ತದೆ?
* ಮಗು ಒದೆಯುವ ಅನುಭವ 16-22 ವಾರಗಳ ಒಳಗೆ ಅನುಭವಕ್ಕೆ ಬರುತ್ತದೆ, ಮಗುವಿನ ಕದಲಿಕೆ 7 ವಾರಗಳಲ್ಲಿಯೆ ಪ್ರಾರಂಭವಾದರೂ ಅದು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ.
* ಚೊಚ್ಚಲ ಗರ್ಭಿಣಿಯರಿಗೆ ಮಗು ಒದೆಯಲು ಪ್ರಾರಂಭಿಸುವಾಗ ಮೊದಮೊದಲು ಗೊತ್ತಾಗುವುದಿಲ್ಲ.
* ಕ್ರಮೇಣ ಮಗು ಬಲವಾಗಿ ಒದೆಯಲು ಪ್ರಾರಂಭಿಸಿದಾಗ ತಾಯಿ ಆ ಸುಖವನ್ನು ಆನಂದಿಸುತ್ತಾಳೆ.
ದಿನಕ್ಕೆ ಎಷ್ಟು ಬಾರಿ ಒದೆಯುತ್ತದೆ?
ಈ ಪ್ರಶ್ನೆಗೆ ನಿಖರ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ, ಆದರೆ ಮಗು ಆಗಾಗ್ಗೆ ಒದೆಯುತ್ತಿದ್ದರೆ ಮಗು ಚಟುವಟಿಕೆಯಿಂದ ಇದ್ದು ಸಾಧಾರಣ ಹೆರಿಗೆಯಾಗುವ (ನಾರ್ಮಲ್ ಡೆಲಿವರಿ)ಸಾಧ್ಯತೆ ಹೆಚ್ಚು. ಮಗು ಎರಡನೇ ತ್ರೈಮಾಸಿಕದಲ್ಲಿ ಒಂದು ದಿನಾ ಆಗಾಗ್ಗೆ ಒದೆಯುತ್ತಿದ್ದರೆ ಮರುದಿನ ಅಷ್ಟಾಗಿ ಒದೆಯದೆ ಇರಬಹುದು, ಆದರೆ 6 ತಿಂಗಳ ನಂತರ ಮಗು ಆಗಾಗ್ಗೆ ಒದೆಯುತ್ತದೆ.
ಒಂದು ವೇಳೆ ಮಗು ಈ ರೀತಿ ಒದೆಯುವುದನ್ನು ಕಡಿಮೆ ಮಾಡಿದರೆ ಮಗುವಿಗೆ ಏನೊ ಸಮಸ್ಯೆ ಇದೆ ಎಂದು ಅರ್ಥ. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಹೊಟ್ಟೆಯಲ್ಲಿ ಮಗು ಹೆಚ್ಚು ಒದ್ದಷ್ಟು ಅದು ಆರೋಗ್ಯವಾಗಿರುವ ಲಕ್ಷಣ.



Click it and Unblock the Notifications
