Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಪಾತಕ್ಕೆ ಯಾವ ಆಹಾರ ಕಾರಣವಾಗಬಹುದು?

ಗರ್ಭಪಾತಕ್ಕೆ ಕಾರಣವಾಗುವ ಆಹಾರಗಳು ಯಾವುದು?
1. ಮೀನು: ನೀವು ಮೀನು ತಿನ್ನಲು ಇಷ್ಟಪಡುವುದಾದರೆ ಈ ಸಮಯದಲ್ಲಿ ಮೀನಿನ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನದಿಯಲ್ಲಿ, ಹಳ್ಳ ಕೊಳ್ಳಗಳಲ್ಲಿ ಮಲಿನಗೊಂಡಿರುವ ಮೀನನ್ನು ತಿಂದರೆ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಮೀನಿನಲ್ಲಿ ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್ ಇದ್ದರೂ ಸಹ ಈ ಸಮಯಕ್ಕೆ ಸೂಕ್ತವಲ್ಲ. ಅದರಲ್ಲೂ ಫಿಶ್ ಫ್ರೈ ತಿನ್ನಲೇಬಾರದು. ಇದು ಗರ್ಭಿಣಿಯರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
2. ಮಾಂಸ ಮತ್ತು ಮೊಟ್ಟೆ: ಮಾಂಸ ಮತ್ತು ಮೊಟ್ಟೆ ತಿನ್ನುವ ಮುನ್ನ ಜಾಗ್ರತೆಯಿಂದಿರಿ. ಬೇಯಿಸದ ಅಥವಾ ಅರೆಬೆಂದ ಮಾಂಸವನ್ನು ತಿನ್ನಬಾರದು. ಸಮುದ್ರಾಹಾರ, ಕೋಳಿ ಇವುಗಳ ಸೇವನೆ ಕಡಿಮೆ ಇದ್ದರೆ ಒಳಿತು. ತಿನ್ನಬೇಕೆಂದಿದ್ದರೆ ಸಂಪೂರ್ಣ ಬೇಯಿಸಿ ತಿನ್ನಬೇಕು. ಸರಿಯಾಗಿ ಬೇಯಿಸದ ಚಿಕನ್, ಮಾಂಸ ಮತ್ತು ಸಮುದ್ರಾಹಾರ ತಿಂದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.
3. ಪಾಶ್ಚರೀಕರಿಸದ ಹಾಲು: ಲಿಸ್ಟಿರಿಯಾ ಎಂಬ ಬ್ಯಾಕ್ಟೀರಿಯಾ ಗರ್ಭಧಾರಣೆಯ ಎಂತಹ ಮಜಲಿನಲ್ಲಿಯೂ ಗರ್ಭಪಾತಕ್ಕೆ ಕಾರಣವಾಗಬಹುದು. ಬೇಯಿಸದ ಮಾಂಸ, ಚಿಕನ್, ಸಮುದ್ರಾಹಾರ, ಪಾಶ್ಚರೀಕರಣಗೊಳ್ಳದ ಚೀಸ್, ಪಾಶ್ಚರೀಕರಣಗೊಳ್ಳದ ಹಾಲು ಇಂತಹವುಗಳಲ್ಲಿ ಲಿಸ್ಟಿರಿಯಾ ಹೆಚ್ಚಿರುತ್ತದೆ.
4. ಪಪ್ಪಾಯ: ಪಪ್ಪಾಯ, ಪೈನಾಪಲ್ ನಂತರ ಹಣ್ಣುಗಳನ್ನೂ ಈ ಸಂದರ್ಭ ಸೇವಿಸಬಾರದು.
5. ತೊಳೆದ ತರಕಾರಿ: ಈ ಅವಧಿಯಲ್ಲಿ ಆಹಾರದ ವಿಷಯದಲ್ಲಿ ಶುದ್ಧತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ತೊಳೆಯದ ತರಕಾರಿ, ಹಣ್ಣುಗಳ ಸೇವನೆಯೂ ಕೆಲವೊಮ್ಮೆ ಗರ್ಭಪಾತಕ್ಕೆ ಕಾರಣವಾಗಬಹುದು. ಈ ಆಹಾರದಲ್ಲಿರುವ ಕೋಲಿ ಎಂಬ ಅಂಶ ವಿಷಕಾರಿ ಆಹಾರವಾಗುತ್ತದೆ. ಎಲೆಕೋಸು, ಹೂಕೋಸು ಮತ್ತು ಹಸಿರು ಸೊಪ್ಪು ತರಕಾರಿಗಳನ್ನು ಬಿಸಿ ನೀರಿನಲ್ಲಿ ತೊಳೆದ ನಂತರವಷ್ಟೇ ಸೇವಿಸಬೇಕು.
6. ಜ್ಯೂಸ್ ಪ್ಯಾಕ್: ಆಹಾರ ಪದಾರ್ಥಗಳನ್ನು ಖರೀದಿಸುವಾಗ ಅದರ ಮೇಲೆ ತಯಾರಿಸಿದ ದಿನಾಂಕವನ್ನು ಪರೀಕ್ಷಿಸಬೇಕು. ಜ್ಯೂಸ್ ಪ್ಯಾಕ್ ಗಳನ್ನು ಕೊಂಡುಕೊಳ್ಳುವಾಗಲೂ ಅಷ್ಟೆ. ಇಲ್ಲವೆಂದರೆ ಅದರಲ್ಲಿನ ಕೋಲಿ ಹೊಟ್ಟೆಯಲ್ಲಿ ಸಮಸ್ಯೆ ಉಂಟುಮಾಡಿ ಗರ್ಭಪಾತಕ್ಕೆ ಕಾರಣವಾಗುತ್ತದೆ.



Click it and Unblock the Notifications
