Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಗರ್ಭಾವಸ್ಥೆಗೂ ಮುನ್ನ ತೂಕ ನೋಡಿಕೊಳ್ಳಿ

ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಳೆದುಕೊಳ್ಳಲು ಅಥವಾ ಪಡೆದುಕೊಳ್ಳಲು ಪ್ರಯತ್ನಿಸಿದರೆ ಗರ್ಭಧಾರಣೆ ಮತ್ತು ಹೆರಿಗೆ ಸಮಯದಲ್ಲಿ ಉಂಟಾಗಬಹುದಾದ ಹಲವು ತೊಂದರೆಗಳಿಂದ ದೂರ ಉಳಿಯಬಹುದು.
ಆದರೆ ಗರ್ಭವತಿಯಾದ ನಂತರ ತೂಕ ಕಡಿಮೆಮಾಡಿಕೊಳ್ಳಲು ಡಯಟ್ ಅಥವಾ ವ್ಯಾಯಾಮ ನಡೆಸಬಾರದು. ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಂಡು ಮುಂದುವರೆಯಬೇಕು.
ಗರ್ಭಧಾರಣೆ ಸಮಯದಲ್ಲಿ ತೂಕದ ಪ್ರಭಾವ ಹೇಗೆ?
* ಅತಿ ಹೆಚ್ಚು ತೂಕ: ಮಗುವನ್ನು ಪಡೆಯಲು ಬಯಸುವ ಮಹಿಳೆಯ ತೂಕ ಅತಿಯಾಗಿದ್ದರೆ ಗರ್ಭಧಾರಣೆ ಕಷ್ಟವಾಗಬಹುದು ಅಥವಾ ಏರೊತ್ತಡ, ಮಧುಮೇಹದ ತೊಂದರೆ ಉಂಟುಮಾಡಬಹುದು. ಗರ್ಭಧರಿಸುವ ಮಹಿಳೆಯರು ತಮ್ಮ ಡಯಟ್ ಬಗ್ಗೆ ಹೆಚ್ಚು ಗಮನವಹಿಸಬೇಕು. ತೂಕ ಕಡಿಮೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ವಹಿಸಿ ಆಹಾರ ಸೇವಿಸಬೇಕು.
ಇದರಿಂದ ಹೆರಿಗೆ ಸಮಯದಲ್ಲಿ ಸಿಸೆರಿಯನ್ ಆಗುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ಆದ್ದರಿಂದ ಗರ್ಭಧಾರಣೆಗೆ ಮುನ್ನ ಡಯಟ್ ನೊಂದಿಗೆ ಅವಶ್ಯಕ ವ್ಯಾಯಾಮ ಮಾಡಿದರೆ ಗರ್ಭಧಾರಣೆ ಮತ್ತು ಹೆರಿಗೆ ಸುಸೂತ್ರವಾಗಲು ಸಹಾಯ ಮಾಡುತ್ತದೆ.
* ಅತಿ ಕಡಿಮೆ ತೂಕ: ಕೇವಲ ತೂಕ ಹೆಚ್ಚಿದ್ದರೆ ಮಾತ್ರ ಗರ್ಭಧಾರಣೆಗೆ ತೊಂದರೆ ಉಂಟಾಗುವುದಿಲ್ಲ, ತೂಕ ಕಡಿಮೆ ಇದ್ದರೂ ಸಮಸ್ಯೆಯೇ. ಮಗುವಿನ ಬೆಳವಣಿಗೆ ತಾಯಿಯ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಆದರೆ ಪೋಷಕಾಂಶಗಳ ಕೊರತೆ ಮಹಿಳೆಯಲ್ಲಿ ದುರ್ಬಲತೆ ಉಂಟು ಮಾಡಿ ,ಅವಧಿಗೆ ಮುನ್ನವೇ ಹೆರಿಗೆ ಅಥವಾ ಅತಿ ಕಡಿಮೆ ತೂಕದ ಮಗುವಿನ ಜನನವಾಗಲು ಕಾರಣವಾಗುತ್ತದೆ.
ಆದ್ದರಿಂದ ಗರ್ಭಧಾರಣೆ ಮುನ್ನ ಮತ್ತು ನಂತರ, ತೂಕದ ಅಭಾವದಿಂದ ಬಳಲುತ್ತಿದ್ದವರು ಅತ್ಯಂತ ಪೌಷ್ಠಿಕಾಂಶವಿರುವ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ.



Click it and Unblock the Notifications
