Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಗರ್ಭಾವಸ್ಥೆಯಲ್ಲಿ ಪಿತ್ತ ನಿವಾರಣೆ ಹೇಗೆ?

ಪಿತ್ತ ಕಡಿಮೆ ಮಾಡುವ ನೈಸರ್ಗಿಕ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ:
1. ಶುಂಠಿ: ಗರ್ಭಾವಸ್ಥೆ ಸಮಯದಲ್ಲಿ ಪಿತ್ತವನ್ನು ಹೋಗಲಾಡಿಸುವ ಸುಲಭ ವಿಧಾನವೆಂದರೆ ಶುಂಠಿ ಬಳಕೆ. ಶುಂಠಿ ಕಷಾಯ ಅಥವಾ ಶುಂಠಿ ಟೀ ಮಾಡಿ ಕುಡಿಯಬಹುದು. ಶುಂಠಿಯನ್ನು ಕತ್ತರಿಸಿ ನೀರಿನಲ್ಲಿ 10 ನಿಮಿಷ ಕುದಿಸಿ ಅದಕ್ಕೆ ಕೆಲವೇ ಹನಿ ನಿಂಬೆರಸ ಮತ್ತು ಸಕ್ಕರೆ ಮಿಶ್ರಣ ಮಾಡಿ ಕುಡಿದರೆ ಗರ್ಭಿಣಿಯರಲ್ಲಿ ಪಿತ್ತ ನಿವಾರಣೆ ಆಗುತ್ತದೆ.
2. ನಿಂಬೆ: ನಿಂಬೆಹಣ್ಣನ್ನು ಮೂಸುತ್ತಿದ್ದರೆ ತಲೆಸುತ್ತು, ಪಿತ್ತ ಹಾಗೂ ವಾಕರಿಕೆಯನ್ನು ತಡೆಯುತ್ತದೆ. ತುಂಬಾ ಸುಸ್ತಾದಾಗಲೂ ನಿಂಬೆ ಮೂಸಿದರೆ ಮರಳಿ ಚೈತನ್ಯ ನೀಡುತ್ತದೆ.
3. ಆಗಾಗ್ಗೆ ಅಲ್ಪಾಹಾರವಿರಲಿ: ಮೂರು ಹೊತ್ತಿನ ಊಟವನ್ನು ಹೊರತುಪಡಿಸಿ, ನಿಮ್ಮ ಹೊಟ್ಟೆ ಖಾಲಿ ಎನಿಸಿದಾಗಲೆಲ್ಲಾ ಅಲ್ಪಾಹಾರ ಸೇವಿಸುತ್ತಿರಿ. ಇದು ತಲೆಸುತ್ತು ಮತ್ತು ಪಿತ್ತವನ್ನು ಕಡಿಮೆಗೊಳಿಸಿ ಜೀರ್ಣಕ್ರಿಯೆ ಸಮಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ.
4. ವಿಟಮಿನ್ ಬಿ 6: ಹೆರಿಗೆಗೆ ಮುನ್ನ ಅವಶ್ಯಕವಿರುವ ವಿಟಮಿನ್ ಪಟ್ಟಿಯಲ್ಲಿ ವಿಟಮಿನ್ ಬಿ 6 ಹೆಚ್ಚಿರಲಿ. ಗರ್ಭಾವಸ್ಥೆ ಸಮಯದಲ್ಲಿ ವಿಟಮಿನ್ ಬಿ 6 ದೇಹಕ್ಕೆ ಹೆಚ್ಚು ದೊರಕಿದಷ್ಟೂ ಆರೋಗ್ಯ ಸಂಬಂಧಿ ತೊಂದರೆ ಕಡಿಮೆ. ವಿಟಮಿನ್ ಬಿ 6 ಹೆಚ್ಚಿರುವ ಆಹಾರ: ಸೊಯಾಬೀನ್, ಹಸಿರು ಬಟಾಣಿ, ಹೂಕೋಸು, ದವಸಧಾನ್ಯಗಳು ಮತ್ತು ಚಿಕನ್ ಸೇವನೆ ಮಾಡಿದರೆ ವಿಟಮಿನ್ ಬಿ 6 ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.
5. ಮೆಣಸು ಪುದೀನಾ ಟೀ: ಪುದೀನಾ ಮತ್ತು ಮೆಣಸನ್ನು ಸೇರಿಸಿ ಟೀ ಮಾಡಿ ಕುಡಿದರೆ ತಲೆಸುತ್ತು, ಪಿತ್ತ, ವಾಕರಿಕೆ ಕಡಿಮೆಯಾಗಿ ತಕ್ಷಣವೇ ಆರಾಮ ಒದಗಿಸುತ್ತದೆ.
ಗರ್ಭಾವಸ್ಥೆಯಲ್ಲಿ ಇಂತಹ ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಅವುಗಳನ್ನು ಆಗಲೇ ನಿವಾರಿಸಿಕೊಂಡರೆ ಮುಂದೆ ಹುಟ್ಟುವ ಮಗು ಆರೋಗ್ಯಕರವಾಗಿ ಹುಟ್ಟುತ್ತದೆ.



Click it and Unblock the Notifications
