For Quick Alerts
ALLOW NOTIFICATIONS  
For Daily Alerts

ಮೇಕಪ್ ಗಿಂತ ಮಗುವಿನ ಆರೈಕೆ ಮುಖ್ಯ

|
ಆರೋಗ್ಯಕರ ಮಗುವನ್ನು ಹೊಂದಲು ಬಯಸುವ ತಾಯಿ ಕೇವಲ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಸಾಲದು, ಆಕೆ ತನ್ನ ಸೌಂದರ್ಯ ಸಾಧನಗಳ ಬಳಕೆಯಲ್ಲೂ ಜಾಗ್ರತೆಯಿಂದಿರಬೇಕು. ಏಕೆಂದರೆ ಅದೂ ಕೂಡ ಕಂದನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ಗರ್ಭಧಾರಣೆ ಸಮಯದಲ್ಲಿ ಅತಿಯಾಗಿ ಮೇಕಪ್ ಮಾಡಿಕೊಳ್ಳುವುದೂ ಕೂಡ ಕಂದನ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧನೆಯೊಂದರ ಪ್ರಕಾರ ಹೇರ್ ಸ್ಪ್ರೇ ಬಳಸುವ ಮಹಿಳೆಯರಿಗೆ ಹುಟ್ಟುವ ಮಗುವಿಗೆ ಮುಂದೆ ಮೂತ್ರನಾಳಕ್ಕೆ ಸಂಬಂಧಿಸಿದಂತೆ ತೊಂದರೆ ಅನುಭವಿಸಬೇಕಾಗಿ ಬರುತ್ತದೆ ಎಂಬ ಅಂಶ ತಿಳಿದುಬಂದಿದೆ.

ಗರ್ಭಧಾರಣೆ ಮಾಡಲು ಬಯಸುವ ಮಹಿಳೆಯರು ಹಾಗೂ ಗರ್ಭ ಧರಿಸಿ ಮೂರು ತಿಂಗಳಾಗಿರುವ ಮಹಿಳೆಯರು ತಾವು ಎಂತಹ ಸೌಂದರ್ಯ ಸಾಧನವನ್ನು ಮತ್ತು ಎಷ್ಟು ಪ್ರಮಾಣ ಸೌಂದರ್ಯ ಸಾಧನಗಳನ್ನು ಉಪಯೋಗಿಸುತ್ತಿದ್ದೇವೆ ಎಂಬುದರ ಅರಿವಿಟ್ಟುಕೊಂಡಿದ್ದರೆ ಉತ್ತಮ. ಏಕೆಂದರೆ ಮಗುವಿನ ಮೇಲೆ ಇದು ದೀರ್ಘ ಪರಿಣಾಮ ಬೀರಬಾರದಲ್ಲವೆ? ಮುಂಜಾಗ್ರತೆಯಾಗಿದ್ದರೆ ಮುಂದೆ ಬರುವ ತೊಂದರೆಯನ್ನು ಸುಲಭವಾಗಿ ತಡೆಯಬಹುದು.

English summary

Pregnancy and care | Cosmetic effects in pregnancy | ಗರ್ಭಾವಸ್ಥೆ ಮತ್ತು ಆರೈಕೆ | ಗರ್ಭಾವಸ್ಥೆ ಮತ್ತು ಸೌಂದರ್ಯ ಸಾಧನ ಬಳಕೆ

Latest research reveal that other than food habits, pregnant women should also take care of the cosmetics they use. The fact came in to light after it was found that women exposed to high levels of hair spray during pregnancy were twice as likely to have babies born with a urinary tract defect.
Story first published: Wednesday, August 10, 2011, 12:03 [IST]
X
Desktop Bottom Promotion